Dailyhunt
ಮಧ್ಯಪ್ರಾಚ್ಯದ ಬಿಕ್ಕಟ್ಟು ಎಫೆಕ್ಟ್ : ರೈತರಿಗೆ ಎದುರಾಗಿದ್ಯಾ ರಸಗೊಬ್ಬರ ಸಮಸ್ಯೆ, ಅಕ್ರಮ ತಡೆಗೆ ಕ್ರಮಗಳೇನು

ಮಧ್ಯಪ್ರಾಚ್ಯದ ಬಿಕ್ಕಟ್ಟು ಎಫೆಕ್ಟ್ : ರೈತರಿಗೆ ಎದುರಾಗಿದ್ಯಾ ರಸಗೊಬ್ಬರ ಸಮಸ್ಯೆ, ಅಕ್ರಮ ತಡೆಗೆ ಕ್ರಮಗಳೇನು

Vijay Karnataka 2 weeks ago

ಬೆಂಗಳೂರು: ಅಮೆರಿಕಾ- ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯ ಪ್ರದೇಶದ ಅಸ್ಥಿರತೆ ಉಂಟಾಗಿದೆ. ಪರಿಣಾಮ ರಸಗೊಬ್ಬರ ಉತ್ಪಾದನೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಆಮದು ವ್ಯತ್ಯಯವಾಗುವ ಸಾಧ್ಯತೆ ಕಂಡುಬಂದಿದೆ. ರಾಜ್ಯದಲ್ಲಿ ಗೊಬ್ಬರ ಪೂರೈಕೆಗೆ ಅಡ್ಡಿಯಾಗುವ ಆತಂಕ ವ್ಯಕ್ತವಾಗಿದೆ.

ಈ ಹಿನ್ನಲೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಉಸ್ತುವಾರಿಯಲ್ಲಿ ಕೃಷಿ ಇಲಾಖೆಯಿಂದ ಕೆಲವು ಕ್ರಮಗಳನ್ನು ಅನುಷ್ಠಾನಗೊಳಲಾಗಿದೆ.


ಕೇಂದ್ರ ಸರ್ಕಾರವು ರಾಜ್ಯಕ್ಕೆ ಒಟ್ಟು 30.05 ಲಕ್ಷ ಮೆಟ್ರಿಕ್ ಟನ್ ವಿವಿಧ ಗೊಬ್ಬರಗಳನ್ನು ಹಂಚಿಕೆ ಮಾಡಿದ್ದು, ಏಪ್ರಿಲ್ 1ರ ವೇಳೆಗೆ 11.42 ಲಕ್ಷ ಮೆಟ್ರಿಕ್ ಟನ್ ಸಂಗ್ರಹ ಲಭ್ಯವಿದೆ. ರಾಜ್ಯವು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ (KSCMF) ಮತ್ತು ಕರ್ನಾಟಕ ರಾಜ್ಯ ಬೀಜ ನಿಗಮ(KSSC) ಮುಖಾಂತರ ಕಾಪು ದಾಸ್ತಾನು ವ್ಯವಸ್ಥೆಯನ್ನು ಬಲಪಡಿಸಿದೆ. ಪ್ರಸ್ತುತ 28224 ಮೆಟ್ರಿಕ್ ಟನ್ ಗೊಬ್ಬರ ಕಾಪು ದಾಸ್ತಾನಿನಲ್ಲಿ ಲಭ್ಯವಿದ್ದು, ಯೂರಿಯಾ ಮತ್ತು ಡಿ.ಎ.ಪಿ ಗೊಬ್ಬರಗಳ 25% ಕಡ್ಡಾಯವಾಗಿ ಸಂಗ್ರಹಿಸಲು ನಿರ್ದೇಶಿಸಲಾಗಿದೆ..

ಜಿಲ್ಲಾವಾರು ಗೊಬ್ಬರ ಹಂಚಿಕೆ ಕಳೆದ ಮೂರು ವರ್ಷಗಳ ಸರಾಸರಿ ಬಳಕೆಯನ್ನು ಆಧಾರಿಸಿ ಮರು ನಿರ್ಧಾರ ಮಾಡಲಾಗಿದೆ. ಜೊತೆಗೆ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸೂಕ್ಷ್ಮ ಯೋಜನೆ ರೂಪಿಸಿ ಪೂರೈಕೆ ಸಮಾತೋಲನ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ..

ರಾಜ್ಯದಲ್ಲಿ ಯುರಿಯಾ ಬಳಕೆಯನ್ನು ನಿಯಂತ್ರಿಸಲು FRUITS(Farmer Registration and Unified beneficiary Information System) ಡೇಟಾ ಬೇಸ್ ಆಧಾರಿತ ಯುರಿಯಾ ಡ್ರಿಸ್ಟೂçಬೂಷನ್ ಆಫ್(Urea Distribution App) ಅಭಿವೃದ್ದಿ ಪಡಿಸಲಾಗಿದ್ದು, ರೈತರ ಭೂ ಹಿಡುವಳಿ ಮತ್ತು ಬೆಳೆ ಮಾದರಿಯನ್ನು ಆಧಾರಿಸಿ ಯುರಿಯಾ ಮಾರಾಟವನ್ನು ನಿಯಂತ್ರಿಸಲಾಗುತ್ತಿದೆ. ಈ ಆಪ್ಲಿಕೇಷನ್ ಈಗಾಗಲೇ ಎಂಟು ಜಿಲ್ಲೆಗಳಲ್ಲಿ ಪ್ರಯೋಗಿಕವಾಗಿ ಜಾರಿಯಲ್ಲಿದ್ದು, ಮುಂದಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ್ಯಾಂತ ವಿಸ್ತಾರಗೊಳ್ಳಲಿದೆ..

ಕೃಷಿ ಹೊರತಾದ ಕೃಷಿ ಚಟುವಟಿಕೆಗಳಿಗೆ ಸಹಾಯಧನದ ಯುರಿಯಾ ದುರುಪಯೋಗವನ್ನು ತಡೆಯಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿಶೇಷ ಸಮಿತಿಗಳನ್ನು ರಚಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ FCO-1985 ಮತ್ತು ECA-1985 ನಿಯಮಗಳಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ಒಟ್ಟಾರೆ 2026ರ ಮುಂಗಾರು ಹಂಗಾಮಿನಲ್ಲಿ ಗೊಬ್ಬರ ಕೊರತೆ ಉಂಟಾಗದಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿಯವರ ನೇತೃತ್ವದಲ್ಲಿ ಮತ್ತು ಮೇಲ್ವಿಚಾರಣೆಯ ಮೂಲಕ ಕೃಷಿ ಇಲಾಖೆಯು ಮತ್ತಷ್ಟು ಮುನ್ನೆಚ್ಚರಿಕಾ ಹಾಗೂ ನಿಯಂತ್ರಣ ಕ್ರಮಗಳನ್ನು ಕಠಿಣವಾಗಿ ಜಾರಿಗೊಳಿಸಿದೆ.

ಏನೆಲ್ಲಾ ಕ್ರಮಗಳು?


  • 30.05 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಹಂಚಿಕೆ.
  • 11.42 ಲಕ್ಷ ಮೆಟರಿಕ್ ಟನ್ ಪ್ರಸ್ತುತ ರಸಗೊಬ್ಬರ ಸಂಗ್ರಹ
  • 28224 ಮೆಟ್ರಿಕ್ ಟನ್ ಕಾಪು ದಾಸ್ತಾನು ಲಭ್ಯ.
  • ಯುರಿಯಾ ಮತ್ತು ಡಿ.ಎ.ಪಿ 25% ಕಡ್ಡಾಯ ಸಂಗ್ರಹ.
  • ಯುರಿಯಾ ಡಿಸ್ಟ್ರಿಬ್ಯೂಷನ್ ಆಪ್ ಮೂಲಕ ನಿಯಂತ್ರಿತ ವಿತರಣೆ 8 ಜಿಲ್ಲೆಗಳಲ್ಲಿ ಪೈಲೆಟ್, ರಾಜ್ಯಾದ್ಯಂತ ವಿಸ್ತರಣೆ.
  • ಅಕ್ರಮ ಬಳಕೆ ತಡೆಗೆ ಜಿಲ್ಲಾ ಸಮಿತಿಗಳು
  • ಗಡಿ ಚೆಕ್‌ಪೋಸ್ಟ್ಗಳಲ್ಲಿ ಕಟ್ಟುನಿಟ್ಟಿನ ನಿಗಾ.
  • ವಸುಧಾಮೃತ ಯೋಜನೆಯಡಿ ಜೈವಿಕ ಗೊಬ್ಬರ ವಿತರಣೆ.
  • ರೈತರಿಗೆ ಸಮತೋಲಿತ ಗೊಬ್ಬರ ಕುರಿತು ಜಾಗೃತಿ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka