Dailyhunt Logo
  • Light mode
    Follow system
    Dark mode
    • Play Story
    • App Story
ಪಾಕಿಸ್ತಾನದಲ್ಲಿ ಕಲ್ಲಿದ್ದಲು ಗಣಿಯಲ್ಲಿ ಸ್ಪೋಟ: ಕನಿಷ್ಠ 32 ಕಾರ್ಮಿಕರ ಸಾವು

ಪಾಕಿಸ್ತಾನದಲ್ಲಿ ಕಲ್ಲಿದ್ದಲು ಗಣಿಯಲ್ಲಿ ಸ್ಪೋಟ: ಕನಿಷ್ಠ 32 ಕಾರ್ಮಿಕರ ಸಾವು

Vijay Karnataka 2 weeks ago

ಸ್ಲಾಮಾಬಾದ್: ಪಾಕಿಸ್ತಾನದ ನೈರುತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕಲ್ಲಿದ್ದಲು ಗಣಿಯೊಂದರಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟ ತೀವ್ರತೆಗೆ ಕನಿಷ್ಠ 32 ಕಾರ್ಮಿಕರು ಬಲಿಯಾಗಿದ್ದಾರೆ. ಕ್ವೆಟ್ಟಾ ಬಳಿಯ ಸೂರಾಂಗ್ ಎಂಬ ಪ್ರದೇಶದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಗುರುವಾರದಂದು ಈ ಭೀಕರ ಸ್ಫೋಟ ಸಂಭವಿಸಿದೆ.

ದುರಂತದಲ್ಲಿ ಬದುಕುಳಿದವರನ್ನು ಪತ್ತೆ ಹಚ್ಚುವ ಕೆಲಸ ಭರದಿಂದ ಸಾಗುತ್ತಿದೆ.


"ಕಲ್ಲಿದ್ದಲು ಗಣಿಯಲ್ಲಿ ಈ ಭೀಕರ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಮೀಥೇನ್ ಅನಿಲ ಶೇಖರಣೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈವರೆಗೆ 29 ಮೃತದೇಹಗಳನ್ನು ಹೊರತೆಗೆಯಲಾಗಿದೆ. ರಕ್ಷಣಾ ಸಿಬ್ಬಂದಿ ಗಣಿಯೊಳಗೆ ಇನ್ನು ಮೂರು ಮೃತದೇಹಗಳನ್ನು ಪತ್ತೆ ಮಾಡಿದ್ದು, ಅವುಗಳನ್ನು ಹೊರತರಲು ಪ್ರಯತ್ನಿಸುತ್ತಿದ್ದಾರೆ" ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಯೊಬ್ಬರು ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.

12 ಗಂಟೆ ಕಳೆದರೂ ಮುಂದುವರಿದ ಕಾರ್ಯಾಚರಣೆ

ದುರಂತ ನಡೆದು 12 ಗಂಟೆ ಕಳೆದರೂ ಕಾರ್ಯಾಚರಣೆ ಮುಂದುವರಿದಿದೆ. ರಕ್ಷಣಾ ಸಿಬ್ಬಂದಿ ಹಾಗೂ ಇತರ ತುರ್ತು ಕಾರ್ಯಾಚರಣೆ ಪಡೆ ಸಿಬ್ಬಂದಿ ಗಣಿಯಲ್ಲಿ ಸಿಲುಕಿಕೊಂಡಿರು ಉಳಿದ ಕಾರ್ಮಿಕರಿಗಾಗಿ ಹುಡುಕಾಟವನ್ನು ಮುಂದುವರಿಸಿದ್ದಾರೆ. ಹೀಗಿದ್ದರೂ ಇತರ ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆಯಿದೆ ಎಂದು ಸ್ಥಳೀಯ ಅಧಿಕಾರಿಗಳು ನೀಡಿರುವ ಮಾಹಿತಿಯನ್ನು ಆಧರಿಸಿ ಮಾಧ್ಯಮಗಳು ವರದಿ ಮಾಡಿವೆ.

ಸ್ಥಳದಲ್ಲಿದ್ದ 36 ಕಾರ್ಮಿಕರು

ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಗಣಿಯೊಳಗೆ 36 ಕಾರ್ಮಿಕರು ಇದ್ದರು ಎಂದು ಸ್ಥಳೀಯ ಅಧಿಕಾರಿ ಮುಹಮ್ಮದ್ ಆತಿಫ್ ತಿಳಿಸಿದ್ದಾರೆ. ಭಾರೀ ಪ್ರಮಾಣದ ಸ್ಫೋಟದಿಂದಾಗಿ ಅಕ್ಕಪಕ್ಕದಲ್ಲಿದ್ದ ಎರಡು ಗಣಿಗಳಿಗೂ ಹಾನಿ ಉಂಟಾಗಿವೆ.

ಪಾಕಿಸ್ತಾನದ ಕಲ್ಲಿದ್ದಲು ಗಣಿ ಉದ್ಯಮದಲ್ಲಿ ಇಂತಹ ಅಪಘಾತಗಳು ಸಾಮಾನ್ಯವಾಗಿದೆ. ಇಲ್ಲಿನ ಅನೇಕ ಗಣಿಗಳಲ್ಲಿ ಸೂಕ್ತ ಗಾಳಿಯಾಡುವ ವ್ಯವಸ್ಥೆ ಇಲ್ಲ ಎಂಬ ಆರೋಪ ಇದೆ. ಅಲ್ಲದೆ, ಅನಿಲ ಪತ್ತೆಹಚ್ಚುವ ವ್ಯವಸ್ಥೆಗಳು ಮತ್ತು ಇತರ ಮೂಲಭೂತ ಸುರಕ್ಷತಾ ಕ್ರಮಗಳ ಕೊರತೆಯಿದೆ ಎಂಬ ಆರೋಪಗಳು ಕೇಳಿಬಂದಿವೆ.

ಸುರಕ್ಷತಾ ಕ್ರಮಗಳ ಕೊರತೆ

ಗಣಿ ಮಾಲೀಕರು ಸುರಕ್ಷತಾ ನಿಯಮಗಳನ್ನು ಜಾರಿಗೆ ತರಲು ಅಥವಾ ಸೂಕ್ತ ರಕ್ಷಣಾತ್ಮಕ ಉಪಕರಣಗಳನ್ನು ಒದಗಿಸಲು ವಿಫಲರಾಗಿದ್ದಾರೆ ಎಂಬ ಆರೋಪವನ್ನು ಕಾರ್ಮಿಕರು ಮಾಡುತ್ತಿದ್ದಾರೆ. ಕಾರ್ಮಿಕ ಸಂಘಟನೆಗಳು ಈ ಕುರಿತಾಗಿ ಬೇಡಿಕೆ ಇಟ್ಟರೂ ಅದು ಜಾರಿಗೆ ಬರುತ್ತಿಲ್ಲ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸುತ್ತಿವೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka