ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ನಿರ್ದೇಶಕ ಪ್ರೇಮ್ ಕಾಂಬಿನೇಶನ್‌ನ ಬಹುನಿರೀಕ್ಷಿತ ಸಿನಿಮಾ ʻಕೆಡಿ: ದಿ ಡೆವಿಲ್ʼ ಏಪ್ರಿಲ್ 30ರಂದು ಅದ್ದೂರಿಯಾಗಿ ತೆರೆಕಂಡಿದೆ. ಮೊದಲ ದಿನವೇ ಈ ಸಿನಿಮಾ ಭರ್ಜರಿ ಓಪನಿಂಗ್ ಪಡೆಯುವ ಮೂಲಕ ಸದ್ದು ಮಾಡ್ತಿದೆ.ಒಟ್ಟು 845 ಶೋಗಳಲ್ಲಿ ಪ್ರದರ್ಶನಗೊಂಡ ʻಕೆಡಿ: ದಿ ಡೆವಿಲ್ʼ ಸಿನಿಮಾ ಮೊದಲ ದಿನ 4.10 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಸಿನಿಮಾದ ಮೊದಲ ದಿನದ ಆಕ್ಯುಪೆನ್ಸಿ ಗಮನಿಸಿದರೆ, ಒಟ್ಟಾರೆಯಾಗಿ ಶೇ.46 ರಷ್ಟು ದಾಖಲಾಗಿದೆ. ಬೆಳಗಿನ ಪ್ರದರ್ಶನಗಳು ಸ್ವಲ್ಪ ನಿಧಾನಗತಿಯಲ್ಲಿ ಆರಂಭವಾದರೂ ಮಧ್ಯಾಹ್ನ ಮತ್ತು ಸಂಜೆಯ ವೇಳೆಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಯ್ತು. ವಿಶೇಷವಾಗಿ ರಾತ್ರಿಯ ಪ್ರದರ್ಶನಗಳು ಶೇ.28.25ರಷ್ಟು ಆಕ್ಯುಪೆನ್ಸಿಯೊಂದಿಗೆ ಉತ್ತಮ ಸ್ಪಂದನೆ ಪಡೆದಿದೆ. ಕರ್ನಾಟಕದಲ್ಲಿ ಚಿತ್ರಕ್ಕೆ ನಿರೀಕ್ಷಿತ ಮಟ್ಟದ ಓಪನಿಂಗ್ ಸಿಕ್ಕಿದ್ದು, ವಾರಾಂತ್ಯದಲ್ಲಿ ಈ ಮೊತ್ತ ಮತ್ತಷ್ಟು ಏರಿಕೆಯಾಗುವ ಲಕ್ಷಣಗಳಿವೆ.
ʻಕೆಡಿʼಯಲ್ಲಿ ಧ್ರುವ ಸರ್ಜಾ ಅವರ ಮಾಸ್ ಇಮೇಜ್ ಮತ್ತು ಪ್ರೇಮ್ ಅವರ ಮೇಕಿಂಗ್ ಶೈಲಿ ಎರಡೂ ಒಟ್ಟಾಗಿ ಅಭಿಮಾನಿಗಳನ್ನ ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಿನಿಮಾದ ರೆಟ್ರೋ ಶೈಲಿ, ಅದ್ದೂರಿ ಸೆಟ್‌ಗಳು ಮತ್ತು ರಕ್ತಸಿಕ್ತ ಆಕ್ಷನ್ ದೃಶ್ಯಗಳು ಪ್ರೇಕ್ಷಕರಿಗೆ ಹೊಸ ಅನುಭವ ನೀಡ್ತಿದೆ. ʻಕೆಡಿ: ದಿ ಡೆವಿಲ್ʼ ಸಿನಿಮಾ 1970-80ರ ದಶಕದ ಬೆಂಗಳೂರಿನ ಭೂಗತ ಲೋಕದ ಕಥೆಯನ್ನ ಹೇಳುತ್ತದೆ. ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್ ಮತ್ತು ರೀಷ್ಮಾ ನಾಣಯ್ಯ ಅಂತಹ ದೊಡ್ಡ ತಾರಾಗಣವೇ ಇದೆ.
ʻಕೆಡಿ: ದಿ ಡೆವಿಲ್ʼ ಸಿನಿಮಾ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ತಿದೆ. ಈ ಸಿನಿಮಾದ ಅದ್ದೂರಿ ಸೆಟ್‌ಗಳು, ಧ್ರುವ ಸರ್ಜಾ ಅವರ ಅದ್ಬುತ ಆಕ್ಷನ್ ಮತ್ತು ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಒಟ್ನಲ್ಲಿ, ʻಕೆಡಿ: ದಿ ಡೆವಿಲ್ʼ ಒಂದು ಅಪ್ಪಟ ಮಾಸ್ ಎಂಟರ್‌ಟೈನರ್ ಆಗಿದ್ದು, ಧ್ರುವ ಸರ್ಜಾ ಅಭಿಮಾನಿಗಳಿಗೆ ಹಬ್ಬದೂಟ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಎಷ್ಟು ಕೋಟಿ ಲೂಟಿ ಮಾಡಲಿದೆ ಅನ್ನೋದನ್ನ ಕಾದುನೋಡಬೇಕಾಗಿದೆ.

