Dailyhunt Logo
  • Light mode
    Follow system
    Dark mode
    • Play Story
    • App Story
ನಾಗರಹಾವು ಸಿನಿಮಾ: ಮೋಹಕತಾರೆ ರಮ್ಯಾ ಜೊತೆಗೆ 'ನಂದಗೋಕುಲ' ಅರ್ಪಿತಾ ಗೌಡ ನಟನೆ, ಮೊದಲ ಸಿನಿಮಾದಲ್ಲಿಯೇ ಕುದುರಿದ ಲಕ್‌!

ನಾಗರಹಾವು ಸಿನಿಮಾ: ಮೋಹಕತಾರೆ ರಮ್ಯಾ ಜೊತೆಗೆ 'ನಂದಗೋಕುಲ' ಅರ್ಪಿತಾ ಗೌಡ ನಟನೆ, ಮೊದಲ ಸಿನಿಮಾದಲ್ಲಿಯೇ ಕುದುರಿದ ಲಕ್‌!

Vijay Karnataka 2 weeks ago

ಲರ್ಸ್‌ ಕನ್ನಡ ವಾಹಿನಿಯಲ್ಲಿ 'ನಂದಗೋಕುಲ' ಧಾರಾವಾಹಿ ಬಹಳ ಜನಪ್ರಿಯತೆ ಪಡೆದುಕೊಂಡಿದೆ. ಧಾರಾವಾಹಿ ಕಲಾವಿದರು ಮನೆ ಮನೆ ಮಾತಾಗಿದ್ದಾರೆ. ಇತ್ತೀಚೆಗಷ್ಟೇ ಈ ಕುಟುಂಬವನ್ನ ಜಾಯಿನ್‌ ಆದ ಪಾತ್ರ ಪ್ರಿಯಾ. ಮಾಧವನ ಮದುವೆ ಆಗಿ ಬಂದಿರೋ ಪ್ರಿಯಾ ಸದ್ಯ ಟ್ರೆಂಡಿಂಗ್‌ನಲ್ಲಿದ್ದಾರೆ.

ಸೀರಿಯಲ್‌ನಲ್ಲಿ ಈ ಪಾತ್ರ ಮಾಡುವ ಒಂದೊಂದು ಎಡವಟ್ಟುಗಳು ವೀಕ್ಷಕರನ್ನ ಕೆರಳಿಸುತ್ತವೆ. ಪ್ರಿಯಾ ಕೆಟ್ಟವಳ? ಅಥವಾ ಮುಗ್ಧೆನಾ? ಎಂಬ ಸಾಕಷ್ಟು ಡೌಟ್‌ಗಳು ವೀಕ್ಷಕರಿಗೆ ಇವೆ. ಈ ಬಗ್ಗೆ ಸೀರಿಯಲ್‌ ಕಥೆಯಲ್ಲಿ ಮುಂದೆ ಇಂಟ್ರಸ್ಟಿಂಗ್‌ ಸಂಚಿಕೆಗಳು ಬರೋದಿವೆ. ಸದ್ಯ ಪ್ರಿಯಾ ಪಾತ್ರ ಮಾಡುತ್ತಿರುವ ನಟಿ ಅರ್ಪಿತಾ ಗೌಡ ಅವರು 'ವಿಜಯಕರ್ನಾಟಕ ವೆಬ್‌'ನ 'ಕವಿದ ಕಥೆ ವಿಥ್‌ ಕಲಾವಿದರು' ಸಂದರ್ಶನದಲ್ಲಿ ಮೋಹಕತಾರೆ ನಟಿ ರಮ್ಯಾ ಅವರ ಬಗ್ಗೆ ಮಾತ್ನಾಡಿದ್ದಾರೆ.

ನಿಮ್ಮ ನಟನೆ ಜರ್ನಿ ಶುರುವಾಗಿದ್ದು ಹೇಗೆ?

ನಟಿ ಅರ್ಪಿತಾ ಗೌಡ: "ನಾನು ಇನ್ನು ಪಿಯುಸಿ ಓದುತ್ತಿದ್ದೆ. ಆಗ, ನನಗೆ ಬಂದ ಸಿನಿಮಾ 'ನಾಗರಹಾವು'. ಇದು ನನ್ನ ಮೊದಲ ಸಿನಿಮಾ. ನಾನು ಯಾವತ್ತೂ ನಟನೆ ಬಗ್ಗೆ ಯೋಚನೆ ಮಾಡಿದವಳಲ್ಲ. ಆದರೆ, ಚಿಕ್ಕವಯಸ್ಸಿಂದನೂ ನನಗೆ ರೆಡಿಯಾಗೋದು ತುಂಬಾ ಇಷ್ಟ. ಅಮ್ಮ ಫ್ಯಾಶನ್‌ ಡಿಸೈನರ್‌. ಸೋ ನನಗೆ ಚೆನ್ನಾಗಿರೋ ಒಳ್ಳೋಳ್ಳೆ ಬಟ್ಟೆ ಹಾಕೋರು. ನನಗೂ ಅದು ಬಹಳ ಇಷ್ಟವಾಗುತ್ತಿತ್ತು. ನಾನು ಎಲ್ಲಿಗೆ ಹೋದರು ಚೆನ್ನಾಗಿ ಕಾಣಸಬೇಕು ಎಂದು ಬಯಸುತ್ತಿದ್ದೆ. ಈ ಸಿನಿಮಾ(ನಾಗರಹಾವು) ಅನಿರೀಕ್ಷಿತವಾಗಿ ಬಂದಿದ್ದು. ಆಡಿಷನ್ ಕೊಟ್ಟು, ಲುಕ್‌ ಟೆಸ್ಟ್‌ ಆದ್ಮೇಲೆ ನಾನು ಸಿನಿಮಾಗೆ ಸೆಲೆಕ್ಟ್‌ ಆದೆ. ನಾಗದೇವತೆ ಪಾತ್ರಕ್ಕೆ ನನ್ನ ಆಯ್ಕೆ ಮಾಡಿದರು. ರಮ್ಯಾ ಅವರ ಜೊತೆಗೆ ನನ್ನ ಮೊದಲ ಸಿನಿಮಾ. 2011 ಮತ್ತು 2012ರಲ್ಲಿ ಬಂದ ಸಿನಿಮಾ ಇದು. ಅಲ್ಲಿ ವರ್ಕ್‌ ಮಾಡಿದ್ಬೇಲೆ, ನನಗೆ ಎಲ್ಲರೂ ನಿನ್ನ ಸ್ಕ್ರೀನ್ ಪ್ರೆಸೆನ್ಸ್‌ ಚೆನ್ನಾಗಿದೆ. ನೀನು ಆಕ್ಟಿಂಗ್‌ನ ಕಂಟಿನ್ಯೂ ಮಾಡು ಅಂತ ಬೆನ್ನುತಟ್ಟಿದರು. ಅದಾದ್ಮೇಲೆ ನಾನು 'ಅಭಿನಯತರಂಗ' ಆಕ್ಟಿಂಗ್‌ ಕೋರ್ಸ್‌ಗೆ ಸೇರಿದೆ. ಅಲ್ಲಿ, ಕಲಿತು ಆಕ್ಟಿಂಗ್‌ ಕೇರಿಯರ್‌ ಶುರುಮಾಡಿದೆ" ಎಂದು ಹೇಳಿದರು ನಟಿ ಅರ್ಪಿತಾ ಗೌಡ.

ರಮ್ಯಾ ಅವರ ಜೊತೆಗೆ ಆಕ್ಟಿಂಗ್ ಮಾಡಿದ್ದ ಅನುಭವ ಹೇಗಿತ್ತು?

ನಟಿ ಅರ್ಪಿತಾ ಗೌಡ: "ಸೋ ಬ್ಯೂಟಿಫುಲ್‌. ನಾನು ಅಲ್ಲಿ ವರ್ಕ್‌ ಮಾಡಿದ ಪ್ರತಿಯೊಂದು ಕ್ಷಣನೂ ನನಗೆ ಇವತ್ತಿಗೂ ನೆನೆಪಿದೆ. ನಾನು ಖಾಲಿ ಮನಸ್ಸಿಂದ ಹೋಗಿದ್ದೆ. ಜೀರೋ ಅನುಭವ ನನಗೆ. ಭಯದಲ್ಲಿ ಶೂಟಿಂಗ್‌ ಸೆಟ್‌ಗೆ ಹೋಗಿದ್ದೆ. ಕೋಡಿ ರಾಮಕೃಷ್ಣ ಸರ್‌ ಈ 'ನಾಗರಹಾವು' ಸಿನಿಮಾದ ಡೈರೆಕ್ಟರ್‌ ಆಗಿದ್ದರು. ಎಂಥ ದೊಡ್ಡ ಡೈರೆಕ್ಟರ್‌.ಬಟ್‌ ನನಗೆ ಆಗ ಅಷ್ಟು ಐಡಿಯಾ ಇರಲಿಲ್ಲ. ಆದರೆ ತುಂಬಾ ಗ್ರೇಟ್‌ ಎಕ್ಸ್‌ಪಿರಿಯನ್ಸ್‌ ಸಿಕ್ತು ನನಗೆ. ರಮ್ಯಾ ಮ್ಯಾಮ್‌ ಕೂಡ ಅಷ್ಟೇ, ತುಂಬಾನೇ ಪ್ರೋತ್ಸಾಹ ಕೊಟ್ಟರು. ಸಪೋರ್ಟಿವ್‌ ಆಗಿದ್ದರು. ಅವರು ನನಗೆ 'ಯೂ ಆರ್‌ ಸೋ ಕ್ಯೂಟ್‌' ಅಂತ ಕಾಂಪ್ಲಿಮೆಂಟ್ ಕೊಟ್ಟಿದ್ದರು. ನಾನು ಫುಲ್‌ ಫ್ಲೈಯಿಂಗ್‌ ಮೂಡ್‌ನಲ್ಲಿದ್ದೆ. ರಮ್ಯಾ ಅಂದ್ರೆ ಸಖತ್‌ ಬ್ಯೂಟಿಫುಲ್‌. ಅವರು ನನಗೆ ನೀನು ಚೆಂದ ಅಂತ ಹೇಳಿದ್ದಾರೆ ಅಂತ ಆಕಾಶದಲ್ಲಿ ತೇಲಾಡುತ್ತಿದ್ದೆ. ಮತ್ತೆ ಎಲ್ಲರ ಹತ್ತಿರ ಹೇಳ್ಕೊಂಡು ಬಂದಿದ್ದೆ. ಅವರು ತುಂಬಾ ಚೆನ್ನಾಗಿ ಮಾತ್ನಾಡಿದ್ದರು. ತುಂಬಾ ಸಪೋರ್ಟ್‌ ಮಾಡಿದರು. ಇಡೀ ಟೀಮ್‌ ನನಗೆ ತುಂಬಾ ಪ್ರೋತ್ಸಾಹ ಕೊಟ್ಟರು. ಆ ಸಿನಿಮಾ ನಾನು ಮಾಡಿದ ಅಂತ ಈಗ ನಾನು ಇಲ್ಲಿರೋದು. ಆ ಪ್ರಾಜೆಕ್ಟ್‌ ನನಗೆ ಸಿಗಲಿಲ್ಲ ಅಂದಿದ್ದರೇ ನಾನು ಈ ಫೀಲ್ಡ್‌ಗೆ ಬರ್ತಿದ್ದನ, ಇಲ್ವಾ ಗೊತ್ತಿಲ್ಲ. 'ಫಸ್ಟ್‌ ಪ್ರಾಜೆಕ್ಟ್‌ ಇಸ್‌ ದಿ ಬೆಸ್ಟ್‌' ಅಂತರಲ್ಲ, ಹಾಗೆ ನನಗೆ ಅದು(ನಾಗರಹಾವು) ಲಕ್ಕಿ ಪ್ರಾಜೆಕ್ಟ್‌" ಎಂದು ಹೇಳಿದರು ನಟಿ ಅರ್ಪಿತಾ ಗೌಡ.


ಇದಿಟ್ಟು ನಟಿ ಅರ್ಪಿತಾ ಗೌಡ ಅವರು ಮೋಹಕತಾರೆ ರಮ್ಯಾ ಅವರ ಜೊತೆಗೆ 'ನಾಗರಹಾವು' ಸಿನಿಮಾದಲ್ಲಿ ಅಭಿನಯಿಸಿದ ಅನುಭವದ ಮಾತುಗಳಾಗಿತ್ತು.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka