Dailyhunt Logo
  • Light mode
    Follow system
    Dark mode
    • Play Story
    • App Story
ಶನಿ ವಕ್ರ 2026: ಮಿಥುನ ಸೇರಿ ಈ 5 ರಾಶಿಯವರ ಭಾಗ್ಯದ ಬಾಗಿಲು ಓಪನ್ ಮನೆ ವಾಹನ ಖರೀದಿ ಯೋಗ...!

ಶನಿ ವಕ್ರ 2026: ಮಿಥುನ ಸೇರಿ ಈ 5 ರಾಶಿಯವರ ಭಾಗ್ಯದ ಬಾಗಿಲು ಓಪನ್ ಮನೆ ವಾಹನ ಖರೀದಿ ಯೋಗ...!

Vijay Karnataka 3 months ago

ಶನಿ ವಕ್ರ 2026: ಜುಲೈ 27ರಂದು ಶನಿ ವಕ್ರ ಸಂಚಾರ ಮಾಡಲಿದೆ. ಇದು ಕೆಲ ರಾಶಿಯವರ ಭಾಗ್ಯದ ಬಾಗಿಲನ್ನು ತೆರೆಯುವುದು. ಈ ಸಮಯದಲ್ಲಿ ಶನಿ ಕೃಪೆಗೆ ಪಾತ್ರರಾಗುವ ರಾಶಿಗಳ ಭವಿಷ್ಯ ತಿಳಿಯಿರಿ.

​ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯು ಬಹಳ ಶಕ್ತಿಶಾಲಿ ಮತ್ತು ನಿಧಾನಗತಿಯಲ್ಲಿ ಸಾಗುವ ಗ್ರಹ ಪರಿಗಣಿಸಲಾಗುತ್ತದೆ.
ಆದ್ದರಿಂದ ಶನಿಯ ಚಲನೆಯಲ್ಲಿನ ಬದಲಾವಣೆಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಜುಲೈ 27ರಂದು ಶನಿಯು ಮೀನ ರಾಶಿಯಲ್ಲಿ ವಕ್ರ ಹಂತದಲ್ಲಿ ಪ್ರಯಾಣಿಸಲು ಪ್ರಾರಂಭಿಸುತ್ತಾನೆ. ಇದು ಡಿಸೆಂಬರ್ 11ರವರೆಗೆ ಅದೇ ಸ್ಥಾನದಲ್ಲಿರುತ್ತದೆ. ಶ್ರಾವಣ ಶುಭ ಮಾಸದ ಆರಂಭದ ಮೊದಲು ಸಂಭವಿಸುವ ಈ ಗ್ರಹ ಬದಲಾವಣೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಕೆಲವು ರಾಶಿಗಳು ಶನಿಯ ಈ ವಕ್ರ ಹಂತದಿಂದ ಅಪಾರ ಪ್ರಯೋಜನಗಳನ್ನು ಪಡೆಯಲಿದ್ದಾರೆ. ವಿಶೇಷವಾಗಿ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿವೆ. ಹಾಗಾದರೆ ಯಾವ ರಾಶಿಯವರ ಬಾಳು ಬಂಗಾರವಾಗಲಿದೆ ಎಮದು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ...ಕಟಕ ರಾಶಿ

ಶನಿಯ ಸಂಚಾರ ಕಟಕ ರಾಶಿಯವರ ಆತ್ಮವಿಶ್ವಾಸ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ. ಈ ಅವಧಿಯಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಮತ್ತು ಸವಾಲಿನ ಕೆಲಸಗಳು ಸರಿಯಾಗಿ ಪೂರ್ಣಗೊಳ್ಳುತ್ತವೆ. ಅಲ್ಲದೆ ಇದು ನಿಮಗೆ ಯಶಸ್ವಿ ಮತ್ತು ಶಾಂತಿಯುತ ಜೀವನವನ್ನು ನೀಡುತ್ತದೆ. ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವವರು ಈ ಅವಧಿಯಲ್ಲಿ ಅದಕ್ಕೆ ಅವಕಾಶಗಳನ್ನು ಪಡೆಯಬಹುದು. ಯಾಕೆಂದರೆ ಈ ಅವಧಿಯು ಬೌದ್ಧಿಕ ಅನ್ವೇಷಣೆಗಳು ಮತ್ತು ಅಂತರರಾಷ್ಟ್ರೀಯ ಪ್ರಯಾಣದ ಅವಕಾಶಗಳನ್ನು ಪ್ರೋತ್ಸಾಹಿಸುತ್ತದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ಶಿಕ್ಷಣದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡುವರು. ಇದು ಶೈಕ್ಷಣಿಕ ಬೆಳವಣಿಗೆಗೆ ಉತ್ತಮ ಅವಧಿಯಾಗಿದೆ. ಒಟ್ಟಾರೆಯಾಗಿ ಕಟಕ ರಾಶಿಯವರು ತಮ್ಮ ಜೀವನವನ್ನು ಬದಲಾಯಿಸಲು ಈ ಅವಕಾಶವನ್ನು ಬಳಸಬಹುದು.


ಮಿಥುನ ರಾಶಿ

ಶನಿಯ ವಕ್ರ ಸಂಚಾರ ಮಿಥುನ ರಾಶಿಯವರಿಗೆ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ನಿಮ್ಮ ವೃತ್ತಿಪರ ಜೀವನದಿಂದ ಉಂಟಾಗುವ ಅನೇಕ ಸಮಸ್ಯೆಗಳು ಕೊನೆಗೊಳ್ಳುತ್ತವೆ. ನಿಮ್ಮ ಆರ್ಥಿಕ ಪರಿಸ್ಥಿತಿ ಈಗ ಹಲವು ಪಟ್ಟು ಸುಧಾರಣೆ ಕಾಣುವುದು. ನೀವು ಅನೇಕ ಕ್ಷೇತ್ರಗಳಿಂದ ಲಾಭವನ್ನು ಪಡೆಯುವಿರಿ. ವೆಚ್ಚಗಳು ಕಡಿಮೆಯಾಗುವ ಸಮಯ ಇದು. ಅಲ್ಲದೆ ಉಳಿತಾಯವೂ ದ್ವಿಗುಣವಾಗುತ್ತದೆ. ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಈ ಅವಧಿಯಲ್ಲಿ ಸರಿಯಾದ ಕೆಲಸ ಹುಡುಕಿಕೊಂಡು ಮನೆ ಬಾಗಿಲಿಗೆ ಬರಹುದು. ಈಗಾಗಲೇ ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ಇದರೊಂದಿಗೆ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಒಟ್ಟಾರೆಯಾಗಿ ನಿಮ್ಮ ಜೀವನವು ಯಶಸ್ಸು ಮತ್ತು ಅದೃಷ್ಟದಿಂದ ಕೂಡಿರಲಿದೆ.


ತುಲಾ ರಾಶಿ

ತುಲಾ ರಾಶಿಯವರಿಗೆ ಶನಿಯಿಂದ ಆರ್ಥಿಕ ಲಾಭವಿದೆ. ಶನಿಯ ವಿಶೇಷ ಕೃಪೆ ಈ ಸಮಯದಲ್ಲಿ ಇರುವುದರಿಂದ ನೀವು ಮಾಡುವ ಕಾರ್ಯದಲ್ಲಿ ಅನಿರೀಕ್ಷಿತ ಗೆಲುವು ನೀವು ಸಾಧಿಸುವಿರಿ. ನಿಮ್ಮ ಆರ್ಥಿಕ ಜೀವನದಲ್ಲಿ ಸಾಕಷ್ಟು ಸುಧಾರಣೆಗಳು ಕಂಡು ಬರಲಿವೆ. ಕುಟುಂಬದಲ್ಲಿ ದೀರ್ಘಕಾಲದಿಂದ ನಿಂತು ಹೋಗಿದ್ದ ಶುಭ ಕಾರ್ಯಗಳು ಮತ್ತೆ ಶುರುವಾಗಬಹುದು. ಕುಟುಂಬಸ್ಥರ ನೆರವಿಗೆ ನೀವು ಸದಾ ನಿಲ್ಲುವಿರಿ. ಆರ್ಥಿಕ ಸ್ಥಿತಿ ನೆಮ್ಮದಿಯನ್ನು ತಂದುಕೊಡಲಿದೆ. ಹಿಂದೆ ಮಾಡಿದ ಸಾಲಗಳನ್ನು ತೀರಿಸಲು ಇದು ಸುವರ್ಣಕಾಲ. ನಿಮ್ಮ ಆದಾಯ, ಸಂಪತ್ತು, ಸೌಕರ್ಯಗಳು ಕ್ರಮೇಣ ಹೆಚ್ಚಾಗುತ್ತಾ ಸಾಗಲಿವೆ.


ಮೀನ ರಾಶಿ

​ಮೀನ ರಾಶಿಯವರಿಗೆ ಈ ಗ್ರಹ ಪರಿವರ್ತನೆಯು ಉತ್ತಮ ಪ್ರಯೋಜನಗಳನ್ನು ನೀಡುವುದು. ಈ ಗ್ರಹ ಪರಿವರ್ತನೆಯಿಂದಾಗಿ ನಿಮ್ಮ ಜೀವನದಲ್ಲಿ ಚಾಲ್ತಿಯಲ್ಲಿರುವ ಆರ್ಥಿಕ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಅಲ್ಲದೆ ಜೀವನದಲ್ಲಿನ ಅನೇಕ ದೀರ್ಘಕಾಲದ ಆಸೆಗಳು ಈಡೇರುತ್ತವೆ. ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಅವಕಾಶಗಳು ಸಿಗುತ್ತವೆ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಪರಸ್ಪರ ವಾತ್ಸಲ್ಯ ಹೆಚ್ಚಾಗುವುದು. ಜೊತೆಗೆ ಸಂಗಾತಿಗೆ ಕೆಲವು ಅನಿರೀಕ್ಷಿತ ಉಡುಗೊರೆಗಳನ್ನು ನೀಡಬಹುದು. ಈ ಅವಧಿಯು ನೀವು ನಿರೀಕ್ಷಿಸಿದ್ದಕ್ಕಿಂತ ಉತ್ತಮವಾಗಿರುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವು ಉತ್ತಮವಾಗಿರಲಿದೆ. ಸ್ನೇಹಿತರೊಂದಿಗೆ ಹೊರಗೆ ಹೋಗಲು ಅವಕಾಶಗಳು ಉಂಟು. ಈ ಅವಧಿಯಲ್ಲಿ ಉದ್ಯಮಿಗಳು ದೊಡ್ಡ ಲಾಭವನ್ನು ಗಳಿಸುವರು.


ಧನು ರಾಶಿ

ಶನಿಯ ಸಂಚಾರ ಧನು ರಾಶಿಯವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. ಅಲ್ಲದೆ ಇದು ಯಶಸ್ವಿ ವ್ಯಾಪಾರ ವ್ಯವಹಾರಗಳು ಮತ್ತು ವೃತ್ತಿ ಪ್ರಗತಿಯನ್ನು ನೀಡುತ್ತದೆ. ಈ ಅವಧಿಯಲ್ಲಿ ಹಠಾತ್ ಆರ್ಥಿಕ ಲಾಭಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು. ಆದಾಯದ ಮೂಲಗಳು ವೃದ್ದಿಯಾಗುವ ಸುವರ್ಣಕಾಲವಿದು. ವ್ಯಾಪಾರಿಗಳು ಉತ್ತಮ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವ ಪರ್ವಕಾಲ. ಜೊತೆಗೆ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಣೆ ಕಾಣುವುದು. ನೀವು ಕುಟುಂಬ ಸದಸ್ಯರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಅವಕಾಶ ಸಿಗಲಿದೆ. ಕುಟುಂಬ ಜೀವನವು ಸಂತೋಷದ ವಾತಾವರಣದಿಂದ ತುಂಬಿರುವುದು. ಹೊಸ ಆಸ್ತಿಗಳನ್ನು ಖರೀದಿಸುವುದು ಮತ್ತು ಹೂಡಿಕೆ ಮಾಡುವುದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಆರೋಗ್ಯವು ಸಾಮಾನ್ಯಕ್ಕಿಂತ ಉತ್ತಮವಾಗಿರಲಿದೆ.


Dailyhunt
Disclaimer: This content has not been generated, created or edited by Dailyhunt. Publisher: Vijay Karnataka