ಡಿಕೆಡಿ ಶೋ ಮೂಲಕ ಮನೆಮಾತಾಗಿರುವ ಖ್ಯಾತ ಕೊರಿಯೋಗ್ರಾಫರ್ ರುದ್ರ ಮಾಸ್ಟರ್, ಸದ್ಯ ತಮ್ಮ ಪತ್ನಿ ನಿರೀಕ್ಷಾ ಜೊತೆಗೂಡಿ ʻಜೋಡಿ ನಂ 1 ಸೀಸನ್ 2' ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಈ ಜೋಡಿ ಇದೀಗ ಸಂದರ್ಶನವೊಂದರಲ್ಲಿ ತಮ್ಮ ಲವ್‌ಸ್ಟೋರಿ, ಮ್ಯಾರೇಜ್ ಲೈಫ್ ಹಾಗೂ ತಮ್ಮ ಬಗ್ಗೆ ಹರಿದಾಡುತ್ತಿದ್ದ ಗಾಸಿಪ್‌ಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಹಿಂದೆ ಯಾರಿಗಾದ್ರೂ ಪ್ರಪೋಸ್ ಮಾಡಿದ್ರಾ?
"ಇಲ್ಲ.. ಆ ರೀತಿ ಪ್ರಪೋಸ್ ಎಲ್ಲ ಇಲ್ಲ.. ಸುಮ್ಮನೆ ಗಾಸಿಪ್ ಇತ್ತು ಅಷ್ಟೇ. ರುದ್ರ ಮಾಸ್ಟರ್ ಅವರನ್ನ ಮದುವೆಯಾಗ್ತಾರೆ, ಇವರನ್ನ ಮದುವೆಯಾಗ್ತಾರೆ ಅನ್ನೋ ತರಹ ಇತ್ತು ಅಷ್ಟೇ" ಎಂದಿದ್ದಾರೆ ರುದ್ರ ಮಾಸ್ಟರ್.ರುದ್ರ - ನಿರೀಕ್ಷಾ ಲವ್‌ಸ್ಟೋರಿ ಶುರುವಾಗಿದ್ದೇಗೆ?
"ನಮ್ಮದು ಡೇಟಿಂಗ್ ಏನು ಇಲ್ಲ.. ಡೈರೆಕ್ಟ್ ಮದುವೆ. ಎಂಗೇಜ್‌ಮೆಂಟ್ ಅಂತ ಚಿಕ್ಕದಾಗಿ ಒಂದು ರಿಂಗ್ ಎಕ್ಸ್ಚೇಂಚ್ ಮಾಡಿಕೊಂಡೆವು. ನಿಶ್ಚಿತಾರ್ಥದ ಬಳಿಕ 9 ತಿಂಗಳಲ್ಲಿ ಮದುವೆಯಾದೆವು. ಆ ಎಂಟು ತಿಂಗಳೇ ನಮ್ಮದು ಡೇಟಿಂಗ್ ಪೀರಿಯಡ್" ಎಂದಿರುವ ರುದ್ರ ಮಾಸ್ಟರ್ ಪತ್ನಿ ನಿರೀಕ್ಷಾ, "ರುದ್ರ ಅವರ ಸಿಂಪ್ಲಿಸಿಟಿಗೆ ಯಾರೇ ಇದ್ರು ಯೆಸ್ ಅನ್ಲೇಬೇಕು. ಅಷ್ಟು ಸಿಂಪಲ್ ಮತ್ತು ಅಷ್ಟು ಒಳ್ಳೆಯವರು. ಅದೇ ಖುಷಿ ನನಗೆ" ಎಂದಿದ್ದಾರೆ."ನಾನು ಯಾರನ್ನ ಮದುವೆ ಆಗ್ತೀನಿ ಅನ್ನೋದೇ ದೊಡ್ಡ ಪ್ರಶ್ನೆಯಾಗಿತ್ತು. ಅಮ್ಮ ತುಂಬಾ ವೈಟ್ ಮಾಡ್ತಿದ್ರು, ನಾನು ಯಾರನ್ನ ಮದುವೆ ಆಗ್ತೀನಿ ಅಂತ. ನಮ್ಮ ತಾಯಿಗೆ ಒಂದೊಳ್ಳೆ ಸೊಸೆಯಾಗ್ತಾರೆ ನಿರೀಕ್ಷಾ, ಅಂತೆನಿಸಿದ ತಕ್ಷಣ ನಾನು ಯೆಸ್ ಅಂದ್ಬಿಟ್ಟೆ. ನನಗೆ ನಿರೀಕ್ಷಾನೇ ವೈಫ್ ಆದರೆ ಸೂಪರ್ ಆಗಿರುತ್ತೆ ಅಂತ ಯೆಸ್ ಅಂತ್ಹೇಳಿ, ನಮ್ಮ ಫ್ರೆಂಡ್ಸ್ ಸರ್ಕಲ್‌ನಲ್ಲಿ ಒಂದು ಮದುವೆ ಇತ್ತು. ಆ ಮದುವೆಯಲ್ಲೇ ನಾನು ನಿರೀಕ್ಷಾ ಅವರನ್ನ ಮೀಟ್ ಮಾಡಿದ್ದು. ಅದಕ್ಕೂ ಮುಂಚೆಯೇ ಅವರನ್ನ ಮೀಟ್ ಮಾಡಿದ್ದೆ.. ಅಲ್ಲೇ ಫ್ಲಾಟ್ ಆಗಿಬಿಟ್ಟೆ" ಎಂದರು ರುದ್ರ ಮಾಸ್ಟರ್.
"ನಾನು ನಿರೀಕ್ಷಾಗೆ ಪ್ರಪೋಸ್ ಮಾಡಿದ ಕೆಲ ದಿನಗಳ ನಂತರ, ಅವರು ಅವರ ತಂದೆ ಜೊತೆಗೆ ಮಾತನಾಡಿದ್ರು. ಅದರ ನೆಕ್ಸ್ಟ್ ಡೇ ನಾನೇ ಅವರ ಮನೆಗೆ ಹೋಗಿ, ಅಂಕಲ್ ಮದುವೆಯಾಗ್ತೀನಿ, ಚೆನ್ನಾಗಿ ನೋಡಿಕೊಳ್ತೀನಿ ಅಂತ ಅವರ ತಂದೆ ಹತ್ತಿರ ಮಾತನಾಡಿದೆ. ಆಗ ಅವರ ತಂದೆ ಕಣ್ಣೀರಾದರು. ನನ್ನ ಮಗಳನ್ನ ಗಿಣಿ ಸಾಕಿದ ಹಾಗೆ ಸಾಕಿದ್ದೇನೆ ಅಂದರು. ಸಿನಿಮಾ ಫೀಲ್ಡ್ ಅಂದಾಗ, ಯಾರಿಗಾದರೂ ಭಯ ಇದ್ದೇ ಇರುತ್ತೆ. ನಂತರ ಕೂತುಕೊಂಡು ಮಾತನಾಡಿದಾಗ, ಎರಡ್ಮೂರು ದಿನಗಳು ಯೋಚಿಸಿ ಮದುವೆಗೆ ಒಪ್ಪಿಗೆ ಕೊಟ್ರು. ನಂತರ, ನನ್ನ ತಂದೆ-ತಾಯಿ ಜೊತೆಗೆ ಅವರ ಮನೆಗೆ ಹೋದೆ" ಎಂದರು ರುದ್ರ ಮಾಸ್ಟರ್.

