ಬೆಂಗಳೂರು: ರಾಜ್ಯದ 20 ಶಾಲೆಗಳಲ್ಲಿಶೂನ್ಯ ಪ್ರವೇಶವಿದ್ದರೂ 308 ಶಿಕ್ಷಕರು ಮಾತ್ರ ನಿತ್ಯ ಶಾಲೆಗೆ ತೆರಳಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಕೇಂದ್ರ ಸರಕಾರದ ಏಕೀಕೃತ ಶಿಕ್ಷಣ ಜಿಲ್ಲಾಮಾಹಿತಿ ವ್ಯವಸ್ಥೆ (ಯುಡೈಸ್) ವರದಿ ಬಹಿರಂಗಪಡಿಸಿದೆ.
ಕೆಲ ಶಾಲೆಗಳಲ್ಲಿವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿದ್ದರೂ ಶಿಕ್ಷಕರ ಕೊರತೆ ಇದೆ.
ಆದರೆ, ಯಾವುದೇ ದಾಖಲಾತಿ ಇಲ್ಲದ ಶಾಲೆಗಳಲ್ಲಿಸರಕಾರ 308 ಶಿಕ್ಷಕರನ್ನು ಮುಂದುವರಿಸಿದೆ. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ, ವಿದ್ಯಾರ್ಥಿಗಳಿಲ್ಲದ ಶಾಲೆಗಳಲ್ಲಿನೇಮಕಗೊಂಡ ಶಿಕ್ಷಕರ ಸಂಖ್ಯೆ 1,572ರಿಂದ 308ಕ್ಕೆ ಇಳಿದಿದೆ. ವಿದ್ಯಾರ್ಥಿಗಳಿಲ್ಲದ ಶಾಲೆಗಳ ಸಂಖ್ಯೆಯೂ 1,078 ರಿಂದ 270ಕ್ಕೆ ಕಡಿಮೆಯಾಗಿದೆ.
ರಾಜ್ಯದಲ್ಲಿಶೂನ್ಯ ಪ್ರವೇಶದ ಶಾಲೆಗಳನ್ನು ಮುಚ್ಚದಿರಲು ಸರಕಾರ ನಿರ್ಧರಿಸಿರುವ ಪರಿಣಾಮ ಶಿಕ್ಷಕರು ಶಾಲೆಗೆ ತೆರಳುತ್ತಿದ್ದಾರೆ. ಶಿಕ್ಷಕರು ಸಹ ಇಂದಲ್ಲ, ನಾಳೆ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ ಎಂಬ ಆಶಾಭಾವನೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಯುಡೈಸ್ 2025ರ ವರದಿಯ ಪ್ರಕಾರ ಕರ್ನಾಟಕದಲ್ಲಿ7,349 ಶಾಲೆಗಳಲ್ಲಿ2.23 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಶಾಲೆಗಳಲ್ಲಿಏಕೋಪಧ್ಯಾಯ ಶಿಕ್ಷಕರಿದ್ದಾರೆ. ಹಿಂದಿನ ವರ್ಷ 7,821 ಶಾಲೆಗಳಲ್ಲಿ2.74 ಲಕ್ಷ ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕರಿದ್ದರು.
ಕರ್ನಾಟಕದಲ್ಲಿ74,859 ಶಾಲೆಗಳಿವೆ. ಒಟ್ಟು 1.17 ಕೋಟಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, 4.52 ಲಕ್ಷ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿಶೇ.69 ಶಿಕ್ಷಕರು ತರಬೇತಿ ಪಡೆದಿದ್ದಾರೆ ಮತ್ತು ಶೇ.63.7 ವೃತ್ತಿಪರ ಅರ್ಹತೆ ಹೊಂದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ,''ಕೆಲ ಪ್ರದೇಶಗಳಲ್ಲಿಭೌಗೋಳಿಕ ಅಡಚಣೆಗಳಿಂದ ಶಾಲೆಗಳಲ್ಲಿಪ್ರವೇಶದ ಕೊರತೆಯಿದೆ. ಅಂತಹ ಸ್ಥಳಗಳಲ್ಲಿಶಿಕ್ಷಕರನ್ನು ನೇಮಿಸುವುದು ಅಗತ್ಯ. ಸಮೀಕ್ಷೆ ವೇಳೆ ನಿರ್ದಿಷ್ಟ ಶಾಲೆಗೆ ಹಂಚಿದ ಹುದ್ದೆಯನ್ನು ಸರಕಾರ ರದ್ದುಗೊಳಿಸಲಾಗದು. ಶಿಕ್ಷಕರನ್ನು ಬೇರೆಡೆ ನಿಯೋಜಿಸಿದರೂ ಹುದ್ದೆಗಳು ಉಳಿಯುತ್ತವೆ. ಹೀಗಾಗಿ ಈ ಸಮಸ್ಯೆ ಇದೆ,'' ಎಂದು ತಿಳಿಸಿದರು.
ಯುಡೈಸ್ ವರದಿಯ ಹೈಲೈಟ್ಸ್
- ಶೇ.11.7 ಶಾಲೆಗಳಲ್ಲಿ11 ರಿಂದ 20 ವಿದ್ಯಾರ್ಥಿಗಳಿದ್ದಾರೆ
- ಶೇ.6.0 ಶಾಲೆಗಳಲ್ಲಿ500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾರೆ
- 64,183 ಶಾಲೆಗಳಲ್ಲಿಆಟದ ಮೈದಾನವಿದೆ
- 41,662 ಶಾಲೆಗಳಲ್ಲಿಕಂಪ್ಯೂಟರ್ ಸೌಲಭ್ಯವಿದೆ
- ಶೇ.63.5 ಒಬಿಸಿ ವಿದ್ಯಾರ್ಥಿಗಳಿದ್ದಾರೆ.
- ಶೇ.16.3 ಮುಸ್ಲಿಂ ವಿದ್ಯಾರ್ಥಿಗಳಿದ್ದಾರೆ.
ಐದೇ ವರ್ಷದಲ್ಲಿ ದಕ್ಷಿಣ ಕನ್ನಡದ ಬರೊಬ್ಬರಿ 90 ಶಾಲೆಗಳು ಬಂದ್ !
ಮಂಗಳೂರು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ 90 ಶಾಲೆಗಳು ಮುಚ್ಚಲ್ಪಟ್ಟಿವೆ. ಸುಳ್ಯ, ಪುತ್ತೂರು ಶಾಲೆಗಳಲ್ಲೇ ಹೆಚ್ಚು ಶಾಲೆಗಳು ಮುಚ್ಚಲ್ಪಟ್ಟಿವೆ. ಅವುಗಳಲ್ಲಿ ಅನುದಾನಿತ ಹಾಗೂ ಅನುದಾನಿತ ಶಾಲೆಗಳು ಸೇರಿವೆ. 2024-25ರಲ್ಲಿ ಮುಚ್ಚಿರುವ ಶಾಲೆಗಳಲ್ಲಿ ಸರ್ಕಾರಿ ಶಾಲೆಗಳೇ ಹೆಚ್ಚು. ಇದಕ್ಕೆ ಕಾರಣ, ಪಾಲಕರಿಗೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸಲು ಇರುವ ನಿರಾಸಕ್ತಿ ಎಂದು ಹೇಳಲಾಗಿದೆ.ರಾಜ್ಯದಲ್ಲಿದೆ 993 ಅನಧಿಕೃತ ಶಾಲೆಗಳು! ಬೆಂಗಳೂರು ಗ್ರಾಮಾಂತರದಲ್ಲೇ ಅಧಿಕ
ಇದೇ ಆ. 18ರಂದು ರಾಜ್ಯದ ಎಲ್ಲಾ ಜಿಲ್ಲಾ ಮಟ್ಟದಲ್ಲಿರುವ ಅಧಿಕೃತ ಶಾಲೆಗಳು ಹಾಗೂ ಅನಧಿಕೃತ ಶಾಲೆಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿತ್ತು. ಆ ಪಟ್ಟಿಯಿಂದ, ರಾಜ್ಯದ ಎಲ್ಲಾ ಶಿಕ್ಷಣ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 993 ಅನಧಿಕೃತ ಶಾಲೆಗಳಿರುವುದು ತಿಳಿದುಬಂದಿತ್ತು. ಅಂಥ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಪ್ರಾಧಿಕಾರಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿತ್ತು.
