Dailyhunt
ಕೇರಳ ಚುನಾವಣೆ: ಟುಡೇಸ್‌ ಚಾಣಕ್ಯ Exit Poll ಬಹಿರಂಗ; ಎಡ ಪಕ್ಷಕ್ಕೆ BJP ಏಟು! ಕಾಂಗ್ರೆಸ್‌ ಬೆಂಬಲಿತ ಯುಡಿಎಫ್‌ಗೆ ವೋಟು

ಕೇರಳ ಚುನಾವಣೆ: ಟುಡೇಸ್‌ ಚಾಣಕ್ಯ Exit Poll ಬಹಿರಂಗ; ಎಡ ಪಕ್ಷಕ್ಕೆ BJP ಏಟು! ಕಾಂಗ್ರೆಸ್‌ ಬೆಂಬಲಿತ ಯುಡಿಎಫ್‌ಗೆ ವೋಟು

Vijay Karnataka 1 week ago

ತಿರುವನಂತಪುರಂ: 2026ರ ಕೇರಳ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಟುಡೇಸ್‌ ಚಾಣಕ್ಯ ಸಮೀಕ್ಷಾ ವರದಿ ಬಿಡಗಡೆಯಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಸಮೀಕ್ಷೆಯ ಪ್ರಕಾರ, ಆಡಳಿತರೂಢ ಎಲ್‌ಡಿಎಫ್ ಮತ್ತು ಪ್ರತಿಪಕ್ಷ ಯುಡಿಎಫ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಡಲಿದ್ದು, ಯುಡಿಎಫ್ ಕೂದಲೆಳೆಯ ಅಂತರದ ಮುನ್ನಡೆ ಸಾಧಿಸುವ ಸಾಧ್ಯತೆಯಿದೆ.

ಎಲ್ಲಕ್ಕಿಂತ ಅಚ್ಚರಿಯ ಸಂಗತಿಯೆಂದರೆ, ಕೇರಳದಲ್ಲಿ ಬಿಜೆಪಿ ಈ ಬಾರಿ ಶೇ. 20ರಷ್ಟು ಮತಗಳನ್ನು ಪಡೆಯುವ ಮೂಲಕ ಪ್ರಬಲ ಶಕ್ತಿಯಾಗಿ ಹೊರಹೊಮ್ಮುವ ಮುನ್ಸೂಚನೆ ನೀಡಿದೆ. ನಾಯರ್ ಮತ್ತು ಈಳವ ಸಮುದಾಯಗಳಲ್ಲಿ ಬಿಜೆಪಿ ಮಾಡುತ್ತಿರುವ ಮೋಡಿಯಿಂದಾಗಿ ಎಲ್‌ಡಿಎಫ್ ಮತಬ್ಯಾಂಕ್‌ಗೆ ಪೆಟ್ಟು ಬೀಳುವ ಲಕ್ಷಣಗಳಿವೆ. ಅಲ್ಪಸಂಖ್ಯಾತರ ಮತಗಳು ಗಣನೀಯವಾಗಿ ಯುಡಿಎಫ್ ಕಡೆ ವಾಲಿರುವುದರಿಂದ ಅವರು ಅಲ್ಪ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕೇರಳ ಚುನಾವಣೆ ಟುಡೇಸ್‌ ಚಾಣಕ್ಯ ಸಮೀಕ್ಷೆ ಅಂಕಿ ಅಂಶಗಳು

ಕೇರಳದಲ್ಲಿ ಒಟ್ಟು 140 ವಿಧಾನಸಭಾ ಸ್ಥಾನಗಳಿದ್ದು, ಬಹುಮತಕ್ಕೆ 71 ಸ್ಥಾನಗಳ ಅಗತ್ಯವಿದೆ. ಸಮೀಕ್ಷೆಯ ಪ್ರಕಾರ ಯಾವುದೇ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಸಿಗುವ ಲಕ್ಷಣಗಳಿಲ್ಲ.

ಜಾತಿ ಮತ್ತು ಸಮುದಾಯವಾರು ಲೆಕ್ಕಾಚಾರ?

  • ನಾಯರ್ : ಈ ಸಮುದಾಯದಲ್ಲಿ ಅತಿ ಹೆಚ್ಚು ಅಂದರೆ ಶೇ. 39ರಷ್ಟು ಜನರು ಬಿಜೆಪಿ+ ಬೆಂಬಲಿಸಿದ್ದಾರೆ. ಯುಡಿಎಫ್‌ಗೆ ಶೇ. 32 ಹಾಗೂ ಎಲ್‌ಡಿಎಫ್‌ಗೆ ಕೇವಲ ಶೇ. 28ರಷ್ಟು ಬೆಂಬಲ ಸಿಕ್ಕಿದೆ.
  • ಮುಸ್ಲಿಂ : ಮುಸ್ಲಿಂ ಮತದಾರರು ಸ್ಪಷ್ಟವಾಗಿ ಯುಡಿಎಫ್ ಪರ ನಿಂತಿದ್ದಾರೆ. ಬರೋಬ್ಬರಿ ಶೇ. 62ರಷ್ಟು ಮುಸ್ಲಿಮರು ಯುಡಿಎಫ್‌ಗೆ ಒಲವು ತೋರಿದ್ದರೆ, ಶೇ. 33ರಷ್ಟು ಎಲ್‌ಡಿಎಫ್‌ಗೆ ಮತ್ತು ಕೇವಲ ಶೇ. 4ರಷ್ಟು ಬಿಜೆಪಿಗೆ ಬೆಂಬಲಿಸಿದ್ದಾರೆ.
  • ಈಳವ : ಸಾಂಪ್ರದಾಯಿಕವಾಗಿ ಎಬಲ್‌ಡಿಎಫ್ ಬೆಂಬಲಿಗರಾಗಿರುವ ಈಳವ ಸಮುದಾಯದಲ್ಲಿ ಶೇ. 47ರಷ್ಟು ಮತಗಳು ಎಲ್‌ಡಿಎಫ್‌ಗೆ ಹೋಗಿವೆ. ಆದರೆ, ಇಲ್ಲಿ ಬಿಜೆಪಿ ಶೇ. 32ರಷ್ಟು ಭಾರಿ ಪ್ರಮಾಣದ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವುದು ಎಲ್‌ಡಿಎಫ್‌ಗೆ ತಲೆನೋವಾಗಿದೆ.
  • ಕ್ರಿಶ್ಚಿಯನ್ : ಕ್ರಿಶ್ಚಿಯನ್ ಮತದಾರರಲ್ಲಿ ಶೇ. 53ರಷ್ಟು ಯುಡಿಎಫ್‌ಗೆ ಮನ್ನಣೆ ನೀಡಿದ್ದಾರೆ. ಎಲ್‌ಡಿಎಫ್‌ಗೆ ಶೇ. 34 ಮತ್ತು ಬಿಜೆಪಿಗೆ ಶೇ. 11ರಷ್ಟು ಬೆಂಬಲ ವ್ಯಕ್ತವಾಗಿದೆ.
  • ಪರಿಶಿಷ್ಟ ಜಾತಿ : ಪರಿಶಿಷ್ಟ ಜಾತಿಯ ಮತದಾರರು ಅತಿ ಹೆಚ್ಚು ಅಂದರೆ ಶೇ. 49ರಷ್ಟು ಎಲ್‌ಡಿಎಫ್ ಬೆನ್ನಿಗೆ ನಿಂತಿದ್ದಾರೆ. ಯುಡಿಎಫ್‌ಗೆ ಶೇ. 31 ಹಾಗೂ ಬಿಜೆಪಿಗೆ ಶೇ. 18ರಷ್ಟು ಮತಗಳು ಒಲಿಯುವ ಸಾಧ್ಯತೆಯಿದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka