Dailyhunt
ಸಂಜನಾ ಬುರ್ಲಿ ಕಾಲು ಮುಟ್ಟಿ ನಮಸ್ಕರಿಸಿದ ಪತಿ ಸಮರ್ಥ: Male Ego ಇಲ್ಲದ ಅಪರೂಪದ ವ್ಯಕ್ತಿ ಎಂದ ನಟಿ

ಸಂಜನಾ ಬುರ್ಲಿ ಕಾಲು ಮುಟ್ಟಿ ನಮಸ್ಕರಿಸಿದ ಪತಿ ಸಮರ್ಥ: Male Ego ಇಲ್ಲದ ಅಪರೂಪದ ವ್ಯಕ್ತಿ ಎಂದ ನಟಿ

Vijay Karnataka 2 weeks ago

'ಪುಟ್ಟಕ್ಕನ ಮಕ್ಕಳು', 'ಶ್ರೀ ಗಂಧದ ಗುಡಿ' ಧಾರಾವಾಹಿಗಳ ಖ್ಯಾತಿಯ ಸಂಜನಾ ಬುರ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಸಮರ್ಥ ಎಂಬುವರನ್ನ ಸಂಜನಾ ಬುರ್ಲಿ ಮದುವೆಯಾಗಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಸಂಜನಾ ಬುರ್ಲಿ - ಸಮರ್ಥ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.

ವರನ ಊರು ಚನ್ನಗಿರಿಯಲ್ಲೂ ಆರತಕ್ಷತೆ ಜರುಗಿತು. ಇದೀಗ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಸಂಜನಾ ಬುರ್ಲಿ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಆ ವಿಡಿಯೋ ಯಾವುದು ಅಂದ್ರೆ…

ರಿಸೆಪ್ಷನ್ ವೇಳೆ ಡ್ಯಾನ್ಸ್

ಬೆಂಗಳೂರಿನ ರೆಸಾರ್ಟ್‌ನಲ್ಲಿ ಜರುಗಿದ ರಿಸೆಪ್ಷನ್ ವೇಳೆ ವರ ಸಮರ್ಥ ಹಾಗೂ ವಧು ಸಂಜನಾ ಬುರ್ಲಿ ಡ್ಯಾನ್ಸ್ ಮಾಡಿದ್ದರು. ಅದೂ 'ತುಜ್‌ ಮೇ ರಬ್ ದಿಖ್ತಾ ಹೇ..' ಹಾಡಿಗೆ. ಹಾಡನ್ನ ಹಾಡು ಹಾಡುತ್ತಾ ಅಪರೂಪದ ಸಂಗತಿಯೊಂದಕ್ಕೆ ಇಬ್ಬರೂ ಸಾಕ್ಷಿಯಾಗಿದ್ದಾರೆ. ಅದನ್ನ ಹೆಮ್ಮೆಯಿಂದ ಸಂಜನಾ ಬುರ್ಲಿ ಶೇರ್ ಮಾಡಿದ್ದಾರೆ.

ಪತ್ನಿ ಕಾಲು ಮುಟ್ಟಿ ನಮಸ್ಕರಿಸಿದ ಪತಿ ಸಮರ್ಥ

'ತುಜ್ ಮೇ ರಬ್ ದಿಖ್ತಾ ಹೇ' ಹಾಡನ್ನ ಸಂಜನಾ ಬುರ್ಲಿ ಹಾಡುತ್ತಾ ಹಾಡುತ್ತಾ ಪತಿ ಸಮರ್ಥಗೆ ಕೈ ಮುಗಿಯುತ್ತಾರೆ. ಆಗ ಪತಿ ಸಮರ್ಥ ಸಹ ಸಂಜನಾ ಬುರ್ಲಿಗೆ ಕೈ ಮುಗಿಯುತ್ತಾರೆ. ಆನಂತರ ಪತಿ ಕಾಲನ್ನ ಮುಟ್ಟಿ ಸಂಜನಾ ಬುರ್ಲಿ ನಮಸ್ಕರಿಸುತ್ತಾರೆ. ಕೂಡಲೆ ಸಮರ್ಥ ಸಹ ಪತ್ನಿ ಕಾಲನ್ನ ಮುಟ್ಟಿ ನಮಸ್ಕರಿಸುತ್ತಾರೆ. ಜೊತೆಗೆ ಮಂಡಿಯೂರಿ ಸಂಜನಾ ಬುರ್ಲಿ ಅವರನ್ನ ಸಮರ್ಥ ಅಪ್ಪಿಕೊಳ್ಳುತ್ತಾರೆ. ಹಾಗೇ, ಸಂಜನಾ ಅವರ ಕೈಗಳನ್ನ ಕಣ್ಣಿಗೊತ್ತಿಕೊಳ್ಳುತ್ತಾರೆ. ಇದೇ ವಿಡಿಯೋವನ್ನ ಸಂಜನಾ ಬುರ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಭಾವನಾತ್ಮಕವಾಗಿ ಪೋಸ್ಟ್ ಬರೆದಿದ್ದಾರೆ.

ಸಂಜನಾ ಬುರ್ಲಿ ಪೋಸ್ಟ್

''ಇಂದು ಪ್ರೀತಿಯ ಬಗ್ಗೆ ನನಗೆ ತಿಳಿದಿರುವುದೆಲ್ಲವೂ ನಿಮ್ಮಿಂದಲೇ ಸಮರ್ಥ. ಮೇಲ್ ಈಗೋ ಇಲ್ಲದ, ತನ್ನ ಮನದನ್ನೆಯನ್ನ ದೇವಿಯಂತೆ ಗೌರವಿಸುವ, ಮಮತೆಯಿಂದ ನೋಡಿಕೊಳ್ಳುವ, ಅವಳು ಸಾಧಿಸಬೇಕೆಂದು ಬಯಸುವ, ಪ್ರತಿಯೊಂದು ಕನಸಿಗೂ ಬೆಂಬಲ ನೀಡುವ, ಅವಳ ಸ್ವಾತಂತ್ರ್ಯ ಮತ್ತು ಬುದ್ಧಿಮತ್ತೆಯನ್ನು ಪೋಷಿಸುವ, ಅವಳ ಮೇಲೆ ಹೆಚ್ಚು ನಂಬಿಕೆ ಇಡುವಂತಹ ವ್ಯಕ್ತಿ ಇಂದಿನ ಜಗತ್ತಿನಲ್ಲಿ ಅತ್ಯಂತ ಅಪರೂಪ. ಅಂತಹ ಅಮೂಲ್ಯ ರತ್ನಗಳಲ್ಲಿ ನೀವೂ ಒಬ್ಬರು. ನಾನು ಧನ್ಯಳಾಗಿದ್ದೇನೆ, ಕೃತಜ್ಞಳಾಗಿದ್ದೇನೆ'' ಎಂದು ಸಂಜನಾ ಬುರ್ಲಿ ಬರೆದುಕೊಂಡಿದ್ದಾರೆ.


ಅಂದ್ಹಾಗೆ, 'ಶ್ರೀ ಗಂಧದ ಗುಡಿ' ಸೀರಿಯಲ್‌ನಿಂದ ಸಂಜನಾ ಬುರ್ಲಿ ಹೊರಗೆ ಬಂದಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka