Dailyhunt Logo
  • Light mode
    Follow system
    Dark mode
    • Play Story
    • App Story
ಟೀಮ್ ಇಂಡಿಯಾವನ್ನೂ ಯಾವತ್ತೂ ಬಿಟ್ಟು ಕೊಡದ ಸೂರ್ಯಕುಮಾರ್ ಯಾದವ್; ವೈಭವ್ ಸೂರ್ಯವಂಶಿಗೆ ಮತ್ತೊಮ್ಮೆ ಶುಭ ಹಾರೈಕೆ

ಟೀಮ್ ಇಂಡಿಯಾವನ್ನೂ ಯಾವತ್ತೂ ಬಿಟ್ಟು ಕೊಡದ ಸೂರ್ಯಕುಮಾರ್ ಯಾದವ್; ವೈಭವ್ ಸೂರ್ಯವಂಶಿಗೆ ಮತ್ತೊಮ್ಮೆ ಶುಭ ಹಾರೈಕೆ

Vijay Karnataka 4 months ago

ಭಾರತ ಟಿ20 ತಂಡದಿಂದ ಕೈಬಿಟ್ಟರೂ ತಂಡದ ಭವಿಷ್ಯದ ಟೂರ್ನಿಗಳಿಗೆ ಮತ್ತು ಹೊಸದಾಗಿ ಆಯ್ಕೆಯಾಗಿದ್ದ ವೈಭವ್ ಸೂರ್ಯವಂಶಿ ಅವರಿಗೆ ಶುಭಾಶಯ ತಿಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಇದೀಗ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ತಂಡದಿಂದ ತಮ್ಮನ್ನು ಕೈಬಿಟ್ಟಿರುವುದರ ಕುರಿತು ತಮ್ಮ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಸುಳ್ಳು ಹೇಳಿಕೆಯೊಂದನ್ನು ಸೂರ್ಯಕುಮಾರ್ ಯಾದವ್ ಖಂಡಿಸಿದ್ದಾರೆ.

ಮಾತ್ರವಲ್ಲದೆ ಈಗಿನ ಭಾರತ ತಂಡಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಮನ ಗೆದ್ದಿದ್ದಾರೆ. ಮಾತ್ರವಲ್ಲದೆ ಅವರು ವೈಭವ್ ಸೂರ್ಯವಂಶಿಯ ಬಗ್ಗೆಯೂ ಉಲ್ಲೇಖಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

35 ವರ್ಷದ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಭಾರತ ತಂಡವು 2026ರ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದ ಬೆನ್ನಲ್ಲೇ, ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಅವರ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದ್ದು ಸೂರ್ಯಕುಮಾರ್ ಆಡುತ್ತಿದ್ದ ನಾಲ್ಕನೇ ಕ್ರಮಾಂಕವನ್ನೂ ಅವರಿಗೆ ನೀಡಲಾಗಿದೆ. ಇದೀಗ ತಂಡ ಐರ್ಲೆಂಡ್ ಮತ್ತು ಇಂಗ್ಲೆಂಡ್ ನಲ್ಲಿ ವಿಫಲವಾದಾಗ ಅವರು ಬಿಸಿಸಿಐ ಮತ್ತು ಆಯ್ಕೆ ಸಮಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದ್ದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ಆ ಹೇಳಿಕೆಯನ್ನು ಮಾಜಿ ಭಾರತೀಯ ನಾಯಕ ಎಂದಿಗೂ ನೀಡಿರಲಿಲ್ಲ.

SKY ಸ್ಪಷ್ಟನೆಯೇನು?

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಅಲ್ಲಗೆಳೆದಿರುವ ಸೂರ್ಯಕುಮಾರ್ ಯಾದವ್, "ತಂಡದ ಪ್ರದರ್ಶನಕ್ಕೆ ನನಗೆ ತುಂಬಾ ಸಂತೋಷವಾಗಿದೆ ಮತ್ತು ನಾನು ಯಾವಾಗಲೂ ಅವರಿಗೆ ಒಳ್ಳೆಯದನ್ನೇ ಬಯಸುತ್ತೇನೆ. ಹುಡುಗರು ತಮ್ಮ ಸಂಪೂರ್ಣ ಶ್ರಮವನ್ನು ಹಾಕುತ್ತಿದ್ದಾರೆ ಎಂದು ನನಗೆ ತಿಳಿದಿದೆ ಮತ್ತು ಅವರಿಗೆ ಯಾವಾಗಲೂ ನನ್ನ ಸಂಪೂರ್ಣ ಬೆಂಬಲ ಇರುತ್ತದೆ. ವೈಭವ್‌ಗೆ ಒಂದು ವಿಶೇಷ ಮಾತು ನೀವು ಅತ್ಯಂತ ರೋಮಾಂಚನಕಾರಿಯಾಗಲಿರುವ ಸುದೀರ್ಘ ಜರ್ನಿಯ ಆರಂಭದಲ್ಲಿದ್ದೀರಿ." ಎಂದು ತಿಳಿಸಿದ್ದಾರೆ.

ಪರಿಶೀಲಿಸದೆ ಹಂಚಿಕೊಳ್ಳದಿರಿ

"ಪ್ರತಿ ಕ್ಷಣವನ್ನೂ ಆನಂದಿಸಿ ಮತ್ತು ದೇಶವು ಹೆಮ್ಮೆಪಡುವಂತೆ ಮಾಡುವುದನ್ನು ಮುಂದುವರಿಸಿ. ಇಂಟರ್ನೆಟ್‌ನಲ್ಲಿ ನನ್ನ ಹೆಸರಿನಲ್ಲಿ ಹರಿದಾಡುತ್ತಿರುವ ಹೇಳಿಕೆಯೊಂದು ನನ್ನ ಗಮನಕ್ಕೆ ಬಂದಿದೆ. ನಾನು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ ಅಥವಾ ಅದಕ್ಕೆ ಅನುಮತಿ ನೀಡಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ದಯವಿಟ್ಟು ಪರಿಶೀಲಿಸದ ಇಂತಹ ಮಾಹಿತಿಯನ್ನು ನಂಬಬೇಡಿ ಅಥವಾ ಹಂಚಿಕೊಳ್ಳಬೇಡಿ. ಭಾರತೀಯ ಕ್ರಿಕೆಟ್, ನನ್ನ ಸಹ ಆಟಗಾರರು ಮತ್ತು ಈ ಆಟಕ್ಕೆ ನನ್ನ ಬೆಂಬಲವು ಯಾವಾಗಲೂ ನನ್ನ ಹೆಸರಿನಲ್ಲಿ ಹರಡಿಸಲಾಗುತ್ತಿರುವ ಸುಳ್ಳು ಪದಗಳಿಗಿಂತ ಜೋರಾಗಿ ಮಾತನಾಡುತ್ತದೆ," ಎಂದು ಬರೆದುಕೊಂಡಿದ್ದಾರೆ.

113 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ಸೂರ್ಯಕುಮಾರ್ ಯಾದವ್ 36.35 ಸರಾಸರಿಯಲ್ಲಿ 3272 ರನ್ ಕಲೆ ಹಾಕಿದ್ದಾರೆ. ಅವರು ಟಿ20 ಮಾದರಿಯಲ್ಲಿ ಭಾರತದ ಪರ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಮತ್ತು 2000 ಕ್ಕೂ ಹೆಚ್ಚು ರನ್ ಗಳಿಸಿದ ಟೆಸ್ಟ್ ಆಡುವ ರಾಷ್ಟ್ರಗಳ ಆಟಗಾರರ ಪೈಕಿ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka