Dailyhunt Logo
  • Light mode
    Follow system
    Dark mode
    • Play Story
    • App Story
ಸೇಂಟ್‌ ಮೇರಿಸ್‌ ಬೆಸಿಲಿಕಾ ಧ್ವಜಾರೋಹಣ-ಆ.29ಕ್ಕೆ ಶಿವಾಜಿನಗರ ಸುತ್ತಮುತ್ತ ವಾಹನ ಸಂಚಾರ ಬದಲಾವಣೆ: ಪರ್ಯಾಯ ಮಾರ್ಗಗಳೇನು?

ಸೇಂಟ್‌ ಮೇರಿಸ್‌ ಬೆಸಿಲಿಕಾ ಧ್ವಜಾರೋಹಣ-ಆ.29ಕ್ಕೆ ಶಿವಾಜಿನಗರ ಸುತ್ತಮುತ್ತ ವಾಹನ ಸಂಚಾರ ಬದಲಾವಣೆ: ಪರ್ಯಾಯ ಮಾರ್ಗಗಳೇನು?

Vijay Karnataka 1 week ago

ಬೆಂಗಳೂರು: ಶಿವಾಜಿನಗರದ ಸೇಂಟ್‌ ಮೇರಿಸ್‌ ಬೆಸಿಲಿಕಾದಲ್ಲಿ ಶನಿವಾರ (ಆ.29) ಆರೋಗ್ಯ ಮಾತೆಯ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.

ಹೀಗಾಗಿ, ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 10ರವರೆಗೆ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಚಾರ ನಿರ್ಬಂಧ

  • ಬಾಳೇಕುಂದ್ರಿ ವೃತ್ತದಿಂದ ಜ್ಯೋತಿ ಕೆಫೆ ಜಂಕ್ಷನ್‌ವರೆಗೆ ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ.
  • ಶಿವಾಜಿ ಸರ್ಕಲ್‌ನಿಂದ ಜ್ಯೋತಿ ಕೆಫೆ ಜಂಕ್ಷನ್‌ ಕಡೆಗೆ.
  • ಬಿಆರ್‌ವಿ ಜಂಕ್ಷನ್‌ನಿಂದ ಸೆಲೆಕ್ಟ್ ಜಂಕ್ಷನ್‌ವರೆಗೆ ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ.
  • ಸೆಲೆಕ್ಟ್ ಜಂಕ್ಷನ್‌ನಿಂದ ಜ್ಯೋತಿ ಕೆಫೆ ಜಂಕ್ಷನ್‌ ಕಡೆಗೆ.
  • ಬೌರಿಂಗ್‌ ಆಸ್ಪತ್ರೆ ಜಂಕ್ಷನ್‌ನಿಂದ ಸೆಲೆಕ್ಟ್ ಜಂಕ್ಷನ್‌ವರೆಗೆ.
  • ಕ್ವಾಡ್ರೆಂಟ್‌ ವೃತ್ತದಿಂದ ಆರ್‌ಎಂಎಸ್‌ ಜಂಕ್ಷನ್‌ ಕಡೆಗೆ.
  • ಬಂಬೂ ಬಜಾರ್‌ ಕಡೆಯಿಂದ ಸುನ್ನಿ ವೃತ್ತದ ಕಡೆಗೆ.
  • ಸುನ್ನಿ ವೃತ್ತದಿಂದ ಆರ್‌ಎಂಎಸ್‌ ಜಂಕ್ಷನ್‌ ಕಡೆಗೆ.

ಪರ್ಯಾಯ ರಸ್ತೆಗಳು

  • ಕ್ವೀನ್ಸ್‌ ರಸ್ತೆಯಿಂದ ಶಿವಾಜಿನಗರ ಬಸ್‌ ನಿಲ್ದಾಣದ ಕಡೆಗೆ ಹೋಗುವ ಬಿಎಂಟಿಸಿ ಬಸ್‌ಗಳು ಬಾಳೇಕುಂದ್ರಿ ವೃತ್ತ ಅಥವಾ ಕ್ವೀನ್ಸ್‌ ರಸ್ತೆಯಲ್ಲಿ ಸಾಗಿ ಟ್ರಾಫಿಕ್‌ ಹೆಡ್‌ ಕ್ವಾರ್ಟರ್‌ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ ಇನ್‌ಫೆಂಟ್ರಿ ರಸ್ತೆಯಲ್ಲಿ ಚಲಿಸಿ ಸೆಂಟ್ರಲ್‌ ಸ್ಟ್ರೀಟ್‌ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಮುಂದೆ ಹೋಗಬೇಕು.
  • ಬಾಳೇಕುಂದ್ರಿ ವೃತ್ತದಿಂದ ಜ್ಯೋತಿ ಕೆಫೆ ಜಂಕ್ಷನ್‌ ಕಡೆಗೆ ಹೋಗುವ ಇತರೆ ವಾಹನಗಳು ಶಿವಾಜಿ ವೃತ್ತದಲ್ಲಿ ಎಡ ಅಥವಾ ಬಲ ತಿರುವು ಪಡೆದು ಮುಂದೆ ಸಾಗಬೇಕು.
  • ಅನಿಲ್‌ ಕುಂಬ್ಳೆ ಜಂಕ್ಷನ್‌ನಿಂದ ಶಿವಾಜಿನಗರ ಬಸ್‌ ನಿಲ್ದಾಣಕ್ಕೆ ಹೋಗುವ ಬಿಎಂಟಿಸಿ ಬಸ್‌ಗಳು ಬಿಆರ್‌ವಿ ಜಂಕ್ಷನ್‌ನಲ್ಲಿ ಎಡ ಅಥವಾ ಬಲ ತಿರುವು ಪಡೆದು ಪ್ರಯಾಣಿಕರನ್ನು ಇಳಿಸಿ, ವಾಪಸ್‌ ಮಾರ್ಗಕ್ಕೆ ತೆರಳಬೇಕು.
  • ಮಣಿಪಾಲ್‌ ಜಂಕ್ಷನ್‌ ಕಡೆಯಿಂದ ಶಿವಾಜಿನಗರ ಬಸ್‌ ನಿಲ್ದಾಣಕ್ಕೆ ಹೋಗುವ ಬಿಎಂಟಿಸಿ ಬಸ್‌ಗಳು ಬಿಆರ್‌ವಿ ಜಂಕ್ಷನ್‌ ಹತ್ತಿರ ಪ್ರಯಾಣಿಕರನ್ನು ಇಳಿಸಿ, ನೇರವಾಗಿ ಸಿಟಿಒ ಜಂಕ್ಷನ್‌ ಬಳಿ ಎಡ ತಿರುವು ಪಡೆದು ಎಂ.ಜಿ.ರಸ್ತೆ ಮೂಲಕ ವಾಪಸ್‌ ತೆರಳಬೇಕು.
  • ಬಿಎಂಟಿಸಿ ಬಸ್‌ಗಳನ್ನು ಹೊರತುಪಡಿಸಿ ಬಿಆರ್‌ವಿ ಜಂಕ್ಷನ್‌ನಿಂದ ಶಿವಾಜಿನಗರದ ಕಡೆಗೆ ಹೋಗುವ ಇತರೆ ವಾಹನಗಳು ಸೆಲೆಕ್ಟ್ ಜಂಕ್ಷನ್‌ನಲ್ಲಿ ಎಡ ಅಥವಾ ಬಲ ತಿರುವು ಪಡೆದು ಮುಂದೆ ಸಾಗಬೇಕು.
  • ಕಮರ್ಷಿಯಲ್‌ ಸ್ಟ್ರೀಟ್‌ ಕಡೆಯಿಂದ ಬರುವ ವಾಹನಗಳು ಬೌರಿಂಗ್‌ ಆಸ್ಪತ್ರೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ ಕಬ್ಬನ್‌ ರಸ್ತೆ ಮೂಲಕ ಹೋಗಬೇಕು.
  • ಪುಲಿಕೇಶಿನಗರ ಕಡೆಯಿಂದ ಶಿವಾಜಿನಗರದ ಕಡೆಗೆ ಹೋಗುವ ವಾಹನಗಳು ಕ್ವಾಡ್ರೆಂಡ್‌ ವೃತ್ತದಲ್ಲಿ ಎಡಕ್ಕೆ ತಿರುಗಿ ಡಿ.ಕೆ.ಸ್ಟ್ರೀಟ್‌ ಮೂಲಕ ಸಂಚರಿಸಬೇಕು.
  • ಕಮರ್ಷಿಯಲ್‌ ಸ್ಟ್ರೀಟ್‌ನಿಂದ ಶಿವಾಜಿನಗರದ ಕಡೆಗೆ ಬರುವ ವಾಹನಗಳು ಕಮರ್ಷಿಯಲ್‌ ಸ್ಟ್ರೀಟ್‌ ನಿರ್ಗಮನ ಭಾಗದಲ್ಲಿ ಎಡಕ್ಕೆ ತಿರುಗಿ ಆಸ್ಪತ್ರೆ ರಸ್ತೆ ಮೂಲಕ ಸಂಚರಿಸಬೇಕು.
  • ಬಂಬೂ ಬಜಾರ್‌ ಕಡೆಯಿಂದ ಶಿವಾಜಿನಗರದ ಕಡೆಗೆ ಹೋಗುವ ಎಲ್ಲಾ ವಾಹನಗಳು ಸಲೀಂ ಗ್ಯಾರೇಜ್‌ ಬಳಿ ಬಲಕ್ಕೆ ತಿರುಗಿ ತಿಮ್ಮಯ್ಯ ರಸ್ತೆ ಮೂಲಕ ಸಾಗಬೇಕು.
  • HKP ದರ್ಗಾ ಕಡೆಯಿಂದ ಬರುವ ವಾಹನಗಳು ಸುನ್ನಿ ವೃತ್ತದಲ್ಲಿ ಎಡಕ್ಕೆ ತಿರುಗಿ ಕಾಕ್‌ ಬರ್ನ್‌ ರಸ್ತೆ ಮತ್ತು ಮಿರ್‌ ಒಬೇದುಲ್ಲಾ ರಸ್ತೆಯಲ್ಲಿ ಸಂಚರಿಸಬೇಕು.

ವಾಹನ ನಿಲುಗಡೆಗೆ ನಿರ್ಬಂಧ

  • ರಸೆಲ್‌ ಮಾರ್ಕೆಟ್‌ ಸುತ್ತಮುತ್ತ
  • ಬ್ರಾಡ್‌ವೇ ರಸ್ತೆ
  • ಮೀನಾಕ್ಷಿ ಕೋಯಿಲ್‌ ಸ್ಟ್ರೀಟ್‌
  • ಒಪಿಎಚ್‌ ರಸ್ತೆ
  • ಸೆಂಟ್ರಲ್‌ ಸ್ಟ್ರೀಟ್‌
  • ಶಿವಾಜಿ ರಸ್ತೆ
  • ವೆಂಕಟಸ್ವಾಮಿ ನಾಯ್ಡು ರಸ್ತೆ
  • ಯೂನಿಯನ್‌ ಸ್ಟ್ರೀಟ್‌
  • ಇನ್‌ಫೆಂಟ್ರಿ ರಸ್ತೆ
  • ಕಬ್ಬನ್‌ ರಸ್ತೆ
  • ಲೇಡಿ ಕರ್ಜನ್‌ ರಸ್ತೆ
  • ಪ್ಲೇನ್‌ ಸ್ಟ್ರೀಟ್‌

ವಾಹನ ನಿಲುಗಡೆಗೆ ಸ್ಥಳಾವಕಾಶ

  • ಛೋಟಾ ಮೈದಾನ
  • ಶಿವಾಜಿನಗರ ಬಿಎಂಟಿಸಿ ಬಸ್‌ ನಿಲ್ದಾಣದ 1ನೇ ಮಹಡಿ
  • ಸಫೀನಾ ಫ್ಲಾಜಾ ಮುಂಭಾಗ (ಮೈನ್‌ ಗಾರ್ಡನ್‌ ರಸ್ತೆ)
  • ರಮಡಾ ಹೋಟೆಲ್‌ (ಹಳೆ ಕಾಂಗ್ರೆಸ್‌ ಕಚೇರಿ)
Dailyhunt
Disclaimer: This content has not been generated, created or edited by Dailyhunt. Publisher: Vijay Karnataka