Dailyhunt Logo
  • Light mode
    Follow system
    Dark mode
    • Play Story
    • App Story
`ನಾನು ವಿಕೆಟ್ ಟೇಕಿಂಗ್ ಬೌಲರ್': ದುಲೀಪ್ ಟ್ರೋಫಿಯಲ್ಲಿ ಇಶಾನ್ ಕಿಶನ್ ಡೌಟ್ ಕ್ಲೀಯರ್ ಮಾಡಿದ ವೈಭವ್ ಸೂರ್ಯವಂಶಿ!

`ನಾನು ವಿಕೆಟ್ ಟೇಕಿಂಗ್ ಬೌಲರ್': ದುಲೀಪ್ ಟ್ರೋಫಿಯಲ್ಲಿ ಇಶಾನ್ ಕಿಶನ್ ಡೌಟ್ ಕ್ಲೀಯರ್ ಮಾಡಿದ ವೈಭವ್ ಸೂರ್ಯವಂಶಿ!

Vijay Karnataka 1 month ago

ಹೊಸದಿಲ್ಲಿ: ಭಾರತ ಅಂಡರ್ 19 ತಂಡದಲ್ಲಿ ಅರೆಕಾಲಿಕ ಬೌಲರ್ ಆಗೊಮ್ಮೆ ಈಗೊಮ್ಮೆ ಬೌಲಿಂಗ್ ಮಾಡುವ ವೈಭವ್ ಸೂರ್ಯವಂಶಿ ಇದೀಗ ದುಲೀಪ್ ಟ್ರೋಫಿಯಲ್ಲಿ 2 ವಿಕೆಟ್ ಕಿತ್ತ ಮೇಲೆ ಅದೇ ದೊಡ್ಡ ಸುದ್ದಿ. ಯಾರೇನು ಬೌಲಿಂಗ್ ಕೊಡುವ ಮುನ್ನ ಪೂರ್ವವಲಯ ತಂಡದ ನಾಯಕ ಇಶಾನ್ ಕಿಶನ್ ಅವರಿಗೇ ಈ ಖಾತ್ರಿ ಇರಲಿಲ್ಲವಂತೆ.

ಒಂದೆರಡು ಓವರ್ ಕೊಟ್ಟುನೋಡೋಣ ಎಂದು ವೈಭವ್ ಕೈಗೆ ಬಾಲಿತ್ತರೆ ಆತ ಎರಡು ವಿಕೆಟ್ ಪಡೆದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದರು. ಈ ಬಗ್ಗೆ 15ರ ಹರೆಯದ ಬ್ಯಾಟರ್ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರ.

ಉತ್ತರ ವಲಯ(North Zone) ವಿರುದ್ಧ ಇತ್ತೀಚೆಗೆ ನಡೆದ ದುಲೀಪ್ ಟ್ರೋಫಿ ಪಂದ್ಯದಲ್ಲಿ ಪೂರ್ವ ವಲಯ(East Zone) ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ 15 ವರ್ಷದ ಯುವ ಕ್ರಿಕೆಟಿಗವೈಭವ್ ಸೂರ್ಯವಂಶಿ ತಮ್ಮ ಚಾಣಾಕ್ಷ ಬೌಲಿಂಗ್ ಮೂಲಕ 2 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಬಿಸಿಸಿಐ ತನ್ನ ಡೊಮೆಸ್ಟಿಕ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಮಾತನಾಡಿರುವ ವೈಭವ್ ಸೂರ್ಯವಂಶಿ ಅವರು ತಮ್ಮನ್ನು ತಾವು ವಿಕೆಟ್ ಟೇಕಿಂಗ್ ಬೌಲರ್ ಎಂದು ಬೆನ್ನುತಟ್ಟಿಕೊಂಡಿದ್ದಾರೆ. ಪಂದ್ಯದ ವೇಳೆ ತಮಗೆ ಬೌಲಿಂಗ್ ನೀಡಲು ಪೂರ್ವ ವಲಯದ ನಾಯಕ ಇಶಾನ್ ಕಿಶನ್ ಅವರು ಹಿಂಜರಿದಿದ್ದರು ಎಂದು ವಿನೋದ ಮಾತುಗಳನ್ನು ಹೇಳಿದ್ದರು.


'ಕೇವಲನ 3 ಓವರ್ ಸಿಗುತ್ತದೆ ಎಂದು ಗೊತ್ತಿತ್ತು'

ವೈಭವ್ ಸೂರ್ಯವಂಶಿ ಮಾತನಾಡಿ, "ಇಶಾನ್ ಭಯ್ಯ ಅವರಿಗೆ ನನಗೆ ಬೌಲಿಂಗ್ ನೀಡುವುದು ದೊಡ್ಡ ರಿಸ್ಕ್ ಅನಿಸಿತ್ತು. ಆದರೆ ನಾನು ವಿಕೆಟ್ ಪಡೆಯಬಲ್ಲ ಬೌಲರ್ ಎಂಬುದು ಅವರಿಗೆ ಗೊತ್ತಿರಲಿಲ್ಲ!" ಎಂದಿದ್ದಾರೆ. ತಮ್ಮ ಬೌಲಿಂಗ್ ಯೋಜನೆಯ ಬಗ್ಗೆ ಮಾತನಾಡಿದ ಅವರು, "ಎದುರಾಳಿ ತಂಡದ ವಿಕೆಟ್‌ಗಳು ಬೀಳದಿದ್ದಾಗ ನನಗೆ 2 ರಿಂದ 3 ಓವರ್ ಬೌಲಿಂಗ್ ಮಾಡುವಂತೆ ಕೇಳಲಾಯಿತು. ನಾನು ೫ ವಿಕೆಟ್ ಪಡೆದರೂ ನನಗೆ ಸಿಗುವುದು ಅಷ್ಟೇ ಓವರ್‌ಗಳು ಎಂಬುದು ಗೊತ್ತಿತ್ತು. ಹೀಗಾಗಿ ಯಾವುದೇ ಗೊಂದಲವಿಲ್ಲದೆ ಒಂದೇ ಜಾಗದಲ್ಲಿ ನಿಖರವಾಗಿ ಬೌಲಿಂಗ್ ಮಾಡಲು ಪ್ರಯತ್ನಿಸಿದೆ. ಈ ಪಂದ್ಯದ ಬ್ಯಾಟಿಂಗ್‌ನಲ್ಲಿ ಹೆಚ್ಚು ರನ್ ಗಳಿಸಲು ಸಾಧ್ಯವಾಗದಿದ್ದರೂ, ಬೌಲಿಂಗ್ ಮೂಲಕ ತಂಡಕ್ಕೆ ಕೊಡುಗೆ ನೀಡಿದ್ದು ಖುಷಿ ಕೊಟ್ಟಿದೆ" ಎಂದಿದ್ದಾರೆ.

ಬ್ಯಾಟಿಂಗ್ ನಲ್ಲಿ ವಿಫಲರಾದರೂ ಬೌಲಿಂಗ್ ನಲ್ಲಿ ಮಿಂಚು

ತಮ್ಮ ದುಲೀಪ್ ಟ್ರೋಫಿ ಪಾದಾರ್ಪಣೆ ಪಂದ್ಯದಲ್ಲಿ ವೈಭವ್ ಬ್ಯಾಟಿಂಗ್‌ನಲ್ಲಿ ಕೇವಲ 8 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಎಡಗೈ ಆಫ್‌ಸ್ಪಿನ್ ಮೂಲಕ ಪಡೆದ 2 ಪ್ರಮುಖ ವಿಕೆಟ್‌ಗಳು ತಂಡಕ್ಕೆ ನೆರವಾದವು. ಅಂತಿಮವಾಗಿ ಈಸ್ಟ್ ಝೋನ್ ತಂಡವು ಇನ್ನಿಂಗ್ಸ್ ಹಾಗೂ 210 ರನ್‌ಗಳ ಬೃಹತ್ ಅಂತರದ ಭರ್ಜರಿ ಜಯ ದಾಖಲಿಸಿತು. ಈ ಸಂದರ್ಭದಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ವೈಭವ್ ಸೂರ್ಯವಂಶಿ ಅವರು RR ನೆಟ್ಸ್ ಗಳಲ್ಲಿ ಬೌಲಿಂಗ್ ಮಾಡುತ್ತಿದ್ದ ವಿಡಿಯೋ ಪೋಸ್ಟ್ ಮಾಡಿತ್ತು.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka