ನಟ ವಿನಯ್ ರಾಜ್‌ಕುಮಾರ್ ಮತ್ತು ನಟಿ ಮೇಘಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ʻಗ್ರಾಮಾಯಾಣʼ ಸಿನಿಮಾ ಇಂದು ರಾಜ್ಯಾದ್ಯಂತ ತೆರೆಕಂಡಿದೆ. ಹಳ್ಳಿ ಸೊಗಡಿನ, ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾದ ಪ್ರಚಾರ ಕಾರ್ಯಗಳು ಇತ್ತೀಚೆಗೆ ಭರದಿಂದ ಸಾಗಿದ್ದವು.
ಈ ಪ್ರಮೋಷನ್ ವೇಳೆ ಸಂದರ್ಶನವೊಂದರಲ್ಲಿ ನಡೆದ ಒಂದು ʻಫನ್ನಿ ರೌಂಡ್ʼನಲ್ಲಿ ವಿನಯ್ ರಾಜ್‌ಕುಮಾರ್ ತಮ್ಮ ವೈಯಕ್ತಿಕ ಜೀವನದ ಹಾಸ್ಯಸ್ಪದ ರಹಸ್ಯವೊಂದನ್ನ ಬಿಚ್ಚಿಟ್ಟಿದ್ದಾರೆ.
ವಿನಯ್ ರಾಜ್‌ಕುಮಾರ್ ಬ್ಲಾಕ್ ಲಿಸ್ಟ್‌ನಲ್ಲಿ ಬರೋಬ್ಬರಿ 1000 ಜನ!
ಮ್ಯಾಟ್ರಿಮೊನಿಯಿಂದ ಕಾಲ್ ಬರುತ್ತಾ?
"ಹೌದು.. ಯಾರೋ ನನ್ನ ಪ್ರೊಫೈಲ್ ಕ್ರಿಯೇಟ್ ಮಾಡಿ, ನನ್ನ ನಂಬರ್ ಹಾಕಿಬಿಟ್ಟಿದ್ದಾರೆ. ನನಗೆ ಸಿಂಗಾಪುರ, ಅಲ್ಲಿ ಇಲ್ಲಿಂದೆಲ್ಲಾ ಕಾಲ್ ಬರುತ್ತೆ. ಸರ್ ಮದುವೆಗೆ ರೆಡಿ ಇದ್ದೀರಾ ಅಂತ. ಆದರೆ, ಗೊತ್ತಿರುವವರನ್ನ ಯಾರನ್ನೂ ಬ್ಲಾಕ್ ಮಾಡಲ್ಲ" ಎಂದರು ವಿನಯ್ ರಾಜ್‌ಕುಮಾರ್.ವಿನಯ್ ರಾಜ್‌ಕುಮಾರ್ ಅವರ ಫ್ಯಾನ್ಸಿ ನಂಬರ್ ಸಿಕ್ಕದ್ದೇ ತಡ..!
ಸಿನಿಮಾ ನೋಡಿ ಅಣ್ಣನನ್ನ ತಬ್ಬಿಕೊಂಡು ಭಾವುಕರಾದ ಯುವ ರಾಜ್‌ಕುಮಾರ್

