ಕಕಲರ್ಸ್ ಕನ್ನಡʼ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʻಕ್ವಾಟ್ಲೆ ಕಿಚನ್ʼ ಕುಕಿಂಗ್ ರಿಯಾಲಿಟಿ ಶೋನಲ್ಲಿ ಸೂರಜ್ ಸಿಂಗ್ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ. ಇತ್ತೀಚೆಗೆ ಈ ಶೋನಲ್ಲಿ ʻಫ್ಯಾಮಿಲಿ ರೌಂಡ್ʼ ವಿಶೇಷ ಸಂಚಿಕೆಯನ್ನ ಆಯೋಜಿಸಲಾಗಿತ್ತು. ಈ ವಿಶೇಷ ಸಂಚಿಕೆಯಲ್ಲಿ ಸೂರಜ್ ಸಿಂಗ್ ಪರವಾಗಿ ಸಾಥ್ ನೀಡಲು ಅವರ ಬೆಸ್ಟ್ ಫ್ರೆಂಡ್ ವೇದಿಕೆಗೆ ಆಗಮಿಸಿದ್ದರು.
Advertisement
ಸ್ನೇಹಿತನ ಮಾತಿಗೆ ಒಂದು ಕ್ಷಣ ಶಾಕ್ ಆದ ಸೂರಜ್ ಸಿಂಗ್!
ಕಾರ್ಯಕ್ರಮದ ಮಧ್ಯೆ ಸೂರಜ್ ಸಿಂಗ್ ಅವರ ಸ್ನೇಹಿತ ನೀಡಿದ ಒಂದು ಹೇಳಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. "ಸೂರಜ್ ಸಿಂಗ್‌ಗೆ ಈಗಾಗಲೇ ಮದುವೆಯಾಗಿದೆ" ಎಂದು ಅವರ ಆಪ್ತ ಸ್ನೇಹಿತ ಬಾಂಬ್ ಸಿಡಿಸಿದ್ದಾರೆ. ಸ್ನೇಹಿತನ ಈ ಹಠಾತ್ ಹಾಗೂ ತರ್ಲೆ ಹೇಳಿಕೆಯನ್ನ ಕೇಳಿ ಸ್ವತಃ ಸೂರಜ್ ಸಿಂಗ್ ಒಂದು ಕ್ಷಣ ಶಾಕ್ ಆಗಿದ್ದಾರೆ.
ಸೂರಜ್ ಸಿಂಗ್ ಗೆಳೆಯ ಹೇಳಿದ್ದೇನು?
ಹೌದು.. ʻಕಲರ್ಸ್ ಕನ್ನಡʼ ವಾಹಿನಿಯ ಸೋಶಿಯಲ್ ಮೀಡಿಯಾದ ಪೇಜ್‌ನಲ್ಲಿ ಒಂದು ವಿಡಿಯೋವನ್ನ ಶೇರ್ ಮಾಡಿಕೊಳ್ಳಲಾಗಿದೆ. ವಿಡಿಯೋದಲ್ಲಿ, "ನಾನು ವೀರು.. ಸೂರಜ್ ಬೆಸ್ಟ್ ಫ್ರೆಂಡ್.. ಅಂದಹಾಗೆ, ನಾವಿಬ್ಬರೂ ಸುಮಾರು 12 ವರ್ಷಗಳಿಂದ ಫ್ರೆಂಡ್ಸ್. ಆದರೆ, ಇವತ್ತು ನಿಮಗ್ಯಾರಿಗೂ ಗೊತ್ತಿಲ್ಲದೇ ಇರೋ ಒಂದು ಸೀಕ್ರೆಟ್‌ನ ನಿಮಗೆ ಹೇಳ್ತಿದ್ದೇನೆ. ಏನಂತ ಶಾಕ್ ಆದ್ರಾ? ಇವನಿಗೆ ಆಲ್‌ರೆಡಿ ಮದುವೆ ಆಗಿದೆ. ಅವಳ ಹೆಸರು ಪವಿತ್ರ.. ಯಾವ ಪವಿತ್ರ ಅಂತ ಯೋಚನೆ ಮಾಡಬೇಡಿ. ಪವಿತ್ರ ಬಂಧನ ಸೀರಿಯಲ್‌ನಲ್ಲಿ ಬರೋ ಪವಿತ್ರ" ಎಂದು ಫನ್ನಿಯಾಗಿ ಹೇಳಿದ್ದಾರೆ. ಇದಕ್ಕೆ ಶಾಕ್ ಆದ ಸೂರಜ್, "ಆ ಕ್ವಾಟ್ಲೆಗಳ ಕ್ವಾಟ್ಲೆ ತಡೆದುಕೊಳ್ಳಬಹುದು. ನಿಮ್ಮಂತವರು ಒಬ್ಬರಿದ್ದು ಬಿಟ್ರೆ ಧ್ವಂಸ" ಎಂದು ಗೆಳೆಯನಿಗೆ ಹೇಳಿದ್ದಾರೆ.
ʻಪವಿತ್ರ ಬಂಧನʼ ಧಾರಾವಾಹಿಯಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಸೂರಜ್
ಸೂರಜ್ ಸಿಂಗ್ ʻಬಿಗ್ ಬಾಸ್ ಕನ್ನಡ ಸೀಸನ್ 12'ರ ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದರು. ಬಿಗ್ ಬಾಸ್‌ನಿಂದ ಹೊರ ಬರ್ತಿದ್ದಂತೆ ಸೂರಜ್ ʻಪವಿತ್ರ ಬಂಧನʼ ಧಾರಾವಾಹಿಯಲ್ಲಿ ನಾಯಕ ನಟನಾಗಿ ಅಭಿನಯಿಸುವ ಆಫರ್ ಗಿಟ್ಟಿಸಿಕೊಂಡರು. ಈ ಧಾರಾವಾಹಿಗೆ ವೀಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ಜೊತೆಗೆ ʻಕ್ವಾಟ್ಲೆ ಕಿಚನ್ʼ ಕುಕ್ಕಿಂಗ್ ರಿಯಾಲಿಟಿ ಶೋನಲ್ಲಿಯೂ ಸೂರಜ್ ಸಿಂಗ್ ಭಾಗವಹಿಸುತ್ತಿದ್ದಾರೆ.