Dailyhunt Logo
  • Light mode
    Follow system
    Dark mode
    • Play Story
    • App Story
ಲಕ್ಷ್ಮಿ ನಾರಾಯಣ ಯೋಗ 2026: ಧನು ಸೇರಿ ಈ 5 ರಾಶಿಯವರಿಗೆ ತಿಂಗಳು ಪೂರ್ತಿ ಶುಕ್ರದೆಸೆ ಅದೃಷ್ಟ ದೇವತೆ ಕೈಬಿಡಲ್ಲ..!

ಲಕ್ಷ್ಮಿ ನಾರಾಯಣ ಯೋಗ 2026: ಧನು ಸೇರಿ ಈ 5 ರಾಶಿಯವರಿಗೆ ತಿಂಗಳು ಪೂರ್ತಿ ಶುಕ್ರದೆಸೆ ಅದೃಷ್ಟ ದೇವತೆ ಕೈಬಿಡಲ್ಲ..!

Vijay Karnataka 1 month ago

ಕ್ಷ್ಮಿ ನಾರಾಯಣ ಯೋಗ 2026: ಸಂಕಷ್ಟ ಚತುರ್ಥಿಯಂದು ಲಕ್ಷ್ಮೀ ನಾರಾಯಣ ಯೋಗ ರೂಪಗೊಳ್ಳುವುದು. ಇದರಿಂದಾಗಿ ಕೆಲ ರಾಶಿಯವರು ಸಾಗುವ ಹಾದಿಯಲ್ಲಿ ಅದೃಷ್ಟ ದೇವತೆ ಹೆಜ್ಜೆ ಇಡಲಿದ್ದಾಳೆ. ಹಾಗಾದರೆ ಆ ಶುಭ ರಾಶಿಗಳ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಜ್ಯೋತಿಷ್ಯದಲ್ಲಿ ಗ್ರಹಗಳು ಕಾಲ ಕಾಲಕ್ಕೆ ರಾಶಿ ಮತ್ತು ನಕ್ಷತ್ರಗಳನ್ನು ಬದಲಾಯಿಸುತ್ತಲೇ ಇರುತ್ತವೆ.
ಈ ಗ್ರಹ ಬದಲಾವಣೆಗಳು ಕೆಲವೊಮ್ಮೆ ಪ್ರಬಲ ರಾಜಯೋಗಗಳನ್ನು ಸೃಷ್ಟಿಸುವುದು. ಈ ರಾಜಯೋಗಗಳು ಎಲ್ಲಾ ರಾಶಿಗಳ ಜೀವನದ ಮೇಲೆ ವಿಭಿನ್ನ ಪರಿಣಾಮ ಬೀರುತ್ತವೆ. ಅಂದಹಾಗೆ ಇದೇ ಆಗಸ್ಟ್ 2 ಸಂಕಷ್ಟ ಚತುರ್ಥಿಯಂದು ಜ್ಯೋತಿಷ್ಯದಲ್ಲಿ ಪ್ರಬಲವಾದ ಲಕ್ಷ್ಮಿ ನಾರಾಯಣ ರಾಜಯೋಗ ರೂಪಗೊಳ್ಳಲಿದೆ. ಈ ಶುಭ ಯೋಗ ಶುಕ್ರ ಹಾಗೂ ಬುಧ ಗ್ರಹಗಳು ಒಟ್ಟಿಗೆ ಸಂಯೋಗಗೊಂಡಾಗ ಹಾಗೂ ಪರಸ್ಪರ ಆಳುವ ರಾಶಿಯಲ್ಲಿ ಸಂಚಾರ ಮಾಡಿದಾಗ ರೂಪಗೊಳ್ಳುತ್ತದೆ. ಅಂದಹಾಗೆ ಬುಧನಾಳುವ ಕನ್ಯಾ ರಾಶಿಗೆ ಶುಕ್ರ ಆಗಸ್ಟ್ 2ರಂದು ಸಾಗಲಿದೆ. ವಿಶೇಷವಾಗಿ ಬುಧ ಹಾಗೂ ಶುಕ್ರ ಪರಸ್ಪರ ಸ್ನೇಹ ಗ್ರಹಳಾಗಿವೆ. ಸೆಪ್ಟೆಂಬರ್ 2ರವರೆಗೆ ಲಕ್ಷ್ಮಿ ನಾರಾಯಣ ಯೋಗದ ಪ್ರಭಾವ ಇರಲಿದೆ. ಇದು ಜಾತಕದ ಬಲವಾದ ಸ್ಥಾನದಲ್ಲಿ ರೂಪಗೊಂಡರೆ ಸಂಪತ್ತು, ಸಮೃದ್ಧಿ, ಸೌಕರ್ಯ, ರಾಜವೈಭೋಗವನ್ನು ಕರುಣಿಸುವುದು. ಹಾಗಾದರೆ ಯಾವ ರಾಶಿಯವರು ಈ ಶುಭ ಯೋಗದ ಶುಭ ಫಲಗಳನ್ನು ಪಡೆಯಲಿದ್ದಾರೆ ಎಂದು ತಿಳಿಯೋಣ. ಮೀನ ರಾಶಿ

ಸಂಕಷ್ಟ ಚತುರ್ಥಿ ಮೀನ ರಾಶಿಯವರ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಮಯ. ಈ ದಿನ ರೂಪಗೊಳ್ಳುವ ಲಕ್ಷ್ಮಿ ನಾರಾಯಣ ಯೋಗ ಮೀನ ರಾಶಿಯವರಿಗೆ ಅನಿರೀಕ್ಷಿತ ಪ್ರಯೋಜನಗಳನ್ನು ನೀಡಲಿದೆ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದು. ನಿಮ್ಮ ಜೀವನದಲ್ಲಿ ನೀವು ಇಲ್ಲಿಯವರೆಗೆ ಎದುರಿಸಿದ ತೊಂದರೆಗಳು ನಿವಾರಣೆಯಾಗುತ್ತವೆ. ಅದೃಷ್ಟ ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಬೆಂಬಲ ನೀಡುವುದು. ವ್ಯವಹಾರದ ಮೂಲಕ ಸಾಕಷ್ಟು ಹಣವನ್ನು ಗಳಿಸುವ ಅವಕಾಶವನ್ನು ನೀವು ಪಡೆಯುವಿರಿ. ಈ ಗ್ರಹ ಪರಿವರ್ತನೆ ಹೊಸ ಪ್ರಯತ್ನಗಳನ್ನು ಪ್ರಾರಂಭಿಸಲು ನಿಮಗೆ ಸಹಾಯ ಮಾಡುತ್ತದೆ. ಪ್ರಸ್ತುತ ಉದ್ಯೋಗದಲ್ಲಿರುವವರು ಕಚೇರಿಯಲ್ಲಿ ಉತ್ತಮ ಪ್ರಯೋಜನಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ವಿದೇಶದಲ್ಲಿ ಕೆಲಸ ಮಾಡುವ ಅವಕಾಶಗಳನ್ನು ನೀವು ಪಡೆಯುವಿರಿ. ಶುಕ್ರ ಕನ್ಯಾ ರಾಶಿಗೆ ಪ್ರವೇಶಿಸುವ ಸಮಯದಿಂದ ನಿಮ್ಮ ಜೀವನದಲ್ಲಿ ಅನೇಕ ಒಳ್ಳೆಯ ವಿಷಯಗಳು ಸಂಭವಿಸುತ್ತವೆ. ಕುಟುಂಬ ಜೀವನದಲ್ಲಿ ಸಮಸ್ಯೆಗಳು ಕೊನೆಗೊಳ್ಳುವ ಸಮಯ ಇದು.


ಧನು ರಾಶಿ

ಧನು ರಾಶಿಯವರಿಗೆ ಸಂಕಷ್ಟ ಚತುರ್ಥಿ ಸಂಕಷ್ಟಗಳನ್ನು ದೂರ ಮಾಡಲಿದೆ. ನಿಮಗೆ ಲಕ್ಷ್ಮಿ ನಾರಾಯಣ ಯೋಗ ಆರ್ಥಿಕ ಪ್ರಯೋಜನಗಳನ್ನು ನೀಡುವುದು. ಈ ಯೋಗ ಇಲ್ಲಿಯವರೆಗೆ ನೀವು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳನ್ನು ಕೊನೆಗೊಳಿಸಲಿದೆ. ನೀವು ನಿಮ್ಮ ಕಠಿಣ ಪರಿಶ್ರಮದ ಲಾಭವನ್ನು ಪಡೆಯುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ವಿಶ್ವಾಸ ಹೆಚ್ಚಾಗುತ್ತಾ ಸಾಗಲಿದೆ. ಇದರಿಂದ ಹೊಸ ಹೊಸ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರಲು ಮುಂದಾಗುವಿರಿ. ನಿಮ್ಮೆಲ್ಲಾ ಶ್ರಮದ ಫಲ ಪಡೆಯುವ ಸಮಯ ಇದು. ಅಲ್ಲದೆ ಬುಧನ ಅನುಗ್ರಹದಿಂದ ನಿಮ್ಮ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇದು ಬಡ್ತಿಗೆ ಕಾರಣವಾಗುವ ಸಾಧ್ಯತೆಯೂ ಉಂಟು. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳುವ ಸಮಯ ಇದು. ಯೋಜಿತ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಈ ಅವಧಿಯಲ್ಲಿ ಉದ್ಯಮಿಗಳು ಅನಿರೀಕ್ಷಿತ ಲಾಭ ಗಳಿಸುವರು. ವಿಶೇಷವಾಗಿ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಶುಕ್ರನ ಆಶೀರ್ವಾದದಿಂದ ನೀವು ನಿಮ್ಮ ಜೀವನದಲ್ಲಿ ಅನೇಕ ಪ್ರಯೋಜನಗಳನ್ನು ಪಡೆಯುವಿರಿ.


ಕಟಕ ರಾಶಿ

ಲಕ್ಷ್ಮಿ ನಾರಾಯಣ ಯೋಗ ಕಟಕ ರಾಶಿಯವರ ಭಾಗ್ಯದ ಬಾಗಿಲನ್ನು ತೆರೆಯುವುದು. ಈ ಯೋಗ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ನೀಡಲಿದೆ. ಹಿಂದೆ ಮಾಡಿದ ಸಾಲಗಳನ್ನು ತೀರಿಸಲು ಸಾಧ್ಯವಾಗುವುದು. ಆರ್ಥಿಕ ಸ್ಥಿತಿ ಸುಧಾರಣೆ ಕಾಣಲು ನೀವು ಮಾಡುವ ಪ್ರಯತ್ನಗಳು ಉತ್ತಮ ಫಲ ನೀಡುತ್ತವೆ. ಹೊಸ ಹೊಸ ಉದ್ಯೋಗ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು. ಕುಟುಂಬದಲ್ಲಿ ಮನಸ್ತಾಪಗಳು ದೂರವಾಗುತ್ತವೆ. ದಂಪತಿಗಳ ನಡುವೆ ಇದ್ದ ಮುನಿಸು ಕಡಿಮೆಯಾಗಿ ಪರಸ್ಪರ ಪ್ರೀತಿ ಬಲಗೊಳ್ಳುವುದು. ಮನೆಯಲ್ಲಿ ದೀರ್ಘಕಾಲದಿಂದ ನಿಂತುಹೋಗಿದ್ದ ಶುಭ ಕಾರ್ಯಗಳು ಮತ್ತೆ ಶುರುವಾಗಲಿವೆ. ಇದು ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ತರುವುದು. ಇದಲ್ಲದೆ ವಿದ್ಯಾರ್ಥಿಗಳು ಬಯಸಿದ ಸ್ಥಲದಲ್ಲಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಲಿದೆ.


ಮೇಷ ರಾಶಿ

ಮೇಷ ರಾಶಿಯವರ ಸಂಕಷ್ಟ ಚತುರ್ಥಿ ಹಣ ಹಾಗೂ ಅದೃಷ್ಟವನ್ನು ಹೊತ್ತು ತರಲಿದೆ. ಮೇಷ ರಾಶಿಯವರಿಗೆ ಲಕ್ಷ್ಮಿ ನಾರಾಯಣ ಯೋಗ ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಿದೆ. ಈ ಅವಧಿಯಲ್ಲಿ ನಿಮ್ಮ ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ನಿರೀಕ್ಷಿಸಬಹುದು. ಶುಕ್ರನ ಪ್ರಭಾವ ಮೇಷ ರಾಶಿಯವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ಹೊಸ ಯೋಜನೆಗಳ ಯಶಸ್ವಿ ಅನುಷ್ಠಾನವಾಗುವುದು. ನಿಮ್ಮ ವ್ಯವಹಾರದಲ್ಲಿ ವಿವಿಧ ಒಪ್ಪಂದಗಳ ಮೂಲಕ ಹಣವನ್ನು ಗಳಿಸಲು ನಿಮಗೆ ಉತ್ತಮ ಅವಕಾಶಗಳು ಸಿಗುತ್ತವೆ. ಉದ್ಯಮಿಗಳಿಗೆ ನಿಮ್ಮ ವ್ಯವಹಾರವನ್ನು ಹೊಸ ಕ್ಷೇತ್ರಗಳಿಗೆ ವಿಸ್ತರಿಸಲು ಅವಕಾಶ ಸಿಗಬಹುದು. ಹೆಚ್ಚಿನ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ. ಕುಟುಂಬದಲ್ಲಿನ ಸಮಸ್ಯೆಗಳು ಕೊನೆಗೊಳ್ಳುವ ಸಮಯ. ಶುಭ ಕಾರ್ಯಗಳು ನಡೆಯುವುದರಿಂದ ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ.


ವೃಷಭ ರಾಶಿ

ಆಗಸ್ಟ್ 2ರಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ನೀವು ಕಾಣುವಿರಿ. ಹಿಂದೆ ಮಾಡಿದ ಶ್ರಮದ ಫಲ ನಿಮ್ಮನ್ನು ಕೈಹಿಡಿಯಲಿದೆ. ನಿಮ್ಮ ಉದ್ಯೋಗ ಸ್ಥಳದಲ್ಲಿ ನಿಮ್ಮ ಶ್ರಮವನ್ನು ಗುರುತಿಸುವರು. ಉನ್ನತ ಸ್ಥಾನ, ಬಡ್ತಿ, ಉನ್ನತ ಹುದ್ದೆ ನೀಡುವ ಕಾಲ ಹತ್ತಿರವಿದೆ. ಶ್ರಮಿಕರ ಬಾಳನ್ನು ಶುಕ್ರದೇವ ಬೆಳಗಿಸಲಿದ್ದಾನೆ. ವ್ಯಾಪಾರ, ಕೃಷಿ, ಉದ್ಯಮ, ಸಣ್ಣಪುಟ್ಟ ವ್ಯವಹಾರ, ಕಾರ್ಮಿಕ ವರ್ಗದವರಿಗೆ ಈ ಸಮಯದಲ್ಲಿ ತುಂಬಾ ಅನುಕೂಲಕರವಾಗಿದೆ. ನೀವು ಹಿಂದೆ ಮಾಡಿದ ಸಾಲಗಳನ್ನು ತೀರಿಸುವಿರಿ. ಸದ್ಗುಣಗಳಿಂದ ಮಾಡಿದ ಕಾರ್ಯಗಳು ಸದಾ ಒಳಿತನ್ನು ತರುತ್ತವೆ. ನಿಮ್ಮ ವೃತ್ತಿಯಲ್ಲಿ ಮಾತ್ರ ನೀವು ಬೆಳವಣಿಗೆ ಹೊಂದಲು ಸಾಧ್ಯ. ನಿಮ್ಮೆಲ್ಲಾ ಶ್ರಮದ ಫಲವನ್ನು ನೀವು ಪಡೆಯುವಿರಿ. ಹಠಾತ್ ಆರ್ಥಿಕ ಲಾಭಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಮನೆಯಲ್ಲಿ ಅವಿವಾಹಿತರ ಬಾಳು ಬಂಗಾರವಾಗುವುದು. ಬಯಸಿದ ಬಾಳ ಸಂಗಾತಿಯನ್ನು ನೀವು ಕೈಹಿಡಿಯುವಿರಿ. ಜೊತೆಗೆ ನವಜೋಡಿಗಳಿಗೆ ವಿವಾಹವಾಗುವ ಯೋಗವೂ ಉಂಟು.


Dailyhunt
Disclaimer: This content has not been generated, created or edited by Dailyhunt. Publisher: Vijay Karnataka