Dailyhunt Logo
  • Light mode
    Follow system
    Dark mode
    • Play Story
    • App Story
ಪೂತನಿಗೆ ಶ್ರೀಕೃಷ್ಣ ತಾಯಿಯ ಸ್ಥಾನ ನೀಡಿದ ಕಾರಣವೇನು.?

ಪೂತನಿಗೆ ಶ್ರೀಕೃಷ್ಣ ತಾಯಿಯ ಸ್ಥಾನ ನೀಡಿದ ಕಾರಣವೇನು.?

Vijay Karnataka 3 weeks ago

ಬ್ರಹ್ಮಾಂಡದ ರಕ್ಷಕನಾದ ವಿಷ್ಣು ದೇವನು ದ್ವಾಪರ ಯುಗದಲ್ಲಿ ಶ್ರೀಕೃಷ್ಣನಾಗಿ ಅವತಾರವನ್ನು ತೆಗೆದುಕೊಂಡಿದ್ದನು. ವಿಷ್ಣು ತನ್ನ ಪ್ರತಿಯೊಂದು ಅವತಾರದಲ್ಲಿ ಭೂಮಿಯ ಮೇಲೆ ಧರ್ಮದ ಪುನಃ ಸ್ಥಾಪನೆಗಾಗಿ ದುಷ್ಟರನ್ನು, ರಾಕ್ಷಸರನ್ನು ಸಂಹಾರ ಮಾಡಿದ್ದನು. ಶ್ರೀಕೃಷ್ಣನಾಗಿ ಅವತರಿಸಿದಾಗಲು ಅವನು ಈ ಕಾರ್ಯವನ್ನೇ ಕೈಗೆತ್ತಿಕೊಂಡನು.

ಭೂಮಿಯ ಮೇಲೆ ಸಮತೋಲನವನ್ನು ತರುವುದಕ್ಕಾಗಿ, ಧರ್ಮವನ್ನು ರಕ್ಷಿಸುವುದಕ್ಕಾಗಿ ವಿಷ್ಣು ಶ್ರೀಕೃಷ್ಣನ ರೂಪದಲ್ಲಿ ತಾಯಿ ದೇವಕಿಯ ಎಂಟನೇ ಮಗನಾಗಿ ಜನಿಸಿದನು. ಶ್ರೀಕೃಷ್ಣ ಈ ಅವತಾರದಲ್ಲಿ ಪೂತನಿಯೊಂದಿಗೆ ಹೇಗೆ ಹೋರಾಡಿದ ಎಂಬುದೇ ಈ ಕಥೆಯಾಗಿದೆ.

1. ಶ್ರೀಕೃಷ್ಣನ ಜನನ:
ತಾಯಿ ದೇವಕಿ ಮತ್ತು ವಾಸುದೇವರ ವಿವಾಹದ ಸಮಯದಲ್ಲಿ ಒಂದು ಭವಿಷ್ಯವಾಣಿಯು ಅವರ ವೈವಾಹಿಕ ಜೀವನವನ್ನು ಕತ್ತಲೆಗೆ ತಳ್ಳಿತು. ಭವಿಷ್ಯವಾಣಿಯನ್ನು ಕೇಳಿದ ನಂತರ, ದೇವಿಕಿಯ ಸ್ವಂತ ಸಹೋದರನೇ ತನ್ನ ಸಹೋದರಿಯ ಮೇಲೆ ದಬ್ಬಾಳಿಕೆಯನ್ನು ಮಾಡಲು ಪ್ರಾರಂಭಿಸುತ್ತಾನೆ. ದೇವಕಿ ಮತ್ತು ಆಕೆಯ ಪತಿ ವಾಸುದೇವನನ್ನು ಸೆರೆಮನೆಗೆ ತಳ್ಳುತ್ತಾನೆ. ಭವಿಷ್ಯವಾಣಿಯ ಪ್ರಕಾರ, ವಾಸುದೇವ ಮತ್ತು ದೇವಕಿಯ ಮಗನಿಂದಲೇ ಸೋದರಮಾವನ ಅಂದರೆ ಕಂಸನ ಮರಣ ಎಂಬುದಾಗಿತ್ತು. ಈ ಕಾರಣಕ್ಕಾಗಿ ಅವನು ಅವರಿಬ್ಬರನ್ನು ಸೆರೆಗೆ ತಳ್ಳುತ್ತಾನೆ. ಕಂಸನ ಸೆರೆಯಲ್ಲಿ ದೇವಕಿ ಮಗುವಿಗೆ ಜನ್ಮ ನೀಡಿದಾಗೆಲ್ಲಾ ಆ ಪ್ರತಿಯೊಂದು ಮಗುವನ್ನು ಕಂಸ ಹಾಗೂ ಅವನ ಕಾವಲುಗಾರರು ಕೊಲ್ಲುತ್ತಿದ್ದರು. ಆದರೆ, ಶ್ರೀಕೃಷ್ಣ ಜನಿಸಿದಾಗ ಎಲ್ಲವೂ ಮಾಯೆಯಂತಾಯಿತು.


ಶ್ರೀಕೃಷ್ಣನ ಜನನದ ಸಮಯ ಸಮೀಪಿಸಿದಾಗ, ಎಲ್ಲಾ ಕಾವಲುಗಾರರು ನಿದ್ರೆಗೆ ಜಾರಿದರು, ಮತ್ತು ವಾಸುದೇವನು ಮಗುವನ್ನು ಗೋಕುಲದಲ್ಲಿ ಯಾರಿಗೂ ತಿಳಿಯದಂತೆ ಬಿಟ್ಟು ಬಂದನು. ಆದರೆ, ಈ ವಿಚಾರ ಒಂದು ದಿನ ಕಂಸನಿಗೆ ತಿಳಿಯುತ್ತದೆ. ಕಂಸನು ಗೋಕುಲದಲ್ಲಿರುವ ಎಲ್ಲಾ ನವಜಾತ ಶಿಶುವನ್ನು ಕೊಲ್ಲಲು ಮುಂದಾಗುತ್ತಾನೆ. ಮಗುವನ್ನು ಕೊಲ್ಲಲು ಪೂತನಿ ಎಂಬ ರಾಕ್ಷಸಿಯನ್ನು ಕಳುಹಿಸಿದನು. ಪೂತನಿ ಗೋಕುಲದಲ್ಲಿ ಎಲ್ಲಾ ನವಜಾತ ಶಿಶುಗಳನ್ನು ಒಂದೊಂದಾಗಿ ಕೊಲ್ಲಲು ಪ್ರಾರಂಭಿಸಿದನು. ನಂತರ, ಅವಳು ಶ್ರೀಕೃಷ್ಣನನ್ನು ಕೊಲ್ಲಲು ಹೋದಳು, ಆದರೆ ಶ್ರೀಕೃಷ್ಣ ಅವಳನ್ನು ಕೊನೆಗೊಳಿಸಿದನು.

2. ಕೃಷ್ಣನಿಗೆ ಹಾಲುಣಿಸಲು ಮುಂದಾದ ಪೂತನಿ:
ಪುರಾಣದ ಪ್ರಕಾರ, ಗೋಕುಲವನ್ನು ತಲುಪಿದ ನಂತರ, ರಾಕ್ಷಸಿ ಪೂತನಿಯು ಸುಂದರವಾದ ಮಹಿಳೆಯ ರೂಪವನ್ನು ಪಡೆದುಕೊಂಡಳು. ಎಲ್ಲಾ ಗ್ರಾಮಸ್ಥರು ಅವಳ ಸೌಂದರ್ಯಕ್ಕೆ ಆಕರ್ಷಿತರಾದರು. ನಂದನ ಮನೆಗೆ ಬಂದ ಪೂತನಿ ಪುಟ್ಟ ಕೃಷ್ಣ ಮಲಗಿರುವುದನ್ನು ನೋಡಿದಳು. ನಂತರ ಪೂತನಿ ಅವನನ್ನು ತನ್ನ ಮಡಿಲಲ್ಲಿ ಎತ್ತಿಕೊಂಡಳು. ಲಕ್ಷ್ಮಿ ದೇವಿಯೇ ತನ್ನ ಮಗನಿಗೆ ಹಾಲುಣಿಸಲು ಸ್ವರ್ಗದಿಂದ ಬಂದಿದ್ದಾಳೆಂದು ಯಶೋದೆ ಭಾವಿಸಿದಳು, ಆದರೆ ಪೂತನಿ ತನ್ನ ಸ್ತನಗಳಿಗೆ ಕಾಲಕೂಟ ಎಂಬ ವಿಷವನ್ನು ಹಚ್ಚಿದ್ದಳು ಎಂಬುದನ್ನು ಯಾರೂ ಊಹಿಸಲಿಲ್ಲ. ಕೃಷ್ಣನನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡ ನಂತರ, ಅವಳು ಅವನಿಗೆ ಹಾಲುಣಿಸಲು ಪ್ರಾರಂಭಿಸಿದಳು.


3. ಪೂತನಿ ಕೃಷ್ಣನಿಗೆ ಕೆಡುಕನ್ನು ಬಯಸಿದರೂ ಕೃಷ್ಣ ಆಕೆಗೆ ಮೋಕ್ಷವನ್ನು ನೀಡಿದನು:
ಕೃಷ್ಣ ಹಾಲು ಕುಡಿದ ತಕ್ಷಣ ಸಾಯುತ್ತಾನೆ ಎಂದು ಪೂತನಿ ಅಂದುಕೊಂಡಿದ್ದಳು. ಆದರೆ ಪುಟ್ಟ ಕೃಷ್ಣ ತನ್ನ ಹಾಲಿನೊಂದಿಗೆ ಪೂತನಿಯ ಜೀವ ಶಕ್ತಿಯನ್ನು ಹೀರಿಕೊಂಡನು. ಹೀಗೆ, ಕೆಲವೇ ಕ್ಷಣಗಳಲ್ಲಿ ಭಗವಂತ ಪೂತನಿಯ ಎಲ್ಲಾ ಜೀವ ಶಕ್ತಿಯನ್ನು ಹೀರಿದನು. ತಕ್ಷಣವೇ ಪೂತನಿ ನೆಲಕ್ಕೆ ಬಿದ್ದು ತನ್ನ ತೋಳುಗಳನ್ನು ಚಾಚಿ ಕಣ್ಣೀರಿಟ್ಟಳು. ಅವಳ ಬೃಹತ್ ದೇಹವು 12 ಕಿಲೋಮೀಟರ್‌ಗಳವರೆಗೆ ವಿಸ್ತರಿಸಿತು. ಯಶೋದೆ ಮತ್ತು ಗೋಪಿಕೆಯರು ಪುಟ್ಟ ಕೃಷ್ಣನನ್ನು ಎತ್ತಿಕೊಂಡರು. ಪೂತನಿ ಕೃಷ್ಣನಿಗೆ ಹಾಲುಣಿಸಲು ಬಂದಿರಲಿಲ್ಲ. ಬದಲಾಗಿ ಆತನನ್ನು ಕೊಲ್ಲಲು ಬಂದಿದ್ದಳು. ಕೃಷ್ಣಿನಿಗೆ ಹಾಲುಣಿಸುವುದು ಕೇವಲ ಒಂದು ನೆಪವಷ್ಟೇ ಆಗಿತ್ತು. ಇದರಿಂದಾಗಿ ಪೂತನಿ ಶುದ್ಧಳಾದಳು. ಶ್ರೀಕೃಷ್ಣನಿಗೆ ಪೂತನಿಗೆ ಹಾಲುಣಿಸಿದ್ದರಿಂದ ಆಕೆಯು ಮೋಕ್ಷವನ್ನು ಪಡೆದಳು. ಆಕೆಯ ಎದೆಯಲ್ಲಿದ್ದ ಹಾಲು ಆತನಿಗೆ ವಿಷದ ಪ್ರಭಾವವನ್ನು ಬೀರಲಿಲ್ಲ. ಇದಲ್ಲದೆ, ಅವಳನ್ನು ತನ್ನ ವಾಸಸ್ಥಾನಕ್ಕೆ ಹಿಂದಿರುಗಿಸುವ ಮೂಲಕ, ಅವನು ಅವಳಿಗೆ ತಾಯಿಯ ಸ್ಥಾನಮಾನವನ್ನು ನೀಡಿದನು.

ಕಂಸನ ಆದೇಶದ ಮೇರೆಗೆ ಪೂತನಿ ಶ್ರೀಕೃಷ್ಣನನ್ನು ಕೊಲ್ಲಲು ಮುಂದಾಗುತ್ತಾಳೆ. ಆಕೆಯ ವಿಷವನ್ನು ಹೊಂದಿದ್ದ ಎದೆ ಹಾಲು ಕೂಡ ಕೃಷ್ಣನಿಗೆ ಅಮೃತದ ಪ್ರಯೋಜನವನ್ನು ನೀಡಿತು. ಆದ್ದರಿಂದ ಕೃಷ್ಣನು ಪೂತನಿಗೆ ಮೋಕ್ಷವನ್ನು ಕರುಣಿಸಿದನು.

Dailyhunt
Disclaimer: This content has not been generated, created or edited by Dailyhunt. Publisher: Vijay Karnataka