ಶುಕ್ರ ಹಾಗೂ ಚಂದ್ರ ಸಂಚಾರ ಕಲಾತ್ಮಕ ಯೋಗವನ್ನು ಸೃಷ್ಟಿಸುವುದು. ಈ ಯೋಗ ಸಂಕಷ್ಟ ಚತುರ್ಥಿಯಂದು ಕೆಲ ರಾಶಿಯವರಿಗೆ ಸಕಲ ಸೌಕರ್ಯಗಳನ್ನು ನೀಡಲಿದೆ. ಹಾಗಾದರೆ ಆ ಶುಭ ರಾಶಿಗಳು ಯಾವುವು ಎಂದು ತಿಳಿಯಿರಿ.
ಜ್ಯೋತಿಷ್ಯದ ಪ್ರಕಾರ ಗ್ರಹಗಳು ರಾಶಿ ಮತ್ತು ನಕ್ಷತ್ರಗಳನ್ನು ಕಾಲಕಾಲಕ್ಕೆ ಬದಲಾಯಿಸುತ್ತಲೇ ಇರುತ್ತವೆ.
ವೃಶ್ಚಿಕ ರಾಶಿಯವರಿಗೆ ಶುಭ ಫಲಗಳು ಪ್ರಾಪ್ತಿಯಾಗಲಿವೆ. ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುವಿರಿ. ಹಿಂದೆಂದೂ ಕಂಡಿರದ ಸಂತೋಷ ನೆಮ್ಮದಿಯನ್ನು ಮನೆಯಲ್ಲಿ ಕಂಡು ಬರಲಿದೆ. ಮದುವೆಯಂತಹ ಶುಭ ಕಾರ್ಯಗಳು ನಡೆಯಬಹುದು. ನಿಮ್ಮ ಮದುವೆ ಮಾತುಕತೆಗಳು ಮುಂದುವರೆಯುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಕೆಲಸದ ವಿಷಯಗಳಲ್ಲಿ ಪ್ರಗತಿಯನ್ನು ಕಾಣುವಿರಿ. ವ್ಯವಹಾರದಲ್ಲಿಯೂ ಬೆಳೆವಣಿಗೆ ಕಂಡುಬರಲಿದೆ. ಈ ರಾಜಯೋಗ ಕೆಲಸದಲ್ಲಿರುವವರಿಗೆ ಅನಿರೀಕ್ಷಿತ ಪ್ರಯೋಜನಗಳು ಮತ್ತು ಅದೃಷ್ಟವನ್ನು ತರುತ್ತದೆ. ನೀವು ನಿಮ್ಮ ವೃತ್ತಿಜೀವನದಲ್ಲಿ ಹೊಸ ಎತ್ತರವನ್ನು ತಲುಪುವಿರಿ. ಬಡ್ತಿಗಾಗಿ ಅವಕಾಶಗಳು ಸಿಗುತ್ತವೆ. ಈ ಸಮಯದಲ್ಲಿ ಉದ್ಯಮಿಗಳು ಆರ್ಥಿಕ ಲಾಭವನ್ನು ಪಡೆಯುತ್ತಾರೆ.
ಮಕರ ರಾಶಿ

ಮಕರ ರಾಶಿಯವರಿಗೆ ಕಲಾತ್ಮಕ ಯೋಗ ಶುಭ ಫಲಗಳನ್ನು ನೀಡುವುದು. ಈ ಯೋಗದ ಅವಧಿಯಲ್ಲಿ ಯಾವುದೇ ವಿಷಯದಲ್ಲಿ ಸಾಕಷ್ಟು ಧೈರ್ಯ ಮತ್ತು ಯಶಸ್ಸು ಇರುತ್ತದೆ. ಕಲಾತ್ಮಕ ಯೋಗ ಯಶಸ್ಸು, ಖ್ಯಾತಿ, ಸಂತೋಷ, ಸಂಪತ್ತು ಮತ್ತು ಶಾಂತಿಯನ್ನು ನೀಡುತ್ತದೆ. ಈ ಯೋಗ ವ್ಯಕ್ತಿಯ ಜಾತಕದಲ್ಲಿದ್ದರೆ ಐಷಾರಾಮಿ ಜೀವನವನ್ನು ನಡೆಸುತ್ತಾನೆ. ರಾಜ ಯೋಗ ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ. ಏಪ್ರಿಲ್‌ನಲ್ಲಿ ಈ 3 ರಾಶಿಗಳಿಗೆ ಡಬಲ್ ಜಾಕ್‌ಪಾಟ್ ಹೊಡೆಯುವುದು. ಮುಖ್ಯವಾಗಿ ಇದು ಸಂಪತ್ತನ್ನು ಒದಗಿಸುತ್ತದೆ. ಯಶಸ್ಸಿನ ಹೆಚ್ಚಿನ ಅವಕಾಶಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಈ ತಿಂಗಳು ಉತ್ತಮ ಯಶಸ್ಸು ಸಿಗುವುದು. ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ಈ ಅವಧಿಯಲ್ಲಿ ನೀವು ವ್ಯವಹಾರವನ್ನು ಪ್ರಾರಂಭಿಸಿದರೆ ನಿಮಗೆ ಉತ್ತಮ ಲಾಭ ಸಿಗುತ್ತದೆ. ಮದುವೆಯಾಗದವರು ಒಳ್ಳೆಯ ವರನನ್ನು ಹುಡುಕಿ ಮದುವೆಯಾಗುತ್ತಾರೆ.
ಮಿಥುನ ರಾಶಿ

ಮಿಥುನ ರಾಶಿಯವರಿಗೆ ಕಲಾತ್ಮಕ ಯೋಗ ನೆಮ್ಮದಿಯ ಜೀವನ ನೀಡಲಿದೆ. ಆರ್ಥಿಕವಾಗಿ ನೆಮ್ಮದಿಯ ಜೀವನ ನಿಮ್ಮದಾಗುವುದು. ಉದ್ಯೋಗ ಸ್ಥಳದಲ್ಲಿ ನೀವು ಮಾಡುವ ಪ್ರಯತ್ನಗಳು ದುಪ್ಪಟ್ಟು ಲಾಭವನ್ನು ತಂದುಕೊಡುತ್ತವೆ. ಈ ಸಮಯದಲ್ಲಿ ನೀವು ಹೊಸ ಯೋಜನೆಗಳನ್ನು ಮಾಡಬಹುದು. ಈ ಯೋಚನೆಗಳಿಗೆ ಮೇಲಾಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ಹಿಂದೆಂದೂ ಕಾಣದ ಸಂತೋಷ ಮನೆಯಲ್ಲಿ ನೆಲೆಸಲಿದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವುದರಿಂದ ನೆಂಟರು ಆಗಮಿಸಬಹುದು. ಇದು ಮನೆ ಸಂತೋಷವನ್ನು ಮತ್ತಷ್ಟು ಹೆಚ್ಚಿಸಲಿದೆ. ಆರೋಗ್ಯಕರ ಜೀವನವನ್ನು ನಡೆಸಲು ಸಾಧ್ಯವಾಗುವುದು. ಅಲ್ಲದೆ ಆರ್ಥಿಕ ಸವಾಲಗಳನ್ನು ಮೆಟ್ಟಿ ನಿಲ್ಲುವಿರಿ. ನಿಮ್ಮೆಲ್ಲಾ ಶ್ರಮದ ಫಲವನ್ನು ಈ ಸಮಯದಲ್ಲಿ ನೀವು ಪಡೆಯುವಿರಿ.
ತುಲಾ ರಾಶಿ

ಸಂಕಷ್ಟ ಚತುರ್ಥಿಯಂದು ರೂಪಗೊಳ್ಳುವ ಕಲಾತ್ಮಕ ಯೋಗ ಸಾಕಷ್ಟು ಶುಭ ಫಲಗಳನ್ನು ನೀಡಲಿದೆ. ಇದು ನಿಮ್ಮೆಲ್ಲಾ ಕಾರ್ಯಗಳನ್ನು ಸುಲಭವಾಗಿಸುವುದು. ವಿಘ್ನ ವಿನಾಯಕ ವಿಶೇಷ ಕೃಪೆ ನಿಮ್ಮ ಮೇಲೆ ಇರುವುದರಿಂದ ಯಾವುದೇ ಅಡೆತಡೆಗಳು ಜೀವನದಲ್ಲಿ ಎದುರಾಗುವುದಿಲ್ಲ. ಅದೃಷ್ಟ ನಿಮಗೆ ಸಹಾಯ ಮಾಡುವುದು. ಇದಲ್ಲದೆ ಅನೇಕ ಆದಾಯದ ಮೂಲಗಳು ಹೆಚ್ಚಾಗಲಿವೆ. ಹೊಸ ಉದ್ಯೋಗವನ್ನು ಪ್ರಾರಂಭಿಸಬಹುದು. ಅಲ್ಲದೆ ನೀವು ಭಾರಿ ಆರ್ಥಿಕ ಲಾಭಗಳನ್ನು ಪಡೆಯುತ್ತೀರಿ. ನೀವು ಅಪೂರ್ಣ ಕೆಲಸವನ್ನು ಪೂರ್ಣಗೊಳಿಸುತ್ತೀರಿ. ವ್ಯವಹಾರ ಮತ್ತು ವೃತ್ತಿಗಾಗಿ ಪ್ರಯಾಣಿಸಲು ಅವಕಾಶಗಳಿವೆ. ಮನೆಯಲ್ಲಿ ಶುಭ ಸಂಗತಿಗಳು ಸಂಭವಿಸುವ ಸಾಧ್ಯತೆಯೂ ಉಂಟು.
ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಕಲಾತ್ಮಕ ಯೋಗ ಶುಭ ಫಲಗಳನ್ನು ನೀಡಲಿದೆ. ಈ ಅವಧಿಯಲ್ಲಿ ನೀವು ಮಾಡುವ ಕಾರ್ಯಗಳಲ್ಲಿ ಅನೇಕ ಮೂಲಗಳಿಂದ ಲಾಭ ಹರಿದು ಬರಲಿದೆ. ವ್ಯಕ್ತಿತ್ವಗಳಲ್ಲಿ ಗಮನಾರ್ಹ ವ್ಯತ್ಯಾಸಗಳಿರುತ್ತವೆ. ನಿಮ್ಮ ವ್ಯಕ್ತಿತ್ವ ಬಲಗೊಳ್ಳಲಿದೆ. ವಿವಾಹಿತರು ಸಂತೋಷದ ದಾಂಪತ್ಯ ಜೀವನವನ್ನು ನಡೆಸುವರು. ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಈ ಅವಧಿಯಲ್ಲಿ ಅನೇಕ ಅಪೂರ್ಣ ಕೆಲಸಗಳು ಪೂರ್ಣಗೊಳ್ಳುತ್ತವೆ. ಒಂಟಿಯಾಗಿರುವವರಿಗೆ ಈ ಅವಧಿಯಲ್ಲಿ ಸೂಕ್ತ ಸಂಗಾತಿ ಸಿಗುವ ಸಾಧ್ಯತೆಗಳು ಇವೆ. ಆರ್ಥಿಕ ಜೀವನ ನೆಮ್ಮದಿಯಾಗಿರಲಿದೆ. ಸಣ್ಣ ಪ್ರಯತ್ನದಿಂದ ದೊಡ್ಡ ಮಟ್ಟದ ಲಾಭವನ್ನು ನೀವು ಪಡೆಯುವಿರಿ. ಹಿಂದೆ ಮಾಡಿದ ಸಾಲಗಳನ್ನು ತೀರಿಸಲು ಈ ಸಮಯದಲ್ಲಿ ಹಲವಾರು ಮಾರ್ಗಗಳು ತೆರೆದುಕೊಳ್ಳುತ್ತವೆ. ಮನೆಯಲ್ಲಿ ಶುಭ ಕಾರ್ಯಗಳಿಗಾಗಿ ಹೆಚ್ಚು ಹಣ ನನೀವು ಖರ್ಚು ಮಾಡಬಹುದು.

