ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ನಟ ಪವನ್ ಕಲ್ಯಾಣ್ ಅವರು ಮದುವೆ ಆಗಿ 15 ವರ್ಷಗಳು ತುಂಬಿವೆ. ರಷ್ಯಾ ದೇಶದ ಅನ್ನಾ ಲೆಜ್ನೆವಾ ಕೊನಿಡೇಲಾ ಎಂಬುವವರನ್ನ 2013ರಲ್ಲಿ ಪ್ರೀತಿಸಿ ಮದುವೆಯಾದರು. ಇವರು ಮೊದಲ ಬಾರಿಗೆ ಭೇಟಿ ಆಗಿದ್ದು ತೆಲುಗು ಚಿತ್ರ 'ತೀನ್ ಮಾರ್' ಶೂಟಿಂಗ್ ಸೆಟ್‌ನಲ್ಲಿ.
ಇಬ್ಬರ ಪ್ರೀತಿಯ ಸಂಕೇತವಾಗಿ ಪೂಲೆನಾ ಅಂಜನಾ ಪವನೊವಾ (ದತ್ತು ಪುತ್ರಿ ಇದ್ದಾಳೆ ಎಂಬ ಮಾಹಿತಿ ಅನೇಕ ಕಡೆ ಉಲ್ಲೇಖವಾಗಿದೆ) ಮತ್ತು ಮಗ ಮಾರ್ಕ್ ಶಂಕರ್ ಪಾವನೊವಿಚ್ ಅವರನ್ನ ಹೊಂದಿದ್ದಾರೆ.
ತಲೆ ಬೋಳಿಸಿದ್ಯಾಕೆ?
ಮೆಗಾ ಸ್ಟಾರ್ ಚಿರಂಜೀವಿ ಮತ್ತು ನಾಗಬಾಬು ಬಗ್ಗೆ ಮಾತು
ಆ ಪೋಸ್ಟ್‌ನಲ್ಲಿ ಹೀಗಿದೆ.. "ಸುಮಾರು ಹದಿನೈದು ವರ್ಷಗಳ ಹಿಂದೆ ನಾನು ಕುಟುಂಬಕ್ಕೆ ಬಂದೆ. ಅಲ್ಲಿ ಎಲ್ಲರೂ ಅದಾಗಲೇ ಪರಸ್ಪರ ಹೊಂದಿಕೊಂಡಿದ್ದರು. ನನಗಂತೂ ಹೇಗೆ ಹೊಂದಿಕೊಳ್ಳಬೇಕೆಂದು ತಿಳಿದಿರಲಿಲ್ಲ. ಯಾರನ್ನ ಹೇಗೆ ಮಾತ್ನಾಡಿಸಬೇಕು, ಯಾವ ಪದಗಳಿಂದ ಕರೆಯಬೇಕೆಂದು ನನಗೆ ತಿಳಿದಿರಲಿಲ್ಲ. ಆಗ ನನ್ನ ಗಂಡ (ಪವನ್ ಕಲ್ಯಾಣ್) ಅವರಿಂದ ಪದಗಳನ್ನ ಕಲಿತಿದ್ದೆ. ಅವರನ್ನೇ ಅನುಕರಣೆ ಮಾಡಿದ್ದೆ. ಅಣ್ಣಯ್ಯ ಮತ್ತು ಚಿನ್ನ ಅಣ್ಣಯ್ಯ (ಅಣ್ಣಾ ಮತ್ತು ಚಿಕ್ಕ ಅಣ್ಣಾ) ಅದು ನಾನು ಹೇಳಿದ ಮೊದಲ ಪದಗಳು. ಎಚ್ಚರಿಕೆ ಮತ್ತು ಕಾಳಜಿಯಿಂದ ಈ ಪದಗಳನ್ನ ಬಳಸುತ್ತಿದ್ದೆ. ಭಾಷೆ ಕಲಿತ ನಂತರ ಗೊತ್ತಾಯ್ತು ಪತಿಯ ಅಣ್ಣಂದಿರಿಗೆ ಬೇರೆ ಪದಗಳನ್ನ ಸಂಭೋದಿಸಬೇಕು ಅಂತ. ಆದರೆ, ಸಮಯ ಕಳೆಯುತ್ತಾ ನನಗೆ ಅಣ್ಣಂದಿರೇ ಆಗಿ ಬಿಟ್ಟರು. ಈಗಲೂ ನಾನು ಅಣ್ಣಾ ಅಂತಲೇ ಇಬ್ಬರನ್ನು ಕರೆಯುತ್ತೇನೆ (ಚಿರಂಜೀವಿ ಮತ್ತು ನಾಗಬಾಬು). ನನಗೆ ಸಹೋದರರಿಲ್ಲ. ನನ್ನ ಬದುಕಿನಲ್ಲಿ ಸದ್ದಿಲ್ಲದೇ ಸಹೋದರರ ಸ್ಥಾನ ತುಂಬಿದರು" ಎಂದು ಅನ್ನಾ ಕೊನಿಡೆಲಾ ಅವರು ಸುಂದರ ಫೋಟೋಗಳ ಜೊತೆಗೆ ಭಾವುಕ ಸಾಲುಗಳನ್ನ ಕಳೆದ ಎರಡು ವಾರಗಳ ಹಿಂದೆ ಬರೆದುಕೊಂಡಿದ್ದರು. ಇಂದು (ಏ. 10) ಸಹೋದರತ್ವವವನ್ನ ಸಂಭ್ರಮಿಸುವ ದಿನ ಸಿಬ್ಲಿಂಗ್ಸ್ ಡೇ. ಈ ದಿನಕ್ಕೆ ಅನ್ನಾ ಅವರ ಬರಹ ಬಹಳ ಸೂಕ್ತವಾಗಿದೆ.
ಸೋಶಿಯಲ್ ಮೀಡಿಯಾ ಖಾತೆ ಆರಂಭ!

