ಕೆಲವರ ಬದುಕಲ್ಲಿ ಮದುವೆ ಎಂಬುವುದು ದೊಡ್ಡ ಪೆಟ್ಟು ಕೊಟ್ಟುಬಿಡುತ್ತದೆ. ಆ ಆಘಾತದಿಂದ ಅವರು ಆಚೆ ಬರೋಕೆ ಅಮೂಲ್ಯವಾದ ಜೀವನ ಮುಡಿಪಾಗಿಡುವ ಪರಿಸ್ಥಿತಿ ಕೂಡ ಬಂದಿರುತ್ತೆ. ಇಂತಹ ಸೂಕ್ಷ್ಮ ವಿಚಾರ ಹೆಚ್ಚಾಗಿ ಸೆಲಿಬ್ರಿಟಿಗಳ ಬದುಕನ್ನೇ ನುಂಗಿವೆ. ನಾಲ್ಕು ಗೋಡೆಗಳ ನಡುವೆ ನಡೆದ ಘಟನೆಗಳು ಕರಾಳ ಅನುಭವ ನೀಡಿದಾಗ, ಮತ್ತೊಬ್ಬರಿಗೆ ಆ ತರಹದ ಸಂಕಷ್ಟಗಳು ಎದುರಿಸಿ ನಿಲ್ಲಲು ಮಾದರಿ ಆಗಬೇಕು ಎಂಬ ಕಾರಣಕ್ಕೆ ತಮ್ಮ ಮದುವೆ, ಡಿವೋರ್ಸ್ ಮತ್ತು ಈಗಲೂ ಸಮಾಜದಲ್ಲಿ ಎದುರಾಗುತ್ತಿರುವ ಕೆಟ್ಟ ಅನುಭವಗಳನ್ನ ಗಾಯಕಿ ರಮ್ಯಾ ವಸಿಷ್ಠ ಅವರು ತೆರೆದಿಟ್ಟಿದ್ದಾರೆ.
ನಟ ರಘುರಾಮ್ ಅವರು ನಡೆಸಿಕೊಡುವ ನೂರೊಂದು ನೆನಪು ಕಾರ್ಯಕ್ರಮದಲ್ಲಿ ತಮ್ಮ ಮನದಾಳವನ್ನ ಹಂಚಿಕೊಂಡಿದ್ದಾರೆ.
ಗಾಯಕಿ ರಮ್ಯಾ ವಸಿಷ್ಠ ಮಾತು
ವಯಸ್ಸು ಚಿಕ್ಕದು
'ಹೇಗೆ ಎದಿರಿಸಿದ್ರೀ ಚಾಲೆಂಜಸ್‌ನ?' ಎಂದಾಗ, ನಾನು ದೇವರಿಗೆ ಬಿಟ್ಟಿದ್ದೀನಿ. ಇಲ್ಲಿಯತನಕ ಅವನೇ ನನ್ನ ಕಾಪಾಡಿದ್ದು. ಅದೇ ಭರವಸೆಯಲ್ಲಿ ಬದುಕುತ್ತಿದ್ದೇನೆ ಎಂದಿದ್ದಾರೆ ರಮ್ಯಾ ವಸಿಷ್ಠ
'ಹೊಸ ಜೀವನ ಬೇಕು ಅಂತ ಅನಿಸಲಿಲ್ಲವಾ?' ಎಂದಾಗ ಐ ವಾಸ್ ಸೋ ಸ್ಕ್ರೇರ್ಡ್. ನಾನು ತುಂಬಾ ಭಯ ಪಟ್ಟಿದ್ದೀನಿ. ಒಬ್ಬ ವ್ಯಕ್ತಿಯ ಹೊರಗಡೆ ತೋರಿಸುವ ಮುಖ ಬೇರೆನೇ, ಒಳಗಡೆ ನೋಡಿದಾಗ ಅಷ್ಟು ಖರಾಳ ಮುಖ. ನನಗಂತೂ ಯಾರಾದರೂ ನಗು ನಗುತ್ತಾ ಮಾತಾಡಿದ್ರೆ ನಂಬೋಕೆ ಆಗಲ್ಲ. ಒಳಗಡೆ ಏನು ಇರುತ್ತೋ ಏನೋ ಅನ್ಸುತ್ತೆ. ಅಷ್ಟು ಭಯ ನನಗೆ. ಆ ಪರಿಸ್ಥಿತಿ ನನ್ನ ಹಂಗ್ ಮಾಡಿದೆ. ಅಷ್ಟು ಅನುಭವಿಸಿ ಬಿಟ್ಟಿದ್ದೀನಿ. ಐ ಕಾಂಟ್ ಟ್ರಸ್ಟ್ ಪೀಪಲ್ ಎಂದು ಮದುವೆಯ ಆಘಾತವನ್ನ ಹೇಳಿಕೊಂಡಿದ್ದಾರೆ ಗಾಯಕಿ ರಮ್ಯಾ ವಸಿಷ್ಠ.
'ನಿಮ್ಮ ಕೆರಿಯರ್ ಮೇಲೂ ಈ ಘಟನೆ ಇಂಪ್ಯಾಕ್ಟ್ ಮಾಡಿದ್ಯಾ?' ಎಂದು ಕೇಳಿದ್ದಕ್ಕೆ, ತುಂಬಾ ಸಾರಿ. ನನ್ನ ಸುತ್ತ ಇರೋ ಜನ ನನ್ನ ಜೊತೆ ನಿಲ್ತಿಲ್ಲ ಅಂದ್ರೇ ನಾನು ಸರಿಯಿದ್ದೀನಿ ಅಂತ ಅರ್ಥ. ಬದುಕನ್ನ ಈಗ ನೋಡುವ ರೀತಿ ಬದಲಾಗಿದೆ. ಆದರೆ ನನ್ನ ಪ್ರತಿ ಕಾರ್ಯಕ್ರಮದಲ್ಲೂ ಅಡ್ಡಗಾಲಿದೆ. ಒಂದು ಕಾರ್ಯಕ್ರಮ ಮಾಡಿದ್ದೆ. ಆ ಕಾರ್ಯಕ್ರಮದ ವಿಡಿಯೋ ತೆಗೆಯಲು..ಇವರ ಸ್ನೇಹಿತರೋಬ್ಬರನ್ನ ನಂಬಿ, ಪೂರ್ತಿ ಹಣ ಪೇ ಮಾಡಿದ್ದೆ. ಅವರ ನನಗೂ ಸ್ನೇಹಿತರಲ್ಲಾ ಅಂತ ನಂಬಿ ಕಾಂಟ್ರಾಕ್ಟ್ ಕೊಟ್ಟಿದ್ದೆ. ಆದರೆ ಇದುವರೆಗೂ ಅದರ ಒಂದು ಸಣ್ಣ ತುಣುಕು, ವಿಡಿಯೋ ನನಗೆ ಕೊಟ್ಟಿಲ್ಲ. ಇದಕ್ಕೆ ಏನು ಹೇಳ್ತೀರಾ? ಎಂದು ಮಾಜಿ ಪತಿ ಮಾಡಿದ ಅನ್ಯಾಯದ ಬಗ್ಗೆ ತಮ್ಮ ನೋವು ತೋಡಿಕೊಂಡಿದ್ದಾರೆ ಗಾಯಕಿ ರಮ್ಯಾ.
'ರಮ್ಯಾ ಅವರು ತುಂಬಾ ಆಲಿಮನಿ ಕಲೆಕ್ಟ್ ಮಾಡಿದ್ದಾರೆ, ತುಂಬಾ ದುಡ್ಡು ತಗೊಂಡುಬಿಟ್ಟಿದ್ದಾರೆ ಎಂಬ ಮಾತಿದೆ. ಇದು ಸತ್ಯನಾ?' ಎಂಬ ಪ್ರಶ್ನೆಗೆ-
ನಾನು ಒಂದು ರೂಪಾಯಿಯೂ ತಗೊಂಡಿಲ್ಲ. ಇನ್‌ಫ್ಯಾಕ್ಟ್ ನಾನು ಮಾಡಿದ ಕಾರ್ಯಕ್ರಮಗಳ ದುಡ್ಡು ಅವರ ಅಕೌಂಟ್‌ಗೆ ಹೋಗಿ ಬಿದ್ದಿದೆ. ಅದನ್ನ ನನಗೆ ಕೊಟ್ಟಿಲ್ಲ. ಸೀ ಆ ವ್ಯಕ್ತಿ ಅವರ ಮನೆಗೆ ಹೋಗ್ಬೇಕು ಏನೋ ಅಂದಾಗಲೂ ನಾನೇ ಪ್ಯಾಕ್ ಮಾಡಿ ಕೊಟ್ಟಿದ್ದೀನಿ ಎಲ್ಲಾನೂ. ಚಿಕ್ಕ ಚಿಕ್ಕ ಟ್ರಾವೆಲ್ ಬ್ಯಾಗ್ ಬರುತ್ತಲ್ಲಾ.. ಅದರಲ್ಲಿ ಕ್ಯಾಶ್ ತುಂಬಿ ಕೊಟ್ಟಿದ್ದೀನಿ. ಅವರ ಒಂದೇ ಒಂದು ರೂಪಾಯಿನೂ ನಾನು ಟಚ್ ಮಾಡಿಲ್ಲ. ನಾನು ತಗೊಂಡಿದ್ದೀನಿ ಅನ್ನೋದನ್ನ ಪ್ರೂವ್ ಮಾಡಲಿ ಎಂದು ಸವಾಲ್ ಹಾಕಿದ್ದಾರೆ ಗಾಯಕಿ ರಮ್ಯಾ ವಸಿಷ್ಠ ಅವರು.
ನನ್ನ ಇಡೀ ಈ ಘಟನೆ ಏನು ನಡಿಯಿತೋ, ನಾನು ನ್ಯಾಯಕ್ಕಾಗಿ ವಾಯ್ಸ್ ರೈಸ್ ಮಾಡಿದ್ದನ್ನ, ಓಹೋ.. ಇವಳು ಸೆಕ್ಸ್‌ಗೋಸ್ಕರ ಇದನ್ನಲ್ಲಾ ಮಾಡ್ತಿದ್ದಾಳೆ ಅಂತ ನನ್ನ ಲೇಬಲ್ ಮಾಡೋಕೆ ಶುರು ಮಾಡಿದ್ರು. ಅಂಡ್ ಈ ತರಹ ಒಬ್ಬ ವ್ಯಕ್ತಿ. ಈ ವ್ಯಕ್ತಿಯ ನೂನ್ಯತೆಗಳು ಇದು ಅಂತ ನಾನು ಹೇಳಿದ ತಕ್ಷಣ, ಆ ಕ್ಯಾಟಗರಿಗೆ ಬರುವ ಎಲ್ಲಾ ಗಂಡಸರು ನನ್ನ ವಿರುದ್ಧ ಆಗಿಬಿಟ್ಟರು ಎಂದು ರಮ್ಯಾ ವಸಿಷ್ಠ ಅವರು ತಮಗಾದ ಅನ್ಯಾಯವನ್ನ ಬಿಚ್ಚಿಟ್ಟಿದ್ದಾರೆ. ಈ ಎಲ್ಲಾ ಸಂಭಾಷಣೆ ನಟ ರಘುರಾಮ್ ಅವರ ನೂರೊಂದು ನೆನಪು ಕಾರ್ಯಕ್ರಮದ ಸಂದರ್ಶನದಲ್ಲಿ ಇದೆ.

