Dailyhunt Logo
  • Light mode
    Follow system
    Dark mode
    • Play Story
    • App Story
ಮಗನ ʻರಾಜಾಹುಲಿʼ ಡೈಲಾಗ್‌ ನೆನಪಿಸಿ ʻಟಾಕ್ಸಿಕ್‌ʼ ನೆಗೆಟಿವ್‌ ಮಾತುಗಳಿಗೆ ಪುಷ್ಪಾ ಅರುಣ್‌ ಕುಮಾರ್‌ ಕೌಂಟರ್!

ಮಗನ ʻರಾಜಾಹುಲಿʼ ಡೈಲಾಗ್‌ ನೆನಪಿಸಿ ʻಟಾಕ್ಸಿಕ್‌ʼ ನೆಗೆಟಿವ್‌ ಮಾತುಗಳಿಗೆ ಪುಷ್ಪಾ ಅರುಣ್‌ ಕುಮಾರ್‌ ಕೌಂಟರ್!

Vijay Karnataka 1 month ago

ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ʻಟಾಕ್ಸಿಕ್ʼ ಸಿನಿಮಾ ಕುರಿತು ಕೇಳಿಬರುತ್ತಿರುವ ನೆಗೆಟಿವ್ ಮಾತುಗಳು ಹಾಗೂ ಟ್ರೋಲ್‌ಗಳಿಗೆ ಅವರ ತಾಯಿ ಪುಷ್ಪಾ ಅರುಣ್‌ ಕುಮಾರ್ ಖಡಕ್ ತಿರುಗೇಟು ನೀಡಿದ್ದಾರೆ. 95% ಜನ ಸಿನಿಮಾ ಇಷ್ಟಪಟ್ಟಿದ್ದರೂ ಕೆಲವರು ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದಿರುವ ಅವರು, ʻಈ ನೆಗೆಟಿವಿಟಿ ನನ್ನ ಮಗನಿಗೆ ಕೌಂಟೇ ಆಗಲ್ಲʼ ಎಂದು ಟೀಕಾಕಾರರಿಗೆ ನೇರ ಟಾಂಗ್ ನೀಡಿದ್ದಾರೆ.

ಮಾಧ್ಯಮಗಳಿಗೆ ಮಾತನಾಡಿದ ಪುಷ್ಪಾ ಅರುಣ್‌ ಕುಮಾರ್‌, "ಸಿನಿಮಾ ಚೆನ್ನಾಗಿದೆ.. ಆಕ್ಟಿಂಗ್‌ ಚೆನ್ನಾಗಿದೆ.. ಸಿನಿಮಾ ತುಂಬಾ ರಿಚ್‌ ಆಗಿದೆ ಅಂತ ಹೇಳ್ತಿದ್ದಾರೆ. ನೂರರಲ್ಲಿ ಒಂದೆರಡು ಜನಕ್ಕೆ ಇಷ್ಟ ಆಗಲಿಲ್ಲ. ಯಶ್‌ನ ಬೇರೆ ರೀತಿ ಎಕ್ಸ್‌ಪೆಕ್ಟ್‌ ಮಾಡಿದ್ರು. ಎಲ್ಲರ ಒಪಿನಿಯನ್‌ ಒಂದೇ ತರಹ ಇರ್ಬೇಕು ಅಂತೇನಿಲ್ವಲ್ಲಾ? ಬೇಕು ಅಂತಲೇ ಕೆಲವರು ನೆಗೆಟಿವ್‌ ಮಾಡ್ತಿದ್ದಾರೆ. 95% ಸಿನಿಮಾವನ್ನ ಜನ ಇಷ್ಟ ಪಟ್ಟಿದ್ದಾರೆ. ಇನ್ನೊಂದು 5% ಜನಕ್ಕೆ ಸಿನಿಮಾ ಇಷ್ಟ ಆಗಲಿಲ್ಲ. ಕೆಲವರು ಉದ್ದೇಶಪೂರ್ವಕವಾಗಿ ನೆಗೆಟಿವ್‌ ಹೇಳ್ತಿದ್ದಾರೆ" ಎಂದಿದ್ದಾರೆ.


"ಯಶ್‌ ರಾಜಾಹುಲಿ ಸಿನಿಮಾದಲ್ಲಿ ಒಂದು ಡೈಲಾಗ್‌ ಹೇಳಿದ್ದಾನೆ ಗೊತ್ತಲ್ವಾ? ಕಾಲೆಳೆಯುವವರು ಯಾವತ್ತಿದ್ರೂ ಕಾಲೆಳೆಯುತ್ತಲೇ ಇರ್ತಾರೆ. ಹೇಳೋರು ಏನ್‌ ಬೇಕಾದ್ರೂ ಹೇಳ್ತಾರೆ. ಬೇಕಂತಲೇ ನೆಗೆಟಿವ್ ಮಾಡೋರು ಜಾಸ್ತಿಯಾಗಿದ್ದಾರೆ ಏನ್‌ ಮಾಡೋದು. ಇದೇನು ಕೌಂಟ್‌ ಆಗಲ್ಲ ಬಿಡಿ ಅವನಿಗೆ. ಅವನು ಹೋಗಾಯ್ತು ಆಚೆಗೆ, ಬೇಕು ಅಂದ್ರೆ ಕನ್ನಡಿಗರು ಉಳಿಸಿಕೊಳ್ಳಬೇಕು. 500 ಕೋಟಿ ಹಾಕಿ ಸಿನಿಮಾ ಮಾಡಿ, ಜನ ಹೀಗೆ ಮಾಡಿದ್ರೆ ಯಾರು ಸಿನಿಮಾ ಮಾಡ್ತಾರೆ?" ಎಂದಿದ್ದಾರೆ ಪುಷ್ಪಾ ಅರುಣ್‌ ಕುಮಾರ್.

"ಜನ ಯಶ್‌ನ ನೋಡೋ ರೀತಿ ಬೇರೆ ಇತ್ತು. ಈಗ ಸ್ವಲ್ಪ ಅವರಿಗೆ ತೊಂದರೆ ಆಗಿರ್ಬಹುದು. ಹಾಗಂತ, ಕಳಪೆ ಸಿನಿಮಾ ಮಾಡಿದ್ದಾರೆ ಅಂತ ಎಲ್ಲೂ ಹೇಳ್ತಿಲ್ಲ. ಯಾರ್ಯಾರಿಗೋ ಏನೇನ್‌ ಮಾಡಿದ್ದಾರೆ ನಮ್ಮ ಕನ್ನಡ ಇಂಡಸ್ಟ್ರೀಯಲ್ಲಿ, ಇನ್ನೂ ಒಬ್ಬ‌ ಬಸ್ ಡ್ರೈವರ್‌ ಮಗನನ್ನ ಬಿಡ್ತಾರಾ? ಅಪ್ಪಂದಿರು ಇಂಡಸ್ಟ್ರೀಯಲ್ಲಿದ್ದವರನ್ನೇ ಏನೇನ್‌ ಮಾಡಿದ್ದಾರೆ, ಇದು ಯಾವ ಲೆಕ್ಕಾ?"‌ ಎಂದಿದ್ದಾರೆ ಪುಷ್ಪಾ ಅರುಣ್‌ ಕುಮಾರ್.

ಯಶ್‌ ಆರಂಭಿಕ ದಿನಗಳನ್ನ ನೆನೆಪಿಸಿಕೊಂಡ ಪುಷ್ಪಾ ಅರುಣ್‌ ಕುಮಾರ್‌, "ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಕಾಲದಲ್ಲೇ ನಮಗೆ ಮನೆಯ ಬಾಡಿಗೆ ಕಟ್ಟಲು ಕಷ್ಟದ ಪರಿಸ್ಥಿತಿಯಿತ್ತು. ಸಿನಿಮಾ ಆಫರ್‌ಗಳು ಬಂದರೂ, ಯಶ್‌ ಆತುರಪಟ್ಟು ಒಪ್ಪಿಕೊಳ್ಳಲಿಲ್ಲ. ಬೆಳೆಯುವ ದೂರದೃಷ್ಟಿ ಮತ್ತು ಧೈರ್ಯ ಅವನಲ್ಲಿ ಮೊದಲೇ ಇತ್ತು. ಪ್ರತಿಯೊಂದನ್ನೂ ಸ್ವಪ್ರಯತ್ನದಿಂದಲೇ ಸಾಧಿಸಿದ್ದಾನೆ. ಕೆಜಿಎಫ್‌ ಬಂದಾಗಲೂ, ನಾವು ಬೀಗಲಿಲ್ಲ. ಏಕೆಂದರೆ ಅವನಲ್ಲಿ ಸಾಧಿಸುವ ಅಗಾಧ ಸಾಮರ್ಥ್ಯವಿದೆ" ಎಂದು ಹೆಮ್ಮೆಯಿಂದ ಹೇಳಿದ್ದಾರೆ ಪುಷ್ಪಾ ಅರುಣ್‌ ಕುಮಾರ್.

Dailyhunt
Disclaimer: This content has not been generated, created or edited by Dailyhunt. Publisher: Vijay Karnataka