ಪ್ರತಿಯೊಬ್ಬ ವ್ಯಕ್ತಿಯು ತನ್ನ ಜನನದಿಂದ ಮರಣದವರೆಗಿನ ದಿನಗಳಲ್ಲಿ ಒಂದಲ್ಲ ಒಂದು ಬಾರಿಯಾದರೂ ಶನಿ ಸಾಡೇಸಾತಿಯನ್ನು ಎದುರಿಸುತ್ತಾನೆ. ಈ ಶನಿ ಸಾಡೇಸಾತಿಯು ಏಳೂವರೆ ವರ್ಷಗಳವರೆಗೆ, ಏಳು ವರ್ಷಗಳವರೆಗೆ ಅಥವಾ 6 ತಿಂಗಳುಗಳ ಕಾಲ ಒಬ್ಬ ವ್ಯಕ್ತಿಯನ್ನು ಕಾಡುವಂತಹ ಶನಿಗೆ ಸಂಬಂಧಿಸಿದ ದೋಷವಾಗಿದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಅವಧಿಯಲ್ಲಿ, ಶನಿ ದೇವರು ಒಬ್ಬ ವ್ಯಕ್ತಿಗೆ ಅವರ ಕರ್ಮಗಳಿಗೆ ಅನುಗುಣವಾಗಿ ಪ್ರತಿಫಲವನ್ನು ನೀಡುತ್ತಾನೆ. ತಮ್ಮ ಜೀವನದಲ್ಲಿ ಕೆಟ್ಟ ಕೆಲಸಗಳನ್ನು ಅಥವಾ ಪಾಪಗಳನ್ನು ಮಾಡುವವರು ಈ ಸಮಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾನೆ. ಇದಕ್ಕೆ ವಿರುದ್ಧವಾಗಿ, ಯಾವಾಗಲೂ ಸತ್ಯ ಮತ್ತು ಸದಾಚಾರದ ಮಾರ್ಗವನ್ನು ಅನುಸರಿಸುವವರು ಶನಿ ದೇವರಿಂದ ವಿಶೇಷ ಆಶೀರ್ವಾದಗಳನ್ನು ಪಡೆಯುತ್ತಾರೆ.
ಸಾಡೇ ಸತಿ ಸಮಯದಲ್ಲಿ, ವ್ಯಕ್ತಿಯ ಪ್ರಗತಿ ನಿಧಾನವಾಗುತ್ತದೆ ಮತ್ತು ಅವರು ಕಷ್ಟಪಟ್ಟು ಕೆಲಸ ಮಾಡಿದರೂ ಯಶಸ್ಸನ್ನು ಸಾಧಿಸುವುದು ಕಷ್ಟಕರವಾಗಿರುತ್ತದೆ. ಶನಿದೇವನನ್ನು ಕರ್ಮದ ದೇವರು ಎಂದು ಪರಿಗಣಿಸಲಾಗಿರುವುದರಿಂದ, ಈ ಸಮಯದಲ್ಲಿ ಅವನು ಜನರನ್ನು ಕಷ್ಟಪಟ್ಟು ಕೆಲಸ ಮಾಡುವಂತೆ ಮಾಡುತ್ತಾನೆ. ಶನಿವಾರದ ದಿನದಂದು ನೀವು ಈ ಕೆಲಸಗಳನ್ನು ಮಾಡುವ ಮೂಲಕ ಶನಿ ದೋಷದಿಂದ ಒಂದಿಷ್ಟು ಸುಧಾರಣೆಯನ್ನು ನೋಡಬಹುದಾಗಿದೆ.
ಶನಿ ದೋಷ ನಿವಾರಣೆಗೆ ಶನಿವಾರದ ದಿನದಂದು ಇವುಗಳನ್ನು ಮಾಡಿ:
1. ಮಹಾ ದೇವನ ಪೂಜೆಯನ್ನು ಮಾಡುವುದು ಪ್ರಯೋಜನಕಾರಿಯಾಗಿದೆ:
ಶನಿ ಸಾಡೇಸಾತಿಯಿಂದ ಎದುರಾಗುವಂತಹ ಋಣಾತ್ಮಕ ಪರಿಣಾಮಗಳಿಂದ ಮುಕ್ತಿಯನ್ನು ಪಡೆದುಕೊಳ್ಳುವುದಕ್ಕಾಗಿ, ದೇವರುಗಳ ದೇವನಾದ ಶಿವನನ್ನು ಪೂಜಿಸುವುದು ಅತ್ಯಂತ ಪರಿಣಾಮಕಾರಿಯೆಂದು ಪರಿಗಣಿಸಲಾಗುತ್ತದೆ. ವಾಸ್ತವವಾಗಿ ಶಿವನು ಶನಿದೇವನ ಗುರು ಮತ್ತು ದೇವನಾಗಿದ್ದಾನೆ. ಪುರಾಣಗಳ ಪ್ರಕಾರ, ಶನಿದೇವನು ಶಿವನನ್ನು ಕುರಿತು ಕಠಿಣ ತಪಸ್ಸನ್ನು ಮಾಡಿದ ನಂತರವೇ ಆತನನ್ನು ನ್ಯಾಯದ ದೇವರು ಎಂದು ನೇಮಕ ಮಾಡಿದನು. ಆದ್ದರಿಂದ ಸಾಡೇಸಾತಿ ದೋಷದ ಸಮಯದಲ್ಲಿ, ಶನಿಗೆ ಸಂಬಂಧಿಸಿದ ಯಾವುದೇ ದೋಷವನ್ನು ಎದುರಿಸುತ್ತಿದ್ದರೂ ಅಂತಹ ಸಂದರ್ಭದಲ್ಲಿ ಶಿವನ ಪೂಜೆಯನ್ನು ಮಾಡಬೇಕು. ಶನಿ ದೋಷ ಇರುವವರಿಗೆ ಶಿವ ಪೂಜೆಯು ಅತ್ಯಂತ ಪ್ರಯೋಜನಕಾರಿಯಾಗಿದೆ.
ಒಂದು ವೇಳೆ ನಿಮಗೆ ಪ್ರತಿನಿತ್ಯವೂ ಶಿವನನ್ನು ಪೂಜಿಸಲು ಸಾಧ್ಯವಾಗದೇ ಇದ್ದರೆ ಅಂತಹ ಸಂದರ್ಭದಲ್ಲಿ ಪ್ರತೀ ಸೋಮವಾರದ ದಿನದಂದು ಮತ್ತು ಶನಿವಾರದ ದಿನದಂದು ಈ ಒಂದು ಕೆಲಸವನ್ನು ಮಾಡಬಹುದಾಗಿದೆ. ಇದಕ್ಕಾಗಿ ನೀವು ಒಂದು ತಾಮ್ರದ ಪಾತ್ರೆಯನ್ನು ಅಥವಾ ಒಂದು ಸಾಮಾನ್ಯವಾಗಿ ಬಳಸುವ ಪಾತ್ರೆಯನ್ನು ತೆಗೆದುಕೊಳ್ಳಿ. ಅದರಲ್ಲಿ ನೀರನ್ನು ಹಾಗೂ ಒಂದಿಷ್ಟು ಕಪ್ಪು ಎಳ್ಳನ್ನು ಹಾಕಿ ಆ ನೀರಿನಿಂದ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಿ. ಇದರೊಂದಿಗೆ ಮಹಾಮೃತ್ಯುಂಜಯ ಮಂತ್ರವನ್ನು ಭಕ್ತಿಯಿಂದ ಪಠಿಸಿ. ಶಿವನ ಆಶೀರ್ವಾದದಿಂದ, ಶನಿದೇವನು ಶಾಂತನಾಗುತ್ತಾನೆ ಮತ್ತು ಜೀವನದಲ್ಲಿನ ಎಲ್ಲಾ ತೊಂದರೆಗಳು ಕ್ರಮೇಣ ಕಡಿಮೆಯಾಗಲು ಪ್ರಾರಂಭವಾಗುವುದು.
2. ಸಂಕಟ ಮೋಚನ ಹನುಮಂತನ ಪೂಜೆ ಮಾಡಿ:
ಶಿವನನ್ನು ಪೂಜಿಸುವುದರ ಜೊತೆಗೆ, ಸಂಕಟಮೋಚನ ಹನುಮಂತನನ್ನು ಪೂಜಿಸುವುದರಿಂದ ಸಾಡೇ ಸತಿಯ ಕೆಟ್ಟ ಪರಿಣಾಮವು ಗಮನಾರ್ಹವಾಗಿ ಕಡಿಮೆಯಾಗಲು ಪ್ರಾರಂಭವಾಗುವುದು. ಇದು ರಾಮಾಯಣ ಕಾಲದ ಒಂದು ಕುತೂಹಲಕಾರಿ ಕಥೆಗೆ ಸಂಬಂಧಿಸಿದೆ. ಹನುಮಂತನು ಲಂಕೆಗೆ ಬೆಂಕಿ ಹಚ್ಚಿದಾಗ, ರಾವಣನು ಶನಿದೇವನನ್ನು ಸೆರೆಯಲ್ಲಿಟ್ಟನು. ರಾವಣನ ಸೆರೆಯಿಂದ ಶನಿದೇವನನ್ನು ಮುಕ್ತಗೊಳಿಸಿದವನು ಹನುಮಂತನೆಂದು ಹೇಳಲಾಗುವುದು.
ಇದರಿಂದ ಸಂತೋಷಗೊಂಡ ಶನಿದೇವನು ನಾನು ಇಂದಿನಿಂದ ಯಾವುದೇ ಹನುಮ ಭಕ್ತರಿಗೆ ಎಂದಿಗೂ ತೊಂದರೆ ಕೊಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದನು. ಆದ್ದರಿಂದ, ಸಾಡೇಸಾತಿಯ ಸಮಯದಲ್ಲಿ ಪ್ರತಿ ಮಂಗಳವಾರ ಮತ್ತು ಶನಿವಾರ ಹನುಮಾನ್ ಚಾಲೀಸಾ, ಹನುಮಾನ್ ಬಾಹುಕ ಅಥವಾ ಸುಂದರಕಾಂಡವನ್ನು ಪಠಿಸುವುದು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ದಿನಗಳಲ್ಲಿ, ಹನುಮಂತನಿಗೆ ಸಿಂಧೂರ ಮತ್ತು ಮಲ್ಲಿಗೆ ಎಣ್ಣೆಯನ್ನು ಅರ್ಪಿಸುವುದು ಮತ್ತು ಸಿಹಿ ವೀಳ್ಯದೆಲೆಗಳನ್ನು ಅರ್ಪಿಸುವುದರಿಂದ ನಿಮ್ಮ ಜೀವನದ ಎಲ್ಲಾ ತೊಂದರೆಗಳು ತಕ್ಷಣವೇ ದೂರಾಗುವುದು ಎನ್ನುವ ನಂಬಿಕೆಯಿದೆ.
3. ಪರಿಶುದ್ಧವಾದ ನಡವಳಿಕೆ ಮತ್ತು ಒಳ್ಳೆಯ ಅಭ್ಯಾಸಗಳು:
ಶನಿದೇವನನ್ನು ಮೆಚ್ಚಿಸಲು ಸರಳ ಮತ್ತು ಅತ್ಯಂತ ನೇರವಾದ ಮಾರ್ಗವೆಂದರೆ ಸಂಪೂರ್ಣವಾಗಿ ಶುದ್ಧ ಅಭ್ಯಾಸಗಳು ಮತ್ತು ನಡವಳಿಕೆಯನ್ನು ಕಾಪಾಡಿಕೊಳ್ಳುವುದಾಗಿದೆ. ಸುಳ್ಳು ಹೇಳುವುದು, ಕದಿಯುವುದು, ಜೂಜಾಟ, ಮದ್ಯಪಾನ ಮತ್ತು ಇತರರ ಬಗ್ಗೆ ಕೆಟ್ಟದಾಗಿ ಮಾತನಾಡುವಂತಹ ಕೆಟ್ಟ ಅಭ್ಯಾಸಗಳನ್ನು ತಕ್ಷಣ ಬಿಟ್ಟುಬಿಡುವುದರಿಂದ ಶನಿಯು ನಿಮಗೆ ಶುಭವನ್ನು ಕರುಣಿಸುತ್ತಾನೆ. ಅಲ್ಲದೆ, ಪ್ರತಿ ಶನಿವಾರ ಒಂದು ಪಾತ್ರೆಯಲ್ಲಿ ಸಾಸಿವೆ ಎಣ್ಣೆಯನ್ನು, ಕಪ್ಪು ಎಳ್ಳೆಣ್ಣೆಯನ್ನು ಶನಿ ದೇವನ ವಿಗ್ರಹಕ್ಕೆ ಅರ್ಪಿಸಿ. ಎಣ್ಣೆಯನ್ನು ಅರ್ಪಿಸುವಾಗ, ಯಾವಾಗಲೂ ನಿಮ್ಮ ದೃಷ್ಟಿಯನ್ನು ಶನಿದೇವನ ಪಾದಗಳ ಮೇಲೆ ಕೇಂದ್ರೀಕರಿಸಿರಬೇಕು. ಅವನ ಕಣ್ನೂಗಳ ಮೇಲೆ ನಿಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿ ಪೂಜೆಯನ್ನು, ಪ್ರಾರ್ಥನೆಯನ್ನು ಮಾಡಬೇಡಿ. ಇದಲ್ಲದೇ, ನೀವು ಎಣ್ಣೆಯಲ್ಲಿ ಮುಖವನ್ನು ನೋಡಿ ಆ ಎಣ್ಣೆಯನ್ನು ಕೂಡ ಶನಿದೇವನಿಗೆ ಅರ್ಪಿಸಬಹುದಾಗಿದೆ. ಅಥವಾ ಯಾವುದೇ ಬಡ ಅಥವಾ ನಿರ್ಗತಿಕ ವ್ಯಕ್ತಿಗೆ ಅದನ್ನು ದಾನ ಮಾಡಬಹುದಾಗಿದೆ.
4. ಪ್ರಾಣಿ, ಪಕ್ಷಿಗಳ ಸೇವ ಮಾಡಿ:
ಶನಿ ದೇವನನ್ನು ಒಲಿಸಿಕೊಳ್ಳಲು ಅಥವಾ ಶನಿ ದೋಷದಿಂದ ಮುಕ್ತಿಯನ್ನು ಪಡೆದುಕೊಳ್ಳಲು ಇನ್ನೊಂದು ಉತ್ತಮ ಮಾರ್ಗವೆಂದರೆ, ಪಾಣಿ ಹಾಗೂ ಪಕ್ಷಿಗಳ ಸೇವೆಯನ್ನು ಮಾಡುವುದಾಗಿದೆ. ಆದ್ದರಿಂದ, ಸಾಡೇ ಸಾತಿ ಸಮಯದಲ್ಲಿ, ಪ್ರತಿದಿನ ಅಥವಾ ಪ್ರತಿ ಶನಿವಾರ ಮೀನುಗಳಿಗೆ ಆಹಾರವನ್ನು ನೀಡಿ. ಹಿಟ್ಟು ಮತ್ತು ಸಕ್ಕರೆಯ ಮಿಶ್ರಣವನ್ನು ಇರುವೆ ಗೂಡಿನ ಬಳಿ ಇರಿಸಿ. ನಿಮ್ಮ ಮನೆಯ ಬಳಿ ವಾಸಿಸುವ ಕಪ್ಪು ನಾಯಿಗೆ ಸಾಸಿವೆ ಎಣ್ಣೆ ಹಚ್ಚಿದ ರೊಟ್ಟಿಯನ್ನು ತಿನ್ನಲು ನೀಡಿ. ನಿಮಗೆ ಕಪ್ಪು ನಾಯಿ ಸಿಗದಿದ್ದರೆ, ನೀವು ಈ ರೊಟ್ಟಿಯನ್ನು ಹಸುವಿಗೆ ಸಹ ನೀಡಬಹುದು.
ಶನಿದೇವನು ತನ್ನ ತಂದೆ ಸೂರ್ಯ ದೇವನನ್ನು ದ್ವೇಷಿಸುತ್ತಿದ್ದನಾದರೂ ತನ್ನ ತಾಯಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದನು. ಆಕೆಯನ್ನು ಗೌರವಿಸುತ್ತಿದ್ದನು. ಆದ್ದರಿಂದ, ಶನಿದೇವನು ತಮ್ಮ ತಾಯಿ ಮತ್ತು ಮನೆಯಲ್ಲಿ ಹಿರಿಯರಿಗೆ ಸೇವೆ ಸಲ್ಲಿಸುವ ಮತ್ತು ಗೌರವಿಸುವವರ ಬಗ್ಗೆ ಯಾವಾಗಲೂ ಸಂತೋಷಪಡುತ್ತಾನೆ. ಈ ಕಷ್ಟದ ಸಮಯದಲ್ಲಿ, ಶನಿದೇವನ ಬೀಜ ಮಂತ್ರವಾದ "ಓಂ ಶಂ ಶನೈಶ್ಚರಾಯ ನಮಃ" ವನ್ನು ರುದ್ರಾಕ್ಷಿ ಜಪಮಾಲೆಯನ್ನು ಹಿಡಿದು ಪಠಿಸಬೇಕು. ನಿಮಗೆ ಸಮಯವಿದ್ದರೆ, ರಾಜ ದಶರಥ ಬರೆದ ಶನಿ ಸ್ತೋತ್ರವನ್ನು ಪಠಿಸಬಹುದಾಗಿದೆ. ಇದು ಶನಿದೇವನ ಕೋಪವನ್ನು ಸಂಪೂರ್ಣವಾಗಿ ಶಾಂತಗೊಳಿಸುತ್ತದೆ.
ಶನಿವಾರದ ದಿನದಂದು ನೀವು ಈ ಕೆಲಸಗಳನ್ನು ಮಾಡುವುದರಿಂದ ಶನಿ ದೋಷದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದು ನೀವು ಎಂತಹುದ್ದೇ ಕಠಿಣವಾದ ಶನಿ ದೋಷಕ್ಕೆ ಗುರಿಯಾಗಿದ್ದರೂ ಶನಿವಾರದ ದಿನದಂದು ಮಾಡುವಂತಹ ಈ ಕೆಲಸಗಳು ನಿಮ್ಮನ್ನು ಅದರಿಂದ ಮುಕ್ತಗೊಳಿಸುವುದು.

