ಅಬುಧಾಬಿ: ಅಬುಧಾಬಿಯಲ್ಲಿ ನೆಲೆಸಿರುವ ಭಾರತದ ಕೇರಳ ಮೂಲದ ವಲಸಿಗರೊಬ್ಬರು ಸತತ 6 ವರ್ಷಗಳ ಕಾಲ ತನ್ನ ಅದೃಷ್ಟವನ್ನು ಪರೀಕ್ಷಿಸಿದ್ದು, ಕೊನೆಗೆ ಅವರಿಗೆ ಇದೀಗ ಬಿಗ್ ಟಿಕೆಟ್ ಅಬುಧಾಬಿ ಜಾಕ್‌ಪಾಟ್ ಹೊಡೆದಿದ್ದು, ಬರೋಬ್ಬರಿ 25 ಮಿಲಿಯನ್ ದಿರ್ಹಮ್ ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 64.5 ಕೋಟಿ ರೂ.
ಲಾಟರಿ ಗೆದಿದ್ದಾರೆ.
ಬಿಗ್ ಟಿಕೆಟ್ ಅಬುಧಾಬಿ ಜಾಕ್‌ಪಾಟ್ ಗೆದ್ದ ಕೇರಳದ ವ್ಯಕ್ತಿ
ಸುಮಾರು 17 ವರ್ಷಗಳಿಂದ ದುಬೈನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ಭಾರತದ ಕೇರಳ ಮೂಲದ ವಲಸಿಗ 48 ವರ್ಷದ ಅಬ್ದುಲ್ ರಶೀದ್ ಅಲ್ಲಿಪ್ರಾ ವಳಪ್ಪಿಲ್ ಅಬ್ದು ಅವರು 64.5 ಕೋಟಿ ರೂ. ಲಾಟರಿ ಗೆದಿದ್ದು, ಈ ಮೂಲಕ ರಾತ್ರೋರಾತ್ರಿ ಕೋಟ್ಯಾಧೀಶರಾಗಿದ್ದಾರೆ. ಈ ಕುರಿತು ದಿ ಸಿಯಾಸತ್ ಡೈಲಿ ವರದಿ ಮಾಡಿದೆ.ಈ ವರದಿಯ ಪ್ರಕಾರ, ಸುಮಾರು 17 ವರ್ಷಗಳಿಂದ ಅಬ್ದುಲ್ ರಶೀದ್ ಅಲ್ಲಿಪ್ರಾ ವಳಪ್ಪಿಲ್ ಅಬ್ದು ದುಬೈನಲ್ಲಿ ಕೆಲಸದತ್ತ ನಿಮಿತ್ತ ವಾಸಿಸುತ್ತಿದ್ದು, ತಮ್ಮ ಕುಟುಂಬ ಭಾರತದಲ್ಲೇ ನೆಲೆಸಿದೆ. ಈತ ಸುಮಾರು 6 ವರ್ಷಗಳಿಂದಲೂ ಅಬುಧಾಬಿಯಲ್ಲಿನ ಲಾಟರಿಗಳನ್ನು ಖರೀದಿ ಮಾಡುತ್ತಿದ್ದು, ಕೊನೆಗೆ ಈ ವರ್ಷದ ಏ.19 ರಂದು ಬಿಗ್ ಟಿಕೆಟ್ ಅಬುಧಾಬಿ ಜಾಕ್‌ಪಾಟ್ ನ ಟಿಕೆಟ್ ಸಂಖ್ಯೆ 012318 ಅನ್ನು ಖರೀದಿಸಿದ್ದು, ಅದೃಷ್ಟ ಒಲಿದಿದ್ದು, ಹೀಗೆ ಈ ಬೃಹತ್ ಮೊತ್ತದ ಲಾಟರಿ ಗಿಟ್ಟಿಸಿಕೊಂಡಿದ್ದಾರೆ.
ಸ್ನೇಹಿತರೊಂದಿಗೆ ಸಮಯ ಕಳೆಯುತ್ತಿದ್ದಾಗ ಸಿಕ್ತು ಗುಡ್‌ನ್ಯೂಸ್
ಇನ್ನು, ಈ ಲಾಟರಿಯನ್ನು ಗೆದ್ದ ಕುರಿತು ತಮ್ಮ ಸಂತೋಷವನ್ನು ಹಂಚಿಕೊಂಡ ವಿಜೇತ ಅಬ್ದುಲ್ ರಶೀದ್ ತಾನು ವಿಜೇತ ಎಂದು ತಿಳಿದ ಕ್ಷಣ ತಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯುತ್ತಿದ್ದು, ಈ ವಾರ್ತೆಯನ್ನು ಕೇಳಿ ಸಂಪೂರ್ಣವಾಗಿ ಅಚ್ಚರಿಗೊಳಗಾಗಿದ್ದು, ಇದೊಂದು ವಿಶೇಷ ಕ್ಷಣವಾಗಿತ್ತು ಎಂದು ತಿಳಿಸಿದ್ದಾರೆ. ಇನ್ನು, ಬಹುಮಾನದ ಹಣದಿಂದ ಮುಂದಿನ ಯೋಜನೆಗಳ ಕುರಿತು ತಿಳಿಸಿರುವ ಅಬ್ದುಲ್ ರಶೀದ್ ಬಹುಮಾನದ ಹಣವನ್ನು ಹೇಗೆ ಬಳಸಬೇಕೆಂದು ನಿರ್ಧರಿಸುವ ಮೊದಲು ತಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಸಂಪರ್ಕಿಸಲು ಯೋಜಿಸುತ್ತಿರುವುದಾಗಿಯೂ, ಭವಿಷ್ಯದ ಡ್ರಾಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸುವುದಾಗಿಯೂ ತಿಳಿಸಿದ್ದಾರೆ.ಡ್ರೀಮ್ ಕಾರ್ ಲಾಟರಿ ಗೆದ್ದ ಮತ್ತೊಬ್ಬ ಕೇರಳ ಮೂಲದ ವಲಸಿಗ
ಇನ್ನು, ಈ ಲಾಟರಿಯ ಅದೃಷ್ಟ ಮತ್ತೊಂದು ಭಾರತೀಯ ಅದರಲ್ಲೂ ಕೇರಳ ಮೂಲದ ವಲಸಿಗ 41 ವರ್ಷದ ಚಾಲಕ ಅಶ್ರಫ್ ಅಬ್ದುಲ್ಲಾಗೆ ಲಭಿಸಿದ್ದು, ಡ್ರೀಮ್ ಕಾರ್ ವಿಭಾಗದಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ ಅನ್ನು ಗೆದಿದ್ದಾರೆ ಎಂದು ವರದಿಯಾಗಿದೆ.ಸುಮಾರು 16 ವರ್ಷಗಳಿಂದ ಯುಎಇಯಲ್ಲಿ ನೆಲೆಸಿರುವ ಅಶ್ರಫ್ ಅಬ್ದುಲ್ಲಾ ಸುಮಾರು 9 ವರ್ಷಗಳಿಂದಲೂ ಈ ಬಿಗ್ ಟಿಕೆಟ್ ಡ್ರಾದಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೆ, ತಮ್ಮ ಸ್ನೇಹಿತರೊಬ್ಬರು ಡ್ರೀಮ್ ಕಾರ್ ವಿಭಾಗದಲ್ಲಿ ಟಿಕೆಟ್ ಖರೀದಿಸಲು ಪ್ರೋತ್ಸಾಹಿಸಿದ್ದು, ಇದು ಇದು ಸಂಪೂರ್ಣವಾಗಿ ಅನಿರೀಕ್ಷಿತವಾದ ಕ್ಷಣವಾಗಿದ್ದು, ತುಂಬಾ ಸಂತೋಷದಾಯಕ ವಿಚಾರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

