Dailyhunt Logo
  • Light mode
    Follow system
    Dark mode
    • Play Story
    • App Story
Toxic Movie ಬಗ್ಗೆ ದುಬೈ, ಜರ್ಮನಿ, ಅಮೆರಿಕಾ, ಆಸ್ಟ್ರೇಲಿಯಾ ಕನ್ನಡಿಗರು  ಹೇಳಿದ್ದೇನು?

Toxic Movie ಬಗ್ಗೆ ದುಬೈ, ಜರ್ಮನಿ, ಅಮೆರಿಕಾ, ಆಸ್ಟ್ರೇಲಿಯಾ ಕನ್ನಡಿಗರು ಹೇಳಿದ್ದೇನು?

Vijay Karnataka 3 weeks ago

ರಾಕಿಂಗ್ ಸ್ಟಾರ್ ಯಶ್ ಅಭಿನಯ, ಗೀತು ಮೋಹನ್‌ ದಾಸ್‌ ನಿರ್ದೇಶನ, ಕೆವಿಎನ್‌(KVN Productions) ನಿರ್ಮಾಣ ಹೊಂದಿರುವ ಬಹುನಿರೀಕ್ಷಿತ 'ಟಾಕ್ಸಿಕ್'(Toxic) ಸಿನಿಮಾ ಇಂದು ಆಗಸ್ಟ್ 26 ರಂದು ವಿಶ್ವದಾದ್ಯಂತ ಅತ್ಯಂತ ಅದ್ಧೂರಿಯಾಗಿ ಬಿಡುಗಡೆಗೊಂಡಿದೆ.

ಭಾರತದಲ್ಲಿ ಬೆಳಿಗ್ಗೆ 6 ಗಂಟೆಗೆ ಫಸ್ಟ್ ಶೋ ಶುರುವಾಗಿದೆ. 3 ಗಂಟೆ 14 ನಿಮಿಷಗಳು ಸಿನಿಮಾದ ಒಟ್ಟು ಸಮಯ.

ಹೊರದೇಶದಲ್ಲಿ ನಿನ್ನೆ ಆಗಸ್ಟ್ 25 ರಂದು ಸಿನಿಮಾ ರಿಲೀಸ್‌ ಆಗಿದ್ದು, ದುಬೈ, ಜರ್ಮನಿ, ಅಮೆರಿಕಾ, ಆಸ್ಟ್ರೇಲಿಯಾ ದೇಶಗಳಲ್ಲಿ ಕನ್ನಡಿಗರು ಭಾರತಕ್ಕಿಂತ ಮುಂಚಿತವಾಗಿಯೇ 'ಟಾಕ್ಸಿಕ್' ಸಿನಿಮಾ ನೋಡಿದ್ದಾರೆ. ಮುಖ್ಯವಾಗಿ ವಿದೇಶಿ ಕನ್ನಡಿಗರು ಸಿನಿಮಾ ಬಗ್ಗೆ ಏನು ಹೇಳುತ್ತಿದ್ದಾರೆ?

ಜರ್ಮನಿ:

ಜರ್ಮನಿ ದೇಶದಲ್ಲಿ ಬೆಳಗಿನಜಾವ 3.30ಕ್ಕೆ ಟಾಕ್ಸಿಕ್‌ ಸಿನಿಮಾವನ್ನ ನೋಡಿದ ಕನ್ನಡಿಗ ಹೇಳಿದ್ದಿಷ್ಟು, "ಸಂಪ್ರದಾಯ ಮನಸ್ಥಿತಿಯಲ್ಲಿ ಸಿನಿಮಾವನ್ನ ನೋಡಬೇಡಿ. ಇದು ಬೇರೆಯದ್ದೇ ಆಂಗಲ್‌ ಮತ್ತು ಜಾನರ್‌ ಇರುವ ಚಿತ್ರ. ಕಥೆ ಮತ್ತು ಚಿತ್ರಕಥೆಯಲ್ಲಿ ಬಹಳ ಆಂತರಿಕ ವಿಚಾರಗಳನ್ನ ವಿವರಿಸುವ ಪ್ರಯತ್ನ ಮಾಡಿದ್ದಾರೆ. ರವಿ ಬಸ್ರೂರು ಅವರ ಮ್ಯೂಸಿಕ್‌ ಸೂಪರ್ ಹಿಟ್. ಮುಖ್ಯವಾಗಿ ಯಶ್‌ ಅವರ ಆಕ್ಟಿಂಗ್‌ ನೋಡಲೇಬೇಕು. ವರ್ತ್‌ ಟು ವಾಚ್‌".

ಅಮೆರಿಕಾ:

"ಈಗತಾನೇ 'ಟಾಕ್ಸಿಕ್‌' ಸಿನಿಮಾ ನೋಡಿಕೊಂಡು ಬಂದೇ, ಅಣ್ಣಾ ವಾಂಚಿ ಬಿಸಾಕಿದ್ದಾರೆ. ಗೀತಾ ಮೇಡಂ ಶಾಕ್‌ ಮೇಲೆ ಶಾಕ್‌ ಕೊಟ್ಟಿದ್ದಾರೆ. ಬಿಗ್ಗೆಸ್ಟ್‌ ಸಿನಿಮಾ ಮಾಡ್ತಿದ್ದೀನಿ ಅಂತ ಅವರು ಹೇಳಿದ್ದು ಏಕೆ ಅನ್ನೋದು ಈಗ ಗೊತ್ತಾಗುತ್ತೆ". ಅಮೆರಿಕಾದಲ್ಲಿ ಟಾಕ್ಸಿಕ್‌ ಸಿನಿಮಾ ನೋಡಿದ ಕನ್ನಡಿಗನ ರಿವ್ಯೂ ಇದಾಗಿತ್ತು.


"ಫಸ್ಟ್‌ ಟೈಮ್‌ ಸಿನಿಮಾ ನೋಡಿದಾಗ ಅರ್ಥ ಆಗ್ದೇ ಇರಬಹುದು, ಆದರೆ, 'ಕೆಜಿಎಫ್‌' ನಂತರಯಶ್ ಕಡೆಯಿಂದ ಒಳ್ಳೆ ಸಿನಿಮಾ ಸಿಕ್ಕಿದೆ" ಎಂದು ಅಮೆರಿಕಾದಲ್ಲಿ ಸಿನಿಮಾ ನೋಡಿದ ಜನತೆ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ:

ಫಸ್ಟ್ ಹಾಫ್‌ 'ಟಾಕ್ಸಿಕ್‌' ಸಿನಿಮಾ ನೋಡಿ ರಿವ್ಯೂ ಮಾಡಿರುವ ಯುವತಿ ಓರ್ವರ ಪ್ರಕಾರ "ಫಸ್ಟ್‌ ಹಾಫ್‌ನಲ್ಲಿ ಸಿನಿಮಾ ಸ್ಟೋರಿ ಗೊತ್ತಾಗಲ್ಲ. ಮಹಿಳಾ ರಕ್ಷಣಾ ಕೇಂದ್ರದವರು ಬಂದು ಮಾತಾಡಿದಷ್ಟು ಎಲ್ಲಾ ಅಡಲ್ಟ್‌ ದೃಶ್ಯಗಳು ಏನಿಲ್ಲ. ಸ್ಟೋರಿನಲ್ಲಿ ತೋರಿಸಿಲ್ಲ. ಟೀಸರ್‌, ಟ್ರೇಲರ್ ನೋಡಿ, ಸಿನಿಮಾನ ಜಡ್ಜ್‌ ಮಾಡಬೇಡಿ" ಎಂದಿದ್ದಾರೆ.

ದುಬೈ:

"ನಿರೀಕ್ಷೆಗೂ ಮೀರಿದ ಸಿನಿಮಾ ಇದು. ಯಶ್‌ ಸರ್ ಈ ರೀತಿ ಸಿನಿಮಾ ಮಾಡ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ" ಎಂದು ದುಬೈನಲ್ಲಿ ಸಿನಿಮಾ ವೀಕ್ಷಿಸಿದ ಯುವತಿ ಹೇಳಿದ ಮಾತುಗಳು ಇವು.

Dailyhunt
Disclaimer: This content has not been generated, created or edited by Dailyhunt. Publisher: Vijay Karnataka