ಟಾಾಕ್ಸಿಕ್ʼ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಆದರೆ, ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಸೋಶಿಯಲ್ ಮೀಡಿಯಾಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಟ್ರೋಲ್‌ಗಳು ಮತ್ತು ನೆಗೆಟಿವ್ ವಿಮರ್ಶೆಗಳ ಸುರಿಮಳೆಯೇ ಆಗ್ತಿದೆ.
ಸ್ಯಾಂಡಲ್‌ವುಡ್‌ನ ಸ್ಟಾರ್ ನಟರು ಯಶ್ ಬೆನ್ನಿಗೆ ನಿಂತಿದ್ದು, ಚಿತ್ರಕ್ಕೆ ಸಂಪೂರ್ಣ ಬೆಂಬಲ ಸೂಚಿಸುತ್ತಿದ್ದಾರೆ. ಹೀಗೆ ನೆಗಿಟಿವಿಟಿ ಮತ್ತು ಟ್ರೋಲ್‌ಗಳು ತೀವ್ರವಾಗಿ ಹರಿದಾಡ್ತಿರುವ ಸಮಯದಲ್ಲೇ, ಯಶ್ ಅವರ ಇನ್‌ಸ್ಟಾಗ್ರಾಮ್ ಅಕೌಂಟ್‌ನ ʻಬಯೋʼ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ರಾಕಿಂಗ್ ಸ್ಟಾರ್ ಯಶ್ ಬಯೋದಲ್ಲಿ ಏನಿದೆ?
ಯಶ್ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಬಯೋದಲ್ಲಿ "Be Yourself because An Original is Worth more than a Copy" (ನೀವು ನೀವಾಗಿಯೇ ಇರಿ, ಏಕೆಂದರೆ ನಕಲಿಗಿಂತ ಅಸಲಿಗೆ ಬೆಲೆ ಜಾಸ್ತಿ) ಎಂದು ಬರೆದುಕೊಂಡಿದ್ದಾರೆ. ʻಟಾಕ್ಸಿಕ್ʼ ಸಿನಿಮಾಗೆ ಬರ್ತಿರುವ ನೆಗೆಟಿವ್ ಕಾಮೆಂಟ್‌ಗಳು ಮತ್ತು ಇತರ ಸಿನಿಮಾಗಳಿಗೆ ಹೋಲಿಕೆ ಮಾಡಿ ಟ್ರೋಲ್ ಮಾಡುತ್ತಿರುವವರಿಗೆ ಯಶ್ ಅಭಿಮಾನಿಗಳು, ಈ ಬಯೋ ಸ್ಕ್ರೀನ್‌ಶಾಟ್ ಶೇರ್ ಮಾಡಿಕೊಳ್ಳುವ ಮೂಲಕ ಕೌಂಟರ್ ನೀಡಿದ್ದಾರೆ.ಯಶ್ ʻಟಾಕ್ಸಿಕ್ʼಗೆ ಸ್ಯಾಂಡಲ್‌ವುಡ್ ಸ್ಟಾರ್ಸ್ ಸಾಥ್!
ವಿಮರ್ಶೆಗಳು ಏನೇ ಬಂದ್ರೂ, ಸಿನಿಮಾ ವಿಶ್ಯುವಲ್ ಮೇಕಿಂಗ್, ಯಶ್ ಅವರ ಮಾಸ್ ಆಕ್ಷನ್ ಅವತಾರ ಹಾಗೂ ತಾಂತ್ರಿಕ ಮೆರುಗು ಅಭಿಮಾನಿಗಳನ್ನ ಥಿಯೇಟರ್‌ಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸ್ಯಾಂಡಲ್‌ವುಡ್ ತಾರೆಯರಾದ ನಟ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವಣ್ಣ ಯಶ್ ʻಟಾಕ್ಸಿಕ್ʼ ಸಿನಿಮಾಗೆ ಬೆಂಬಲ ಸೂಚಿಸಿದ್ದಾರೆ.ʻಒರಿಜಿನಲ್ʼ ಪ್ರಯತ್ನಗಳಿಗೆ ಎಂದು ಸೋಲಿಲ್ಲ ಎಂಬ ನಂಬಿಕೆಯಲ್ಲಿ ರಾಕಿಂಗ್ ಸ್ಟಾರ್ ಅಭಿಮಾನಿಗಳು ಈ ಬಯೋ ಸಾಲುಗಳನ್ನ ಸ್ಟೇಟಸ್ ಹಾಗೂ ಪೋಸ್ಟ್‌ಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ.
ಇನ್ನೂ ʻಟಾಕ್ಸಿಕ್ʼ ಸಿನಿಮಾ ಥಿಯೇಟರ್‌ಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ರಿಲೀಸ್ ಆದ ಕೇವಲ 3 ದಿನಗಳಲ್ಲೇ ಜಾಗತಿಕವಾಗಿ ಬರೋಬ್ಬರಿ ₹221 ಕೋಟಿಗೂ ಅಧಿಕ ಗಳಿಕೆ ಕಾಣುವ ಮೂಲಕ ₹200 ಕೋಟಿ ಕ್ಲಬ್ ಸೇರಿದೆ. ಭಾರತದ ಬಾಕ್ಸಾಫೀಸ್ ಒಂದರಲ್ಲೇ ₹165 ಕೋಟಿಗೂ ಹೆಚ್ಚು ನೆಟ್ ಕಲೆಕ್ಷನ್ ಮಾಡಿದ್ದು, ಈ ಪೈಕಿ ಹಿಂದಿ ಹಾಗೂ ಕನ್ನಡ ಆವೃತ್ತಿಗಳು ಗರಿಷ್ಠ ಕೊಡುಗೆ ನೀಡಿವೆ.

