Dailyhunt Logo
  • Light mode
    Follow system
    Dark mode
    • Play Story
    • App Story
ಶಿವಮೊಗ್ಗದಿಂದ ಆಂಧ್ರ ಪ್ರದೇಶದ ವಿವಿಧ ನಗರಗಳಿಗೆ 2 ವಿಶೇಷ ರೈಲು ಆರಂಭ; ರಾಜ್ಯದಲ್ಲಿ 8 ಕಡೆ ಸ್ಟಾಪ್‌! ವೇಳಾಪಟ್ಟಿ ಬಿಡುಗಡೆ

ಶಿವಮೊಗ್ಗದಿಂದ ಆಂಧ್ರ ಪ್ರದೇಶದ ವಿವಿಧ ನಗರಗಳಿಗೆ 2 ವಿಶೇಷ ರೈಲು ಆರಂಭ; ರಾಜ್ಯದಲ್ಲಿ 8 ಕಡೆ ಸ್ಟಾಪ್‌! ವೇಳಾಪಟ್ಟಿ ಬಿಡುಗಡೆ

Vijay Karnataka 2 months ago

ಶಿವಮೊಗ್ಗ: ಶಿವಮೊಗ್ಗದಿಂದ ಆಂಧ್ರ ಪ್ರದೇಶ ಪ್ರಮುಖ ನಗರಗಳಿಗೆ ಎರಡು ವಿಶೇಷ ಎಕ್ಸ್‌ಪ್ರೆಸ್‌ ರೈಲು ಓಡಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ವೇಳಾಪಟ್ಟಿಯನ್ನು ರೈಲ್ವೇ ಇಲಾಖೆ ಬಿಡುಗಡೆ ಮಾಡಲಾಗಿದೆ. ಈ ವಿಶೇಷ ರೈಲುಗಳು ಆಂಧ್ರ ಪ್ರದೇಶದ ಮಚಲಿಪಟ್ಟಣಂ - ಶಿವಮೊಗ್ಗ ಟೌನ್ , ಶಿವಮೊಗ್ಗ ಟೌನ್‌ - ತೆಲಂಗಾಣದ ಗುಂತಕಲ್ ನಡುವೆ ಒಂದು ಟ್ರಿಪ್ ಸಂಚಾರ ನಡೆಸಲಿವೆ.

ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ದಕ್ಷಿಣ ಕರಾವಳಿ ರೈಲ್ವೆಯು ವ್ಯವಸ್ಥೆ ಮಾಡಿದೆ.

ರಾಜ್ಯದಲ್ಲಿ ಶಿವಮೊಗ್ಗ ಸೇರಿ 8 ಕಡೆ ಸ್ಟಾಪ್‌

ಈ ಎರಡೂ ರೈಲುಗಳು ಕರ್ನಾಟಕದಲ್ಲಿ ಯಲಹಂಕ ಜಂಕ್ಷನ್, ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು ಜಂಕ್ಷನ್, ತರೀಕೆರೆ ಮತ್ತು ಭದ್ರಾವತಿಗೆ ನಿಲುಗಡೆಯಾಗುತ್ತವೆ. ಈ ಮೂಲಕ ಶಿವಮೊಗ್ಗ ಸೇರಿ 8 ನಿಲ್ದಾಣಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಮಚಲಿಪಟ್ಟಣಂ ಶಿವಮೊಗ್ಗ ರೈಲಿನ ವೇಳಾಪಟ್ಟಿ ಏನು?

  • ರೈಲು ಸಂಖ್ಯೆ 07217 ಮಚಲಿಪಟ್ಟಣಂ - ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್‌ ಆಗಸ್ಟ್‌ 30, (ಭಾನುವಾರ) ರಂದು ಮಚಲಿಪಟ್ಟಣಂನಿಂದ ಮಧ್ಯಾಹ್ನ 3.55 ಕ್ಕೆ ಹೊರಟು ಆಗಸ್ಟ್‌ 31 (ಸೋಮವಾರ) ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ಟೌನ್ ತಲುಪಲಿದೆ.
  • ಮರುಪ್ರಯಾಣದಲ್ಲಿ, ರೈಲು ಸಂಖ್ಯೆ 07218 ಶಿವಮೊಗ್ಗ ಟೌನ್-ಮಚಲಿಪಟ್ಟಣಂ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸೆಪ್ಟೆಂಬರ್ 2 ರಂದು (ಬುಧವಾರ) ಶಿವಮೊಗ್ಗ ಟೌನ್‌ನಿಂದ ಸಂಜೆ 5.40 ಕ್ಕೆ ಹೊರಟು ಸೆಪ್ಟೆಂಬರ್ 3 ಕ್ಕೆ (ಗುರುವಾರ) ಮಧ್ಯಾಹ್ನ 3.55 ಕ್ಕೆ ಮಚಲಿಪಟ್ಟಣಂ ತಲುಪಲಿದೆ.
  • ಮಾರ್ಗಮಧ್ಯೆ ಈ ವಿಶೇಷ ರೈಲು ಎರಡೂ ಮಾರ್ಗಗಳಲ್ಲಿ ಗುಡಿವಾಡ ಜಂಕ್ಷನ್, ವಿಜಯವಾಡ ಜಂಕ್ಷನ್, ಕೃಷ್ಣ ಕೆನಾಲ್ ಜಂಕ್ಷನ್, ಗುಂಟೂರು ಜಂಕ್ಷನ್, ನರಸರಾವ್ ಪೇಟೆ, ಡೊಣಕೊಂಡ, ಮಾರ್ಕಾಪುರ ರೋಡ್, ಕಂಬಂ, ಗಿದ್ದಲೂರು, ನಂದ್ಯಾಲ ಜಂಕ್ಷನ್, ಬೇತಂಚೆರ್ಲ, ಡೋಣ ಜಂಕ್ಷನ್, ಗುತ್ತಿ ಜಂಕ್ಷನ್, ಅನಂತಪುರ, ಧರ್ಮವರಂ ಜಂಕ್ಷನ್, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಹಿಂದೂಪುರ, ಯಲಹಂಕ ಜಂಕ್ಷನ್, ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು ಜಂಕ್ಷನ್, ತರೀಕೆರೆ ಮತ್ತು ಭದ್ರಾವತಿ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಶಿವಮೊಗ್ಗ ಗುಂತಕಲ್ ರೈಲು ವೇಳಾಪಟ್ಟಿ ಏನು?

  • ರೈಲು ಸಂಖ್ಯೆ 07219 ಶಿವಮೊಗ್ಗ ಟೌನ್-ಗುಂತಕಲ್ ವಿಶೇಷ ಎಕ್ಸ್‌ಪ್ರೆಸ್‌ ರೈಲು ಆಗಸ್ಟ್‌ 31 (ಸೋಮವಾರ) ರಂದು ಶಿವಮೊಗ್ಗ ಟೌನ್'ನಿಂದ ಸಂಜೆ 5.40 ಕ್ಕೆ ಮಂಗಳವಾರ ಬೆಳಿಗ್ಗೆ 7 ಕ್ಕೆ ಗುಂತಕಲ್ ತಲುಪಲಿದೆ.
  • ಮರುಪ್ರಯಾಣದಲ್ಲಿ, ರೈಲು ಸಂಖ್ಯೆ 07220 ಗುಂತಕಲ್ ಶಿವಮೊಗ್ಗ ಟೌನ್ ವಿಶೇಷ ಎಕ್ಸ್'ಪ್ರೆಸ್ ರೈಲು ಸೆಪ್ಟೆಂಬರ್ 2 (ಬುಧವಾರ) ಗುಂತಕಲ್'ನಿಂದ ರಾತ್ರಿ 1.45 ಕ್ಕೆ ಹೊರಟು, ಅದೇ ದಿನ ಮಧ್ಯಾಹ್ನ 3 ಕ್ಕೆ ಶಿವಮೊಗ್ಗ ಟೌನ್ ತಲುಪಲಿದೆ.
  • ಮಾರ್ಗಮಧ್ಯೆ ಈ ರೈಲು ಎರಡೂ ಮಾರ್ಗಗಳಲ್ಲಿ ಭದ್ರಾವತಿ, ತರೀಕೆರೆ, ಬೀರೂರು ಜಂಕ್ಷನ್, ಅರಸೀಕೆರೆ ಜಂಕ್ಷನ್, ತಿಪಟೂರು, ತುಮಕೂರು, ಯಲಹಂಕ ಜಂಕ್ಷನ್, ಹಿಂದೂಪುರ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಧರ್ಮವರಂ ಜಂಕ್ಷನ್, ಅನಂತಪುರ ಮತ್ತು ಗುತ್ತಿ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಈ ವಿಶೇಷ ರೈಲುಗಳು 1 ಎಸಿ ಫಸ್ಟ್ ಕ್ಲಾಸ್, 1 ಎಸಿ 2-ಟೈರ್, 2 ಎಸಿ 3-ಟೈರ್, 9 ಸ್ಲೀಪರ್ ಕ್ಲಾಸ್, 5 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ ಸೇರಿದಂತೆ ಒಟ್ಟು 20 ಐಸಿಎಫ್ ಬೋಗಿಗಳನ್ನು ಒಳಗೊಂಡಿರಲಿವೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka