Dailyhunt
ಪ್ಯಾಟ್ ಕಮಿನ್ಸ್ ಬೆಂಬಿಡದ ಬೆನ್ನುನೋವು: ಆಸೀಸ್ ಗೆ ತೆರಳಿದ ಆಲ್ರೌಂಡರ್ ಈ ಸೀಸನ್ ಗೆ ಮತ್ತೆ ಮರಳ್ತಾರಾ?

ಪ್ಯಾಟ್ ಕಮಿನ್ಸ್ ಬೆಂಬಿಡದ ಬೆನ್ನುನೋವು: ಆಸೀಸ್ ಗೆ ತೆರಳಿದ ಆಲ್ರೌಂಡರ್ ಈ ಸೀಸನ್ ಗೆ ಮತ್ತೆ ಮರಳ್ತಾರಾ?

Vijay Karnataka 1 week ago

ನ್‌ರೈಸರ್ಸ್ ಹೈದರಾಬಾದ್ (SRH) ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ತಮ್ಮ ಬೆನ್ನಿನ ಗಾಯಕ್ಕಾಗಿ ಅಂತಿಮ ಸ್ಕ್ಯಾನ್ ಪಡೆಯಲು ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ಸ್ಕ್ಯಾನ್ ಬಳಿಕ ಕ್ರಿಕೆಟ್ ಆಸ್ಟ್ರೇಲಿಯಾ ಅನುಮತಿಸಿದಲ್ಲಿ ಮಾತ್ರ ಭಾರತಕ್ಕೆ ಹಿಂದುರುಗಿ ಐಪಿಎಲ್ ಆಡಲಿದ್ದಾರೆ.

ಆದರೆ ಆ ಬಗ್ಗೆ ಯಾವುದೇ ಖಚಿತತೆಯಿಲ್ಲ. ಹೀಗಾಗಿ ಹಂಗಾಮಿ ನಾಯಕರಾಗಿರುವ ಇಶಾನ್ ಕಿಶನ್ ಅವರೇ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

2025ರ ಆರಂಭದಲ್ಲಿ ಮುಗಿದ ಬಾರ್ಡರ್ ಗವಾಸ್ಕರ್ ಟ್ರೋಫಿ(BGT) ಟೂರ್ನಿಯ ಬಳಿಕ ಆಸೀಸ್ ತಂಡದ ನಾಯಕರಾಗಿರುವ ಪ್ಯಾಟ್ ಕಮಿನ್ಸ್ ಗೆ ಬೆನ್ನುನೋವು ಕಾಣಿಸಿಕೊಂಡಿತ್ತು. ಆ ಬಳಿಕ ಅವರಿಗೆ ನಿರಂತರವಾಗಿ ಕ್ರಿಕೆಟ್ ಆಡಲು ಸಾಧ್ಯವಾಗುತ್ತಿಲ್ಲ. 2025ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ, 2026ರ ಐಸಿಸಿ ವಿಶ್ವ ಟಿ20 ವಿಶ್ವಕಪ್ ಸೇರಿದಂತೆ ಅವರು ಹಲವು ಮಹತ್ವದ ಟೂರ್ನಿಗಳಲ್ಲಿ ಕಾಣಿಸಿಕೊಂಡಿಲ್ಲ. ಆಯಶಸ್ ಸರಣಿಯ ಒಂದು ಪಂದ್ಯದಲ್ಲಿ ಮಾತ್ರ ಅವರಿಗೆ ಆಡಲು ಸಾಧ್ಯವಾಗಿತ್ತು.

ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧಾರದ ಬಗ್ಗೆ ಕುತೂಹಲ

ಇದೀಗ ಐಪಿಎಲ್ 2026 ಆಡುವ ಸಲುವಾಗಿ ಅವರು SRH ಪರ ಆಡಲು ಭಾರತಕ್ಕೆ ಆಗಮಿಸಿದ್ದರು. ತಾಲೀಮು ಅವಧಿಗಳಲ್ಲಿ ಬೌಲಿಂಗ್ ಸಹ ಮಾಡಿದ್ದರು. ಆದರೆ ಕಣಕ್ಕಿಳಿಯಲು ಮಾತ್ರ ಸಾಧ್ಯ ಆಗಿರಲಿಲ್ಲ. ಇದೀಗ ಆಸೀಸ್ ಗೆ ಮರಳಿದ್ದು ಕ್ರಿಕೆಟ್ ಆಸ್ಟ್ರೇಲಿಯಾ ಯಾವ ತೀರ್ಮಾನಕ್ಕೆ ಬರಲಿದೆ ಎಂಬ ಬಗ್ಗೆ ಕ್ರಿಕೆಟ್ ಪ್ರೇಮಿಗಳಿಗೆ ಕುತೂಹಲ ಇದೆ. ಈ ಬಗ್ಗೆ ಐಪಿಎಲ್ ಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಪ್ಯಾಟ್ ಕಮಿನ್ಸ್, "ನಾನು ಇನ್ನೂ ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿದ್ದೇನೆ, ನೆಟ್ಸ್‌ನಲ್ಲಿ ಬೌಲಿಂಗ್‌ಗೆ ಮರಳಿದ್ದೇನೆ. ಐಪಿಎಲ್ ನ ಆರಂಭದ ಪಂದ್ಯಗಳಲ್ಲಿ ಆಡಲು ಸಾಧ್ಯವಾಗದು. ಆದರೆ ಬೇಗನೇ ಕಣಕ್ಕಿಳಿವೆ'' ಎಂದಿದ್ದರು.

ಐಪಿಎಲ್ ನಲ್ಲಿ ಒಟ್ಟು 3 ತಂಡಗಳನ್ನು ಪ್ರತಿನಿಧಿಸಿರುವ ಪ್ಯಾಟ್ ಕಮಿನ್ಸ್ ಅವರು 2024ರ ಸೀಸನ್ ನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಒಟ್ಟು 72 ಪಂದ್ಯಗಳನ್ನು ಆಡಿರುವ ಬೌಲಿಂಗ್ ಆಲ್ರೌಂಡರ್ 20.40 ಸರಾಸರಿಯಲ್ಲಿ 612 ರನ್ ಮತ್ತು 79 ವಿಕೆಟ್ ಗಳಿಸಿದ್ದಾರೆ.

ಇಶಾನ್ ಗೆ ಒಂದು ಸೋಲು, ಒಂದು ಗೆಲುವು

ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ, ಇಶಾನ್ ಕಿಶನ್ ಅವರಿಗೆ ಸನ್ ರೈಸರ್ಸ್ ತಂಡದ ನಾಯಕತ್ವದ ಜವಾಬ್ದಾರಿಗಳನ್ನು ವಹಿಸಲಾಗಿದ್ದು ಪ್ಯಾಟ್ ಕಮ್ಮಿನ್ಸ್ ಮರಳುವವರೆ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಈ ಸೀಸನ್ ನಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದು ಒಂದನ್ನು ಸೋತಿದೆ. IPL 2026 ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 6 ವಿಕೆಟ್ ಗಳ ಸೋಲನುಭವಿಸಿತ್ತು. ಬಳಿಕ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 65 ರನ್‌ಗಳ ಗೆಲುವು ಸಾಧಿಸಿತ್ತು.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka