Dailyhunt Logo
  • Light mode
    Follow system
    Dark mode
    • Play Story
    • App Story
'ಟಾಕ್ಸಿಕ್‌' ಸಿನಿಮಾ ನೋಡಿದ ರಿಷಬ್‌ ಶೆಟ್ಟಿ, ವಿಜಯ್‌ ಪ್ರಕಾಶ್‌, ರಕ್ಷಿತಾ ಪ್ರೇಮ್‌ ಏನಂದ್ರು?

'ಟಾಕ್ಸಿಕ್‌' ಸಿನಿಮಾ ನೋಡಿದ ರಿಷಬ್‌ ಶೆಟ್ಟಿ, ವಿಜಯ್‌ ಪ್ರಕಾಶ್‌, ರಕ್ಷಿತಾ ಪ್ರೇಮ್‌ ಏನಂದ್ರು?

Vijay Karnataka 2 weeks ago

ಟಾಕ್ಸಿಕ್‌ ಸಿನಿಮಾ ವೀಕ್ಷಿಸಿದ ಅನೇಕ ತಾರೆಯರು ಸಿನಿಮಾ ಕುರಿತು ತಮ್ಮ ಅನುಭವವನ್ನ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ರಿಷಬ್‌ ಶೆಟ್ಟಿ ಅವರು ಯಶ್‌ ಸಿನಿಮಾ ಬಗ್ಗೆ ಏನೂ ಮಾತಾಡುತ್ತಿಲ್ಲ ಏಕೆ? ಅಂತ ಟ್ರೋಲ್‌ ಮಾಡಲಾಗುತ್ತಿತ್ತು. ಆದರೆ, ಸಿನಿಮಾ ನೋಡಿ, ಮಾತನಾಡೋಣ ಅಂತ ಸುಮ್ಮನಿದ್ದರು ರಿಷಬ್‌.

ಸದ್ಯ ಸಿನಿಮಾ ನೋಡಿದ ರಿಷಬ್‌ ಶೆಟ್ಟಿ, ನಟಿ ರಕ್ಷಿತಾ ಪ್ರೇಮ್‌, ಗಾಯಕ ವಿಜಯ್‌ ಪ್ರಕಾಶ್ ಅವರು ಯಶ್‌ ಮತ್ತು 'ಟಾಕ್ಸಿಕ್‌' ಬಗ್ಗೆ ಹೇಳಿದ್ದಿಷ್ಟು.

ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ, ಸರ್- ರಿಷಬ್‌ ಶೆಟ್ಟಿ

"ಒಬ್ಬ ಕಲಾವಿದನಾಗಿ, ನೀವು ಒಂದು ಪಾತ್ರವನ್ನು ನಿರ್ವಹಿಸುವಾಗ ಅದನ್ನು ನಿಮ್ಮ ಹೃದಯದ ಆಳದಿಂದ ಜೀವಂತಗೊಳಿಸಲು ಪ್ರಯತ್ನಿಸುತ್ತೀರಿ. ಮತ್ತು ಇಲ್ಲಿ, ಒಬ್ಬ ಶಕ್ತಿಶಾಲಿ ವ್ಯಕ್ತಿಯ ಹೋರಾಟವನ್ನು ಬಿಂಬಿಸಿರುವ ಕಟಿಬದ್ಧತೆಗೆ(conviction) ನಾನು ನಿಜವಾಗಿಯೂ ಪ್ರಭಾವಿತನಾಗಿದ್ದೇನೆ".

"ಬಹುಶಃ ಕಥಾಹಂದರ ಮತ್ತು ಪ್ರಮುಖ ಪಾತ್ರಗಳು ಹೆಚ್ಚಿನ ಸಿನಿಮಾಗಳು ಸಾಗುವ ಸಾಮಾನ್ಯ ಹಾದಿಯಲ್ಲಿ ಸಾಗದಿರಬಹುದು, ಆದರೆ ಅದರರ್ಥ ಆ ಹಾದಿ ತಪ್ಪೆಂದು ಅಲ್ಲ. ಒಂದು ಕಥೆಯನ್ನು ಹೇಳಲು ಪಡುವ ಶ್ರಮ, ಮತ್ತು ಅದು ಮನಸ್ಸಿನಲ್ಲಿ ಒಂದು ಆಲೋಚನೆಯಾಗಿ ಹುಟ್ಟಿ ತೆರೆಯ ಮೇಲೆ ಸಿನಿಮಾವಾಗಿ ಮೂಡಿಬರುವವರೆಗಿನ ಪಯಣ ತುಂಬಾ ದೊಡ್ಡದು".

"ಯಶ್‌(Yash) ಸರ್, ಜೀವನಕ್ಕಿಂತಲೂ ಮಿಗಿಲಾದ (larger-than-life) ಅಭಿನಯವನ್ನು ಕಾಯ್ದುಕೊಳ್ಳುವ ಪಾತ್ರಕ್ಕೆ ಮತ್ತು ಜಗತ್ತಿಗೆ ನೀವು ಸಲ್ಲಿರುವ ಸಮರ್ಪಣಾ ಭಾವಕ್ಕೆ ಹ್ಯಾಟ್ಸ್ ಆಫ್. ಅದನ್ನು ನಾನು ಪ್ರತಿಯೊಂದು ದೃಶ್ಯದಲ್ಲೂ ಸ್ಪಷ್ಟವಾಗಿ ಅನುಭವಿಸಲು ಸಾಧ್ಯವಾಯಿತು.

ಅಪರಾಧಪ್ರಜ್ಞೆಯು ಹೇಗೆ ಹೆಚ್ಚಾಗುತ್ತದೆ ಮತ್ತು ಜೀವನದಲ್ಲಿ ವಿಷಕಾರಿತೆಯನ್ನು(toxicity) ಬೆಳೆಸುತ್ತದೆ ಎಂಬುದರ ಅನುಭವವನ್ನು ಪ್ರೇಕ್ಷಕರಿಗೆ ನೀಡುವುದು ಸುಲಭವಲ್ಲ. ಈ ಧೈರ್ಯದ ಪ್ರಯೋಗವನ್ನು ಮಾಡಿದ್ದಕ್ಕಾಗಿ ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ, ಸರ್."

"ಕನ್ನಡ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಿಮ್ಮ ಪ್ರೀತಿಗೆ ನಾವು ನಿಮ್ಮನ್ನು ಪ್ರೀತಿಸುತ್ತೇವೆ. ಹಾಗೇ ನಿರ್ದೇಶಕಿ ಗೀತು ಮೋಹನ್‌ದಾಸ್‌(Geetu mohandas) ಮತ್ತು ಕೆವಿಎನ್‌(KVN) ನಿರ್ಮಾಣ ಸಂಸ್ಥೆಗೆ ಶುಭ ಹಾರೈಕೆಗಳು" ಎಂದು ನಟ ರಿಷಬ್ ಶೆಟ್ಟಿ(Rishab shetty) ಅವರು 'ಟಾಕ್ಸಿಕ್‌' ಸಿನಿಮಾ ಮತ್ತು ಯಶ್‌ ಅವರ ಅಭಿನಯವನ್ನ ಕೊಂಡಾಡಿದ್ದಾರೆ.

ಸೌತ್ ಇಂಡಿಯನ್ ಸಿನಿಮಾ, ಕನ್ನಡ ನಟನ ಸಿನಿಮಾ ಅಂತ ನೆಗೆಟಿವ್‌ ಮಾಡುತ್ತಿದ್ದೀರಾ?- ರಕ್ಷಿತಾ ಪ್ರೇಮ್‌

"ಈಗಷ್ಟೇ ನಾನು ಮತ್ತೆ ನನ್ನ ಫ್ರೆಂಡ್ಸ್ ರಘು ಮತ್ತು ಶ್ರುತಿ ಒಟ್ಟಿಗೆ 'ಟಾಕ್ಸಿಕ್' ಸಿನಿಮಾ ನೋಡ್ಕೊಂಡು ಬಂದ್ವಿ. ನನಗೆ ಫಸ್ಟ್ ಹಾಫ್ ತುಂಬಾ ಇಷ್ಟ ಆಯ್ತು. ಅಂಡ್ ಪ್ರಾಮಾಣಿಕವಾಗಿ ನಾನು ತುಂಬಾ ಇಷ್ಟಪಟ್ಟೆ(I really loved it)".

"ಸೆಕೆಂಡ್ ಹಾಫ್ ನೋಡಿದ್ಮೇಲೆ ಅನ್ಸಿದ್ದು ಅದ್ಭತವಾಗಿ ಚಿತ್ರಿಕರಿಸಿದ್ದಾರೆ (it was very very brilliantly made). ತುಂಬಾ ಚೆನ್ನಾಗಿ ಮಾಡಿದ್ದಾರೆ. ಆನ್‌ಲೈನ್ ರಿವ್ಯೂಯರ್ಸ್‌ನ ಬಿಡಿ, ಅವರನ್ನ ಪಕ್ಕಕ್ಕೆ ಇಡಿ. ಅಂಡ್ ಗೋ ಅಂಡ್ ವಾಚ್ 'ಟಾಕ್ಸಿಕ್'. ಈ ಸ್ಟೋರಿ ಬಂದು ಒಂದು ಸಣ್ಣ ಹುಡುನ ಬಾಲ್ಯದ ಟ್ರೌಮಾ ಇರಬಹುದು, ಓರ್ವ ಮನುಷ್ಯನ ಒಳಗಿರೋ ಟಾಕ್ಸಿಸಿಟಿ, ಅವನ ಲೈಫ್ ಎಕ್ಸ್‌ಪೀರಿಯನ್ಸಸ್ ಹೇಗೆ ಅವನನ್ನ ಚೇಂಜ್ ಮಾಡುತ್ತೆ ಅನ್ನೋದರ ಬಗ್ಗೆ ಇರಬಹುದು..ಅದ್ಬುತವಾಗಿದೆ ಸಿನಿಮಾ".

"ನಾನು, ನನ್ನ ಸ್ನೇಹಿತರು ಹಾಲಿವುಡ್‌ ಸಿನಿಮಾಗಳ ದೊಡ್ಡ ಅಭಿಮಾನಿಗಳು. ಆ ಸಿನಿಮಾಗಳನ್ನ ನಾವು ಒಪ್ಪಿಕೊಳ್ಳುತ್ತೀವಿ ಅಂದ್ಮೇಲೆ, 'ಟಾಕ್ಸಿಕ್' ಸಿನಿಮಾನ ಪ್ರಶ್ನೆ ಮಾಡುತ್ತಿರುವುದು ಏಕೆ? ಓರ್ವ ವ್ಯಕ್ತಿಯ ಮೆಂಟಲ್ ಟ್ರೌಮಾ ಬಗ್ಗೆ ಕಥೆ ಇದೆ. ಇದೊಂದು ಸೌತ್ ಇಂಡಿಯನ್ ಸಿನಿಮಾ, ಒಬ್ಬ ಕನ್ನಡ ನಟನ ಸಿನಿಮಾ ಅಂತ ನೆಗೆಟಿವ್‌ ಮಾಡುತ್ತಿದ್ದೀರಾ?"

"ಯಶ್‌, ನಿಮ್ಮ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ. ಐ ಲವ್‌ ಯೂ. ನಾನು ನಿಮ್ಮ ಹಲವಾರು ಚಿತ್ರಗಳನ್ನು ನೋಡಿದ್ದೀನಿ. ಬಟ್ ಈ ಸಿನಿಮಾದಲ್ಲಿ ನಿಮ್ಮ ಅಭಿನಯ ಜಸ್ಟ್ ಬ್ರಿಲಿಯಂಟ್. ನಿರ್ದೇಶಕಿ ಗೀತು ಮೋಹನ್‌ ದಾಸ್, ಬ್ರಿಲಿಯಂಟ್ ಜಾಬ್, ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಯ್ತು. ಸಿನಿಮಾದಲ್ಲಿ ಅಭಿನಯಿಸಿದ ಎಲ್ಲಾ ನಟಿಯರು ಅಮೇಜಿಂಗ್‌".

"ಥಿಯೇಟರ್‌ಗಳು ಫುಲ್ ಆಗಿವೆ. ನಾವೇ ಕಷ್ಟಪಟ್ಟು ಟಿಕೆಟ್‌ ತಗೊಂಡಿದ್ದೀವಿ. ಯಾರ ಮಾತಿಗೂ ಕವಿ ಕೊಡಬೇಡಿ ನಿಮ್ಮ ಹತ್ತಿರದ ಚಿತ್ರಮಂದಿರಗಳಿಗೆ ಹೋಗಿ 'ಟಾಕ್ಸಿಕ್' ಸಿನಿಮಾ ನೋಡಿ" ಎಂದು ನಟಿ ರಕ್ಷಿತಾ ಪ್ರೇಮ್‌ ಅವರು ಸುದೀರ್ಘವಾಗಿ ಸಿನಿಮಾ ಬಗ್ಗೆ ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ.

ಯಶ್ ಮತ್ತು ಇಡೀ ತಂಡಕ್ಕೆ ಹ್ಯಾಟ್ಸ್ ಆಫ್-ವಿಜಯ ಪ್ರಕಾಶ್‌

"ನಮಗೆ ಸೂರ್ಯನ ಬೆಳಕು ಬೇಡವೆನಿಸಿದಾಗ ನಾವು ಪರದೆಗಳನ್ನು ಹಾಕಿಕೊಳ್ಳುತ್ತೇವೆ. ಆದರೆ ಆ ಪರದೆಗಳು ಸೂರ್ಯನ ಬೆಳಕು ನಮ್ಮ ಮನೆ ಪ್ರವೇಶಿಸುವುದನ್ನು ಮಾತ್ರ ತಡೆಯುತ್ತವೆ, ಸೂರ್ಯ ಮಾತ್ರ ಎಂದಿನಂತೆ ಪ್ರಕಾಶಮಾನವಾಗಿ ಬೆಳಗುತ್ತಲೇ ಇರುತ್ತಾನೆ".

'ಟಾಕ್ಸಿಕ್'(Toxic) ಎಂಬುವುದು ಪಕ್ಕಾ ಸಿನಿಮಾ. ಇದು ಗ್ಯಾಂಗ್ ವಾರ್ (ಗ್ಯಾಂಗ್‌ಗಳ ನಡುವಿನ ಸಂಘರ್ಷ) ಕಥಾಹನ್ನೆಲೆಯಲ್ಲಿ ತೆರೆದುಕೊಳ್ಳುವ, ಅದ್ಭುತ ಅಭಿನಯ ಮತ್ತು ಆಳವಾದ ಮಾನವೀಯ ಭಾವನೆಗಳಿಂದ ಕೂಡಿರುವ ಚಿತ್ರ. ಇದಕ್ಕಿಂತ ಹೆಚ್ಚೇನೂ ಇಲ್ಲ, ಕಡಿಮೆಯೂ ಇಲ್ಲ. ಇದು ಶುದ್ಧ ಸಿನಿಮಾ. ಯಶ್ ಮತ್ತು ಇಡೀ ತಂಡಕ್ಕೆ ಹ್ಯಾಟ್ಸ್ ಆಫ್ (ಸಾಷ್ಟಾಂಗ ಪ್ರಣಾಮಗಳು) ಎಂದು ಗಾಯಕ ವಿಜಯ್ ಪ್ರಕಾಶ್‌ ಅವರು ಹೇಳಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka