Visha yoga 2026: ಶನಿ ಚಂದ್ರ ಮಿಲನದಿಂದಾಗಿ ಜುಲೈ 6ರಂದು ವಿಷ ಯೋಗ ಸೃಷ್ಟಿಯಾಗಲಿದೆ. ಈ ಯೋಗ ಕೆಲ ರಾಶಿಯವರ ದಾಂಪತ್ಯ ಹಾಗೂ ಆರ್ಥಿಕ ಸಮಸ್ಯೆಗಳನ್ನು ಹೆಚ್ಚಿಸುವುದು. ಈ ಸಮಯದಲ್ಲಿ ತಾಳ್ಮೆಯಿಂದ ಇರಬೇಕಾದ ರಾಶಿಗಳು ಯಾವುವು ತಿಳಿಯಿರಿ.
ವೈದಿಕ ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ನವಗ್ರಹಗಳು ಒಂದು ನಿರ್ದಿಷ್ಟ ಸಮಯದ ಮಧ್ಯಂತರದಲ್ಲಿ ಇತರ ಗ್ರಹಗಳೊಂದಿಗೆ ಶುಭ ಅಥವಾ ಅಶುಭ ಯೋಗಗಳನ್ನು ಸೃಷ್ಟಿಸುತ್ತವೆ.
ಮೇಷ ರಾಶಿಯವರು ಜುಲೈ 6ರಿಂದ ಜುಲೈ 8ರವರೆಗೆ ತಾಳ್ಮೆಯಿಂದ ವರ್ತಿಸುವುದು ತುಂಬಾ ಮುಖ್ಯ. ಮೇಷ ರಾಶಿಯ ಹನ್ನೆರಡನೇ ಮನೆಯಲ್ಲಿ ಶನಿ ಮತ್ತು ಚಂದ್ರನ ಸಂಯೋಗದಿಂದಾಗಿ ವಿಷ ಯೋಗ ರೂಪುಗೊಳ್ಳುತ್ತದೆ. ಇದರಿಂದಾಗಿ ಈ ರಾಶಿಗಳು ಅನಗತ್ಯ ವಿಷಯಗಳಲ್ಲಿ ಸಮಯವನ್ನು ವ್ಯರ್ಥ ಮಾಡಬಹುದು. ಈ ಸಮಯದಲ್ಲಿ ಅದೃಷ್ಟ ನಿಮ್ಮೊಂದಿಗೆ ಇರುವುದಿಲ್ಲ. ಶ್ರಮದಿಂದಲೇ ಲಾಭ ಸಿಗುವುದು. ಕೆಲವೊಮ್ಮೆ ಶ್ರಮಕ್ಕೆ ತಕ್ಕ ಲಾಭ ಸಿಗದೇ ಹೋಗಬಹುದು. ವ್ಯಾಪಾರ, ವ್ಯವಹಾರ, ಉದ್ಯಮ ಮಾಡುವವರಿಗೆ ಯಾವುದೇ ಬೆಂಬಲ ಸಿಗುವುದಿಲ್ಲ. ಒಟ್ಟಿಗೆ ವ್ಯಾಪಾರ ಮಾಡುವವರು ಜಾಗರೂಕರಾಗಿಲ್ಲದಿದ್ದರೆ ದೊಡ್ಡ ನಷ್ಟವನ್ನು ಎದುರಿಸಬೇಕಾಗುತ್ತದೆ. ಕೆಲಸದಲ್ಲಿ ಉನ್ನತ ಅಧಿಕಾರಿಗಳ ಕೋಪವನ್ನು ಎದುರಿಸಬಹುದು. ಅಲ್ಲದೆ ಕೆಲಸದ ಹೊರೆ ಹೆಚ್ಚಾಗಲಿದೆ. ಈ ಅವಧಿಯಲ್ಲಿ ನಿಮ್ಮ ವಿರುದ್ಧ ಕೆಲವು ಸುಳ್ಳು ಆರೋಪಗಳನ್ನು ಮಾಡಬಹುದು. ಆದ್ದರಿಂದ ಯಾರೊಂದಿಗೂ ಹೆಚ್ಚು ಮಾತನಾಡಬೇಡಿ.
ಸಿಂಹ ರಾಶಿ

ಸಿಂಹ ರಾಶಿಯ ಎಂಟನೇ ಮನೆಯಲ್ಲಿ ಶನಿ ಹಾಗೂ ಚಂದ್ರ ಗ್ರಹ ಒಟ್ಟಿಗೆ ಸೇರಿ ಸಂಚಾರ ಮಾಡುವುದು. ನಿಮ್ಮೆಲ್ಲಾ ಕಾರ್ಯಗಳಿಗೆ ಇದು ಅಡ್ಡಿ ಉಂಟು ಮಾಡುವ ಸಾಧ್ಯತೆ ಹೆಚ್ಚು. ಆರ್ಥಿಕ ಜೀವನದಲ್ಲಿ ಅಶುಭ ಫಲಗಳನ್ನು ನೀವು ಪಡೆಯುವಿರಿ. ಈ ಕಾರಣದಿಂದಾಗಿ ನಿಮ್ಮ ಸಹೋದರರೊಂದಿಗೆ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಅನಗತ್ಯ ಪ್ರವಾಸಗಳನ್ನು ಕೈಗೊಳ್ಳಬೇಕಾಗಬಹುದು. ಹೆಚ್ಚು ಕೆಲಸದ ಹೊರೆಯಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆಯಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ನೀವು ಕೆಲವು ದೈಹಿಕ ಕಾಯಿಲೆಗಳಿಂದ ಬಳಲಬಹುದು. ಮುಖ್ಯವಾಗಿ ಹಳೆಯ ಕಾಯಿಲೆಗಳು ಮತ್ತೆ ಕಾಣಿಸಿಕೊಳ್ಳಬಹುದು ಮತ್ತು ವೈದ್ಯಕೀಯ ವೆಚ್ಚಗಳು ದ್ವಿಗುಣವಾಗುವ ಲಕ್ಷಣಗಳು ಇವೆ. ಆದ್ದರಿಂದ ಆರೋಗ್ಯ ವಿಷಯಗಳಲ್ಲಿ ಸ್ವಲ್ಪ ಜಾಗರೂಕರಾಗಿರಲು ಸೂಚಿಸಲಾಗಿದೆ. ಹಣಕಾಸಿನ ವಹಿವಾಟುಗಳು ಮತ್ತು ಹೂಡಿಕೆಗಳು, ವಿಶೇಷವಾಗಿ ಷೇರು ಮಾರುಕಟ್ಟೆಯಲ್ಲಿ, ನಷ್ಟಕ್ಕೆ ಕಾರಣವಾಗುವ ಸಾಧ್ಯತೆಯಿರುವುದರಿಂದ ಜಾಗರೂಕರಾಗಿರುವುದು ಮುಖ್ಯ. ಈ ಸಮಯದಲ್ಲಿ ಸಂಬಂಧಿಕರಿಂದ ಅನಿರೀಕ್ಷಿತ ಕೆಟ್ಟ ಸುದ್ದಿಗಳು ಇದ್ದಕ್ಕಿದ್ದಂತೆ ಬರುತ್ತವೆ. ಈ ಅವಧಿಯಲ್ಲಿ ಉದ್ಯಮಿಗಳು ಹೊಸ ಉದ್ಯಮಗಳನ್ನು ತಪ್ಪಿಸಬೇಕು ಏಕೆಂದರೆ ಅದು ನಷ್ಟಕ್ಕೆ ಕಾರಣವಾಗಬಹುದು.
ಧನು ರಾಶಿ

ಧನು ರಾಶಿಯ ನಾಲ್ಕನೇ ಮನೆಯಲ್ಲಿ ವಿಷ ಯೋಗ ರೂಪಗೊಳ್ಳಲಿದೆ. ಈ ಯೋಗದ ಕೆಟ್ಟ ಪರಿಣಾಮ ಧನು ರಾಶಿಯವರ ಮೇಲೆ ಜುಲೈ 6ರಿಂದ ಜುಲೈ 8ರವರೆಗೆ ಇರಲಿದೆ. ಈ ಸಮಯದಲ್ಲಿ ಧನು ರಾಶಿಯವರ ಆರ್ಥಿಕ ಸ್ಥಿತಿ ಹಠಾತ್ ಹಾಳಾಗುವ ಸಾಧ್ಯತೆ ಇದೆ. ಆದಾಯದ ಮೂಲಗಳು ಕಡಿಮೆಯಾಗಬಹುದು. ಲಾಭ ಕುಗ್ಗುವ ಲಕ್ಷಣಗಳು ಇವೆ. ಹಣ ನಿರ್ವಹಣೆ ಈ ಸಮಯದಲ್ಲಿ ಕಷ್ಟವಾಗಬಹುದು. ಅಲ್ಲದ ಎಕುಟುಂಬದಲ್ಲಿ ಹಠಾತ್ ಮನಸ್ತಾಪಗಳು ಉಂಟಾಗುವ ಲಕ್ಷಣಗಳು ಇವೆ. ನಿಮ್ಮೆಲ್ಲಾ ಕಾರ್ಯಗಳು ನಿಧಾನವಾಗುವುದರಿಂದ ಆತಂಕ ಎದುರಾಗಬಹುದು. ಇದಲ್ಲದೆ ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಈ ಎಲ್ಲಾ ಸಮಸ್ಯೆಗಳಿಂದ ಪಾರಾಗಲು ಪ್ರತೀ ಶನಿವಾರ ಶನಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅಗತ್ಯ ಇರುವವರಿಗೆ ಅಗತ್ಯ ವಸ್ತುಗಳನ್ನು ದಾನ ಮಾಡುವುದು ಮಂಗಳಕರ. ಈ ಸಮಯದಲ್ಲಿ ಸಣ್ಣ ತಪ್ಪುಗಳು ಸಹ ದೊಡ್ಡ ನಷ್ಟಗಳಿಗೆ ಕಾರಣವಾಗಬಹುದು. ಈ ಅವಧಿಯಲ್ಲಿ ನೀವು ಇತರರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಿರಿ. ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಜಾಗರೂಕರಾಗಿರುವುದು ಮುಖ್ಯ. ವೈವಾಹಿಕ ಸಂಬಂಧದಲ್ಲೂ ಕೆಲವು ಸಮಸ್ಯೆಗಳ ಸಾಧ್ಯತೆ ಇದೆ. ದಂಪತಿಗಳಿಬ್ಬರು ಪರಸ್ಪರ ಸರಿಯಾಗಿ ಸಂವಹನ ನಡೆಸುವುದು ತುಂಬಾ ಮುಖ್ಯ. ಇಲ್ಲದಿದ್ದರೆ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಬಹುದು.
ಮೀನ ರಾಶಿ

ಮೀನ ರಾಶಿಯ ಮೊದಲ ಮನೆಯಲ್ಲಿ ಶನಿ ಮತ್ತು ಚಂದ್ರನ ಸಂಯೋಗದಿಂದಾಗಿ ವಿಷ ಯೋಗವು ಸೃಷ್ಟಿಯಾಗುತ್ತದೆ. ಈ ಕಾರಣದಿಂದಾಗಿ ಮೀನ ರಾಶಿಯವರು ಜುಲೈ 6ರಿಂದ ಜುಲೈ 8ರವರೆಗೆ ಜಾಗರೂಕರಾಗಿರಬೇಕು. ಈ ಅವಧಿಯಲ್ಲಿ ಕೆಲಸ ಮಾಡುವವರು ತಮ್ಮ ಸಹೋದ್ಯೋಗಿಗಳು ಮತ್ತು ಕಚೇರಿಯಲ್ಲಿ ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾಗಬಹುದು. ಅಲ್ಲದೆ ಈ ಅವಧಿಯಲ್ಲಿ ನೀವುಯಾರಿಗೂ ಹಣವನ್ನು ಸಾಲವಾಗಿ ನೀಡಬಾರದು. ಇಲ್ಲದಿದ್ದರೆ, ಹಣವನ್ನು ಹಿಂತಿರುಗಿ ಪಡೆಯುವುದು ಕಷ್ಟವಾಗಬಹುದು. ಜೊತೆಗೆ ಅನೇಕ ಅನಗತ್ಯ ಖರ್ಚುಗಳನ್ನು ಎದುರಿಸಬೇಕಾಗುತ್ತದೆ. ಈ ವೇಳೆ ಕುಟುಂಬ ಸದಸ್ಯರ ಆರೋಗ್ಯ ಹದಗೆಡಬಹುದು ಜೋಪಾನ. ಕೆಲಸದಲ್ಲಿ ವಿವಿಧ ಅಡೆತಡೆಗಳನ್ನು ಎದುರಿಸಬಹುದು. ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನೀವು ಬಹಳ ಜಾಗರೂಕರಾಗಿರುವುದು ತುಂಬಾ ಮುಖ್ಯ. ಇಲ್ಲದಿದ್ದರೆ ಅದು ನಿಮ್ಮನ್ನು ತಪ್ಪಿತಸ್ಥರೆಂದು ಭಾವಿಸುವಂತೆ ಮಾಡುತ್ತದೆ. ಅಲ್ಲದೆ ವಿವಿಧ ಆರ್ಥಿಕ ಬಿಕ್ಕಟ್ಟುಗಳನ್ನು ಅನುಭವಿಸುವ ಸಾಧ್ಯತೆ ಇದೆ. ಹೀಗಾಗಿ ಆರ್ಥಿಕ ಪರಿಸ್ಥಿತಿ ಗಮನಾರ್ಹವಾಗಿ ಹದಗೆಡಬಹುದು. ಯಾರನ್ನೂ ಕುರುಡಾಗಿ ನಂಬಬೇಡಿ. ಯಾವುದೇ ಪ್ರಯತ್ನದಲ್ಲಿ ಯಶಸ್ವಿಯಾಗುವುದು ತುಂಬಾ ಕಷ್ಟಕರವಾಗಿರುತ್ತದೆ.
ಮಕರ ರಾಶಿ

ಮಕರ ರಾಶಿಯ ಮೂರನೇ ಮನೆಯಲ್ಲಿ ವಿಷ ಯೋಗ ರೂಪಗೊಳ್ಳುವುದು. ವಿಷ ಯೋಗ ಮಕರ ರಾಶಿಯವರ ವೃತ್ತಿಪರ ಜೀವನದಲ್ಲಿ ವಿವಿಧ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಅವಧಿಯಲ್ಲಿ ನೀವು ಯೋಜಿಸಿದಂತೆ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ ಮತ್ತು ಸಮಸ್ಯೆಗಳು ಒಂದರ ನಂತರ ಒಂದರಂತೆ ಬರುತ್ತವೆ. ಅವರ ಕಠಿಣ ಪರಿಶ್ರಮದ ಫಲವು ಇತರರಿಗೆ ಹೋಗುವುದಲ್ಲದೆ ಆರ್ಥಿಕವಾಗಿಯೂ ಹಿನ್ನಡೆಯನ್ನು ಎದುರಿಸಬೇಕಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಪ್ರಯತ್ನಿಸುವುದನ್ನು ನಿಲ್ಲಿಸಬೇಡಿ. ಯಾಕೆಂದರೆ ಇದು ನಿಮ್ಮ ದುರದೃಷ್ಟವನ್ನು ಹೆಚ್ಚಿಸುತ್ತದೆ. ಇದು ವೃತ್ತಿಪರ ಜೀವನದಲ್ಲಿ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲೂ ಸಹ ಕಠಿಣ ಅವಧಿಯಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ತಪ್ಪು ತಿಳುವಳಿಕೆ ಉಂಟಾಗಬಹುದು. ಹೀಗಾಗಿ ನೀವು ತಾಳ್ಮೆಯಿಂದಿರುವುದು ತುಂಬಾ ಮುಖ್ಯ. ಹೀಗಾಗಿ ಜುಲೈ 6ರಿಂದ ಜುಲೈ 8ರವರೆಗೆ ಮಕರ ರಾಶಿಯವರು ಕೊಂಚ ಜಾಗರೂಕರಾಗಿರುವುದು ಉತ್ತಮ.

