Dailyhunt Logo
  • Light mode
    Follow system
    Dark mode
    • Play Story
    • App Story
Vaibhav Sooryavanshi-  ಬ್ಯಾಟಿಂಗ್ ನಲ್ಲಿ ವಿಫಲವಾದರೂ ಬೌಲಿಂಗ್‌ನಲ್ಲಿ ಚಕಿತಗೊಳಿಸಿದ ಬಾಲಕ; 4 ಎಸೆತಗಳ ಅಂತರದಲ್ಲಿ 2 ವಿಕೆಟ್!

Vaibhav Sooryavanshi- ಬ್ಯಾಟಿಂಗ್ ನಲ್ಲಿ ವಿಫಲವಾದರೂ ಬೌಲಿಂಗ್‌ನಲ್ಲಿ ಚಕಿತಗೊಳಿಸಿದ ಬಾಲಕ; 4 ಎಸೆತಗಳ ಅಂತರದಲ್ಲಿ 2 ವಿಕೆಟ್!

Vijay Karnataka 2 months ago

ಬೆಂಗಳೂರು: ಎಲ್ಲರೂ ವೈಭವ್ ಸೂರ್ಯವಂಶಿಯ ಬ್ಯಾಚಿಂಗ್ ನೋಡಲು ಕಾತರರಾಗಿದ್ದರು. ಆದರೆ ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸಿದ 15ರ ಹರೆಯದ ಬಾಲಕ ಇದೀಗ ಬೌಲಿಂಗ್ ನಲ್ಲಿ ಮಿಕೆಟ್ ಪಡೆದು ಮಿಂಚಿದ್ದಾರೆ. ದುಲೀಪ್ ಟ್ರೋಫಿ ಪಂದ್ಯದಲ್ಲಿ ಪೂರ್ವ ವಲಯದ ಪರ ಕೇವಲ 4 ಎಸೆತಗಳ ಅಂತರದಲ್ಲಿ 2 ವಿಕೆಟ್ ಕಬಳಿಸಿ ಚಕಿತಗೊಳಿಸಿದ್ದಾರೆ.

ನಗರದ ಸೆಂಟರ್ ಆಫ್ ಎಕ್ಲಲೆನ್ಸ್ ನ 2ನೇ ಮೈದಾನದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಈಸ್ಟ್ ಝೋನ್ ತಂಡದ ಉಪನಾಯಕರಾಗಿರುವ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಬೆಂಗಳೂರಿನ ಬಿಸಿ ಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಗ್ರೌಂಡ್ 2ನಲ್ಲಿ ನಾರ್ತ್ ಈಸ್ಟ್ ಝೋನ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ತಮ್ಮ ಎಡಗೈ ಸಾಂಪ್ರದಾಯಿತ ಸ್ಪಿನ್ ಬೌಲಿಂಗ್ ಮಾಡಿ ಕಿಸಾನ್ ಲಿಂಗ್ಡೊ ಮತ್ತು ಇಮ್ಲಿವಾಟಿ ಲೆಮ್ತರ್ ಅವರ ವಿಕೆಟ್ ಎಗರಿಸಿದರು.

ಈಸ್ಟ್ ಝೋನ್ ಪರ ಇನ್ನಿಂಗ್ಸ್ ಆರಂಭಿಸಿದ್ದ ಸೂರ್ಯವಂಶಿ, ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 6 ಎಸೆತಗಳನ್ನು ಎದುರಿಸಿ 2 ಬೌಂಡರಿಗಳೊಂದಿಗೆ 8 ರನ್ ಗಳಿಸಿ ನಾರ್ತ್ ಈಸ್ಟ್ ಝೋನ್ ವೇಗಿ ಬಿಶ್ವರ್‌ಜಿತ್ ಕೊಂಥೌಜಮ್‌ಗೆ ವಿಕೆಟ್ ಒಪ್ಪಿಸಿದ್ದರು. ಆದರೆ, ಫಾಲೋ-ಆನ್ ಅನುಭವಿಸಿದ ನಾರ್ತ್ ಈಸ್ಟ್ ಝೋನ್ ತಂಡದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲು ಬಂದ ವೈಭವ್ ತಮ್ಮ ಅಪರೂಪದ ಕೌಶಲ್ಯ ಪ್ರದರ್ಶಿಸಿದರು.

ಹೀಗಿತ್ತು ಬೌಲಿಂಗ್ ಕರಾಮತ್ತು!

ಇನ್ನಿಂಗ್ಸ್‌ನ 28ನೇ ಓವರ್‌ನ ಎರಡನೇ ಎಸೆತದಲ್ಲಿ, ಕಿಸಾನ್ ಲಿಂಗ್ಡೊ ಬಾರಿಸಲು ಯತ್ನಿಸಿದಾಗ ಚೆಂಡು ಲೀಡಿಂಗ್ ಎಡ್ಜ್ ಆಗಿ ಕವರ್‌ನತ್ತ ಹಾರಿತು. ಬದಲಿ ಫೀಲ್ಡರ್ ಡೆನಿಶ್ ದಾಸ್ ಸುಲಭ ಕ್ಯಾಚ್ ಪಡೆದರು. ಅದಾದ ಮೂರು ಎಸೆತಗಳ ನಂತರ, ಇಮ್ಲಿವಾಟಿ ಲೆಮ್ತುರ್ ಅವರಿಗೆ ಎಸೆದ ವೇಗದ ಎಸೆತವು ಬ್ಯಾಟ್ ಅಂಚಿಗೆ ತಾಗಿ ವಿಕೆಟ್ ಕೀಪರ್ ಇಶಾನ್ ಕಿಶನ್ ಕೈಸೇರಿತು. ಈ ಮೂಲಕ ಒಂದೇ ಓವರ್‌ನಲ್ಲಿ 2 ವಿಕೆಟ್ ಪಡೆದ ಸೂರ್ಯವಂಶಿ, ನಾರ್ತ್ ಈಸ್ಟ್ ಝೋನ್ ತಂಡವನ್ನು 79/7 ರನ್ ಸ್ಕೋರ್‌ಗೆ ಕುಸಿಯುವಂತೆ ಮಾಡಿದರು. ಈ ಹಿಂದೆಯೂ ಅವರು ಅಂಡರ್ 19 ಮತ್ತು ಭಾರತ ಎ ತಂಡಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ನಿದರ್ಶನಗಳಿವೆ.

ವೈಭವ್ ಬಗ್ಗೆ ರಾಹುಲ್ ದ್ರಾವಿಡ್ ಮಾತು:

ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಈ ಬಗ್ಗೆ ಜಿಯೋಸ್ಟಾರ್ ಜೊತೆ ಮಾತನಾಡಿ, ವೈಭವ್ ಸೂರ್ಯವಂಶಿ ವಿಚಾರದಲ್ಲಿ ತಾಳ್ಮೆ ಅಗತ್ಯ ಎಂದು ಹೇಳಿದ್ದಾರೆ. "ವೈಭವ್‌ಗೆ ಈಗಷ್ಟೇ 15 ವರ್ಷ. ದೇಶೀಯ ಕ್ರಿಕೆಟ್‌ನಲ್ಲಿ ತರಬೇತಿ ಮತ್ತು 2 ಋತುಗಳ ಕಾಲ ರೆಡ್-ಬಾಲ್ (ಪ್ರಥಮ ದರ್ಜೆ) ಕ್ರಿಕೆಟ್ ಆಡಲು ಅವಕಾಶ ಸಿಕ್ಕರೆ, ಅವರು ಭಾರತ ಟೆಸ್ಟ್ ತಂಡದಲ್ಲೂ ಸ್ಥಾನ ಪಡೆಯಬಲ್ಲರು ಎಂಬ ಭರವಸೆ ನನಗಿದೆ. ಆದರೆ, ಭಾರತ ವೈಟ್-ಬಾಲ್ ತಂಡದಲ್ಲಿ ಬ್ಯುಸಿಯಾಗಿರುವುದರಿಂದ ಅವರಿಗೆ ದೇಶೀಯ ಕ್ರಿಕೆಟ್‌ನಲ್ಲಿ ಪೂರ್ಣ ಋತುಗಳಲ್ಲಿ ಆಡಲು ಸಮಯ ಸಿಗುತ್ತದೆಯೇ ಎಂಬುದು ಸವಾಲಿನ ವಿಷಯ" ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka