Dailyhunt Logo
  • Light mode
    Follow system
    Dark mode
    • Play Story
    • App Story
'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿ: ರಾಗಿಣಿ ಖ್ಯಾತಿಯ ನಟ ರಾಘುವೇಂದ್ರ ವಿಶೇಷ ಎಂಟ್ರಿ

'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿ: ರಾಗಿಣಿ ಖ್ಯಾತಿಯ ನಟ ರಾಘುವೇಂದ್ರ ವಿಶೇಷ ಎಂಟ್ರಿ

Vijay Karnataka 1 month ago

'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿ ಹೊಸ ತಿರುವು ಪಡೆದುಕೊಳ್ತಿದೆ. ಮನಸ್ವಿನಿ ಅವತಾರದಲ್ಲಿರುವ ಭೂಮಿಕಾಗೆ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಿದೆ. ಅಜಿತ್‌ ಹೃದಯಕ್ಕೆ ಸದ್ಯ ಬೆಂಕಿ ಬಿದ್ದಿದ್ದು, ಭೂಮಿಕಾಳನ್ನ ಮದುವೆ ಆಗಲು ಹುಡುಗ ಬಂದಿದ್ದಾನೆ.

ಪಕ್ಕದ್ಮನೆಯಲ್ಲಿದ್ದುಕೊಂಡು ಇಷ್ಟು ದಿನ ಪ್ರೀತಿಗೋಸ್ಕರ ದಾರಿ ಕಾಯುತ್ತಿದ್ದ ಕಿಂದರಿ ಜೋಗಿ ಇವನು.

ರಾಘು ಪಾತ್ರ

'ಧಾರಾವಾಹಿಯಲ್ಲಿ ಪ್ರಸಾದಿ ಎಂಬ ಪಾತ್ರ ಇಂಟ್ರಡ್ಯೂಸ್‌ ಆಗಿದೆ. ಈ ಪಾತ್ರ ಬಹಳ ಇಂಟ್ರಸ್ಟಿಂಗ್‌ ಆಗಿದ್ದು, ಹಾಸ್ಯದ ಜೊತೆಗೆ ಪ್ರೀತಿ ಬೆರೆಸಿದ್ದಾರೆ. ಹೊಸ ಪಾತ್ರದ ಹೆಸರು ಪ್ರಸಾದಿ. ಸಖತ್‌ ಜಾತ್ರೆ ತರಹದ ಕಾಸ್ಟ್ಯೂಮ್‌, ಕಲರ್‌ಫುಲ್‌ ನೋಟ, ಕೊರಳ ತುಂಬಾ ಚಿನ್ನದ ಸರಗಳು ಮತ್ತು ಕೈಯಲ್ಲಿ ಗಿಟಾರ್‌ ಹಿಡಿದು ಮ್ಯೂಸಿಕ್‌ ಮಾಸ್ಟರ್‌ನಂತೆ ಆಡುವ ಭೂಮಿಕಾಳ ಹಿಂದೆ ಸುತ್ತುವ ರೋಮಿಯೋ. ಈ ವಿಶೇಷ ಪಾತ್ರವನ್ನ ನಟ ರಾಘವೇಂದ್ರ ಅಲಿಯಾಸ್‌ ರಾಗಿಣಿ ನಿರ್ವಹಿಸುತ್ತಿದ್ದಾರೆ. ಸಖತ್‌ ಕಿಕ್‌ ಕೊಡುವ ಕಾಮಿಡಿ ಸಂಚಿಕೆಗಳಿಗೆ ಜೀವ ತುಂಬಿದ್ದಾರೆ.

ಕಥೆ ಏನು?

'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿ ಶೂಟಿಂಗ್‌ ಸದ್ಯ ಅಜ್ಜಿ ಮನೆ ಕಡೆಗೆ ಶಿಫ್ಟ್ ಆಗಿದೆ. ನಿಂಗವ್ವ ಅಜ್ಜಿ ಮನೆಯಲ್ಲಿ ಧಾರಾವಾಹಿ ತಂಡ ಬೀಡುಬಿಟ್ಟಿದ್ದಾರೆ. ಹಳ್ಳಿ ಮನೆಯಲ್ಲಿ ಕಳೆದ ಕೆಲ ತಿಂಗಳುಗಳಿಂದ ಭರದಿಂದ ಚಿತ್ರೀಕರಣ ಸಾಗುತ್ತಿದೆ. ಅಜಿತ್‌ ಅಜ್ಜಿ ನಿಂಗವ್ವನಿಗೆ ಭೂಮಿಕಾ - ಅಜಿತ್‌ ಮದುವೆ ಆಗಿರುವ ವಿಚಾರ ಗೊತ್ತಿಲ್ಲ. ಭೂಮಿಕಾಳನ್ನೇ ಕಳೆದು ಹೋಗಿರುವ ಮನಸ್ವಿನಿ ಎಂದ ನಂಬಿಸಲಾಗಿದೆ. ಇದೆ ಸತ್ಯ ಕೂಡ. ಆದರೆ ಈ ಸತ್ಯ ಯಾರಿಗೂ ಗೊತ್ತಿಲ್ಲ. ಸ್ವತಃ ಭೂಮಿಗೂ ಗೊತ್ತಿಲ್ಲ. ಸಿಂಗಲ್‌ ಆಗಿರುವ ಮನಸ್ವಿನಿ ಅಲಿಯಾಸ್‌ ಭೂಮಿಕಾಗೆ ಮದುವೆ ಮಾಡುವ ಪ್ಲ್ಯಾನ್‌ನಲ್ಲಿ ಅಜ್ಜಿ ನಿಂಗವ್ವ ಯೋಚಿಸುತ್ತಿದ್ದು, ಸರಿಯಾಗಿ ಪ್ರಸಾದಿ ಬಂದಿದ್ದಾನೆ. ಭೂಮಿ ಕಂಡು ಕುಣಿಯುತ್ತಿರುವ ಪ್ರಸಾದಿ, ಅಜಿತ್‌ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಇಬ್ಬರ ನಡುವಿನ ಟಾಮ್‌ ಅಂಡ್‌ ಜರ್ರೀ ಜಗಳ ನೋಡೋಕೆ ಮಜವಾಗಿದೆ. ಭೂಮಿ ಮನಸ್ಸು ಗೆಲ್ಲೋಕೆ ಪ್ರಸಾದಿ ಟ್ರೈ ಮಾಡುತ್ತಿದ್ದಾನೆ. ಪ್ರಸಾದಿ ಭೂಮಿನ ಮದುವೆ ಆಗ್ಬೇಕು ಅನ್ಕೊಂಡಿದ್ದಾನೆ. ಇದನ್ನ ಕಂಡ ಅಜಿತ್‌ ಪತ್ತ ನೆತ್ತಿಗೇರಿದೆ. ನೀನು ಅವಳನ್ನ ಮದುವೆ ಆಗ್ಬೇಕು ಅಂದ್ರೆ ಒಂದು ಷರತ್ತು ಪಾಲಿಸಬೇಕು ಎಂದು ಖಡಾಖಂಡಿತವಾಗಿ ಹೇಳಿದ್ದಾನೆ.


ಆ ಷರತ್ತು ಏನು? ಹತ್ತಿರ ಇದ್ದರು ದೂರ ದೂರ ಆಗೋ ಪರಿಸ್ಥಿತಿ ಬಂದಿರುವ ಭೂಮಿ-ಅಜಿತ್‌ ನಡುವೆ ಪ್ರಸಾದಿ ಎಂಬ ಕಾನ್ಸೆಪ್ಟ್‌ ಇಬ್ಬರನ್ನ ಹತ್ತಿರ ಮಾಡುತ್ತಾ? ಮುಂದಿನ ಕುತೂಹಲದ ಸಂಚಿಕೆಗಳನ್ನ ತಿಳಿಯೋಕೆ ವಿಶೇಷ ಹಾಸ್ಯ ಭರಿತ ಸಂಚಿಕೆಗಳನ್ನ ನೋಡಬಹುದು.

Dailyhunt
Disclaimer: This content has not been generated, created or edited by Dailyhunt. Publisher: Vijay Karnataka