ಗುರು ಮತ್ತು ಮಂಗಳನ ಸಂಯೋಗ: ಜ್ಯೋತಿಷ್ಯದಲ್ಲಿ ಮಂಗಳ ಮತ್ತು ಗುರು ಗ್ರಹಗಳ ಸಂಯೋಗವನ್ನು ಮಹತ್ವದ ಸಂಯೋಗವೆಂದು ಪರಿಗಣಿಸಲಾಗುತ್ತದೆ. ಪಂಚಾಂಗದ ಪ್ರಕಾರ, ಸೆಪ್ಟೆಂಬರ್ 18, ರಂದು ಕರ್ಕಾಟಕ ರಾಶಿಯಲ್ಲಿ ಮಂಗಳ ಮತ್ತು ಗುರುವಿನ ಸಂಯೋಗ ಸಂಭವಿಸಲಿದೆ. ಈ ಸಂಯೋಗದ ಪ್ರಭಾವದಿಂದ ಕೆಲವು ರಾಶಿಯವರಿಗೆ ವೃತ್ತಿಜೀವನದಲ್ಲಿ ಪ್ರಗತಿ, ವ್ಯವಹಾರದಲ್ಲಿ ವಿಸ್ತರಣೆ ಮತ್ತು ಆರ್ಥಿಕ ಲಾಭದ ಅವಕಾಶಗಳು ದೊರೆಯಬಹುದು.
ಹಾಗಾದರೆ, ಮಂಗಳ-ಗುರು ಸಂಯೋಗದಿಂದ ಯಾವ ರಾಶಿಯವರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂಬುದನ್ನು ನೋಡೋಣ.
ವೈದಿಕ ಪಂಚಾಂಗದ ಪ್ರಕಾರ, ಸೆಪ್ಟೆಂಬರ್ 18ರಂದು ಕರ್ಕಾಟಕ ರಾಶಿಯಲ್ಲಿ ಮಂಗಳ ಮತ್ತು ಗುರುವಿನ ಅಪರೂಪದ ಸಂಯೋಗ ರೂಪುಗೊಳ್ಳಲಿದೆ. ಜ್ಯೋತಿಷ್ಯದಲ್ಲಿ ಮಂಗಳನನ್ನು ಶಕ್ತಿ, ಧೈರ್ಯ ಮತ್ತು ಕಾರ್ಯಸಾಧನೆಯ ಗ್ರಹವೆಂದು, ಗುರುವನ್ನು ಜ್ಞಾನ, ಸಂಪತ್ತು ಮತ್ತು ವಿಸ್ತರಣೆಯ ಗ್ರಹವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಈ ಎರಡು ಗ್ರಹಗಳ ಸಂಯೋಗವು ಕೆಲವು ರಾಶಿಯವರ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ತರಬಹುದು. ವಿಶೇಷವಾಗಿ ಕರ್ಕಾಟಕ, ತುಲಾ, ಕನ್ಯಾ ಮತ್ತು ಮೇಷ ರಾಶಿಯವರಿಗೆ ವೃತ್ತಿ, ಹಣಕಾಸು ಮತ್ತು ಆಸ್ತಿ ವಿಚಾರಗಳಲ್ಲಿ ಈ ಸಂಯೋಗವು ಅನುಕೂಲಕರವಾಗಿರಬಹುದು.
ಪಂಚಾಂಗದ ಪ್ರಕಾರ, ಮಂಗಳವು ಸೆಪ್ಟೆಂಬರ್ 18ರಂದು ಸಂಜೆ 4:35ಕ್ಕೆ ಕರ್ಕಾಟಕ ರಾಶಿಗೆ ಪ್ರವೇಶಿಸಿ, ಈಗಾಗಲೇ ಅಲ್ಲಿ ಸಂಚರಿಸುತ್ತಿರುವ ಗುರುವನ್ನು ಸೇರಿಕೊಳ್ಳಲಿದೆ. ಇದರಿಂದ ಕರ್ಕಾಟಕ ರಾಶಿಯಲ್ಲಿ ಗುರು-ಮಂಗಳನ ಸಂಯೋಗ ಉಂಟಾಗಲಿದೆ. ಈ ಸಂಯೋಗವು ಅಕ್ಟೋಬರ್ 29ರವರೆಗೆ ಮುಂದುವರಿಯಲಿದೆ. ಅಂದು ಗುರುವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶಿಸಲಿದ್ದು, ಗುರು-ಮಂಗಳ ಸಂಯೋಗವೂ ಅಂತ್ಯಗೊಳ್ಳಲಿದೆ.ಮಂಗಳ-ಗುರು ಸಂಯೋಗದ ಮಹತ್ವ

ವೈದಿಕ ಜ್ಯೋತಿಷ್ಯದಲ್ಲಿ, ಮಂಗಳವನ್ನು ಶಕ್ತಿ, ಧೈರ್ಯ, ಭೂಮಿ ಮತ್ತು ಆಸ್ತಿಯ ಸೂಚಕ ಎಂದು ಪರಿಗಣಿಸಲಾಗುತ್ತದೆ, ಆದರೆ ಗುರು ಬುದ್ಧಿವಂತಿಕೆ, ಸಂಪತ್ತು, ಸಮೃದ್ಧಿ ಮತ್ತು ಅದೃಷ್ಟದೊಂದಿಗೆ ಸಂಬಂಧ ಹೊಂದಿದ್ದಾನೆ. ಪರಿಣಾಮವಾಗಿ, ಈ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಸಂಗಮವಾಗುವುದನ್ನು ಜ್ಯೋತಿಷ್ಯಶಾಸ್ತ್ರೀಯವಾಗಿ ಮಹತ್ವದ್ದಾಗಿ ಪರಿಗಣಿಸಲಾಗುತ್ತದೆ. ಆದರೆ, ವ್ಯಕ್ತಿಯ ಮೇಲೆ ನಿಜವಾದ ಪರಿಣಾಮವು ಅವರ ನಿರ್ದಿಷ್ಟ ಜನ್ಮ ಕುಂಡಲಿ ಮತ್ತು ಅದರೊಳಗಿನ ಗ್ರಹಗಳ ಸ್ಥಾನವನ್ನು ಅವಲಂಬಿಸಿರುತ್ತದೆ.
ತುಲಾ ರಾಶಿ

ಮಂಗಳ-ಗುರು ಸಂಯೋಗವು ತುಲಾ ರಾಶಿಯವರ ವೃತ್ತಿಜೀವನಕ್ಕೆ ಹೊಸ ದಿಕ್ಕನ್ನು ನೀಡಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮ ಮತ್ತು ಸಾಮರ್ಥ್ಯಕ್ಕೆ ಮೆಚ್ಚುಗೆ ದೊರೆಯುವ ಸಾಧ್ಯತೆಯಿದೆ. ಬಡ್ತಿ ಅಥವಾ ಸಂಬಳ ಹೆಚ್ಚಳದ ಅವಕಾಶಗಳು ಎದುರಾಗಬಹುದು. ಉದ್ಯಮಿಗಳು ಹೊಸ ಯೋಜನೆಗಳು ಮತ್ತು ಹೂಡಿಕೆಗಳಿಂದ ಉತ್ತಮ ಲಾಭ ಪಡೆಯಬಹುದು. ಈ ಅವಧಿಯಲ್ಲಿ ಅನಿರೀಕ್ಷಿತ ಆರ್ಥಿಕ ಲಾಭ ದೊರೆಯುವ ಸಾಧ್ಯತೆಯಿದ್ದು, ಸಂಪತ್ತು ಸಂಗ್ರಹಿಸುವಲ್ಲಿಯೂ ಯಶಸ್ಸು ಸಿಗಬಹುದು.
ಕನ್ಯಾ ರಾಶಿ

ಮಂಗಳ-ಗುರು ಸಂಯೋಗವು ಕನ್ಯಾ ರಾಶಿಯವರಿಗೆ ಅದೃಷ್ಟದ ದೃಷ್ಟಿಯಿಂದ ಅನುಕೂಲಕರವಾಗಿರಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ತೆರೆದುಕೊಳ್ಳಬಹುದು. ಹಿಂದಿನ ಹೂಡಿಕೆಗಳಿಂದ ಉತ್ತಮ ಲಾಭ ದೊರೆಯುವ ಸಾಧ್ಯತೆಯಿದೆ. ಆಸ್ತಿಗೆ ಸಂಬಂಧಿಸಿದಂತೆ ನೀವು ಕೈಗೊಳ್ಳುವ ನಿರ್ಧಾರಗಳು ನಿಮ್ಮ ಪರವಾಗಿ ಫಲ ನೀಡಬಹುದು. ಕುಟುಂಬದ ಬೆಂಬಲದಿಂದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಲಗೊಳ್ಳುವ ಸಾಧ್ಯತೆಯಿದ್ದು, ಭವಿಷ್ಯಕ್ಕಾಗಿ ಪ್ರಮುಖ ಯೋಜನೆಗಳನ್ನು ರೂಪಿಸಲು ಇದು ಉತ್ತಮ ಸಮಯವಾಗಿರಲಿದೆ.
ಕಟಕ ರಾಶಿ

ಮಂಗಳ-ಗುರು ಸಂಯೋಗವು ಕರ್ಕಾಟಕ ರಾಶಿಯವರಿಗೆ ಆರ್ಥಿಕವಾಗಿ ಉತ್ತಮ ಫಲಿತಾಂಶಗಳನ್ನು ನೀಡಬಹುದು. ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿಗಳು ದೊರೆಯುವುದರ ಜೊತೆಗೆ ಬಡ್ತಿ ಸಿಗುವ ಅವಕಾಶವೂ ಇದೆ. ಉದ್ಯಮಿಗಳಿಗೆ ದೊಡ್ಡ ಆರ್ಡರ್ಗಳು ಅಥವಾ ಲಾಭದಾಯಕ ವ್ಯವಹಾರ ಒಪ್ಪಂದಗಳು ದೊರೆಯಬಹುದು. ಆರ್ಥಿಕ ಪರಿಸ್ಥಿತಿ ಬಲಗೊಳ್ಳುವ ಸಾಧ್ಯತೆಯಿದ್ದು, ಆಸ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿಯೂ ಅನುಕೂಲಕರ ಫಲಿತಾಂಶಗಳು ಸಿಗಬಹುದು. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಪ್ರಮುಖ ಕೆಲಸವೊಂದು ಈ ಅವಧಿಯಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಮೇಷ ರಾಶಿ

ಮಂಗಳ-ಗುರು ಸಂಯೋಗವು ಮೇಷ ರಾಶಿಯವರ ವೃತ್ತಿ ಮತ್ತು ಆರ್ಥಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು. ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ಉತ್ತಮ ಸುದ್ದಿ ಸಿಗುವ ಸಾಧ್ಯತೆಯಿದೆ. ಉದ್ಯಮಿಗಳು ವ್ಯವಹಾರ ವಿಸ್ತರಣೆಗೆ ರೂಪಿಸಿರುವ ಯೋಜನೆಗಳಲ್ಲಿ ಯಶಸ್ಸು ಕಾಣಬಹುದು. ಸಂಪತ್ತು ಮತ್ತು ಆಸ್ತಿಯನ್ನು ಹೆಚ್ಚಿಸಿಕೊಳ್ಳಲು ಹೊಸ ಅವಕಾಶಗಳು ದೊರೆಯಬಹುದು. ವಿದೇಶಿ ಪ್ರಯಾಣ ಅಥವಾ ಮಹತ್ವದ ಯೋಜನೆಗಳಿಗೆ ಸಂಬಂಧಿಸಿದಂತೆ ಲಾಭದ ಸೂಚನೆಗಳೂ ಕಂಡುಬರಬಹುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಜ್ಯೋತಿಷ್ಯ ಮಾಹಿತಿ ಮತ್ತು ಪರಿಹಾರಗಳು, ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ನೀಡಲ್ಪಟ್ಟಿವೆ. ಇದರ ಕುರಿತು ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಈ ಮಾಹಿತಿಯನ್ನು ಪರಿಗಣಿಸಲು ಮತ್ತು ಸಂಪೂರ್ಣ ವಿವರಗಳನ್ನು ಗಳಿಸಲು ಸಂಬಂಧಿತ ಪರಿಣಿತರಿಂದ ಸಲಹೆ ಪಡೆಯುವುದು ಉತ್ತಮ.

