ಬೆಂಗಳೂರು: ಆರ್ ಎಸ್ ಎಸ್ ಸಂಘಟನೆ ಬೆಳಗಾವಿಯಲ್ಲಿ ನಡೆಸುತ್ತಿರುವ ಕಾರ್ಯಕ್ರಮಕ್ಕೆ ಸರ್ಕಾರದ ಅನುಮತಿ ಬೇಕಿಲ್ಲ. ಅದು ಖಾಸಗಿ ಕಾರ್ಯಕ್ರಮವಾಗಿದೆ. ಆದರೆ ಬೀದಿಗಿಳಿದರೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿಯಲ್ಲಿ ಆರ್ ಎಸ್ ಎಸ್ ಕಾರ್ಯಕ್ರಮ ನಡೆಯುತ್ತಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, "ಕಾರ್ಯಕ್ರಮ ನಡೆಯಲಿ. ಅದು ಯಾವುದೇ ಖಾಸಗಿ ಕಾರ್ಯಕ್ರಮಕ್ಕೆ ನಮ್ಮ ಅನುಮತಿ ಬೇಕಾಗಿಲ್ಲಾ. ಆದರೆ ಬೀದಿಗಿಳಿದ್ರೆ ಅನುಮತಿ ಬೇಕಾಗುತ್ತದೆ" ಎಂದರು.
ಯಾವುದೇ ಸಂಘಟನೆಯಿಂದ ದೊಡ್ಡ ಮೆರವಣಿಗೆ ಮಾಡಬೇಕಾದ್ರೆ ಅನುಮತಿ ಬೇಕಲ್ವಾ? ಬೀದಿಗಿಳಿದ್ರೆ ಅನುಮತಿ ಕೇಳೇ ಕೇಳ್ತಾರೆ. ಕಾನೂನು ಸುವ್ಯವಸ್ಥೆ ವಾತಾವರಣ ಸರಿ ಇದ್ರೆ ಅನುಮತಿ ಕೊಡುತ್ತೇವೆ. ಇಲ್ಲಾ ಅಂದ್ರೆ ಮುಂದೂಡಿ ಅಂತಾ ಹೇಳುತ್ತೇವೆ ಎಂದರು.
ಬೆಳಗಾವಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ವಿವರ
ದೇಶದಾದ್ಯಂತ ಇರುವ ಹಿರಿಯ ಆರ್.ಎಸ್.ಎಸ್. ಪ್ರಚಾರಕರು ಬೆಳಗಾವಿ ನಗರದಲ್ಲಿ ನಡೆಯುತ್ತಿರುವ ವಾರ್ಷಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ದೇಶಾದ್ಯಂತ ನಡೆಯುವ ಜನಗಣತಿ ಪ್ರಕ್ರಿಯೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.ಜುಲೈ 10ರಂದು ಸಭೆ ಆರಂಭಗೊಳ್ಳಲಿದೆ. 12ರಂದು ಮುಕ್ತಾಯಗೊಳ್ಳಿದೆ. ಒಟ್ಟು ಮೂರು ದಿನಗಳ ಕಾಲ ನಡೆಯಲಿರುವ ಸಭೆಯಲ್ಲಿ ಆರ್.ಎಸ್.ಎಸ್. ಶಾಖೆಗಳ ಕೆಲಸಗಳ ಪರಿಶೀಲನೆ ನಡೆಯಲಿದೆ. ಅಷ್ಟೇ ಅಲ್ಲದೆ, ಸಂಘಟನೆಯ ವ್ಯಾಪ್ತಿಯನ್ನು ವಿಸ್ತರಿಸಲು ಶಾಖೆಗಳ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ.
ಆರ್ ಎಸ್ ಎಸ್ ಸಂಘಟನೆಯ ನೋಂದಣಿ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಧ್ವನಿ ಎತ್ತಿದ್ದರು. ಇದು ಸಾಕಷ್ಟು ಚರ್ಚೆ ಆಗ್ತಿದೆ. ಈ ಬೆನ್ನಲ್ಲೇ ಆರ್ ಎಸ್ ಎಸ್ ಸಂಘಟನೆಯ ಪಥಸಂಚಲನಕ್ಕೆ ಅನುಮತಿ ಕಡ್ಡಾಯ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಎಸ್‌ಐಆರ್ ವಿಚಾರವಾಗಿ ಬಿಜೆಪಿ ಜೆಡಿಎಸ್ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ವಿಚಾರವಾಗಿ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ನಾವು ಅದನ್ನೇ ಹೇಳಿದ್ದೆವು. ಈ ಬಗ್ಗೆ ಮಾತನಾಡಲು ನಾನು ದೆಹಲಿಗೆ ಹೋಗಿ ಕಾಲಾವಕಾಶ ಕೇಳಿದ್ದೆ. ಬಿಜೆಪಿ ಜೆಡಿಎಸ್ ಹೇಳಿದ ತಕ್ಷಣ ಚುನಾವಣಾ ಆಯೋಗ ಸ್ಪಂದಿಸುತ್ತದೆ. ನಮ್ಮ ಸಲಹೆಗಳಿಗೆ ಹೇಗೆ ಸ್ಪಂದಿಸ್ತಾರೆ. ಇದರಲ್ಲೇ ಗೊತ್ತಾಗುತ್ತೆ ಕೇಂದ್ರ ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈ ಗೊಂಬೆ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಎಸ್‌ಐಆರ್ ವಿರುದ್ಧ ವಾಗ್ದಾಳಿ

