Dailyhunt Logo
  • Light mode
    Follow system
    Dark mode
    • Play Story
    • App Story
ನೂಲು ಹುಣ್ಣಿಮೆಯಂದು ಶತ್ರು ಮನೆಗೆ ಚಂದ್ರ 2026: ತಿಂಗಳಾಂತ್ಯಕ್ಕೆ ಕುಂಭ ಸೇರಿ ಈ 5 ರಾಶಿಯವರಿಗೆ ಶನಿಯಿಂದ ಸಂಕಷ್ಟ ಸವಾಲು...!

ನೂಲು ಹುಣ್ಣಿಮೆಯಂದು ಶತ್ರು ಮನೆಗೆ ಚಂದ್ರ 2026: ತಿಂಗಳಾಂತ್ಯಕ್ಕೆ ಕುಂಭ ಸೇರಿ ಈ 5 ರಾಶಿಯವರಿಗೆ ಶನಿಯಿಂದ ಸಂಕಷ್ಟ ಸವಾಲು...!

Vijay Karnataka 1 month ago

ತ್ರು ಮನೆಗೆ ಚಂದ್ರ 2026: ನೂಲು ಹುಣ್ಣಿಮೆಯಂದು ಚಂದ್ರ ಗ್ರಹ ಶತ್ರುವಿನ ಮನೆಗೆ ಸಾಗಲಿದೆ. ಇದರಿಂದ ಅತ್ಯಂತ ಅಶುಭ ಯೋಗ ಸೃಷ್ಟಿಯಾಗುವುದು. ಈ ಯೋಗ ಕೆಲ ರಾಶಿಯವರಿಗೆ ಅನಿರೀಕ್ಷಿತ ಸವಾಲುಗಳನ್ನು ಸೃಷ್ಟಿಸುವುದು. ಈ ಸಮಯದಲ್ಲಿ ಹಣಕಾಸಿನ ವಿಷಯದಲ್ಲಿ ಜಾಗರೂಕರಾಗಿರಬೇಕಾದ ರಾಶಿಗಳು ಯಾವುವು ಎಂದು ತಿಳಿಯಿರಿ.

ಜ್ಯೋತಿಷ್ಯದ ಪ್ರಕಾರ ಒಂಬತ್ತು ಗ್ರಹಗಳು ಮಾನವ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಕೆಲವೊಮ್ಮೆ ಸಂಚಾರದ ವೇಳೆ ಗ್ರಹಗಳು ಸ್ನೇಹಪರ ಅಥವಾ ಶತ್ರು ಗ್ರಹಗಳೊಂದಿಗೆ ಪ್ರಯಾಣಿಸಬೇಕಾಗುತ್ತದೆ. ಈ ಗ್ರಹಗಳ ಸಂಯೋಜನೆಯು ಶುಭ ಅಥವಾ ಅಶುಭ ಯೋಗಗಳನ್ನು ಸೃಷ್ಟಿಸಬಹುದು. ಇದು ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿಗಳ ಜೀವನದ ಮೇಲೆ ವಿಭಿನ್ನ ಪರಿಣಾಮ ಬೀರುತ್ತದೆ. ಅಂದಹಾಗೆ ನವಗ್ರಹಗಳಲ್ಲಿ ಶನಿಯನ್ನು ಅತ್ಯಂತ ಅಶುಭ ಗ್ರಹ ಎಂದು ಪರಿಗಣಿಸಲಾಗುತ್ತದೆ. ಚಂದ್ರ ಶನಿಯ ಶತ್ರು ಗ್ರಹ. ಆಗಸ್ಟ್‌ 24 ಬೆಳಗ್ಗೆ 3:6ಕ್ಕೆ ಚಂದ್ರ ಶನಿ ಆಳುವ ಮಕರ ರಾಶಿಗೆ ಸಾಗುವುದು. ಆಗಸ್ಟ್ 27 ಮಧ್ಯಾಹ್ನ 1:35ಕ್ಕೆ ಶನಿ ಆಳುವ ಕುಂಭ ರಾಶಿಗೆ ಚಂದ್ರ ಗ್ರಹ ಪ್ರವೇಶ ಮಾಡಲಿದೆ. ಇನ್ನೂ ಆಗಸ್ಟ್ 29 ಬೆಳಗ್ಗೆ 9:37ಕ್ಕೆ ಚಂದ್ರ ಗ್ರಹವು ಶನಿ ಇರುವ ಮೀನ ರಾಶಿಗೆ ಸಾಗುವುದು. ಆಗಸ್ಟ್ 31ರವರೆಗೆ ಚಂದ್ರ ಶನಿ ಎರಡು ಒಟ್ಟಿಗೆ ಸಂಚಾರ ಮಾಡುವುದರಿಂದ ವಿಷ ಯೋಗ ರೂಪಗೊಳ್ಳಲಿದೆ. ಇದನ್ನು ಜ್ಯೋತಿಷ್ಯದಲ್ಲಿ ಶುಭ ಗಳಿಗೆ ಎಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ ಆಗಸ್ಟ್ 24ರಿಂದ ಆಗಸ್ಟ್ 31ರವರೆಗಿನ ಅವಧಿಯನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ವಿಶೇಷವಾಗಿ ಆಗಸ್ಟ್ 27ರಂದು ನೂಲು ಹುಣ್ಣಿಮೆ ಇದ್ದು, ಈ ಸಮಯದಲ್ಲಿ ಕೆಲ ರಾಶಿಯವರು ಸಾಕಷ್ಟು ಸವಾಲು ಹಾಗೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಈ ಸಮಯದಲ್ಲಿ ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂದು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ... ಕುಂಭ ರಾಶಿ

ನೂಲು ಹುಣ್ಣಿಮೆ ಕುಂಭ ರಾಶಿಯವರಿಗೆ ಶುಭ ಸಮಯವಲ್ಲ. ಯಾವುದೇ ಶುಭ ಕಾರ್ಯಗಳನ್ನು ಈ ಸಮಯದಲ್ಲಿ ಮುಂದೂಡುವುದು ಉತ್ತಮ. ವಿಷ ಯೋಗ ಆಗಸ್ಟ್ 24ರಿಂದ 31ರವರೆಗೆ ಹಠಾತ್ ಸಮಸ್ಯೆ ಹಾಗೂ ಸವಾಲುಗಳನ್ನು ಸೃಷ್ಟಿಸಬಹುದು. ಈ ತಿಂಗಳ ಕೊನೆಯ ದಿನಗಳು ನಿಮಗೆ ಸ್ವಲ್ಪ ಕಷ್ಟಕರವಾಗಿರುತ್ತವೆ. ನೀವು ಪ್ರತಿಯೊಂದು ವಿಷಯದಲ್ಲೂ ಜಾಗರೂಕರಾಗಿರಬೇಕು. ಸತತವಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ಹಣದ ವಿಷಯಗಳಲ್ಲಿ ನೀವು ವಿಶೇಷವಾಗಿ ಜಾಗರೂಕರಾಗಿರಬೇಕು. ಹಣಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅನುಭವಿ ಜನರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ. ಪ್ರೀತಿಯ ವಿಷಯಗಳಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ನೀವು ಸಂಬಂಧಗಳಲ್ಲಿ ಸ್ವಲ್ಪ ಜಾಗರೂಕರಾಗಿರಿ.


ಮೀನ ರಾಶಿ

ಮೀನ ರಾಶಿಯ ಮೊದಲ ಮನೆಯಲ್ಲಿ ಶನಿ ಮತ್ತು ಚಂದ್ರ ಸಂಯೋಜನೆ ಉಂಟಾಗುತ್ತದೆ. ಇದರಿಂದಾಗಿ ಮೀನ ರಾಶಿಯವರು ಮಾನಸಿಕವಾಗಿ ಗೊಂದಲಕ್ಕೊಳಗಾಗಬಹುದು. ಆಗಸ್ಟ್ 24ರಿಂದ 31ರವರೆಗೆ ಯಾವುದೇ ಹಣಕಾಸಿನ ನಿರ್ಧಾರ ತೆಗೆದುಕೊಳ್ಳುವಲ್ಲಿ ತೊಂದರೆ ಅನುಭವಿಸಬಹುದು. ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿರುತ್ತದೆ. ಜೊತೆಗೆ ಕಠಿಣ ಪರಿಶ್ರಮದ ಫಲಿತಾಂಶಗಳನ್ನು ಪಡೆಯುವಲ್ಲಿ ವಿಳಂಬವಾಗಬಹುದು. ಆದ್ದರಿಂದ ನೀವು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯದಿದ್ದರೆ ತಕ್ಷಣ ನಿರುತ್ಸಾಹಗೊಳ್ಳಬೇಡಿ. ಸಕಾರಾತ್ಮಕವಾಗಿರಿ ಮತ್ತು ಜಾಗರೂಕರಾಗಿರಿ. ಕೆಲಸ ಮಾಡುವವರು ತಮ್ಮ ಕೆಲಸವನ್ನು ಪೂರ್ಣಗೊಳಿಸಲು ಕಷ್ಟಪಡಬಹುದು. ನಿಮ್ಮ ಕೆಲಸದಲ್ಲಿ ಅನೇಕ ಅಡೆತಡೆಗಳನ್ನು ಎದುರಾಗುವುದರಿಂದ ಧೈರ್ಯದಿಂದ ಅವುಗಳನ್ನು ಎದುರಿಸಿ. ನಿಮ್ಮ ಆರೋಗ್ಯದ ಬಗ್ಗೆ ನೀವು ತುಂಬಾ ಜಾಗರೂಕರಾಗಿರಬೇಕು. ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಮುಖ್ಯ.


ಮಕರ ರಾಶಿ

ನೂಲು ಹುಣ್ಣಿಮೆ ಮಕರ ರಾಶಿಯವರ ಬಾಳಲ್ಲಿ ಬಿರುಗಾಳಿ ಸೃಷ್ಟಿಸಬಹುದು. ಆಗಸ್ಟ್ 24ರಿಂದ 31ರವರೆಗೆ ನೀವು ತುಂಬಾ ಜಾಗರೂಕರಾಗಿರಬೇಕಾಗುತ್ತದೆ. ಈ ಅವಧಿಯಲ್ಲಿ ನೀವು ಅತಿಯಾದ ಕೋಪವನ್ನು ತಪ್ಪಿಸಬೇಕು. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಇಲ್ಲದಿದ್ದರೆ ಅಪಘಾತದ ಸಾಧ್ಯತೆಯಿದೆ. ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗುವ ಮುನ್ನ ಎಚ್ಚರಿಕೆ ವಹಿಸುವುದು ಬುದ್ಧಿವಂತಿಕೆ. ಕೆಲವರು ಆರ್ಥಿಕ ನಷ್ಟವನ್ನು ಎದುರಿಸಬಹುದು. ವ್ಯಾಪಾರ, ವ್ಯವಹಾರ ಹಾಗೂ ಉದ್ಯಮಿಗಳು ನಷ್ಟವನ್ನು ಎದುರಿಸುವ ಸಾಧ್ಯತೆಗಳು ಉಂಟು. ಜಂಟಿ ವ್ಯವಹಾರ ಮಾಡುವವರು ಹೆಚ್ಚುವರಿ ಲಾಭವನ್ನು ಕಾಣುವುದು ಕಷ್ಟ. ನೀವು ಅನಗತ್ಯ ಖರ್ಚುಗಳನ್ನು ಮಾಡಬೇಕಾಗುತ್ತದೆ. ಇದು ನಿಮ್ಮ ಹಣ ನಿರ್ವಹಣೆಗೆ ಕಷ್ಟವಾಗಲಿದೆ. ಹೀಗಾಗಿ ಅನಾವಶ್ಯಕ ಹಣ ಖರ್ಚು ಮಾಡುವ ಮುನ್ನ ಜಾಗ್ರತೆ ವಹಿಸಿ.


ಸಿಂಹ ರಾಶಿ

ಸಿಂಹ ರಾಶಿಯವರಿಗೆ ನೂಲು ಹುಣ್ಣಿಮೆ ಜಾಗರೂಕತೆಯಿಂದ ಇರಬೇಕಾದ ಸಮಯ. ಈ ಸಮಯದಲ್ಲಿ ಸೃಷ್ಟಿಯಾಗುವ ವಿಷ ಯೋಗದಿಂದ ನೀವು ಕೆಲಸದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಶತ್ರುಗಳು ನಿಮ್ಮನ್ನು ಬಹಳಷ್ಟು ತೊಂದರೆಗೊಳಿಸಬಹುದು. ಆರೋಗ್ಯ ಸ್ವಲ್ಪ ಹದಗೆಡುವ ಸಾಧ್ಯತೆ ಇದೆ. ಎಲ್ಲಿಯಾದರೂ ಹೊಸ ಹೂಡಿಕೆಗಳನ್ನು ಮಾಡುವುದನ್ನು ತಪ್ಪಿಸಿ. ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಲವು ಬಾರಿ ಯೋಚಿಸಿ ನಂತರ ಅದನ್ನು ತೆಗೆದುಕೊಳ್ಳಬೇಕು. ಜೊತೆಗೆ ಹಣವನ್ನು ಹೂಡಿಕೆ ಮಾಡುವುದನ್ನು ತಪ್ಪಿಸಬೇಕು. ಕೆಲಸ ಮಾಡುವವರು ಕಚೇರಿಯಲ್ಲಿ ಎಚ್ಚರಿಕೆಯಿಂದ ಮಾತನಾಡಬೇಕು. ಅಲ್ಲದೆ ವಾಹನ ಚಲಾಯಿಸುವಾಗ ವಿಶೇಷವಾಗಿ ಜಾಗರೂಕರಾಗಿರಬೇಕು.


ಮಿಥುನ ರಾಶಿ

ನೂಲು ಹುಣ್ಣಿಮೆ ಮಿಥುನ ರಾಶಿಯವರಿಗೆ ಸವಾಲುಗಳನ್ನು ತರುವ ಸಾಧ್ಯತೆ ಇದೆ. ವಿಷ ಯೋಗದಿಂದಾಗಿ ಮಿಥುನ ರಾಶಿಯವರಿಗೆ ಹಣದ ಸಮಸ್ಯೆ ಎದುರಾಗಬಹುದು. ಹಠಾತ್ ಆರ್ಥಿಕ ಸಮಸ್ಯೆಗಳು ಸೃಷ್ಟಿಯಾಗುವ ಸಮಯ ಇದಾಗಿದ್ದು, ಈ ಸಮಯದಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕಾಗುತ್ತದೆ. ಸ್ವಂತ ವ್ಯವಹಾರಗಳಲ್ಲಿ ಸ್ವಲ್ಪ ಜಾಗರೂಕರಾಗಿರಿ. 24ರಿಂದ ಆಗಸ್ಟ್ 31ರವರೆಗಿನ ಅವಧಿಯಲ್ಲಿ ಹಣಕಾಸಿನ ವಿಷಯದಲ್ಲಿ ಆತುರ ಬೇಡ. ಉದ್ಯೋಗ ಸ್ಥಳದಲ್ಲಿ ನೀವು ಸಾಧ್ಯವಾದಷ್ಟು ಶಾಂತವಾಗಿರುವುದು ಉತ್ತಮ. ಈ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ. ನೀವು ಸಾಲ ನೀಡುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಹಣ ಹಿಂತಿರುಗುವುದಿಲ್ಲ. ಅನಗತ್ಯ ಖರ್ಚುಗಳಿಂದ ದೂರವಿರಿ. ಜೊತೆಗೆ ಹೊಸ ಹೂಡಿಕೆಗಳನ್ನು ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು.


Dailyhunt
Disclaimer: This content has not been generated, created or edited by Dailyhunt. Publisher: Vijay Karnataka