ಇಂದಿನ ದಿನಗಳಲ್ಲಿ ರಕ್ಷಾಬಂಧನ ಹಬ್ಬದಂದು ಸ್ಟಾರ್ ಕ್ರಿಕೆಟಿಗರು ಮಾತ್ರವಲ್ಲದೆ, ಅವರ ಸಹೋದರಿಯರು ಕೂಡ ತಮ್ಮ ವಿಶಿಷ್ಟಶೈಲಿ, ಉಡುಗೆ ತೊಡುಗೆ ಹಾಗೂ ಸರಳತೆಯ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.
ರಕ್ಷಾಬಂಧನ ಹಬ್ಬದ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಭಾರತದಲ್ಲಿ ಈ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ.ಈ ಹಬ್ಬವನ್ನು ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತ ಇರುವ ಭಾರತೀ ಯರು ಅತ್ಯಂತ ಅದ್ದೂರಿಯಾಗಿ ಮತ್ತು ಸಡಗರದಿಂದ ಆಚರಿಸುತ್ತಾರೆ.
ಸದ್ಯ ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಎಕ್ಸ್ (ಟ್ವಿಟರ್) ನಂತಹ ವೇದಿಕೆಗಳಲ್ಲಿ ರಕ್ಷಾಬಂಧನ ಹಬ್ಬದ ಸಂಭ್ರಮದ ಫೋಟೋ ಗಳು ತುಂಬಿ ತುಳುಕುತ್ತಿವೆ.
ಬಾಲಿವುಡ್ ತಾರೆಯರು ಮತ್ತು ಕ್ರಿಕೆಟಿಗರು ಇತ್ತೀಚಿನ ರಕ್ಷಾಬಂಧನ ಹಬ್ಬದ ಸಂದರ್ಭದಲ್ಲಿ ತಮ್ಮ ಸಹೋದರಿಯ ರೊಂದಿಗಿನ ಅಮೂಲ್ಯವಾದ ಬಾಂಧವ್ಯ ಮತ್ತು ವಿಶಿಷ್ಟ ಶೈಲಿಯನ್ನು ಸಂಭ್ರಮಿಸಿದ್ದಾರೆ.
ರಕ್ಷಾಬಂಧನ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಹಾಗೂ ಇಂಡೋ-ವೆಸ್ಟರ್ನ್ ಉಡುಪುಗಳಲ್ಲಿ ಮಿಂಚಿದ ಸೆಲೆ ಬ್ರಿಟಿಗಳು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಹೋದರ-ಸಹೋದ ರಿಯರ ಜೊತೆಗಿನ ಸುಂದರ ಕ್ಷಣಗಳನ್ನು ಹಂಚಿಕೊಂಡಿ ದ್ದಾರೆ
ಸಚಿನ್ ತೆಂಡೂಲ್ಕರ್ ಮತ್ತು ಹಿರಿಯ ಸಹೋದರಿ

ಮೊದಲಿಗೆ, ಸಚಿನ್ ತೆಂಡೂಲ್ಕರ್ ತಮ್ಮ ಹಿರಿಯ ಸಹೋದರಿಯೊಂದಿಗೆ ರಕ್ಷಾಬಂಧನ ಹಬ್ಬವನ್ನು ಆಚರಿಸಿಕೊಂಡಿರುವ ಬಗ್ಗೆ ನೋಡೋಣ... ಸಚಿನ್ ಸಂಪೂರ್ಣ ಕಪ್ಪು ಬಣ್ಣದ ಉಡುಪನ್ನು ಧರಿಸಿದ್ದರೆ, ಅವರ ಅಕ್ಕ ಗುಲಾಬಿ ಬಣ್ಣದ ರೇಷ್ಮೆ ಸೀರೆಯನ್ನು ಧರಿಸಿದ್ದರು, ಈ ಸೀರೆಗೆ ಚಿನ್ನದ ಬಣ್ಣದ ಅಂಚು ಮತ್ತು ಅದಕ್ಕೆ ಹೊಂದಿಕೆಯಾಗುವಂತಹ ಚಿನ್ನದ ಬಣ್ಣದ ಪಲ್ಲು ಇತ್ತು.
ಸರಳವಾದ, ಚಿಕ್ಕ ತೋಳಿನ ಬ್ಲೌಸ್‌ನೊಂದಿಗೆ ಸೀರೆಯನ್ನು ಧರಿಸಿದ್ದ ಅವರು ಅತ್ಯಂತ ಆಕರ್ಷ ಕವಾಗಿ ಕಾಣುತ್ತಿದ್ದರು. ಕುತ್ತಿಗೆಯಲ್ಲಿ ಮಂಗಳಸೂತ್ರ ಹಾಗೂ ಸರ, ಕೈಯಲ್ಲಿ ಬಳೆಗಳು ಮತ್ತು ಸಣ್ಣ ಕಿವಿಯೋಲೆಗಳನ್ನು ಧರಿಸುವ ಮೂಲಕ ಅವರು ತಮ್ಮ ಸರಳವಾದ ಅಲಂಕಾರವನ್ನು ಪೂರ್ಣಗೊಳಿಸಿದ್ದರು.
Image source: Instagram@Sachin Tendulkar
ಸುರೇಶ್ ರೈನಾ ಮತ್ತು ಅವರ ಸಹೋದರಿ

ರಕ್ಷಾಬಂಧನದ ಸಂದರ್ಭದಲ್ಲಿ ಸುರೇಶ್ ರೈನಾ ಮತ್ತು ಅವರ ಸಹೋದರಿ ಮೃದು ಬಣ್ಣಗಳ (ಪ್ಯಾಸ್ಟೆಲ್ ಶೇಡ್ಸ್) ಸಾಂಪ್ರದಾಯಿಕ ಉಡುಪನ್ನು ಧರಿಸಿದ್ದರು. ಸುರೇಶ್ ಹೂವಿನ ವಿನ್ಯಾಸದ ಶಾರ್ಟ್ ಕುರ್ತಾ ಶೈಲಿಯ ಶರ್ಟ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದರೆ, ಅವರ ಸಹೋದರಿ ಹೂವಿನ ವಿನ್ಯಾಸದ ಅನಾ ರ್ಕಲಿ ಕುರ್ತಾವನ್ನು ಧರಿಸಿದ್ದರು.
ಅದರ ಮೇಲಿದ್ದ ಗುಲಾಬಿ ಬಣ್ಣದ ಹೂವುಗಳು ಉಡುಪಿಗೆ ತಾಜಾತನವನ್ನು ನೀಡಿದರೆ, ಗುಲಾಬಿ ಬಣ್ಣದ ಲೇಸ್‌ನಿಂದ ಅಲಂಕೃತವಾದ ದುಪಟ್ಟಾ ಆಕರ್ಷಕ ಮೆರುಗನ್ನು ನೀಡಿತು. ಅವರು ಇದಕ್ಕೆ ಹೊಂದುವಂತಹ ಬಳೆಗಳು ಮತ್ತು ಮುತ್ತಿನ ಕಿವಿಯೋಲೆಗಳನ್ನು ಧರಿಸಿ ತಮ್ಮ ಸಾಂಪ್ರದಾಯಿಕ ನೋಟವನ್ನು ಸುಂದರ ವಾಗಿಸಿಕೊಂಡಿದ್ದರು. Image source: Instagram@Suresh Raina
ದೀಪಕ್ ಚಹಾರ್ ಮತ್ತು ಮಾಲ್ತಿ ಚಹಾರ್

ದೀಪಕ್ ಚಹಾರ್ ತಮ್ಮ ಸಹೋದರಿ ಮಾಲ್ತಿ ಚಹಾರ್ ಮತ್ತು ಪತ್ನಿ ಜಯಾ ಚಹಾರ್ ಅವರೊಂದಿಗೆ ಒಂದು ತಮಾಷೆಯ ವಿಡಿಯೋವನ್ನು ಹಂಚಿ ಕೊಂಡಿ ದ್ದಾರೆ.
ಇದರಲ್ಲಿ ಅವರು ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದು, ಅವರ ಸಹೋ ದರಿ ತಮಾಷೆಯ ಭಂಗಿಯಲ್ಲಿ ಅವರ ಕಾಲರ್ ಹಿಡಿದುಕೊಂಡು ಪೋಸ್ ನೀಡುತ್ತಿ ದ್ದಾರೆ. ಅವರು ಬಿಳಿ ಬಣ್ಣದ ಹೂವಿನ ವಿನ್ಯಾಸವಿರುವ ನೀಲಿ ಬಣ್ಣದ ತೋಳಿಲ್ಲದ ಕುರ್ತಾ ಹಾಗೂ ಬಿಳಿ ಲೆಗ್ಗಿಂಗ್ಸ್ ಧರಿಸಿದ್ದರು. ಮತ್ತೊಂದೆಡೆ, ಜಯಾ ಗುಲಾಬಿ ಬಣ್ಣದ ಕುರ್ತಾ ಸೆಟ್‌ನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರು.
Image source: Instagram@deepak_chahar9
ಮೊಹಮ್ಮದ್ ಸಿರಾಜ್ ಮತ್ತು ಜನೈ ಭೋಸ್ಲೆ

ಜನೈ ಭೋಸ್ಲೆ ಅವರು ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಅವರ ದತ್ತು ಸಹೋದರಿ ಮತ್ತು ಪ್ರತಿ ವರ್ಷ ಅವರಿಗೆ ರಾಖಿ ಕಟ್ಟುತ್ತಾರೆ. ಈ ಬಾರಿ ಅವರು ಬಿಳಿ ದಾರದ ಕಸೂತಿ ಕೆಲಸವಿರುವ ಹೂವಿನ ವಿನ್ಯಾಸದ ಹಸಿರು ಬಣ್ಣದ ಕುರ್ತಾವನ್ನು ಧರಿ ಸಿದ್ದರು.
ಅವರ ಸರಳವಾದ ನೋಟವು ಅತ್ಯಂತ ಆಕರ್ಷಕ ವಾಗಿತ್ತು. ಅವರು ವಜ್ರದ ಉಂಗುರ, ಕೈಗಡಿಯಾರ ಮತ್ತು ಆಕರ್ಷಕ ಕಿವಿಯೋಲೆಗಳೊಂದಿಗೆ ತಮ್ಮ ಉಡು ಪನ್ನು ಹೊಂದಿಸಿಕೊಂಡಿದ್ದರು; ಇತ್ತ ಸಿರಾಜ್ ಬಿಳಿ ಬಣ್ಣದ ಕುರ್ತಾವನ್ನು ಧರಿ ಸಿದ್ದರು.
Image source: Instagram@zanaibhosle
ಶುಭಮನ್ ಗಿಲ್ ಮತ್ತು ಶನೀಲ್ ಗಿಲ್

ಎಲ್ಲರೂ ಸಾಂಪ್ರದಾಯಿಕ (ದೇಸಿ) ಉಡುಪಿನಲ್ಲಿ ಕಾಣಿಸಿಕೊಂಡಿದ್ದರೆ, ಶುಭಮನ್ ಗಿಲ್ ಅವರ ಸಹೋದರಿ ಶನೀಲ್ ಗಿಲ್ ಆಧುನಿಕ ಶೈಲಿಯಲ್ಲಿ ಕಂಗೊಳಿಸಿದರು. ಅವರು ಬಿಳಿ ಬಣ್ಣದ 'ಕ್ರಾಪ್ ಟಾಪ್' ಮತ್ತು ಅದಕ್ಕೆ ಹೊಂದಿಕೆಯಾಗುವಂತಹ ಕಾರ್ಗೋ ಶೈಲಿಯ ಸಡಿಲವಾದ ನೀಲಿ ಡೆನಿಮ್ ಪ್ಯಾಂಟ್ ಧರಿಸಿದ್ದರು. ಇತ್ತ, ಕ್ರಿಕೆಟಿಗ ಶುಭಮನ್ ಗಿಲ್ ಗಾಢ ನೀಲಿ ಡೆನಿಮ್ ಪ್ಯಾಂಟ್ ಹಾಗೂ ಬಿಳಿ ಮತ್ತು ನೀಲಿ ಬಣ್ಣದ ಗೆರೆಗಳ ವಿನ್ಯಾಸವಿರುವ ಶರ್ಟ್ ಧರಿಸಿದ್ದರು. ಅವರ ಈ ಹೊಂದಾ ಣಿಕೆಯ ಉಡುಪುಗಳು ಅತ್ಯುತ್ತಮವಾಗಿ ಕಾಣುತ್ತಿದ್ದವು.
Image source: Instagram@shubmangill

