Dailyhunt Logo
  • Light mode
    Follow system
    Dark mode
    • Play Story
    • App Story
'ಲಕ್ಷ್ಮೀ ನಿವಾಸ' ಸಿಂಚನಾ ಪಾತ್ರ ಮತ್ತೆ ಬದಲು, ಹಳೆಯ ನಟಿ ಕಮ್‌ಬ್ಯಾಕ್‌!

'ಲಕ್ಷ್ಮೀ ನಿವಾಸ' ಸಿಂಚನಾ ಪಾತ್ರ ಮತ್ತೆ ಬದಲು, ಹಳೆಯ ನಟಿ ಕಮ್‌ಬ್ಯಾಕ್‌!

Vijay Karnataka 1 week ago

'ಲಕ್ಷ್ಮೀ ನಿವಾಸ' ಕನ್ನಡ ಧಾರಾವಾಹಿ ಟಾಪ್‌ ಸ್ಥಾನದಲ್ಲಿರುವ ವೀಕ್ಷಕರ ಮೆಚ್ಚಿನ ಧಾರಾವಾಹಿ ಇದು. ಕಥೆಯಲ್ಲಿ ಬಹಳಷ್ಟು ಟ್ರ್ಯಾಕ್‌ಗಳ ಹೊಂದಿರುವ ಧಾರಾವಾಹಿ. ಜಯಂತ್‌-ಜಾನ್ವಿ, ಸಿದ್ದೇಗೌಡರು-ಭಾವನಾ, ಶ್ರೀನಿವಾಸ್-ಲಕ್ಷ್ಮೀ, ವೆಂಕಿ-ಚೆಲುವಿ, ಹರಿ, ಸಂತೋಷ್‌ ಮತ್ತು ವೀಣಾ, ಸಿಂಚನಾ ಹೀಗೆ ಪ್ರತಿ ಪಾತ್ರದ್ದು ಒಂದೊಂದು ಬಗೆಯ ಟ್ರ್ಯಾಕ್‌ ಇದೆ.

ಜೋಡಿಗಳು ರಿಜಿಸ್ಟರ್‌ ಆಗಿವೆ. ವೀಕ್ಷಕರಿಗಂತೂ ಪಾತ್ರಗಳು ಕಂಠಪಾಠ ಆಗಿವೆ. ಅಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದಿದೆ ಧಾರಾವಾಹಿ.


'ಲಕ್ಷ್ಮೀ ನಿವಾಸ' ಧಾರಾವಾಹಿ ನಿರ್ಮಾಣ ಸಂಸ್ಥೆ ಜೊತೆಗೆ ಹಲವು ಪಾತ್ರಗಳು ಬದಲಾವಣೆ ಆದವು. ಲಕ್ಷ್ಮೀ ಪಾತ್ರ ಬದಲಾಯಿತು, ಸಿದ್ದೇಗೌಡರ ತಾಯಿ ಪಾತ್ರ ಬದಲಾಯಿತು, ನೆಗೆಟಿವ್‌ ಶೇಡ್‌ನ ನೀಲಾ ಪಾತ್ರ ಕೂಡ ಬದಲಾವಣೆ ಆಯ್ತು. ಹೀಗೆ ಹಲವು ಪಾತ್ರಗಳು ನಾನಾ ಕಾರಣಕ್ಕೆ ರಿಪ್ಲೇಸ್‌ ಆದವು. ಸದ್ಯ ಮುಖ್ಯವಾಗಿ ಸಿಂಚನಾ ಪಾತ್ರದ ಬಗ್ಗೆ ಹೇಳುವುದಾದರೇ, ಧಾರಾವಾಹಿ ಶುರುವಾದ ಪ್ರಾರಂಭದ ದಿನಗಳಲ್ಲಿಯೇ ಸಿಂಚನಾ ಪಾತ್ರ ಬದಲಾಗಿತ್ತು. ದಿವ್ಯಶ್ರೀ ಗ್ರಾಮಾ ಧಾರಾವಾಹಿಯಿಂದ ಹೊರ ಬಂದಿದ್ದರು. ನಟಿ ರೂಪಿಕಾ ಧಾರಾವಾಹಿಗೆ ಪ್ರವೇಶ ಮಾಡಿದ್ದರು. ಆರಂಭಿಕ ದಿನಗಳಲ್ಲಿ ವೀಕ್ಷಕರು ಈ ಬದಲಾವಣೆ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಹೋಗ್ತಾ ಹೋಗ್ತಾ ಪಾತ್ರವನ್ನ ಒಪ್ಪಿಕೊಂಡರು.

ಮತ್ತೊಮ್ಮೆ ಪಾತ್ರ ಬದಲಾವಣೆ

ಹೌದು, ಸಿಂಚನಾ ಪಾತ್ರ ಮತ್ತೊಮ್ಮೆ ಬದಲಾಗುತ್ತಿದೆ. ವಿಶೇಷತೆ ಅಂದ್ರೆ ಹಳೆಯ ನಟಿಯೇ ಪಾತ್ರಕ್ಕೆ ಮರಳುತ್ತಿದ್ದಾರೆ. ಈ ಹಿಂದೆ ಸಿಂಚನಾ ಪಾತ್ರವನ್ನ ನಟಿ ದಿವ್ಯಶ್ರೀ ಗ್ರಾಮಾ ನಿರ್ವಹಿಸಿದ್ದರು. ಪ್ರಾರಂಭದ ಕೆಲವು ದಿನಗಳು ಮಾತ್ರ ಇವರು ಕಾಣಿಸಿಕೊಂಡಿದ್ದರು. ನಂತರ ಇವರಿಗೆ ಕಲರ್ಸ್‌ ಕನ್ನಡದ 'ಚುಕ್ಕಿತಾರೆ' ಧಾರಾವಾಹಿ ಆಫರ್‌ ಬಂತು. ಲೀಡ್‌ ಪಾತ್ರ ಇದು. ಹೀಗಾಗಿ ಸಿಂಚನಾ ಪಾತ್ರ ಬಿಟ್ಟು ಕಲರ್ಸ್ ಕುಟುಂಬ ಸೇರಿದ್ದರು. ಈ ಪಾತ್ರಕ್ಕೆ ರೂಪಿಕಾ ಬಂದಿದ್ದರು. ರೂಪಿಕಾ ಅವರು ಸದ್ಯ ಸೀರಿಯಲ್‌ ಬಿಡುತ್ತಿದ್ದಾರೆ. ಇದಕ್ಕೆ ಕಾರಣ ಅವರ ಮದುವೆ.

ಮದುವೆ ಫಿಕ್ಸ್‌

ಹೌದು, ರೂಪಿಕಾ ಅವರ ಮದುವೆ ಫಿಕ್ಸ್ ಆಗಿದ್ದು, ಇವರ ಭಾವಿ ಪತಿ ಕೆನಡಾದ ಇನ್ವೆಸ್ಕೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಹೂವು ಮೂಡಿಸುವ ಶಾಸ್ತ್ರ ಮುಕ್ತಾಯವಾಗಿದೆ. ಆಶ್ಚರ್ಯ ಎಂದರೆ ಈವರೆಗೂ ಭಾವಿ ಪತಿಯನ್ನ ಮುಖತಃ ಭೇಟಿ ಮಾಡಿಲ್ಲ. ವೀಡಿಯೋ ಕಾಲ್‌ನಲ್ಲೇ ಶಾಸ್ತ್ರ ಜರುಗಿದೆ. ಇನ್ನೇನಿದ್ದರು ಆಗಸ್ಟ್‌ನಲ್ಲಿ ಮದುವೆ ನಡೆಯಬೇಕಿದೆ. ಮದುವೆ ನಂತರ ರೂಪಿಕಾ ಅವರು ಬ್ರೇಕ್‌ ತೆಗೆದುಕೊಳ್ಳುತ್ತಿದ್ದಾರೆ. ಕೆನಡಾದಲ್ಲಿ ಸೆಟಲ್ ಆಗುವ ಪ್ಲ್ಯಾನ್‌ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿನೇ ಅವರು ಸೀರಿಯಲ್‌ನಿಂದ ಹೊರ ಬರುತ್ತಿದ್ದಾರೆ ಎನ್ನಲಾಗಿದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka