ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಸುಮಾರು ಭಾರತ-ಪಾಕಿಸ್ತಾನ ಎಂದು ವಿಭಜನೆಯಾಗುವ ಮೊದಲೇ ನಿರ್ಮಿಸಲಾಗಿದ್ದ 125 ವರ್ಷಗಳ ಇತಿಹಾಸವಿರುವ ಗುರುದ್ವಾರವೊಂದನ್ನು ಅಲ್ಲಿನ ಉದ್ಯಮಿಯೊಬ್ಬರು ಖರೀದಿಸಿ ಅದನ್ನು ಕೆಡವಿಹಾಕಿರುವ ಘಟನೆ ನಡೆದಿದ್ದು, ಇದು ಸಿಖ್ಖರ ಧಾರ್ಮಿಕ ಸ್ಥಳವನ್ನು ಕಡೆವಿ ಅವರ ನಂಬಿಕೆಗೆ ಧಕ್ಕೆಯುಂಟಾಗುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಈ ಬೆನ್ನಲ್ಲೇ, ಈ ಘಟನೆಯನ್ನು ಭಾರತ ತೀಕ್ಷ್ಣವಾಗಿ ಖಂಡಿಸಿ, ಇದು ʼಉದ್ದೇಶಿತ ವಿಧ್ವಂಸಕ ಕೃತ್ಯʼ ಎಂದು ಕರೆದಿದ್ದು ಹೊಣೆಗಾರರು ಕಾನೂನಾತ್ಮಕ ಕ್ರಮವಹಿಸಿವಂತೆ ಮಾಡಿ ಐತಿಹಾಸಿಕ ಸಿಖ್ ದೇವಾಲಯವನ್ನು ಪುನಃಸ್ಥಾಪಿಸಲು ಪಾಕಿಸ್ತಾನವನ್ನು ಒತ್ತಾಯಿಸಿದೆ.
125 ವರ್ಷಗಳ ಐತಿಹಾಸಿಕ ಗುರುದ್ವಾರ ಧ್ವಂಸಗೊಳಿಸಿದ್ದ ಭಾರತ ಖಂಡನೆ
ಈ ಕುರಿತು ಭಾರತದ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದ್ದು, ಇದನ್ನು MEA ವಕ್ತಾರ ತಮ್ಮ ಅಧಿಕೃತ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ "ಪಾಕಿಸ್ತಾನದ ಫರೂಕಾಬಾದ್‌ನಲ್ಲಿರುವ 125 ವರ್ಷ ಹಳೆಯ ಐತಿಹಾಸಿಕ ಪವಿತ್ರ ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್ ಧ್ವಂಸಕ್ಕೆ ಸಂಬಂಧಿಸಿದ ತೀವ್ರ ದುಃಖಕರ ವರದಿಗಳನ್ನು ನಾವು ನೋಡಿದ್ದೇವೆ. ಪೂಜ್ಯ ಸಿಖ್ ದೇವಾಲಯದ ಮೇಲೆ ನಡೆದ ಈ ಅತ್ಯಂತ ಶೋಚನೀಯ ಮತ್ತು ಗುರಿಯಾಗಿಟ್ಟುಕೊಂಡು ನಡೆದ ವಿಧ್ವಂಸಕ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ" ಎಂದು ತಿಳಿಸಿದ್ದಾರೆ. ಮುಂದುವರೆದು, "ಈ ವಿಚಾರದ ಕುರಿತು ಸ್ಥಳೀಯ ಅಧಿಕಾರಿಗಳು ಅಥವಾ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ETPB) ಯಾವುದೇ ಅರ್ಥಪೂರ್ಣ ಕ್ರಮ ಕೈಗೊಂಡಿಲ್ಲ ಎಂಬ ವರದಿಗಳ ಜೊತೆಗೆ, ಅದರ ನಾಶವು ಗಂಭೀರ ಕಳವಳಕಾರಿ ವಿಷಯವಾಗಿದೆ. ದುರದೃಷ್ಟವಶಾತ್ ಇದು ಪ್ರತ್ಯೇಕ ಘಟನೆಯಲ್ಲ, ಏಕೆಂದರೆ ನಾವು ಈ ಹಿಂದೆಯೂ ಇದೇ ರೀತಿಯ ವರದಿಗಳನ್ನು ನೋಡಿದ್ದೇವೆ. ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅವರ ಪೂಜಾ ಸ್ಥಳಗಳನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಳ್ಳುವುದು ನಿರಂತರವಾಗಿ ಮುಂದುವರೆದಿದೆ" ಎಂದು ತಿಳಿಸಿದ್ದಾರೆ.
ಈ ಪ್ರತಿಭಟನೆಗಳಿಂದಾಗಿ ಈ ವಿಚಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ಗಮನಕ್ಕೆ ಬಂದಿದ್ದು, ಈ ಬೆನ್ನಲ್ಲೇ, ಪಂಜಾಬ್‌ನ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ರಮೇಶ್ ಸಿಂಗ್ ಅರೋರಾ ಅವರು ಬುಧವಾರ(ಜು.1ರಂದು) ಜಿಲ್ಲಾ ಅಧಿಕಾರಿಗಳು ಮತ್ತು ಔಕಾಫ್ ಇಲಾಖೆಯ ಪ್ರತಿನಿಧಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಐತಿಹಾಸಿಕ ಗುರುದ್ವಾರದ ಪುನಃಸ್ಥಾಪನೆ ಕಾರ್ಯವು ತಕ್ಷಣ ಪ್ರಾರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಅಲ್ಲದೆ, ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರ ಪೂಜಾ ಸ್ಥಳಗಳನ್ನು ಸಂರಕ್ಷಿಸಲು ಪ್ರಾಂತೀಯ ಸರ್ಕಾರವು ಬದ್ಧವಾಗಿದ್ದು, ಭೂಮಿಯ ಮಾಲೀಕತ್ವ ಮತ್ತು ಕಾನೂನು ಸ್ಥಿತಿಯನ್ನು ತನಿಖೆ ಮಾಡುವಂತೆ ಅವರು ಔಕಾಫ್ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಿಲ್ಲಿಸುವಂತೆ ಒತ್ತಾಯ
ಈ ವಿಧ್ವಂಸಕ ಕೃತ್ಯ ಎಸಗಿದವನ್ನು ಹೊಣೆಗಾರರನ್ನಾಗಿ ಮಾಡಿ ಈ ಗುರುದ್ವಾರವನ್ನು ಪುನಸ್ಥಾಪಿಸುವಂತೆ ಪಾಕಿಸ್ತಾನವನ್ನು ಒತ್ತಾಯಿಸಿದ್ದು, " ಪಾಕಿಸ್ತಾನ ಸರ್ಕಾರವು ಈ ವಿಷಯವನ್ನು ತ್ವರಿತವಾಗಿ ತನಿಖೆ ಮಾಡಿ ಈ ಹೇಯ ಕೃತ್ಯದ ಅಪರಾಧಿಗಳನ್ನು ನ್ಯಾಯದ ಕಟಕಟೆಗೆ ತರಬೇಕು. ಜೊತೆಗೆ ಕೆಡವಲಾದ ಗುರುದ್ವಾರದ ಭಾಗಗಳನ್ನು ಆದಷ್ಟು ಬೇಗ ಪುನಃಸ್ಥಾಪಿಸಿ ಪುನರ್ನಿರ್ಮಿಸಬೇಕು. ಇದಲ್ಲದೆ, ಪಾಕಿಸ್ತಾನ ಸರ್ಕಾರವು ತನ್ನ ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಅವರ ಪೂಜಾ ಸ್ಥಳಗಳ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ತನ್ನ ಜವಾಬ್ದಾರಿಗಳನ್ನು ನಿರ್ವಹಿಸಬೇಕೆಂದು ಹಾಗೂ ಪಾಕ್‌ನಲ್ಲಿ ಚಾಲ್ತಿಯಲ್ಲಿರುವ ಪಂಥೀಯ ಹಿಂಸಾಚಾರ ಮತ್ತು ಧಾರ್ಮಿಕ ಅಸಹಿಷ್ಣುತೆಯ ವಾತಾವರಣವನ್ನು ನಿರ್ಣಾಯಕವಾಗಿ ಕೊನೆಗೊಳಿಸಬೇಕೆಂದು ಒತ್ತಾಯಿಸುತ್ತೇವೆ" ಎಂದು ತಿಳಿಸಲಾಗಿದೆ.ಸಿಖ್ ಸಮುದಾಯದ ಆಕ್ರೋಶಕ್ಕೆ ಕಾರಣವಾದ ಐತಿಹಾಸಿಕ ಗುರುದ್ವಾರ ಧ್ವಂಸ
ಭಾರತದ ಈ ಹೇಳಿಕೆಯು ಇತ್ತೀಚೆಗೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ ಲಾಹೋರ್‌ನಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಫಾರೂಕಾಬಾದ್‌ನಲ್ಲಿ 125ವರ್ಷಗಳ ಹಳೆಯ ಗುರುದ್ವಾರವನ್ನು ಅಲ್ಲಿನ ಉದ್ಯಮಿಯೊಬ್ಬರು ಅಧಿಕಾರಿಗಳಿಂದ ಯಾವುದೇ ನಿರಾಪೇಕ್ಷಣ ಪತ್ರವನ್ನು(NOC) ಪಡೆಯದೆ ಜೂ.24ರ ರಾತ್ರಿ ಕಡೆವಿಹಾಕಿದ್ದಾರೆ. ಇದು ಅಲ್ಲಿನ ಸ್ಥಳೀಯ ಸಿಖ್ ಧಾರ್ಮಿಕ ಸಮುದಾಯ ಜನರನ್ನು ಕೆರಳಿಸಿದ್ದು, ಈ ಕುರಿತು ತೀವ್ರ ಪ್ರತಿಭಟನೆಗಳು ನಡೆದಾಗ ಈ ವಿಚಾರ ಬೆಳಕಿಗೆ ಬಂದಿದೆ.ಈ ಪ್ರತಿಭಟನೆಗಳಿಂದಾಗಿ ಈ ವಿಚಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ಗಮನಕ್ಕೆ ಬಂದಿದ್ದು, ಈ ಬೆನ್ನಲ್ಲೇ, ಪಂಜಾಬ್‌ನ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ರಮೇಶ್ ಸಿಂಗ್ ಅರೋರಾ ಅವರು ಬುಧವಾರ(ಜು.1ರಂದು) ಜಿಲ್ಲಾ ಅಧಿಕಾರಿಗಳು ಮತ್ತು ಔಕಾಫ್ ಇಲಾಖೆಯ ಪ್ರತಿನಿಧಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಐತಿಹಾಸಿಕ ಗುರುದ್ವಾರದ ಪುನಃಸ್ಥಾಪನೆ ಕಾರ್ಯವು ತಕ್ಷಣ ಪ್ರಾರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಅಲ್ಲದೆ, ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರ ಪೂಜಾ ಸ್ಥಳಗಳನ್ನು ಸಂರಕ್ಷಿಸಲು ಪ್ರಾಂತೀಯ ಸರ್ಕಾರವು ಬದ್ಧವಾಗಿದ್ದು, ಭೂಮಿಯ ಮಾಲೀಕತ್ವ ಮತ್ತು ಕಾನೂನು ಸ್ಥಿತಿಯನ್ನು ತನಿಖೆ ಮಾಡುವಂತೆ ಅವರು ಔಕಾಫ್ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

