Dailyhunt Logo
  • Light mode
    Follow system
    Dark mode
    • Play Story
    • App Story
ಮಂಗಳ- ನೆಪ್ಚೂನ್ ಒಟ್ಟಾಗಿ ಪಂಚಾಕ ಯೋಗ: ಜುಲೈ 22ರಿಂದ ಮಿಥುನ ಸೇರಿ ಈ 5 ರಾಶಿಯವರಿಗೆ ಕಂಟಕ..!

ಮಂಗಳ- ನೆಪ್ಚೂನ್ ಒಟ್ಟಾಗಿ ಪಂಚಾಕ ಯೋಗ: ಜುಲೈ 22ರಿಂದ ಮಿಥುನ ಸೇರಿ ಈ 5 ರಾಶಿಯವರಿಗೆ ಕಂಟಕ..!

Vijay Karnataka 4 months ago

Panchak Yog: ಇದೇ ಜುಲೈ 22ರಂದು ಮಂಗಳ ಮತ್ತು ನೆಪ್ಚೂನ್ ಗ್ರಹಗಳಿಂದಾಗಿ ಪಂಚಾಕ ಯೋಗದ ಸೃಷ್ಟಿಯಾಗುವುದು. ಈ ಬಾರಿ ನಿರ್ಮಾಣಗೊಳ್ಳಲಿರುವ ಪಂಚಾಕ ಯೋಗದಿಂದಾಗಿ ಐದು ರಾಶಿಗಳಿಗೆ ಸೇರಿದ ಜನರ ಮೇಲೆ ಅಶುಭ ಪ್ರಭಾವವನ್ನು ನೋಡಬಹುದು. ಆ ದುರಾದೃಷ್ಟಕರ ರಾಶಿಗಳ ಬಗ್ಗೆ ಇಲ್ಲಿ ತಿಳಿಯಿರಿ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ವಿಶೇಷ ಸ್ಥಿತಿಯಿಂದಾಗಿ ಸಮಯಕ್ಕೆ ಸರಿಯಾಗಿ ಪಂಚಾಕ ಯೋಗದ ನಿರ್ಮಾಣವಾಗುವುದು. ಇದರಿಂದಾಗಿ ಕೆಲವು ರಾಶಿಗಳಿಗೆ ಸೇರಿದ ಜನರ ಜೀವನದ ಮೇಲೆ ಬಲವಾದ ಪ್ರಭಾವವನ್ನು ನೋಡಬಹುದಾಗಿದೆ. ಜ್ಯೋತಿಷ್ಯದ ಪ್ರಕಾರ, 2026 ಜುಲೈ 22ರ ಬೆಳಗ್ಗೆ 9:14ಕ್ಕೆ ಗ್ರಹಗಳ ಸೇನಾಧಿಪತಿಯಾದ ಮಂಗಳ ಮತ್ತು ನೆಪ್ಚೂನ್ ಗ್ರಹಗಳು ಪರಸ್ಪರ 72 ಡಿಗ್ರಿ ಅಂತರದಲ್ಲಿ ಚಲಿಸಲಿದೆ. ಇದರಿಂದಾಗಿ ಪಂಚಾಕ ಯೋಗದ ನಿರ್ಮಾಣವಾಗುವುದು. ಈ ಬಾರಿ ಸೃಷ್ಟಿಯಾಗಲಿರುವ ಪಂಚಾಕ ಯೋಗವು ಕೆಲವು ರಾಶಿಗಳಿಗೆ ಸೇರಿದ ಜನರಿಗೆ ಹೆಚ್ಚಿನ ಶುಭವನ್ನುಂಟು ಮಾಡುವುದಿಲ್ಲ. ಹಾಗಾಗಿ ಪಂಚಾಕ ಯೋಗದ ನಿರ್ಮಾಣದಿಂದ ಯಾವ ರಾಶಿಗಳಿಗೆ ಸೇರಿದ ಜನರು ಪ್ರತಿ ಹೆಜ್ಜೆಯಲ್ಲಿಯೂ ಸಂಕಷ್ಟಗಳ ಸಾಲನ್ನೇ ಎದುರಿಸಬೇಕಾಗಿ ಬರಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ತಪ್ಪದೇ ಕೊನೆಯವರೆಗೂ ಓದಿ.ಮಿಥುನ ರಾಶಿ

ಮಿಥುನ ರಾಶಿಗೆ ಸೇರಿದ ಜನರಿಗೆ ಪಂಚಾಕ ಯೋಗದ ನಿರ್ಮಾಣದಿಂದಾಗಿ ಹೆಚ್ಚಿನ ಸಮಸ್ಯೆ ಎದುರಾಗುವುದು. ಈ ಅವಧಿಯಲ್ಲಿ ವಿವಾಹಿತ ಮಿಥುನ ರಾಶಿಗೆ ಸೇರಿದ ಜನರು ತಮ್ಮ ಹಳೆಯ ವಿಚಾರಗಳನ್ನು ಪರಿಹರಿಸಲು ಉತ್ತಮ ಅವಕಾಶಗಳು ದೊರಕುವುದಿಲ್ಲ. ಇದರಿಂದಾಗಿ ನಿಮ್ಮ ಸಂಬಂಧವು ಇನ್ನಷ್ಟು ಹದಗೆಡುವ ಸಾಧ್ಯತೆ ಹೆಚ್ಚಾಗಲಿದೆ.

ಜೊತೆಗೆ ಈ ಅವಧಿಯಲ್ಲಿ ಮಂಗಳ ಮತ್ತು ನೆಪ್ಚೂನ್ ಗ್ರಹಗಳ ಅಶುಭ ಪ್ರಭಾವದಿಂದಾಗಿ ಮಿಥುನ ರಾಶಿಗೆ ಸೇರಿದ ಜನರು ಧನ, ಸಂಪತ್ತಿಗೆ ಸಂಬಂಧಿಸಿದಂತಹ ಕೊರತೆಯನ್ನು ಹೊಂದುವರು. ಇದರೊಂದಿಗೆ ಆ ಅವಧಿಯಲ್ಲಿ ಪಂಚಾಕ ಯೋಗದ ಅಶುಭ ಪ್ರಭಾವದಿಂದಾಗಿ ಮಿಥುನ ರಾಶಿಗೆ ಸೇರಿದ ಜನರು ಮರದ ವಸ್ತುನಿಂದ ಗಂಭೀರ ಗಾಯಕ್ಕೆ ಒಳಗಾಗುವ ಸಂಭವವಿದೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯ.


ಕನ್ಯಾ ರಾಶಿ

ಕನ್ಯಾ ರಾಶಿಗೆ ಸೇರಿದ ಜನರಿಗೆ ಮಂಗಳ ಮತ್ತು ನೆಪ್ಚೂನ್ ಗ್ರಹಗಳ ಅಶುಭ ಪ್ರಭಾವದಿಂದಾಗಿ ಈ ಅವಧಿಯ ಹೆಚ್ಚು ಉತ್ತಮವಾಗಿರುವುದಿಲ್ಲ. ವಿವಾಹಿತ ಕನ್ಯಾ ರಾಶಿಗೆ ಸೇರಿದ ಜನರು ಈ ಅವಧಿಯಲ್ಲಿ ತಮ್ಮ ಮನೆಯ ಹಳೆಯ ಜಗಳಗಳನ್ನು ಪರಿಹರಿಸಲು ಉತ್ತಮ ಅವಕಾಶಗಳನ್ನು ಪಡೆಯುವುದಿಲ್ಲ.

ಜೊತೆಗೆ ಈ ಸಂದರ್ಭದಲ್ಲಿ ಕನ್ಯಾ ರಾಶಿಗೆ ಸೇರಿದ ಜನರು ಪಂಚಾಕ ಯೋಗದ ಅಶುಭ ಪ್ರಭಾವದಿಂದಾಗಿ ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಮಾಡಿದಂತಹ ಪ್ರತಿಯೊಂದು ಪ್ರಯತ್ನದಲ್ಲಿಯೂ ಯಶಸ್ಸನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ ಈ ಅವಧಿಯಲ್ಲಿ ಕನ್ಯಾ ರಾಶಿಗೆ ಸೇರಿದ ಜನರು ಬಹಳ ಎತ್ತರದಿಂದ ಬೀಳಬಹುದು, ಅದರಿಂದ ಗಂಭೀರವಾದ ಗಾಯವಾಗುವ ಸಂಭವವಿದೆ. ಹಾಗಾಗಿ ಹೆಚ್ಚಿನ ಕಾಳಜಿ ವಹಿಸಿ.


ಧನು ರಾಶಿ

ಧನು ರಾಶಿಗೆ ಸೇರಿದ ಜನರ ಮನೆಯಲ್ಲಿ ಪಂಚಾಕ ಯೋಗದ ಅಶುಭ ಪ್ರಭಾವದಿಂದಾಗಿ ಸಂತೋಷವಾದ ವಾತಾವರಣ ಇರುವುದಿಲ್ಲ. ಈ ಅವಧಿಯಲ್ಲಿ ಮಂಗಳ ಮತ್ತು ನೆಪ್ಚೂನ್ ಗ್ರಹಗಳ ನಕಾರಾತ್ಮಕ ಪ್ರಭಾವದಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ಬಹಳಷ್ಟು ಉತ್ತಮವಾಗಿರುವುದಿಲ್ಲ.

ಇದರೊಂದಿಗೆ ಧನು ರಾಶಿಗೆ ಸೇರಿದ ಜನರು ಪಂಚಾಕ ಯೋಗದ ಅಶುಭ ಪ್ರಭಾವದಿಂದಾಗಿ ಹಳೆಯ ಹೂಡಿಕೆಗಳಿಂದ ಈ ಅವಧಿಯಲ್ಲಿ ಹೆಚ್ಚಿನ ಲಾಭವನ್ನು ಗಳಿಸಲು ಸಾಧ್ಯವಾಗದೇ ಇರಬಹುದು. ಜೊತೆಗೆ ಈ ಸಂದರ್ಭದಲ್ಲಿ ಧನು ರಾಶಿಗೆ ಸೇರಿದ ಜನರು ಗಂಟಲು ಅಥವಾ ಕಿವಿಗೆ ಸಂಬಂಧಿಸಿದಂತಹ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುವುದು. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಬಹಳ ಉತ್ತಮ.


ಮಕರ ರಾಶಿ

ಮಕರ ರಾಶಿಗೆ ಸೇರಿದ ಜನರಿಗೆ ಪಂಚಾಕ ಯೋಗದ ನಿರ್ಮಾಣವು ಇದೇ ಜುಲೈ 22ರಂದು ಆಗುವ ಮೂಲಕ ನಿಮ್ಮ ಕೆಲಸಗಳು ಪೂರ್ಣಗೊಳ್ಳದೆ ಇರಬಹುದು. ಇದರಿಂದಾಗಿ ನೀವು ಸಾಕಷ್ಟು ಒತ್ತಡಕ್ಕೆ ಒಳಗಾಗುವಿರಿ. ಮಕರ ರಾಶಿಗೆ ಸೇರಿದ ಜನರು ಮಂಗಳ ಮತ್ತು ನೆಪ್ಚೂನ್ ಗ್ರಹಗಳ ಅಶುಭ ಪ್ರಭಾವದಿಂದಾಗಿ ಈ ಸಂದರ್ಭದಲ್ಲಿ ಕಾಲ ನೋವು ಅಥವಾ ಕಾಲು ಭಾರವೆನಿಸುವ ಸಮಸ್ಯೆಯನ್ನು ಎದುರಿಸಬೇಕಾಗಿ ಬರಬಹುದು.

ಇದರೊಂದಿಗೆ ಪಂಚಾಕ ಯೋಗದ ನಕಾರಾತ್ಮಕ ಪ್ರಭಾವದಿಂದಾಗಿ ಈ ಸಂದರ್ಭದಲ್ಲಿ ಮಕರ ರಾಶಿಗೆ ಸೇರಿದ ಜನರು ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗಿ ಬರಬಹುದು. ಹಾಗಾಗಿ ಬಹಳ ಎಚ್ಚರಿಕೆಯಿಂದ ನಿಮ್ಮ ಹಣವನ್ನು ಖರ್ಚು ಮಾಡುವುದು ಅವಶ್ಯಕ.


ಕುಂಭ ರಾಶಿ

ಕುಂಭ ರಾಶಿಗೆ ಸೇರಿದ ಜನರಿಗೆ ಮಂಗಳ ಮತ್ತು ನೆಪ್ಚೂನ್ ಗ್ರಹಗಳ ಸಂಯೋಗದಿಂದಾಗಿ ನಿರ್ಮಾಣಗೊಳ್ಳಲಿರುವ ಪಂಚಾಕ ಯೋಗವು ಆರ್ಥಿಕ ಸಂಕಷ್ಟವನ್ನು ಈ ಸಂದರ್ಭದಲ್ಲಿ ಎದುರಿಸುವಂತೆ ಮಾಡಬಹುದು. ಇದು ನಿಮ್ಮ ಮಾನಸಿಕ ಒತ್ತಡಕ್ಕೆ ಬಹಳ ದೊಡ್ಡ ಕಾರಣವಾಗುವ ಸಂಭವವಿದೆ. ಜೊತೆಗೆ ಈ ಅವಧಿಯಲ್ಲಿ ಕುಂಭ ರಾಶಿಗೆ ಸೇರಿದ ಜನರು ಪಂಚಾಕ ಯೋಗದ ಅಶುಭ ಪ್ರಭಾವದಿಂದಾಗಿ ತಮ್ಮ ಸ್ವಭಾವದಲ್ಲಿ ಕಿರಿಕಿರಿಯನ್ನು ಎದುರಿಸಬೇಕಾಗಿ ಬರಬಹುದು.

ಹಾಗೆ ಈ ಸಂದರ್ಭದಲ್ಲಿ ಮನೆಯವರೊಂದಿಗೆ ಪ್ರತಿಯೊಂದು ವಿಚಾರದಲ್ಲಿಯೂ ನೀವು ಜಗಳವನ್ನು ಎದುರಿಸಬೇಕಾಗಿ ಬರಬಹುದು. ಹಾಗಾಗಿ ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯ. ಇದರೊಂದಿಗೆ ಮಂಗಳ ಮತ್ತು ನೆಪ್ಚೂನ್ ಗ್ರಹಗಳ ಅಶುಭ ಪ್ರಭಾವದಿಂದಾಗಿ ಕುಂಭ ರಾಶಿಗೆ ಸೇರಿದ ಜನರು ಈ ಸಂದರ್ಭದಲ್ಲಿ ಯಾವುದಾದರೂ ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅನಗತ್ಯವಾಗಿ ಸಿಲುಕುವ ಸಂಭವವಿದೆ. ಹಾಗಾಗಿ ಹೆಚ್ಚಿನ ಕಾಳಜಿ ವಹಿಸಿ.

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಜ್ಯೋತಿಷ್ಯ ಮಾಹಿತಿ ಮತ್ತು ಪರಿಹಾರಗಳು, ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ನೀಡಲ್ಪಟ್ಟಿವೆ. ಇದರ ಕುರಿತು ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಈ ಮಾಹಿತಿಯನ್ನು ಪರಿಗಣಿಸಲು ಮತ್ತು ಸಂಪೂರ್ಣ ವಿವರಗಳನ್ನು ಗಳಿಸಲು ಸಂಬಂಧಿತ ಪರಿಣಿತರಿಂದ ಸಲಹೆ ಪಡೆಯುವುದು ಉತ್ತಮ.


Dailyhunt
Disclaimer: This content has not been generated, created or edited by Dailyhunt. Publisher: Vijay Karnataka