Dailyhunt
ಶತ್ರು ಗ್ರಹಗಳ ಮಹಾ ಮಿಲನ 2026: ವೃಷಭ ಸೇರಿ ಈ 5 ರಾಶಿಯವರಿಗೆ ಬದುಕಲ್ಲಿ ಹೊಸ ಬೆಳಕು ಬಯಸಿದ ಭಾಗ್ಯ...!

ಶತ್ರು ಗ್ರಹಗಳ ಮಹಾ ಮಿಲನ 2026: ವೃಷಭ ಸೇರಿ ಈ 5 ರಾಶಿಯವರಿಗೆ ಬದುಕಲ್ಲಿ ಹೊಸ ಬೆಳಕು ಬಯಸಿದ ಭಾಗ್ಯ...!

Vijay Karnataka 1 day ago

ತ್ರು ಗ್ರಹಗಳ ಮಹಾ ಮಿಲನ 2026: ಸಿಂಹ ರಾಶಿಯಲ್ಲಿ ಶತ್ರು ಗ್ರಹಗಳ ಸಂಯೋಗದಿಂದ ವಿಶೇಷ ಯೋಗ ರೂಪಗೊಳ್ಳುವುದು. ಈ ಯೋಗದಿಂದಾಗಿ ಕೆಲವು ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದೆ. ಆ ಅದೃಷ್ಟ ರಾಶಿಗಳು ಯಾವುವು ಎಂದು ತಿಳಿಯಿರಿ.

ಜ್ಯೋತಿಷ್ಯದಲ್ಲಿ ಅಶುಭ ಗ್ರಹಗಳಲ್ಲಿ ಕೇತು ಕೂಡ ಒಂದಾಗಿದೆ.
ಇದನ್ನು ನೆರಳು ಗ್ರಹ ಎಂದು ಕರೆಯಲಾಗುವುದು. ಕೇತು ಅಶುಭ ಗ್ರಹವೇ ಆಗಿದ್ದರು ಇದರೊಂದಿಗೆ ಶುಭ ಗ್ರಹಗಳು ಸೇರಿಕೊಂಡಾಗ, ಜಾತಕದಲ್ಲಿ ಇದರ ಸ್ಥಾನ ಬಲವಾಗಿ ಇದ್ದಾಗ ಶುಭ ಫಲಗಳನ್ನು ನೀಡುವುದು. ಅಂದಹಾಗೆ ಪ್ರಸ್ತುತ ಕೇತು ಸಿಂಹ ರಾಶಿಯಲ್ಲಿ ಸಂಚಾರ ಮಾಡುತ್ತಿದೆ. ಇದೇ ಮೇ25ರಂದು ಚಂದ್ರ ಸಿಂಹ ರಾಶಿಗೆ ಸಾಗುವುದು. ಸಿಂಹ ರಾಶಿಯಲ್ಲಿ ಕೇತು ಹಾಗೂ ಚಂದ್ರನ ಮಿಲನವಾಗುವುದರಿಂದ ಗ್ರಹಣ ಯೋಗ ರೂಪಗೊಳ್ಳುವುದು. ಈ ಯೋಗ ಕೆಲವೊಂದು ರಾಶಿಯವರಿಗೆ ಶುಭ ಫಲಗಳನ್ನು ನೀಡುವುದು. ಕುಟುಂಬದಲ್ಲಿ ನೆಮ್ಮದಿ, ಸಂತೋಷ, ಹಣಕಾಸಿನ ಲಾಭ, ಉದ್ಯೋಗ ಪ್ರಗತಿಯನ್ನು ತರುವುದು. ಹಾಗಾದರೆ ಯಾವ ರಾಶಿಯವರಿಗೆ ಈ ಸಮಯ ಮಂಗಳಕರ ಫಲ ಸಿಗಲಿವೆ ಎಮದು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ.... ಧನು ರಾಶಿ

ಧನು ರಾಶಿಯವರಿಗೆ ಈ ಸಮಯ ಆರ್ಥಿಕವಾಗಿ ಉತ್ತಮವಾಗಿರುತ್ತದೆ. ಅಧಿಕ ಆರ್ಥಿಕ ಲಾಭಗಳನ್ನು ಪಡೆಯುವ ಸಾಧ್ಯತೆಗಳು ಹೆಚ್ಚು. ದೂರ ಪ್ರಯಾಣಗಳಿಗೆ ಹೋಗುವ ಅವಕಾಶಗಳಿವೆ. ಈ ಪ್ರವಾಸಗಳು ಅಧಿಕ ಲಾಭಗಳನ್ನು ತರಬಹುದು. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಬಲಗೊಳ್ಳುವುದು. ಪ್ರೇಮ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಸಂಬಂಧಗಳಲ್ಲಿ ತಿಳುವಳಿಕೆ ಬೆಳೆಯಲಿದೆ. ಮುಖ್ಯವಾಗಿ ಕೇತುವಿನ ಕೃಪೆಯಿಂದಾಗಿ ಆತ್ಮವಿಶ್ವಾಸವೂ ವೃದ್ಧಿಯಾಗುವುದು. ಆರ್ಥಿಕ ಜೀವನ ನೆಮ್ಮದಿಯಿಂದ ಕೂಡಿರಲಿದೆ. ಈ ಸಮಯದಲ್ಲಿ ಮಾಡಿದ ಕಾರ್ಯಗಳು ನಿಮಗೆ ದುಪ್ಪಟ್ಟು ಲಾಭವನ್ನು ತಂದುಕೊಡಲಿವೆ.


ತುಲಾ ರಾಶಿ

ತುಲಾ ರಾಶಿಯವರು ವೃತ್ತಿಜೀವನದಲ್ಲಿ ಪ್ರಗತಿಯನ್ನು ಕಾಣುತ್ತಾರೆ. ಪ್ರಗತಿಗೆ ಹಲವು ಅವಕಾಶಗಳು ಸಹ ಇರುತ್ತವೆ. ಸಮಾಜದಲ್ಲಿ ಗೌರವ, ಕೀರ್ತಿ ಮತ್ತು ಖ್ಯಾತಿ ಹೆಚ್ಚಾಗುತ್ತದೆ. ದೀರ್ಘಕಾಲದಿಂದ ಎದುರಿಸುತ್ತಿರುವ ಎಲ್ಲಾ ಅಡೆತಡೆಗಳು ದೂರವಾಗುತ್ತವೆ. ನೀವು ಹೊಸ ಸ್ನೇಹವನ್ನು ಪಡೆಯುತ್ತೀರಿ. ನೀವು ಪ್ರವಾಸಗಳಿಗೆ ಹೋಗುವ ಸಾಧ್ಯತೆಗಳು ಇವೆ. ಈ ಪ್ರವಾಸಗಳು ಉತ್ತಮ ಲಾಭವನ್ನು ತರುವ ಸಮಯ ಇದು. ನ್ಯಾಯಾಲಯದ ಪ್ರಕರಣಗಳಲ್ಲಿ ಅನುಕೂಲಕರ ಫಲಿತಾಂಶಗಳು ಕಂಡುಬರುತ್ತವೆ. ಉತ್ತಮ ಆರ್ಥಿಕ ಲಾಭಗಳನ್ನು ಪಡೆಯುವ ಅವಕಾಶಗಳೂ ಇವೆ. ಪ್ರತಿಯೊಂದು ಆಲೋಚನೆಯೂ ಯಶಸ್ವಿಯಾಗುವುದು. ನೀವು ಯಾವುದೇ ನಿರ್ಧಾರವನ್ನು ಸ್ಪಷ್ಟವಾಗಿ ತೆಗೆದುಕೊಳ್ಳುತ್ತೀರಿ. ಕೆಲಸದಲ್ಲಿ ಕಠಿಣ ಪರಿಶ್ರಮವನ್ನು ಪ್ರಶಂಸಿಸಲಾಗುತ್ತದೆ. ನಿಮಗೆ ಹೊಸ ವೃತ್ತಿ ಅವಕಾಶಗಳು ಸಿಗಬಹುದು. ಈ ಸಮಯದಲ್ಲಿ ಪ್ರೇಮ ವಿವಾಹದ ಸಾಧ್ಯತೆಗಳಿವೆ. ಮದುವೆಯಾಗದವರಿಗೆ ಉತ್ತಮ ವರ ಸಿಗುವ ಸಾಧ್ಯತೆಯೂ ಉಂಟು. ನೀವು ಬಹಳ ದಿನಗಳಿಂದ ಉದ್ಯೋಗವನ್ನು ಹುಡುಕುತ್ತಿದ್ದರೆ, ಈ ಸಂಚಾರದ ನಂತರ ಉತ್ತಮ ಉದ್ಯೋಗವನ್ನು ಪಡೆಯುವ ಸಾಧ್ಯತೆಯಿದೆ.


ಮಿಥುನ ರಾಶಿ

ಮಿಥುನ ರಾಶಿಯ ಮೂರನೇ ಮನೆಯಲ್ಲಿ ಕೇತು ಚಂದ್ರ ಸಂಯೋಗ ಸಾಕಷ್ಟು ಶುಭ ಫಲಗಳನ್ನು ನೀಡುವುದು. ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯನ್ನು ನೀವು ಕಾಣುವಿರಿ. ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಪಡೆಯಬಹುದು. ಕೆಲಸದಲ್ಲಿ ನಿಮ್ಮ ಮೇಲಧಿಕಾರಿಗಳಿಂದ ಸಂಪೂರ್ಣ ಬೆಂಬಲ ಮತ್ತು ಮೆಚ್ಚುಗೆ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುವುದು. ನೀವು ಜೀವನದಲ್ಲಿ ಸಾಧನೆಗಳನ್ನು ಸಾಧಿಸುವಿರಿ. ಪ್ರೇಮ ಜೀವನ ಸಿಹಿಯಾಗಿರುತ್ತದೆ. ಹೂಡಿಕೆಗಳಿಂದ ಅಧಿಕ ಲಾಭವನ್ನು ಪಡೆಯಬಹುದು. ನವವಿವಾಹಿತರಿಗೆ ಮಕ್ಕಳಾಗುವ ಸಾಧ್ಯತೆ ಇದೆ. ಸಂಶೋಧನಾ ಕ್ಷೇತ್ರದಲ್ಲಿರುವವರು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.


ಕಟಕ ರಾಶಿ

ಕಟಕ ರಾಶಿಯ ಎರಡನೇ ಮನೆಯಲ್ಲಿ ಕೇತು ಚಂದ್ರ ಸಂಯೋಗವಾಗುವುದು. ಇದು ಅದೃಷ್ಟದ ಬೆಂಬಲವನ್ನು ತರುತ್ತದೆ. ಉದ್ಯಮಿಗಳಿಗೆ ಅಧಿಕ ಲಾಭ ಮತ್ತು ಹೊಸ ಒಪ್ಪಂದಗಳು ದೊರೆಯುವ ಸಾಧ್ಯತೆ ಉಂಟು. ದೀರ್ಘಕಾಲೀನ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಮನಸ್ಸಿನ ಶಾಂತಿ ಹೆಚ್ಚಾಗಲಿದೆ. ಉದ್ಯಮಿಗಳಿಗೆ ಆರ್ಥಿಕ ಲಾಭವಾಗುವ ಸಮಯ. ಉದ್ಯಮಿಗಳಿಗೆ ಭವಿಷ್ಯದಲ್ಲಿ ಲಾಭ ತರುವ ಹೊಸ ಒಪ್ಪಂದಗಳು ಸಿಗಬಹುದು. ಶುಕ್ರನ ಕೃಪೆಯಿಂದ ಅನಿರೀಕ್ಷಿತ ಆರ್ಥಿಕ ಲಾಭ ಗಳಿಸುವ ಸಾಧ್ಯತೆ ಇದೆ. ಕೆಲವರಿಗೆ ವಿದೇಶ ಪ್ರಯಾಣದ ಅವಕಾಶಗಳು ಸಿಗಬಹುದು. ಆರ್ಥಿಕ ಪರಿಸ್ಥಿತಿ ಅನಿರೀಕ್ಷಿತವಾಗಿ ಸುಧಾರಿಸಲಿದೆ.


ವೃಷಭ ರಾಶಿ

ವೃಷಭ ರಾಶಿಯ ನಾಲ್ಕನೇ ಮನೆಯಲ್ಲಿ ಕೇತು ಚಂದ್ರ ಸಂಯೋಗವಾಗುವುದು. ಇದು ಈ ರಾಶಿಗಳಿಗೆ ಕೆಲಸ ಮತ್ತು ವೃತ್ತಿಜೀವನದಲ್ಲಿ ಪ್ರಗತಿಗೆ ಹೊಸ ಅವಕಾಶಗಳನ್ನು ತರುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುವುದು. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರಲಿದೆ. ಹೂಡಿಕೆಗಳಿಂದ ಉತ್ತಮ ಲಾಭ ಸಿಗುವುದು. ಅವಿವಾಹಿತರಿಗೆ ಬಯಸಿದ ವರ ಸಿಗಬಹುದು. ವಿವಾಹಿತರಿಗೆ ಸಂತೋಷದ ದಾಂಪತ್ಯ ಜೀವನವಿರುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಬೇಡಿದ ಉದ್ಯೋಗ ಸಿಗುವ ಸಾಧ್ಯತೆ ಉಂಟು. ಜಂಟಿ ವ್ಯವಹಾರ ಮಾಡುವವರಿಗೆ ಉತ್ತಮ ಲಾಭ ಸಿಗುವುದು. ಮುಖ್ಯವಾಗಿ ಅನಿರೀಕ್ಷಿತ ಆರ್ಥಿಕ ಲಾಭಗಳು ಸಿಗುತ್ತವೆ. ಇದು ನಿಮಗೆ ಬಹಳಷ್ಟು ಹಣವನ್ನು ಉಳಿಸಲು ಸಹಾಯ ಮಾಡುತ್ತದೆ. ನಿಮ್ಮೆಲ್ಲಾ ಕಾರ್ಯಗಳು ಸುಗಮವಾಗಿ ಮುಗಿಯಲು ಆರಂಭವಾಗುತ್ತವೆ. ಆರ್ಥಿಕವಾಗಿ ನೀವು ಸದೃಢರಾಗುವ ಸಮಯ ಇದು.

Dailyhunt
Disclaimer: This content has not been generated, created or edited by Dailyhunt. Publisher: Vijay Karnataka