Dailyhunt
ರಾಮನು ಹನುಮಂತನನ್ನು ಸೀತೆಯನ್ನು ಭೇಟಿ ಮಾಡಲು ಕಳುಹಿಸಿದ ಕಾರಣ.!

ರಾಮನು ಹನುಮಂತನನ್ನು ಸೀತೆಯನ್ನು ಭೇಟಿ ಮಾಡಲು ಕಳುಹಿಸಿದ ಕಾರಣ.!

Vijay Karnataka 1 week ago

ನುಮಂತನು ಅಪಾರ ಶಕ್ತಿಯನ್ನು, ಬುದ್ಧಿವಂತಿಕೆಯನ್ನು ಹೊಂದಿದ್ದ ವೀರ ಯೋಧನಾಗಿದ್ದನು. ಹನುಮಂತನಿಗೆ ರಾಮನೇ ಎಲ್ಲವೂ ಆಗಿದ್ದ. ರಾಮನ ಸೇವೆಯಲ್ಲೇ ತನ್ನ ಸಂಪೂರ್ಣ ಜೀವನವನ್ನು ಕಳೆದವನೀತ. ರಾಮನ ಬಳಿ ಶಕ್ತಿಯಿದ್ದರೂ, ಬುದ್ಧಿವಂತಿಕೆಯಿದ್ದರೂ ಅವನು ಹನುಮಂತನನ್ನೇ ಮೊದಲು ಸೀತೆಯನ್ನು ಭೇಟಿಯಾಗಲು ಕಳುಹಿಸುತ್ತಾನೆ.

ಯಾಕೆ ಗೊತ್ತಾ.? ಸೀತೆಯ ಭೇಟಿಗೆ ಹನುಮಂತನೇ ಯಾಕೆ ಮುಖ್ಯವಾಗಿದ್ದ.?


ರಾಮನ ಪತ್ನಿ ಸೀತೆಯನ್ನು ಅಪಹರಿಸಿಕೊಂದು ಹೋದಂತಹ ಸಂದರ್ಭದಲ್ಲಿ ರಾಮನಿಗೆ ಸೀತೆಯನ್ನು ಹುಡುಕಲು ಸಹಾಯಕನಾಗಿ ಅವನೊಂದಿಗೆ ನಿಂತಿದ್ದು, ಆತನ ಭಂಟನೆನಿಸಿಕೊಂಡಿದ್ದ ಹನುಮಂತ. ರಾಮನಿಗಿಂತಲೂ ಮೊದಲು ಸೀತೆಯನ್ನು ಹುಡುಕಿದ್ದು, ಸೀತೆ ಎಲ್ಲಿದ್ದಾಳೆಂದು ರಾಮನಿಗೆ ತಿಳಿಸಿದ್ದು ಹನುಮಂತ. ಈ ಘಟನೆಯಿಂದ ನಾವು ಹನುಮಂತ ಎಷ್ಟು ಬುದ್ಧಿವಂತ, ಶಕ್ತಿವಂತ ಹಾಗೂ ಧೈರ್ಯವಂತ ಎಂಬುದನ್ನು ತಿಳಿದುಕೊಳ್ಳಬಹುದು. ರಾಮಾಯಣದ ಸುಂದರ ಕಾಂಡದಲ್ಲಿ ಹನುಮಂತನು ಅಂತಿಮವಾಗಿ ಸೀತೆಯನ್ನು ಹುಡುಕಿ ಆಕೆಯ ಮುಂದೆ ಹೋಗಿ ನಿಂತುಕೊಂಡು ತಾನು ಯಾರೆಂಬುದನ್ನು ಸೀತೆಗೆ ಪರಿಚಯ ಮಾಡಿಕೊಟ್ಟ ಕ್ಷಣ ಅತ್ಯಂತ ಭಾವನಾತ್ಮಕವಾಗಿದೆ.ಹನುಮಂತನಿಗೆ ಉತ್ತಮವಾದ ಮಾತನಾಡುವ ಕಲೆಯಿತ್ತು

ಲಂಕಾವನ್ನು ಹುಡುಕಾಡುವುದಕ್ಕೂ ಮುನ್ನ ಅಥವಾ ಹನುಮಂತನು ಸೀತೆಯನ್ನು ಹುಡುಕಿಕೊಂಡು ಹೋಗುವ ಕಾರ್ಯಾಚರಣೆಯಲ್ಲಿ ರಾಮ ಮತ್ತು ಹನುಮಂತರು ಜೊತೆಯಾಗಿದ್ದರು. ಈ ಸಮಯದಲ್ಲಿ ರಾಮನು ಹನುಮಂತನಲ್ಲಿ ಅನೇಕ ಅಸಾಧಾರಣ ಗುಣಗಳನ್ನು ಕಂಡಿದ್ದನು. ಕಿಷ್ಕಿಂಧ ಕಾಂಡದಲ್ಲಿ, ಹನುಮಂತನು ಮೊದಲ ಬಾರಿಗೆ ಮಾತನಾಡುವುದನ್ನು ಕೇಳಿದ ನಂತರ, ರಾಮನು ಭಾಷೆ, ವ್ಯಾಕರಣ ಮತ್ತು ಅಭಿವ್ಯಕ್ತಿಯ ಮೇಲಿನ ಅವನ ಪಾಂಡಿತ್ಯವನ್ನು ಹೊಗಳುತ್ತಾನೆ. ವೇದಗಳ ಆಳವಾದ ಜ್ಞಾನವಿಲ್ಲದೆ ಅಂತಹ ಮಾತು ಸಾಧ್ಯವಿಲ್ಲ ಎಂದು ರಾಮ ಹೇಳುತ್ತಾನೆ. ಸೀತೆಯನ್ನು ಸಮಾಧಾನಗೊಳಿಸಲು ಹಾಗೂ ಆಕೆಗೆ ಧೈರ್ಯತುಂಬಲು ಸರಿಯಾದ ರೀತಿಯಲ್ಲಿ, ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಸಂಯಮದಿಂದ ಮಾತನಾಡಬಲ್ಲ ಒಬ್ಬ ವ್ಯಕ್ತಿಯನ್ನು ರಾಮನು ಹುಡುಕುತ್ತಿರುವ ಸಂದರ್ಭದಲ್ಲಿ ಆತನಿಗೆ ಸಿಕ್ಕಿದ್ದೇ ಹನುಮಂತ.

PC: pexel


ಸೀತೆಯನ್ನು ಎಚ್ಚರಿಕೆಯಿಂದ ಭೇಟಿ ಮಾಡುವುದು ಅವಶ್ಯಕ

ಹನುಮಂತನು ರಾವಣನ ಅಶೋಕ ವನದಲ್ಲಿ ಸೀತೆಯನ್ನು ಭೇಟಿ ಮಾಡುವುದಕ್ಕೂ ಮುನ್ನ ಅವಳು ರಾವಣನ ರಾಕ್ಷಸರಿಂದ ಸುತ್ತುವರಿದಿದ್ದಳು. ಇದರಿಂದಾಗಿ ಸೀತೆ ಹೆದರಿಕೆಯಲ್ಲಿ ಹಾಗೂ ದುಃಖದಿಂದ ಸಮಯವನ್ನು ಕಳೆಯುತ್ತಿದ್ದಳು. ಇದನ್ನೆಲ್ಲಾ ನೋಡಿದ ಹನುಮಂತನಿಗೆ ಚಿಂತೆ ಕಾಡತೊಡಗುತ್ತದೆ. ಆ ಸಮಯದಲ್ಲಿ ಹನುಮಂತನಿಗೆ ನಾನು ಈಗ ಸೀತೆಯನ್ನು ಭೇಟಿ ಮಾಡಿ ಆಕೆಗೆ ಸಮಾಧಾನವನ್ನು ಮಾಡದೇ ಹೋದರೆ ಅದು ನಾನು ಮಾಡಿದ ದೊಡ್ಡ ತಪ್ಪಾಗುತ್ತದೆ. ಸೀತೆ ರಾಮನ ಮೇಲೆ ಭರವಸೆಯನ್ನು ಕಳೆದುಕೊಂಡು ಪ್ರಾಣಾಪಾಯ ತಂದುಕೊಳ್ಳಬಹುದು ಎಂದು ಹನುಮಂತನು ಚಿಂತಿಸಲು ಪ್ರಾರಂಭಿಸುತ್ತಾನೆ ಎಂದು ಸುಂದರಕಾಂಡದಲ್ಲಿ ವಿವರಿಸಲಾಗಿದೆ. ಹಾಗಾಗಿ, ಸೀತೆಯನ್ನು ಅತ್ಯಂತ ಎಚ್ಚರಿಕೆಯಿಂದ, ಕಾಳಜಿಯಿಂದ ಭೇಟಿ ಮಾಡುವುದು ಅವಶ್ಯಕವಾಗಿತ್ತು. ಆದ್ದರಿಂದ ಹನುಮಂತನನ್ನು ಮೊದಲು ಸೀತೆಯ ಭೇಟಿಗೆ ಕಳುಹಿಸಲಾಯಿತು.PC: pexel


ರಹಸ್ಯ ಕಾರ್ಯಚರಣೆಗೆ ಹನುಮಂತನೇ ಸೂಕ್ತ ವ್ಯಕ್ತಿಯಾಗಿದ್ದ

ಸೀತೆಯನ್ನು ಹುಡುಕಲು ರಹಸ್ಯ ಕಾರ್ಯಚರಣೆಯ ಅಗತ್ಯವಿತ್ತು. ರಹಸ್ಯವಾಗಿ ಸೀತೆಯನ್ನು ಹುಡುಕುವುದು ಮುಖ್ಯವಾಗಿತ್ತು. ಸೀತೆಯನ್ನು ಹುಡುಕುವಂತಹ ಕಾರ್ಯಾಚರಣೆಯು ಬಹು ಹಂತಗಳನ್ನು ಹೊಂದಿತ್ತು. ಇದು ಸೀತೆಯನ್ನು ಪತ್ತೆಹಚ್ಚುವ ಬಗ್ಗೆ ಮಾತ್ರವಲ್ಲ. ಇದು ಗುಪ್ತಚರ ಸಂಗ್ರಹಣೆಯ ಬಗ್ಗೆಯೂ ಆಗಿತ್ತು. ಹನುಮನು ಗಮನಿಸದೆ ಲಂಕೆಯನ್ನು ಪ್ರವೇಶಿಸಬೇಕಾಗಿತ್ತು, ಸೀತೆಯ ಉಪಸ್ಥಿತಿಯನ್ನು ಖಚಿತಪಡಿಸಬೇಕಾಗಿತ್ತು, ಶತ್ರುವನ್ನು ನಿರ್ಣಯಿಸಬೇಕಾಗಿತ್ತು ಮತ್ತು ನಿಖರವಾದ ಮಾಹಿತಿಯೊಂದಿಗೆ ಹಿಂತಿರುಗಬೇಕಾಗಿತ್ತು. ರಾಮಾಯಣವು ಹನುಮಂತನನ್ನು ಸಂದಿಗ್ಧ ಪರಿಸ್ಥಿತಿಯಲ್ಲೂ ಸರಿಯಾಗಿ ಯೋಚಿಸಬಲ್ಲ ಹಾಗೂ ಬದಲಾಗುತ್ತಿರುವ ಸಂದರ್ಭಗಳಿಗೆ ಹೊಂದಿಕೊಳ್ಳಬಲ್ಲ ವ್ಯಕ್ತಿಯಾಗಿ ಚಿತ್ರಿಸಿತ್ತು. ಈ ಕಾರ್ಯಕ್ಕೆ ಧೈರ್ಯದ ಜೊತೆಗೆ ರಹಸ್ಯ ಮತ್ತು ತೀರ್ಪು ಅಗತ್ಯವಿರುವುದರಿಂದ ರಾಮನು ಹನುಮಂತನನ್ನು ಮೊದಲು ಕಳುಹಿಸಿದನು.PC: pexel


ಹನುಮಂತನು ಸುಲಭವಾಗಿ ವಿಶ್ವಾಸವನ್ನು ಗಳಿಸುತ್ತಾನೆ ಎಂಬುದು ರಾಮನಿಗೆ ತಿಳಿದಿತ್ತು

ರಾಮನ ದೃಷ್ಟಿಯಲ್ಲಿ ಹನುಮಂತನು ಸೀತೆಯ ವಿಶ್ವಾಸವನ್ನು ಸುಲಭವಾಗಿ ಗಳಿಸುತ್ತಾನೆ ಎಂಬುದು ತಿಳಿದಿತ್ತು. ಅದರಂತೆಯೇ ಹನುಮಂತನು ಸೀತೆಯನ್ನು ಭೇಟಿಯಾಗಲು ಆತುರಪಡುವುದಿಲ್ಲ. ಅವನು ಮೊದಲು ರಾಮನ ಬಗ್ಗೆ ಮೃದುವಾಗಿ ಮಾತನಾಡುತ್ತಾನೆ, ಇದರಿಂದಾಗಿ ಸೀತೆಯು ರಾಮನನ್ನು ನಂಬಲು ಪ್ರಾರಂಭಿಸುತ್ತಾಳೆ. ನಂತರ, ಅವನು ರಾಮನ ಉಂಗುರವನ್ನು ಸೀತೆಗೆ ತೋರಿಸಿ ನಾನು ನಿಮಗೆ ರಾಮನ ಕಡೆಯಿಂದಲೇ ನಿಮ್ಮನ್ನು ನೋಡಲು ಬಂದಿದ್ದೇನೆ ಎಂಬುದನ್ನು ಕಾತರಿ ಪಡಿಸುವುದಕ್ಕಾಗಿ ಇದನ್ನು ತಂದಿದ್ದೇನೆ ಎಂದು ಹೇಳುತ್ತಾನೆ. ಸೀತೆಯು ರಾಮನು ಉಂಗುರವನ್ನು ನೋಡಿ ಸಂತೋಷಪಡುತ್ತಾಳೆ. ನನ್ನ ಗಂಡ ನನ್ನೊಂದಿಗೆ ಇದ್ದಾರೆ ಎಂದು ದೃಢವಾದ ಭರವಸೆಯನ್ನು ಹೊಂದುತ್ತಾಳೆ. ಹನುಮಂತನು ವಿಶ್ವಾಸಾರ್ಹ ರೀತಿಯಲ್ಲಿ ಸುಲಭವಾಗಿ ಸೀತೆಯ ಭರವಸೆಯನ್ನು ಗಳಿಸುತ್ತಾನೆ. ಸೀತೆಗೆ ಪುರಾವೆ, ಭರವಸೆ ಮತ್ತು ಭಾವನಾತ್ಮಕ ಸುರಕ್ಷತೆಯ ಅಗತ್ಯವಿದೆ ಎಂದು ರಾಮನಿಗೆ ತಿಳಿದಿದ್ದರಿಂದ ರಾಮನು ಹನುಮಂತನನ್ನು ಮೊದಲು ಸೀತೆಯ ಬಳಿಗೆ ಕಳುಹಿಸಿದನು.PC: unsplash


ರಾಮನ ಭಾವನೆಗಳನ್ನು ಸೀತೆಗೆ ತಲುಪಿಸುವ ಕೆಲಸ ಹನುಮಂತನಿಂದ ಮಾತ್ರ ಸಾಧ್ಯವಾಗಿತ್ತು

ಹನುಮಂತನು ಆದೇಶದ ಮೇಲೆ ಕೆಲಸ ಮಾಡುತ್ತಿರಲಿಲ್ಲ. ಬದಲಾಗಿ ಭಕ್ತಿಯಿಂದ ಕೆಲಸ ಮಾಡುತ್ತಿದ್ದನು. ಒಬ್ಬ ಸಂದೇಶವಾಹಕನು ರಾಮನ ಮಾತುಗಳನ್ನು ಸೀತೆಗೆ ತಲುಪಿಸಬಲ್ಲನು. ಆದರೆ, ರಾಮನ ಭಾವನೆಯನ್ನು ಕೂಡ ಸೀತೆಗೆ ತಲುಪಿಸುವಂತಹ ಶಕ್ತಿ ಹನುಮಂತನಿಗೆ ಮಾತ್ರ ಇತ್ತು. ಸುಂದರ ಕಾಂಡದಲ್ಲಿ ಹೇಳಿರುವ ಪ್ರಕಾರ, ಹನುಮಂತನು ಸೀತೆಯನ್ನು ಭೇಟಿ ನೀಡಿದಾಗ ಅವನು ಸೀತೆಯ ಬಳಿ ಮಾತೆ.. ಪ್ರಭು ರಾಮನು ನಿಮಗಾಗಿ ಕಾಡು ಮೇಡುಗಳಲ್ಲಿ ಹುಡುಕಾಡುತ್ತಿದ್ದಾರೆ. ನಿಮ್ಮನ್ನು ನೆನೆದು ನಿರಂತರವಾಗಿ ದುಃಖಿಸುತ್ತಿರುತ್ತಾರೆ ಎಂದು ಹೇಳುತ್ತಾನೆ. ಇದು ಕೇವಲ ಸಂದೇಶವಾಗಿರಲಿಲ್ಲ, ಸೀತೆ ಮತ್ತು ರಾಮನ ನಡುವಿನ ಭಾವನಾತ್ಮಕ ಸಂದೇಶವಾಗಿತ್ತು. ರಾಮನು ಸೀತೆಯನ್ನು ಹುಡುಕುತ್ತಿದ್ದಾನೆಂದು ಮಾತ್ರವಲ್ಲ, ಅವನು ಅವಳನ್ನು ಒಂದು ಕ್ಷಣವೂ ಮರೆತಿಲ್ಲ ಎಂಬುದನ್ನು ಸೀತೆಗೆ ಹನುಮಂತನು ಈ ರೀತಿ ವ್ಯಕ್ತಪಡಿಸುತ್ತಾನೆ.

PC: pexel


ಹನುಮಂತನಲ್ಲಿ ನಮ್ರತೆಯು ಅಪಾರವಾಗಿತ್ತು

ಸೀತೆಯನ್ನು ಭೇಟಿಯಾದ ನಂತರ, ಹನುಮಂತನು ಸಾಗರವನ್ನು ದಾಟಿ ಏಕಾಂಗಿಯಾಗಿ ಲಂಕಾವನ್ನು ಪ್ರವೇಶಿಸಿದರೂ ದುರಹಂಕಾರದಿಂದ ವರ್ತಿಸುವುದಿಲ್ಲ. ಅವನ ಮಾತು ಗೌರವಯುತ ಮತ್ತು ಸಂಯಮದಿಂದ ಕೂಡಿರುತ್ತದೆ. ಸೀತೆಯೇ ಅವನನ್ನು ಶೂರ, ಸಮರ್ಥ ಮತ್ತು ಬುದ್ಧಿವಂತ ಎಂದು ಹೊಗಳುತ್ತಾಳೆ. ಸೀತೆಯು ಹನುಮಂತನನ್ನು ಸಾಮಾನ್ಯ ವಾನರ ಎಂದು ಪರಿಗಣಿಸುವುದಿಲ್ಲ ಎಂದು ಹೇಳುತ್ತಾಳೆ. ಈ ಸಮತೋಲನದಿಂದಾಗಿಯೇ ರಾಮನು ಅವನಿಗೆ ಅಂತಹ ಪವಿತ್ರ ಕಾರ್ಯವನ್ನು ನೀಡುತ್ತಾನೆ. ತುಂಬಾ ಆಕ್ರಮಣಕಾರಿ ಗುಣಗಳನ್ನು ಹೊಂದಿದವರನ್ನು ಸೀತೆಯ ಬಳಿ ಕಳುಹಿಸಿದರೆ ಸೀತೆಯಲ್ಲಿ ಭಯವನ್ನು ಸೃಷ್ಟಿಸುತ್ತಿದ್ದರು. ಇನ್ನು ದುರ್ಬಲರನ್ನು ಸೀತೆಯ ಬಳಿ ಕಳುಹಿಸಿದರೆ ಲಂಕಾದಲ್ಲಿ ರಾವಣ ಸೇವಕರಿಂದಲೇ ವಿಫಲರಾಗುತ್ತಿದ್ದರು. ರಾಮನು ಹನುಂತನಲ್ಲಿ ದೈಹಿಕ ಶಕ್ತಿ, ಭಾವನಾತ್ಮಕ ಬುದ್ಧಿವಂತಿಕೆಯ ಜೊತೆಗೆ ನಮ್ರತೆಯೂ ಇದ್ದಿದ್ದರಿಂದ ರಾಮನು ಹನುಮಂತನನ್ನು ಸೀತೆಯ ಬಳಿಗೆ ಕಳಹಿಸುತ್ತಾನೆ.

PC: pexel


Dailyhunt
Disclaimer: This content has not been generated, created or edited by Dailyhunt. Publisher: Vijay Karnataka