Dailyhunt Logo
  • Light mode
    Follow system
    Dark mode
    • Play Story
    • App Story
ಒಂದೇ ಮನೆಯಲ್ಲಿರುವ ಸಚಿವ, ಸಂಸದರು ಜಗಳೂರಿಗೆ ಏನು ಕೊಟ್ಟಿದ್ದೀರಾ? ರಾಜೀನಾಮೆಗೆ ಸಿದ್ಧ! ಕಾಂಗ್ರೆಸ್‌ MLA ದೇವೇಂದ್ರಪ್ಪ ಆಕ್ರೋಶ

ಒಂದೇ ಮನೆಯಲ್ಲಿರುವ ಸಚಿವ, ಸಂಸದರು ಜಗಳೂರಿಗೆ ಏನು ಕೊಟ್ಟಿದ್ದೀರಾ? ರಾಜೀನಾಮೆಗೆ ಸಿದ್ಧ! ಕಾಂಗ್ರೆಸ್‌ MLA ದೇವೇಂದ್ರಪ್ಪ ಆಕ್ರೋಶ

Vijay Karnataka 2 weeks ago

ಗಳೂರು: "30 ವರ್ಷದ ನಂತರ ಜಿಲ್ಲೆಯ ಜನ ಕಾಂಗ್ರೆಸ್‌ಗೆ ಆಶೀರ್ವಾದ ಮಾಡುತ್ತಿದ್ದಾರೆ. ಒಂದೇ ಮನೆಯಲ್ಲಿರುವ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌, ಜಿಲ್ಲಾಉಸ್ತುವಾರಿ ಸಚಿವರಾಗಿರುವ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಜಗಳೂರು ಕ್ಷೇತ್ರದ ಅಭಿವೃದ್ಧಿಗೆ ನೀವು ಏನು ಅನುದಾನ ಕೊಟ್ಟಿದ್ದೀರಿ'' ಎಂದು ಜಗಳೂರು ಶಾಸಕ ಬಿ ದೇವೇಂದ್ರಪ್ಪ ಪ್ರಶ್ನಿಸಿದರು.

ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಶಾಸಕರು ''ಒಂದೇ ಮನೆಯಲ್ಲಿ ಜಿಲ್ಲಾಉಸ್ತುವಾರಿ ಸಚಿವರು, ಸಂಸದರು ಇದ್ದಾರೆ. ನೀವು ಏನ್‌ ಕೊಟ್ಟಿದ್ದೀರಿ ಸ್ವಾಮಿ ಜಗಳೂರಿಗೆ? ಇದುವರೆಗೂ ಒಂದು ಬಿಡಿಗಾಸೂ ಕೊಟ್ಟಿಲ್ಲ. ಮೂರು ವರ್ಷ ಏನಾಗಿದೆ ಎಂದು ತಿರುಗಿ ನೋಡಿದ್ದೀರಾ, ಪ್ರಾಣ ಕೊಡುವ ಮಟ್ಟಿಗೆ ನಿಮ್ಮ ಕುಟುಂಬವನ್ನು ವೈಯಕ್ತಿಕವಾಗಿ ಬೆಂಬಲಿಸಿದ್ದೇನೆ. ಆದರೆ ಡಾ.ನಂಜುಂಡಪ್ಪ ವರದಿ ಅನುಸಾರ ಅತ್ಯಂತ ಹಿಂದುಳಿದ ಬರ ಪೀಡಿತ ತಾಲೂಕನ್ನು ನಿರ್ಲಕ್ಷತ್ರ್ಯ ಮಾಡಿದ್ದೀರಿ,'' ಎಂದು ಆರೋಪಿಸಿದರು.

''ನಿಮ್ಮ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ, ಜಗಳೂರು ಬರ ಪಟ್ಟಿಯಿಂದ ಏಕೆ ಬಿಟ್ಟು ಹೋಯ್ತು ಎಂದು ಸೌಜನ್ಯಾಕ್ಕಾದರೂ ನೀವು ನನಗೆ ಕರೆ ಮಾಡಿ ವಿಚಾರಿಸಿದ್ದೀರಾ?'' ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕ, ''ಚುನಾವಣೆ ವೇಳೆ ವಿಕಲಚೇತನ ಮಕ್ಕಳನ್ನು(ಜಗಳೂರು, ಹರಪನಹಳ್ಳಿ)ಸರಿಯಾಗಿ ನಡೆಸುತ್ತೇನೆ ಎಂದು ಹೇಳಿದ್ದ ಸಂಸದರೇ, ಈಗ ನಡೆಸಿದ್ದೀರೇನಮ್ಮ!''ಎಂದು ಕಿಡಿಕಾರಿದರು.

ಕಲ್ಯಾಣ ಕರ್ನಾಟಕ ಹಾದಿ

''ನೀವು ನನ್ನನ್ನು ಮಾತನಾಡುವಂತೆ ಮಾಡಿದ್ದೀರಿ. ನೀವು ರೂಪಿಸಿರುವ ವ್ಯವಸ್ಥೆ ನನ್ನನ್ನು ಮಾತನಾಡುವಂತೆ ಮಾಡಿದೆ. ಇಲ್ಲಿಆಗಿರುವ ಅನ್ಯಾಯವನ್ನು ಸರಿಪಡಿಸಿ, ನಮ್ಮ ಪಾಲು ನಮಗೆ ಕೊಟ್ಟರೆ ಕರ ಜೋಡಿಸಿ ನಮಿಸುತ್ತೇವೆ. ಇಲ್ಲವಾದರೆ ನಮ್ಮನ್ನು ಕಲ್ಯಾಣ ಕರ್ನಾಟಕಕ್ಕೆ ಸೇರಿಸಲು ಹೊಸ ದಾರಿಕಡೆಗೆ ಹೊರಟು ಹೋಗುತ್ತೇವೆ ಎಂದು ಶಾಸಕರು ಎಚ್ಚರಿಕೆ ನೀಡಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧ

ತಾಲೂಕನ್ನು ಬರಪಟ್ಟಿಯಿಂದ ಕೈಬಿಟ್ಟಿರುವ ಬಗ್ಗೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಜಗಳೂರಿಗೆ ಬಂದು ಸ್ಪಷ್ಟನೆ ನೀಡಬೇಕು ಎಂದು ಶಾಸಕರು ಆಹ್ವಾನಿಸಿದ್ದರು. ಆದರೆ, ಕೆಲಸದ ನಿಮಿತ್ತ ಡಿಸಿ ಬೆಂಗಳೂರಿಗೆ ಹೋದ ಕಾರಣ, ಎಡಿಸಿ ಶೀಲವಂತ ಕುಮಾರ್‌ ಸುದ್ದಿಗೋಷ್ಠಿಗೆ ಬಂದಿದ್ದರು. ಅವರಿಂದಲೇ ಜಿಲ್ಲಾಧಿಕಾರಿಗೆ ಕರೆ ಮಾಡಿಸಿದ ಶಾಸಕ ದೇವೇಂದ್ರಪ್ಪ, ಡಿಸಿ ಗಂಗಾಧರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು. ''ಸೋಮವಾರ ಬಂದು ಸ್ಪಷ್ಟನೆ ನೀಡಬೇಕು, ಇಲ್ಲವಾದರೆ ಜಿಲ್ಲಾಮಟ್ಟದ ಯಾವುದೇ ಕೆಡಿಪಿ ಸಭೆಗೆ ನಾನು ಬರುವುದಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ,'' ಎಂದು ಹೇಳಿದರು.

ಜಗಳೂರನ್ನು ಬರಪಟ್ಟಿಗೆ ಸೇರಿಸುತ್ತೇನೆ ಎಂದ ಶಾಸಕ

ಜಗಳೂರು ಬರಪಟ್ಟಿಗೆ ಸೇರುವುದು ಸೂರ್ಯ ಇರುವಷ್ಟೇ ಸತ್ಯ. ಈಗಾಗಲೇ ಡಿಸಿಎಂ ಡಾ.ಜಿ.ಪರಮೇಶ್ವರ್‌, ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಬಂದಿದ್ದೇನೆ. ಅಗತ್ಯಬಿದ್ದರೆ ಸಿಎಂ ಭೇಟಿ ಮಾಡಲು ರೈತರ ನಿಯೋಗ ಕರೆದೊಯ್ಯುತ್ತೇನೆ ಎಂದು ಜಗಳೂರು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka