Dailyhunt Logo
  • Light mode
    Follow system
    Dark mode
    • Play Story
    • App Story
ಕಾವೇರಿ ಸಂಘರ್ಷ: ಜೋಸೆಫ್ ವಿಜಯ್ ಕರ್ನಾಟಕ ಭೇಟಿ ಮುಂದೂಡಿಕೆ,   ರಾಜ್ಯದ ಹಿತ ಕಾಪಾಡಲು ಬದ್ಧ ಎಂದ ಡಿಕೆಶಿ

ಕಾವೇರಿ ಸಂಘರ್ಷ: ಜೋಸೆಫ್ ವಿಜಯ್ ಕರ್ನಾಟಕ ಭೇಟಿ ಮುಂದೂಡಿಕೆ, ರಾಜ್ಯದ ಹಿತ ಕಾಪಾಡಲು ಬದ್ಧ ಎಂದ ಡಿಕೆಶಿ

Vijay Karnataka 1 week ago

ಬೆಂಗಳೂರು: ಕಾವೇರಿ ಕೊಳ್ಳದ ಜಲಾಶಯಗಳಿಂದ ನೀರನ್ನು ತಮಿಳುನಾಡಿಗೆ ಬಿಟ್ಟಿಲ್ಲ. ರಾಜ್ಯದ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದರು. ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಬಿಜೆಪಿ ಹೋರಾಟದ ಅವಷ್ಯಕತೆ ಇರಲಿಲ್ಲ.

ಸರ್ವಪಕ್ಷದ ಸಭೆಯ ಬಳಿಕವೇ ನಾನು ಮುಂದಿನ ತೀರ್ಮಾನ ಮಾಡುತ್ತೇನೆ ಎಂದರು.


ಹಿಂದಿನ ವರ್ಷ ತಮಿಳುನಾಡಿಗೆ 400 ಟಿಎಂಸಿಗೂ ಹೆಚ್ಚು ನೀರು ಹರಿದಿದೆ. ಬಂಗಾರಪ್ಪ ಕಾಲದಿಂದ ಹಿಡಿದು ಇಲ್ಲಿಯವರೆಗೆ ಕಾಂಗ್ರೆಸ್ ರಾಜ್ಯದ ಹಿತಕ್ಕೆ ಬದ್ಧತೆಯನ್ನು ಪ್ರದರ್ಶನ ಮಾಡಿದ್ದೇವೆ. ರಾಜ್ಯದ ಹಿತ ಕಾಪಾಡುವುದು ನಮ್ಮ ಬದ್ಧತೆಯಾಗಿದೆ. ಆದೇಶ ಕೊಟ್ಟಾಗ ನಾವು ಒಪ್ಪದೆ ಮೇಲ್ಪನವಿ ಸಲ್ಲಿಸಿದ್ದೆವು. ರಾಜ್ಯದ ಹಿತ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.

ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದೆ ಎಂಬುವುದು ಕಾವೇರಿ ನೀರು ನಿಯಂತ್ರಣಾ ಸಮಿತಿಯ ವಾದವಾಗಿತ್ತು. ತಮಿಳುನಾಡು 9.94 ಟಿಎಂಸಿ ಬಿಡಬೇಕು ಎಂಬುವುದು ತಮಿಳುನಾಡು ಮನವಿಯಾಗಿದೆ. ಆದರೆ ಅದರ ಅರ್ಧದಷ್ಟು ನೀರು ಬಿಡಲು ಪ್ರಾಧಿಕಾರ ಸೂಚಿಸಿದೆ.

ಬಂದ್ ಅಗತ್ಯ ಇಲ್ಲ

ಸರ್ಕಾರ ರೈತರ ಪರವಾಗಿದೆ. ಹಾಗಾಗಿ ಕರ್ನಾಟಕ ಬಂದ್ ಮಾಡುವ ಅಗತ್ಯ ಇಲ್ಲ. ರಾಜ್ಯ ಹಿತರಕ್ಷಣೆ ಮಾಡಲು ನಮಗೆ ಅಧಿಕಾರ ಕೊಟ್ಟಿದ್ದೀರಿ. ಹಾಗಾಗಿ ಬಂದ್ ಕೈಬಿಡಬೇಕು ಎಂದು ಮನವಿ ಮಾಡಿದರು. ಕನ್ನಡ ಪರ ಸಂಘಟನೆಗಳು ಹಾಗೂ ಬಿಜೆಪಿ ಹೋರಾಟ ನಡೆಸುತ್ತಿದೆ. ಹೋರಾಟ ತಪ್ಪಲ್ಲ. ಆದರೆ ನಮ್ಮ ಸರ್ಕಾರ ರಾಜ್ಯದ ಹಿತವ್ನನು ರಕ್ಷಣೆ ಮಾಡುತ್ತಾ ಬಂದಿದೆ. ರೈತರ ಕೈಯನ್ನು ನಾವು ಎಂದಿಗೂ ಬಿಟ್ಟಿಲ್ಲ. ಇದು ನಮ್ಮ ಸರ್ಕಾರದ ಬದ್ದತೆಯಾಗಿದೆ ಎಂದರು.

ಬಿಜೆಪಿ ಹೋರಾಟದ ಅವಶ್ಯಕತೆ ಇರಲಿಲ್ಲ. ಸರ್ವಪಕ್ಷದ ಸಭೆಯ ಬಳಿಕವೇ ನಾನು ಮುಂದಿನ ತೀರ್ಮಾನ ಮಾಡುತ್ತೇನೆ. ಎಲ್ಲರ ಸಹಕಾರ ಇದಕ್ಕೆ ಬೇಕಾಗಿದೆ. ರಾಜ್ಯದ ಹಿತಕ್ಕೆ ಒಳ್ಳೆದಾಗುವ ತೀರ್ಮಾನಕ್ಕೆ ನಾವು ಬದ್ದವಾಗಿದ್ದೇವೆ ಎಂದು ಸಿಎಂ ಇದೇ ಸಂದರ್ಭದಲ್ಲಿ ತಿಳಿಸಿದರು.

ಭಾನುವಾರ 11 ಗಂಟೆಗೆ ಸರ್ವ ಪಕ್ಷಗಳ ಸಭೆಯನ್ನು ಕರೆಯಲಾಗಿದೆ. ಎಲ್ಲರ ಅಭಿಪ್ರಾಯವನ್ನು ಪಡೆಯಲಾಗುತ್ತದೆ. ಅಲ್ಲದೆ, ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆದುಕೊಂಡು ಮುಂದಿನ ಹೆಜ್ಜೆ ಇಡಲಾಗುತ್ತದೆ ಎಂದರು. ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರು ರಾಜ್ಯಕ್ಕೆ ಆಗಮಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ನಮ್ಮ ರಾಜ್ಯದ ರೈತರ ಹಿತ ಕಾಪಾಡಲು ನಾವು ಬದ್ದರಾಗಿದ್ದೇವೆ ಎಂದರು.

ವಿಜಯ್ ರಾಜ್ಯ ಭೇಟಿ ಮುಂದೂಡಿಕೆ!

ಸದ್ಯ ರಾಜ್ಯದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆಗಸ್ಟ್ 3 ರಂದು ನಿಗದಿಯಾಗಿದ್ದ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರ ಭೇಟಿ ದಿನಾಂಕ ಮುಂದೂಡಲು ನಿರ್ಧಾರ ಮಾಡಲಾಗಿದೆ. ಈ ಸಂಬಂಧಿಸಿದಂತೆ ಸಿಎಂ ಡಿಕೆ ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು.

ಸದ್ಯ ರಾಜ್ಯದಲ್ಲಿ ವಾತಾವರಣ ಉತ್ತಮವಾಗಿಲ್ಲ. ಹಾಗಾಗಿ ವಿಜಯ್ ರಾಜ್ಯಕ್ಕೆ ಬಂದಾಗ ಅವರನ್ನು ಗೌರವಿಸುವುದು ಕರ್ತವ್ಯವಾಗಿದೆ. ಹಾಗಾಗಿ ವಾತಾವರಣ ಉತ್ತಮವಾದ ಬಳಿಕ ಕರ್ನಾಟಕದಲ್ಲಿ ಸಭೆ ನಡೆಸಲು ಆಹ್ವಾನ ನೀಡಲಾಗುವುದು ಎಂದರು.

ಒಳಹರಿವು ಇದೆ

ಸದ್ಯ ಕಾವೇರಿ ಕೊಳ್ಳದಲ್ಲಿ 7,500 ಕ್ಯೂಸೆಕ್ ನೀರಿನ ಒಳಹರಿವು ಇದೆ. ಅದನ್ನು ಮುಚ್ಚಿಡಲು ಸಾಧ್ಯವಿಲ್ಲ. ಹಾರಂಗಿ ಶೇ 95 ತುಂಬಿದೆ ಹಾಗೂ ಕಬಿನಿಯಲ್ಲಿ ಶೇ 83 ರಷ್ಟು ಸಂಗ್ರಹ ಇದೆ. ಕೆ ಆರ್ ಎಸ್ ನಲ್ಲಿ ಶೇ 36 ರಷ್ಟು ಸಂಗ್ರಹ ಇದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka