ಐಪಿಎಲ್ ಪ್ರಾರಂಭವಾದಾಗಿನಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಭಾಗವಾಗಿರುವ ವಿರಾಟ್ ಕೊಹ್ಲಿ ಇದೀಗ 19ನೇ ಸೀಸನ್ ನಲ್ಲಿ ಆಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕುಟುಂಬ ಸಮೇತ ಲಂಡನ್ ನಲ್ಲಿ ವಾಸಿಸುತ್ತಿರುವ ಅವರು ಪಂದ್ಯಗಳಿದ್ದಾಗ ಮಾತ್ರ ಭಾರತಕ್ಕೆ ಆಗಮಿಸುತ್ತಿದ್ದಾರೆ.
ಹೀಗಾಗಿ ಅವರು ಆರ್ ಸಿಬಿಯ ವಿದೇಶಿ ಆಟಗಾರ (Overseas Player) ಎಂದು ಅವರ ಬಗ್ಗೆ ಮೀಮ್ಸ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆರ್ ಸಿಬಿಯ ಇನ್ ಸೈಡರ್ ಶೋನ ವಿಶೇಷ ಸಂದರ್ಶನದಲ್ಲಿ ಮಿಸ್ಟರ್ ನಾಗ್ಸ್ ಎಂದೇ ಹೆಸರಾಗಿರುವ ಡ್ಯಾನಿಶ್ ಸೇಠ್ ಅವರು ``ಆರ್ ಸಿಬಿಯ 5ನೇ ಓವರ್ ಸೀಸ್ ಪ್ಲೇಯರ್ ಯಾರು?'' ಎಂದು ಪ್ರಶ್ನಿಸಿದಾಗ ಕೊಹ್ಲಿ ಅವರು ಮನಸಾರೆ ನಕ್ಕಿದ್ದಾರೆ.
"ಅವರು ನಿಜವಾಗಿಯೂ ಏನು ಕೇಳುತ್ತಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ" ಎಂದು ಮೊದಲು ಕೊಹ್ಲಿ ಹೇಳಿದರು. "ನೀವು ನನ್ನನ್ನು ಏಕೆ ಕೇಳುತ್ತಿದ್ದೀರಿ ಎಂದು ನನಗೆ ತಿಳಿದಿಲ್ಲ? ವಿದೇಶಿ ಆಟಗಾರರನ್ನು ಕೇಳಿ. ನಾನೇನೂ ವಿದೇಶಿ ಆಟಗಾರನಲ್ಲ." ಎಂದರು. ಈ ವೇಳೆ ಡ್ಯಾನಿಶ್ ಹಾಗಾಗಿ ಈ ಪ್ರಶ್ನೆ ನಿಮಗೆ ಸಂಬಂಧಿಸಿದ್ದಲ್ಲ, ಮುಂದಕ್ಕೆ ಹೋಗೋಣ ಎಂದು ಮುಂದಿನ ಪ್ರಶ್ನೆಗೆ ತಯಾರಿಯಲ್ಲಿದ್ದರು. ಆಗ ಕೊಹ್ಲಿ ಅವರು ಡ್ಯಾನಿಶ್ ಸೇಠ್ ಅವರ ಕಡೆಗೆ ತಿರುಗಿ, "ನಾನು ವಿದೇಶಿ ಆಟಗಾರನೇ?" ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಏನೋ ಸಮಜಾಯಿಷಿಕೆ ನೀಡಿ ಡ್ಯಾನಿಶ್ ಸೇಠ್ ಅವರು ಆ ಸಂದರ್ಭವನ್ನು ಹಾರಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಧಿಕೃತ್ವ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋ ಸಂದರ್ಶನ ಇದೀಗ ವೈರಲ್ ಆಗಿದೆ.
4 ವಿದೇಶಿ ಆಟಗಾರರಿಗೆ ಅವಕಾಶ
ಸನ್ ರೈಸರ್ಸ್ ವಿರುದ್ಧ ಅರ್ಧಶತಕ
ರಾಯಲ್ ಚಾಲೆಂಜರ್ಸ್ ಪರ ಒಟ್ಟು 268 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ ಅವರು 39.86 ಸರಾಸರಿಯಲ್ಲಿ 9230 ರನ್ ಕಲೆ ಹಾಕಿದ್ದಾರೆ. ಅದರಲ್ಲಿ 8 ಶತಕ ಮತ್ತು 64 ಅರ್ಧಶತಕಗಳಿವೆ. ಅಜೇಯ 113 ರನ್ ಅವರು ಗಳಿಸಿರುವ ಗರಿಷ್ಠ ರನ್ ಗಳಾಗಿವೆ. ಆರ್ ಸಿಬಿ ಕಳೆದ ಸೀಸನ್ ನಲ್ಲಿ ಚಾಂಪಿಯನ್ ಆದಾಗ ಅವರು 15 ಪಂದ್ಯಗಳಿಂದ 657 ರನ್ ಕಲೆ ಹಾಕಿದ್ದರು. ಈ ಸೀಸನ್ ನ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಅಜೇಯ 69 ರನ್ ಗಳಿಸಿದ್ದರು.
