Dailyhunt Logo
  • Light mode
    Follow system
    Dark mode
    • Play Story
    • App Story
ಉದ್ಯೋಗ ಭವಿಷ್ಯ 1 ಆಗಸ್ಟ್ 2026: ಮೇಷ ಕುಂಭ ರಾಶಿಯವರ ವೃತ್ತಿಯಲ್ಲಿ ಭಾರೀ ಏಳಿಗೆ- 12 ರಾಶಿಗಳ ಆರ್ಥಿಕ ಜಾತಕ ಹೇಗಿದೆ ತಿಳಿಯಿರಿ..!

ಉದ್ಯೋಗ ಭವಿಷ್ಯ 1 ಆಗಸ್ಟ್ 2026: ಮೇಷ ಕುಂಭ ರಾಶಿಯವರ ವೃತ್ತಿಯಲ್ಲಿ ಭಾರೀ ಏಳಿಗೆ- 12 ರಾಶಿಗಳ ಆರ್ಥಿಕ ಜಾತಕ ಹೇಗಿದೆ ತಿಳಿಯಿರಿ..!

Vijay Karnataka 1 week ago

Career rashifal 1 august 2026: ಆಗಸ್ಟ್ 1 ಶನಿವಾರ ಶನಿದೇವನ ಕೃಪೆ ಯಾವ ರಾಶಿಯವರ ಮೇಲೆ ಇರಲಿದೆ..? ಮೇಷದಿಂದ ಮೀನ ರಾಶಿಯವರೆಗೆ 12 ರಾಶಿಗಳ ಆರ್ಥಿಕ ಹಾಗೂ ಉದ್ಯೋಗ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಆಗಸ್ಟ್ 1 ಶನಿವಾರ ಶನಿದೇವನಿಗೆ ಅರ್ಪಿತವಾದ ದಿನವಾಗಿದ್ದು, ಜ್ಯೋತಿಷ್ಯದಲ್ಲೂ ಮಹತ್ವದ್ದಾಗಿದೆ.
ಆಗಸ್ಟ್ ತಿಂಗಳ ಮೊದಲ ದಿನ ಹೇಗೆ ಶುರುವಾಗಲಿದೆ ಎಂದು ತಿಳಿಯುವ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಆಗಸ್ಟ್ ಮೊದಲ ದಿನ ವಾರಾಂತ್ಯವೂ ಹೌದು. ಈ ದಿನದ ಗ್ರಹಗತಿಗಳ ಆಧಾರದ ಮೇಲೆ ದ್ವಾದಶಿ ರಾಶಿಗಳ ವೃತ್ತಿ ಜೀವನ ಮತ್ತು ಆರ್ಥಿಕ ಲಾಭ ಹಾಗೂ ನಷ್ಟದ ಬಗ್ಗೆ ತಿಳಿಯೋಣ. ಶನಿವಾರ ಗುರುವಿನ ಸ್ಥಾನ ಕಟಕ ರಾಶಿಯಲ್ಲಿರಲಿದೆ. ಶುಕ್ರನ ಸ್ಥಾನ ಸಿಂಹ ರಾಶಿಯಲ್ಲಿರಲಿದೆ. ಚಂದ್ರ ಕುಂಭ ರಾಶಿಯಲ್ಲಿ ಸಾಗಲಿದ್ದಾನೆ. ಹಾಗಾದರೆ ಈ ದಿನ ಯಾವ ರಾಶಿಯವರ ಮೇಲೆ ಶನಿ ದೇವನ ಕೃಪೆಯಿಂದ ಎಂದು ತಿಳಿಯೋಣ. ಮೇಷ ರಾಶಿ

ಮೇಷ ರಾಶಿಯವರಿಗೆ ಶನಿವಾರ ಗ್ರಹ ಸ್ಥಾನಗಳು ಅನುಕೂಲಕರವಾಗಿವೆ. ನಿಮ್ಮ ನಂಬಿಕೆ ಮತ್ತು ಪರಿಶ್ರಮವನ್ನು ಬಿಟ್ಟುಕೊಡಬೇಡಿ. ನಿಮ್ಮ ಇಚ್ಛಾಶಕ್ತಿಯ ಸಹಾಯದಿಂದ ನೀವು ಕೆಲಸದಲ್ಲಿ ಕಷ್ಟಕರವಾದ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ನೀವು ಯಾವುದೇ ಬಂಡವಾಳ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಇಂದು ಅದಕ್ಕೆ ಸರಿಯಾದ ದಿನವಾಗಿರುತ್ತದೆ. ನಿಮ್ಮ ಜಾತಕದ 4ನೇ ಮನೆಯಲ್ಲಿರುವ ಗುರು ಅತ್ಯಂತ ಶುಭ ಫಲಗಳನ್ನು ನೀಡಲಿದ್ದಾನೆ.


ವೃಷಭ ರಾಶಿ

ವೃಷಭ ರಾಶಿಯವರಿಗೆ ಸಂತೋಷದ ದಿನ ಕಾಯುತ್ತಿದೆ. ಯಾಕೆಂದರೆ ಮಂಗಳ ಗ್ರಹ ನಿಮ್ಮ ಜಾತಕದ ಮೊದಲ ಮನೆಯಲ್ಲಿ ಸಾಗುತ್ತಿದೆ. ಕೆಲಸದಲ್ಲಿ ನಿಮ್ಮ ಪ್ರಯತ್ನಗಳು ಫಲ ನೀಡುತ್ತವೆ. ನೀವು ಬಡ್ತಿಯತ್ತ ಹೆಜ್ಜೆ ಇಡಬಹುದು. ವ್ಯವಹಾರದಲ್ಲಿ ಭರವಸೆಯ ಬದಲಾವಣೆಗಳು ಸಂಭವಿಸಬಹುದು. ಆರೋಗ್ಯದಲ್ಲಿ ಕೆಲವು ಏರಿಳಿತಗಳಿದ್ದರೂ ಸಹ, ಅವು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತವೆ. ನಿಮ್ಮ ಖ್ಯಾತಿ ಮತ್ತು ಗೌರವ ಹೆಚ್ಚಾಗುವ ಸಮಯ ಇದು. ನಿಮ್ಮ ಕುಟುಂಬದ ಭವಿಷ್ಯವನ್ನು ರೂಪಿಸುವ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ನೀವು ಸಬಲರಾಗುತ್ತೀರಿ.


ಮಿಥುನ ರಾಶಿ

ಮಿಥುನ ರಾಶಿಯವರಿಗೆ ಆಗಸ್ಟ್ ಮೊದಲ ದಿನ ಅದ್ಭುತವಾಗಿದೆ. ಬುಧ ನಿಮ್ಮ ಜಾತಕದ ಲಗ್ನ ಸ್ಥಾನದಲ್ಲಿ ಸಂಚಾರ ಮಾಡುತ್ತಿದ್ದಾನೆ. ಸ್ವಂತ ಹುದ್ದೆ ಹೊಂದಿರುವವರಿಗೆ ಲಾಭ ಉಂಟು. ನಿಮ್ಮ ಶ್ರಮಕ್ಕೆ ಶನಿವಾರ ಶನಿದೇವನ ಅನುಗ್ರಹ ಹಾಗೂ ಬೆಂಬಲ ಇರಲಿದೆ. ಹೀಗಾಗಿ ಶ್ರಮಕ್ಕಿಂತಲೂ ಹೆಚ್ಚು ಲಾಭ ನಿಮ್ಮದಾಗಬಹುದು. ಇನ್ನೂ ಈ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ಹುಡುಕಿಕೊಂಡು ಬರಲಿವೆ.


ಕಟಕ ರಾಶಿ

ಕಟಕ ರಾಶಿಯವರಿಗೆ ಶನಿವಾರ ಅತ್ಯಾದ್ಬುತ ದಿನ. ಈ ದಿನ ಗುರು ದೇವ ನಿಮ್ಮ ಸ್ವಂತ ರಾಶಿಯಲ್ಲಿ ಸಂಚಾರ ಮಾಡಲಿದ್ದಾನೆ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಗೊಳಿಸಿ ಆದಾಯದ ಮೂಲಗಳನ್ನು ಹೆಚ್ಚಿಸುವುದು. ಹೀಗಾಗಿ ಆಗಸ್ಟ್ 1 ಸಂತೋಷದ ದಿನವಾಗಿರುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಸೂಕ್ತವಾದ ಪ್ರತಿಫಲ ಸಿಗಬಹುದು. ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ, ಅವು ಗುಣಮುಖವಾಗುತ್ತವೆ.


ಸಿಂಹ ರಾಶಿ

ಸಿಂಹ ರಾಶಿಯ ಲಗ್ನ ಸ್ಥಾನದಲ್ಲಿ ಶುಕ್ರ ಸಂಚಾರ ಮಾಡುತ್ತಿದ್ದು ಆಗಸ್ಟ್ 1 ಸಂತೋಷದ ದಿನವಾಗಿರುತ್ತದೆ. ಉದ್ಯೋಗ ಸ್ಥಳದಲ್ಲಿ ಕೆಲಸದ ಒತ್ತಡ ಕಡಿಮೆಯಾಗುವುದು. ನಿಮ್ಮೆಲ್ಲಾ ಕಾರ್ಯಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಶತ್ರುಗಳ ಕಾಟ ಕಡಿಮೆಯಾಗುವುದು. ನಿಮ್ಮ ಕಾರ್ಯಗಳಲ್ಲಿ ಯಶಸ್ಸನ್ನು ಮಾತ್ರ ನೀವು ಕಾಣುವಿರಿ. ಕುಟುಂಬದಲ್ಲೂ ಶುಭ ಕಾರ್ಯಗಳು ನಡೆಯುವುದರಿಂದ ಮನಸ್ಸಿಗೆ ಸಂತೋಷವಾಗುವುದು. ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ ಕಾದಿದೆ.


ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಇಂದು ಕೆಲಸ ಮತ್ತು ವೃತ್ತಿ ಬೆಳವಣಿಗೆಗೆ ಅನುಕೂಲಕರ ದಿನವಾಗಿರುತ್ತದೆ. ನಿಮ್ಮ ಜೀವನದಲ್ಲಿ ನೀವು ಗಮನಾರ್ಹ ಪ್ರಗತಿಯನ್ನು ನೋಡುತ್ತೀರಿ. ನಿಮ್ಮ ಜೀವನದಲ್ಲಿ ಶತ್ರುಗಳ ಸಂಕ್ಯೆ ಕಡಿಮೆಯಾಗುವುದು. ಉದ್ಯೋಗ ಸ್ಥಳದಲ್ಲಿ ಪರಸ್ಪರ ಸಹಕಾರ ಇರಲಿದೆ. ನೀವು ನಿಮ್ಮ ಕಾರ್ಯಗಳನ್ನು ಎಚ್ಚರಿಕೆಯಿಂದ ಯೋಜಿಸುವಿರಿಂದ ಲಾಭವಿದೆ. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿ.


ತುಲಾ ರಾಶಿ

ತುಲಾ ರಾಶಿಯವರಿಗೆ ಆಗಸ್ಟ್ 1ರಂದು ಖರ್ಚುಗಳು ಕಡಿಮೆಯಾಗಿ ಉಳಿತಾಯ ಹೆಚ್ಚಾಗುವುದು. ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಹೆಚ್ಚುವರಿ ಪ್ರಯತ್ನ ಬೇಕಾಗಬಹುದು. ಕುಟುಂಬದ ಹಿರಿಯ ಸದಸ್ಯರೊಂದಿಗೆ ಕೆಲವು ವಾದಗಳು ಇರಬಹುದು. ಆದರೆ ಅವು ಹೆಚ್ಚು ಸಮಯ ಇರುವುದಿಲ್ಲ. ಇಂದು ನಿಮ್ಮ ಸಂಗಾತಿಯಿಂದ ನಿಮಗೆ ಕೆಲಸದಲ್ಲಿ ಸಂಪೂರ್ಣ ಬೆಂಬಲ ಸಿಗುತ್ತದೆ.


ವೃಶ್ಚಿಕ ರಾಶಿ

ಆಗಸ್ಟ್ 1ರಿಂದ ವೃಶ್ಚಿಕ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ. ಅನಗತ್ಯ ಕೋಪ ಕಡಿಮೆಯಾಗುವುದು. ನಿಮ್ಮ ಆದಾಯದ ಮೂಲಗಳು ಸುಧಾರಿಸುತ್ತವೆ. ಹಿಂದಿನ ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತವೆ. ನಿಮ್ಮ ಹೆತ್ತವರ ಆಶೀರ್ವಾದದಿಂದ, ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುವ ಸಮಯ ಇದು. ಉದ್ಯೋಗ ಸ್ಥಳದಲ್ಲಿ ಸಹಕಾರ ಇರಲಿದೆ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗಬಹುದು. ಪ್ರಯತ್ನವನ್ನು ಬಿಡಬೇಡಿ.


ಧನು ರಾಶಿ

ಧನು ರಾಶಿಯವರಿಗೆ ಸಂಬಂಧಗಳಲ್ಲಿ ಒತ್ತಡ ಎದುರಾಗಬಹುದು. ಇದು ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಕುಟುಂಬ ವಿಷಯಗಳನ್ನು ಇತ್ಯರ್ಥಪಡಿಸಿಕೊಳ್ಳುವುದು ಉತ್ತಮ. ಅವಿವಾಹಿತರಿಗೆ ಮದುವೆಯಾಗುವ ಯೋಗವಿದ್ದರೂ ಉದ್ಯೋಗ ಭಾಗ್ಯ ಕೈತಪ್ಪುವ ಸಾಧ್ಯತೆ ಇದೆ. ನಿಮ್ಮ ಮಾತಿನಲ್ಲಿ ಸಭ್ಯರಾಗಿರಿ. ಯಾಕೆಂದರೆ ಇದು ನಿಮಗೆ ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಳೆಯ ಆರೋಗ್ಯ ಸಮಸ್ಯೆ ಮತ್ತೆ ಕಾಣಿಸಿಕೊಂಡರೆ, ಉತ್ತಮ ವೈದ್ಯರನ್ನು ಸಂಪರ್ಕಿಸಿ.


ಮಕರ ರಾಶಿ

ಮಕರ ರಾಶಿಯವರಿಗೆ ಈ ದಿನ ಲಾಭದಾಯಕ ದಿನವಾಗಿರುತ್ತದೆ. ನೀವು ಸಕಾರಾತ್ಮಕ ಮನಸ್ಥಿತಿಯನ್ನು ಕಾಪಾಡಿಕೊಳ್ಳಬೇಕು. ಇತರರ ವ್ಯವಹಾರಗಳಲ್ಲಿ ಅನಗತ್ಯ ಹಸ್ತಕ್ಷೇಪವನ್ನು ತಪ್ಪಿಸಿ. ಹಣಕಾಸಿನ ಚಿಂತೆಗಳು ನಿಮ್ಮ ಮನಸ್ಸನ್ನು ಆಕ್ರಮಿಸಿಕೊಂಡರೂ ಸಹ, ನಿಮ್ಮ ಖರ್ಚುಗಳನ್ನು ಸರಾಗವಾಗಿ ನಿರ್ವಹಿಸಲಾಗುತ್ತದೆ. ಇಂದು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿರುತ್ತದೆ. ಕೃಷಿ, ವ್ಯಾಪಾರ, ವ್ಯವಹಾರ ಕ್ಷೇತ್ರದಲ್ಲಿ ಇರುವವರಿಗೆ ಲಾಭ ಸಿಗುವುದು.


Dailyhunt
Disclaimer: This content has not been generated, created or edited by Dailyhunt. Publisher: Vijay Karnataka