Dailyhunt Logo
  • Light mode
    Follow system
    Dark mode
    • Play Story
    • App Story
ಲಕ್ಷ್ಮೀ ರಾಜಯೋಗ 2026: ಮಕರ ಸೇರಿ ಈ 5 ರಾಶಿಯವರಿಗೆ ಶುಕ್ರನಿಂದ ಸುಖದ ಸುಪ್ಪತ್ತಿಗೆ ರಾಜವೈಭೋಗ...!

ಲಕ್ಷ್ಮೀ ರಾಜಯೋಗ 2026: ಮಕರ ಸೇರಿ ಈ 5 ರಾಶಿಯವರಿಗೆ ಶುಕ್ರನಿಂದ ಸುಖದ ಸುಪ್ಪತ್ತಿಗೆ ರಾಜವೈಭೋಗ...!

Vijay Karnataka 2 months ago

Lakshmi rajyoga 2026: ಆಗಸ್ಟ್ 15ರಂದು ಶುಕ್ರ ಚಂದ್ರ ಗ್ರಹಗಳು ಒಟ್ಟಿಗೆ ಸೇರಿ ಲಕ್ಷ್ಮೀ ರಾಜಯೋಗವನ್ನು ಸೃಷ್ಟಿಸಲಿವೆ. ಇದು ಕೆಲ ರಾಶಿಯವರಿಗೆ ಸಂತೋಷದ ಜೀವನದೊಂದಿಗೆ ವೃತ್ತಿ ಪ್ರಗತಿಯನ್ನು ಕರುಣಿಸುವುದು. ಜ್ಯೋತಿಷ್ಯದ ಪ್ರಕಾರ ಯಾವ ರಾಶಿಯವರಿಗೆ ಶುಭ ದಿನಗಳು ಶುರುವಾಗಲಿವೆ ಎಂದು ತಿಳಿಯಿರಿ.

ಒಂಬತ್ತು ಗ್ರಹಗಳಲ್ಲಿ ಅತ್ಯಂತ ವೇಗವಾಗಿ ಚಲಿಸುವ ಗ್ರಹ ಚಂದ್ರ. ಈ ಚಂದ್ರನು ಸುಮಾರು 2 1/2 ದಿನಗಳ ಕಾಲ ಒಂದು ರಾಶಿಯಲ್ಲಿ ಇರುತ್ತಾನೆ. ಕಡಿಮೆ ದಿನಗಳಲ್ಲಿ ರಾಶಿಯನ್ನು ಬದಲಾಯಿಸುವುದರಿಂದ, ಅದು ಇತರ ಗ್ರಹಗಳೊಂದಿಗೆ ಸೇರಿಕೊಂಡು ಶುಭ ಅಥವಾ ಅಶುಭ ಯೋಗಗಳನ್ನು ರೂಪಿಸುತ್ತದೆ. ಆ ರೀತಿಯಲ್ಲಿ ರೂಪುಗೊಂಡ ಯೋಗಗಳ ಪ್ರಭಾವ ಎಲ್ಲಾ ರಾಶಿಗಳ ಜೀವನದಲ್ಲಿ ಗೋಚರಿಸುತ್ತದೆ. ಆಗಸ್ಟ್ 15ರಂದು ಬೆಳಗ್ಗೆ 9:34ಕ್ಕೆ ಚಂದ್ರ ಕನ್ಯಾ ರಾಶಿಗೆ ಪ್ರವೇಶ ಮಾಡಲಿದೆ. ಈಗಾಗಲೇ ರಾಕ್ಷಸರ ಗುರು ಎಂದು ಪರಿಗಣಿಸಲಾದ ಶುಕ್ರ ಕನ್ಯಾ ರಾಶಿಗೆ ಪ್ರವೇಶ ಮಾಡಿದೆ. ಕನ್ಯಾ ರಾಶಿಯಲ್ಲಿ ಶುಕ್ರ ಹಾಗೂ ಚಂದ್ರ ಗ್ರಹಗಳ ಸಂಯೋಗದಿಂದಾಗಿ ಲಕ್ಷ್ಮೀರಾಜಯೋಗ ರೂಪಗೊಳ್ಳುವುದು. ನವಗ್ರಹಗಳಲ್ಲಿ ಶುಕ್ರ ಮತ್ತು ಚಂದ್ರ ಎರಡೂ ಮೃದು ಗ್ರಹಗಳು. ಅವು ಒಟ್ಟಿಗೆ ಸೇರಿದಾಗ ಸಕಾರಾತ್ಮಕ ಶಕ್ತಿ ಮತ್ತು ಉತ್ತಮ ಉದ್ಯೋಗ ಅವಕಾಶಗಳನ್ನು ತರುತ್ತವೆ. ಈ ಸಂಯೋಗದ ಪ್ರಭಾವ ಎಲ್ಲಾ ರಾಶಿಗಳ ಜೀವನದಲ್ಲಿ ಗೋಚರಿಸುತ್ತದೆಯಾದರೂ, ಕೆಲವು ರಾಶಿಗಳು ಆರ್ಥಿಕ ಲಾಭಗಳು, ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಸಾಮಾಜಿಕ ಸಂಬಂಧಗಳಲ್ಲಿ ಸುಧಾರಣೆಯನ್ನು ತರುತ್ತವೆ. ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಸುಧಾರಿಸುವುದು. ಹಾಗಾದರೆ ಈಗ ಶುಕ್ರ ಚಂದ್ರನ ಸಂಯೋಗದಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ ಎಂದು ತಿಳಿಯೋಣ.ಕುಂಭ ರಾಶಿ

ಕುಂಭ ರಾಶಿಯವರಿಗೆ ಶುಕ್ರ ಚಂದ್ರನ ಸಂಯೋಗ ಸಾಕಷ್ಟು ಶುಭ ಫಲಗಳನ್ನು ನೀಡುವುದು. ದಾಂಪತ್ಯ ಜೀವನದಲ್ಲಿ ಸಂತೋಷವನ್ನು ಹೆಚ್ಚಾಗಲಿದೆ. ಉದ್ಯಮಿಗಳಿಗೆ ಅನಿರೀಕ್ಷಿತ ಲಾಭ ಸಿಗುವ ಸಮಯ ಇದು. ಸಮಾಜದಲ್ಲಿ ನಿಮ್ಮ ಖ್ಯಾತಿ ಮತ್ತು ಗೌರವ ಹೆಚ್ಚಾಗಲಿದೆ. ನಿಮ್ಮ ವ್ಯಕ್ತಿತ್ವ ಸಾಕಷ್ಟು ಸುಧಾರಣೆ ಕಾಣುವುದು. ಇದು ಸಂಬಂಧಗಳು ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ತರುವ ಸಮಯ. ನಿಮ್ಮ ಜೀವನ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ. ತಪ್ಪು ತಿಳುವಳಿಕೆಗಳನ್ನು ತಕ್ಷಣ ಬಗೆಹರಿಸಿಕೊಳ್ಳುವುದು ಉತ್ತಮ. ನೀವು ವಿವಿಧ ಕ್ಷೇತ್ರಗಳಿಂದ ಉಪಯುಕ್ತ ಪ್ರಯೋಜನಗಳನ್ನು ನಿರೀಕ್ಷಿಸಬಹುದು. ಈ ಅವಧಿಯಲ್ಲಿ ನಿಮ್ಮ ವೈಯಕ್ತಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಸಂಭವಿಸಲಿವೆ. ವಿದೇಶದಲ್ಲಿ ವ್ಯಾಪಾರ ಅಥವಾ ಕೆಲಸದಲ್ಲಿ ತೊಡಗಿರುವವರು ಹೆಚ್ಚಿನ ಲಾಭವನ್ನು ಗಳಿಸಬಹುದು.


ಮಕರ ರಾಶಿ

ಮಕರ ರಾಶಿಯ ಒಂಬತ್ತನೇ ಮನೆಯಲ್ಲಿ ಶುಕ್ರ ಚಂದ್ರನ ಸಂಯೋಗ ನಡೆಯುತ್ತದೆ. ಇದು ಮಕರ ರಾಶಿಯವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಲು ಸಾಧ್ಯವಾಗಲಿದೆ. ಕೆಲಸದಲ್ಲಿ ನಿಮ್ಮ ಆತ್ಮವಿಶ್ವಾಸ ಉತ್ತುಂಗದಲ್ಲಿರುವ ಸಮಯ ಇದು. ಪ್ರೇಮ ಸಂಬಂಧಗಳಲ್ಲಿ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ನೀವು ನಿಮ್ಮ ಹೊಸ ಉದ್ಯೋಗ ಪಡೆಯುವ ಪ್ರಯತ್ನಗಳಲ್ಲಿ ಯಶಸ್ವಿಯಾಗುತ್ತೀರಿ. ಶುಕ್ರನ ಅನುಗ್ರಹದಿಂದ ನೀವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಲಾಭವಿದೆ. ನಾಯಕತ್ವದ ಕೌಶಲ್ಯಗಳು ಹೆಚ್ಚಾಗುವುದು. ಚಂದ್ರನು ನಿಮ್ಮ ಮನಸ್ಸನ್ನು ಸ್ಥಿರವಾಗಿರಿಸುತ್ತಾನೆ. ನಿಮ್ಮ ಪ್ರೇಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಇದು ಸರಿಯಾದ ಸಮಯ.


ತುಲಾ ರಾಶಿ

​ತುಲಾ ರಾಶಿಯವರಿಗೆ ಶುಕ್ರ-ಚಂದ್ರನ ಸಂಯೋಗದಿಂದಾಗಿ ದಾಂಪತ್ಯ ಜೀವನದಲ್ಲಿ ಸಿಹಿ ಸಿಗುತ್ತದೆ. ಅವಿವಾಹಿತರಿಗೆ ಒಳ್ಳೆಯ ವರ ಕೈಹಿಡಿಯಲಿದ್ದಾನೆ. ಕಲೆ, ಬರವಣಿಗೆ ಅಥವಾ ಸಂಗೀತದಂತಹ ಕ್ಷೇತ್ರಗಳಲ್ಲಿರುವವರಿಗೆ ಉತ್ತಮ ಯಶಸ್ಸು ಸಿಗುವುದು. ಉತ್ತಮ ಆರ್ಥಿಕ ಲಾಭದ ಸಾಧ್ಯತೆಗಳು ಇವೆ. ನೀವು ಕಚೇರಿಯಲ್ಲಿ ಆತ್ಮವಿಶ್ವಾಸದಿಂದ ನಿಮ್ಮ ಗುರಿಗಳನ್ನು ಸಾಧಿಸಿ ಯಶಸ್ವಿಯಾಗುತ್ತೀರಿ. ನೀವು ಭಾವನೆಯಿಂದ ದೊಡ್ಡ ಖರ್ಚುಗಳನ್ನು ಮಾಡುವುದನ್ನು ತಪ್ಪಿಸಬೇಕು.ಶುಕ್ರ ದೇವ ತುಲಾ ರಾಶಿಯವರಿಗೆ ಅಪಾರ ಬೆಳವಣಿಗೆಯನ್ನು ನೀಡುವುದು. ಆರ್ಥಿಕ ಸ್ಥಿತಿ ನಿರೀಕ್ಷೆಗಿಂತ ಉತ್ತಮವಾಗಿರಲಿದೆ. ದೀರ್ಘಾವಧಿಯ ಹೂಡಿಕೆಗಳಿಗೆ ಇದು ಒಳ್ಳೆಯ ಸಮಯ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಜೀವನದ ಹಲವು ಅಂಶಗಳಲ್ಲಿ ಸಂತೋಷ ಹೆಚ್ಚಾಗುವುದು.


ಸಿಂಹ ರಾಶಿ

ಸಿಂಹ ರಾಶಿಯವರಿಗೆ ಶುಕ್ರ-ಚಂದ್ರನ ಸಂಯೋಗದಿಂದಾಗಿ ಅದೃಷ್ಟದ ಸಂಪೂರ್ಣ ಬೆಂಬಲ ನೀಡಲಿದೆ. ಕೆಲಸ ಅಥವಾ ವ್ಯವಹಾರದಲ್ಲಿ ಪ್ರಗತಿಗೆ ಅವಕಾಶಗಳು ಸಿಗುತ್ತವೆ. ನೀವು ದೂರದ ಪ್ರಯಾಣಗಳನ್ನು ಕೈಗೊಳ್ಳುತ್ತೀರಿ. ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದೆ. ಶುಕ್ರನು ನಿಮ್ಮ ಸಾಮಾಜಿಕ ಮತ್ತು ಪ್ರೇಮ ಜೀವನವನ್ನು ಸುಧಾರಿಸುವ ಸಮಯ ಇದು. ಈ ಸಮಯದಲ್ಲಿ ಚಂದ್ರನು ಮನಸ್ಸಿನ ಶಾಂತಿಯನ್ನು ನೀಡುತ್ತಾನೆ. ಈ ಅವಧಿಯಲ್ಲಿ ಅತಿಯಾದ ಆತ್ಮವಿಶ್ವಾಸವನ್ನು ತಪ್ಪಿಸಬೇಕು.


ಮೇಷ ರಾಶಿ

ಮೇಷ ರಾಶಿಯವರಿಗೆ ಶುಕ್ರ ಚಂದ್ರನ ಸಂಯೋಗವು ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ. ನಿಮಗೆ ಸ್ನೇಹಿತರಿಂದ ಬೆಂಬಲ ಸಿಗುವುದು. ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳಿಂದ ಬೆಂಬಲವೂ ಹೆಚ್ಚಾಗಲಿದೆ. ಕೆಲಸ ಅಥವಾ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭದ ಸಾಧ್ಯತೆಗಳಿವೆ. ಶುಭ ಸಮಾರಂಭಗಳಲ್ಲಿ ನೀವು ಹೆಚ್ಚು ಭಾಗವಹಿಸುವಿರಿ. ಶುಕ್ರನು ನಿಮ್ಮ ಸಾಮಾಜಿಕ ಮತ್ತು ಆರ್ಥಿಕ ಅವಕಾಶಗಳನ್ನು ಸುಧಾರಿಸುವನು. ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ ಮತ್ತು ಹಳೆಯ ಹೂಡಿಕೆಗಳಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿನ ಸಾಧ್ಯತೆಗಳಿವೆ. ವೈವಾಹಿಕ ಜೀವನದಲ್ಲಿ ಸಂತೋಷದ ಕ್ಷಣಗಳು ಕಂಡುಬರಲಿವೆ.


Dailyhunt
Disclaimer: This content has not been generated, created or edited by Dailyhunt. Publisher: Vijay Karnataka