ವಿಷ ಯೋಗ 2026: ಮೀನ ರಾಶಿಯಲ್ಲಿ ಶನಿ ಚಂದ್ರನ ಸಂಯೋಗದಿಂದ ವಿಷ ಯೋಗ ಸೃಷ್ಟಿಯಾಗಲಿದೆ. ಈ ಸಮಯದಲ್ಲಿ ಯಾವ ರಾಶಿಯವರಿಗೆ ಸಂಕಷ್ಟಗಳು ಎದುರಾಗಲಿವೆ..? ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂದು ತಿಳಿಯಿರಿ.
ಜ್ಯೋತಿಷ್ಯದಲ್ಲಿ ಶನಿಯು ಅತ್ಯಂತ ಶಕ್ತಿಶಾಲಿ ಗ್ರಹಗಳಲ್ಲಿ ಒಬ್ಬನೆಂದು ಪರಿಗಣಿಸಲ್ಪಟ್ಟಿದ್ದಾನೆ.
ಕುಂಭ ರಾಶಿಯವರಿಗೆ ವಿಷ ಯೋಗ ಅನೇಕ ಆರ್ಥಿಕ ಸಮಸ್ಯೆಗಳನ್ನು ತರಲಿದೆ. ಇದರಿಂದ ನಿಮ್ಮ ಸಂಗಾತಿಯೊಂದಿಗಿನ ಅಂತರವು ಹೆಚ್ಚಾಗಬಹುದು. ಕೆಲಸದಲ್ಲಿ ನಿಮಗೆ ನಿಯೋಜಿಸಲಾದ ಕೆಲಸವನ್ನು ಮಾಡುವಾಗ ನೀವು ತುಂಬಾ ಜಾಗರೂಕರಾಗಿರಬೇಕು. ನಿಮ್ಮ ಕೆಲಸದ ಸ್ಥಳದಲ್ಲಿ ವಾದಗಳು ಮತ್ತು ಜಗಳಗಳನ್ನು ತಪ್ಪಿಸಿ. ಹಣಕಾಸಿನ ವಿಷಯದಲ್ಲಿ ಅನಗತ್ಯ ಖರ್ಚುಗಳಿಂದ ತೊಂದರೆಗೊಳಗಾಗುವಿರಿ. ನಿಮ್ಮ ಆರೋಗ್ಯದ ಬಗ್ಗೆಯೂ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಜೀವನದಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು, ಚೆನ್ನಾಗಿ ಯೋಜಿಸುವುದು ಮುಖ್ಯ.
ಅಲ್ಲದೆ ವಿಷ ಯೋಗ ನಿಮ್ಮ ಜೀವನದಲ್ಲಿ ತಪ್ಪುಗಳನ್ನು ಮಾಡುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ವ್ಯವಹಾರದಲ್ಲಿ ನಿಮ್ಮ ಸಂಗಾತಿಯ ಬೆಂಬಲವನ್ನು ನೀವು ಪಡೆಯುವುದಿಲ್ಲ. ಲಾಭ ಗಳಿಸುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಈ ಅವಧಿಯಲ್ಲಿ ನಿಮ್ಮ ವ್ಯವಹಾರವು ಪ್ರತಿಕೂಲ ಪರಿಣಾಮ ಬೀರಬಹುದು. ಆರೋಗ್ಯ ಸಮಸ್ಯೆಗಳಿಗೆ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು.
ಮಕರ ರಾಶಿ

ಮಕರ ರಾಶಿಯವರಿಗೆ ಆಗಸ್ಟ್ 2ರಿಂದ ಮಂಗಳಕರ ಸಮಯವಲ್ಲ.ಈ ಸಮಯದಲ್ಲಿ ನೀವು ಮಾಡಿದ ಸಾಲದ ಸಮಸ್ಯೆಗಳು ಹೆಚ್ಚಾಗಬಹುದು. ಹಣ ಹೊಂದಿಸುವುದು ಕಷ್ಟವಾಗಲಿದೆ. ನೆಮ್ಮದಿಯ ಜೀವನ ನಡೆಸುವುದು ಕಷ್ಟವಾಗಬಹುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಕೆಲವು ತಾತ್ಕಾಲಿಕ ವೈಫಲ್ಯಗಳನ್ನು ಎದುರಿಸಬಹುದು. ದಾಂಪತ್ಯ ಜೀವನದಲ್ಲಿ ಕೆಲವು ಸಮಸ್ಯೆಗಳ ಸಾಧ್ಯತೆಯೂ ಇದೆ. ಆದ್ದರಿಂದ ಸಣ್ಣ ಸಮಸ್ಯೆಗಳಿಗೆ ದೊಡ್ಡ ಗಮನ ಕೊಡಬೇಡಿ. ನಿಮ್ಮ ಗಮನವು ನಿಗದಿತ ಗುರಿಗಳಿಂದ ಬೇರೆಡೆಗೆ ತಿರುಗಬಹುದು. ಆರೋಗ್ಯದಲ್ಲಿ ಕೆಲವು ಸಮಸ್ಯೆಗಳಾಗುವ ಸಾಧ್ಯತೆ ಇರುವುದರಿಂದ ನೀವು ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಅಲ್ಲದೆ ನಿಮ್ಮ ಪ್ರೀತಿಪಾತ್ರರೊಂದಿಗೆ ಕೆಲವು ವಿಷಯದ ಬಗ್ಗೆ ಜಗಳವಾಗಬಹುದು. ಆಸ್ತಿಗೆ ಸಂಬಂಧಿಸಿದ ವಿಷಯಗಳನ್ನು ಈಗ ಮುಂದೂಡುವುದು ಉತ್ತಮ.
ಸಿಂಹ ರಾಶಿ

ಸಿಂಹ ರಾಶಿಯವರಿಗೆ ಆಗಸ್ಟ್ 2ರಿಂದ ಮೂರು ದಿನ ಮೈಯಲ್ಲಾ ಕಣ್ಣಾಗಿರುವುದು ತುಂಬಾ ಮುಖ್ಯ. ಶತ್ರುಗಳ ಬಗ್ಗೆ ಗಮನವಿರಲಿದೆ. ಯಾರನ್ನು ನಂಬಿ ಹಣ ನೀಡಬೇಡಿ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ. ಈ ಅವಧಿಯಲ್ಲಿ ನಿಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಬಹುದು. ಯಾವುದೇ ನಿರ್ಧಾರವನ್ನು ಗಂಭೀರವಾಗಿ ಪರಿಗಣಿಸಿದ ನಂತರವೇ ತೆಗೆದುಕೊಳ್ಳಬೇಕು. ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸಬಹುದು. ಅವಿವಾಹಿತರಿಗೆ ಸರಿಯಾದ ಸಂಗಾತಿಯನ್ನು ಕಂಡುಹಿಡಿಯುವುದು ತುಂಬಾ ಕಷ್ಟಕರವಾಗಿರುತ್ತದೆ. ಈ ಅವಧಿಯಲ್ಲಿ ಹಣ ಮತ್ತು ಹೂಡಿಕೆಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ಮುಂದೂಡಬೇಕು. ಕೌಟುಂಬಿಕ ಸಮಸ್ಯೆಗಳು, ಸಂಬಂಧ ಸಮಸ್ಯೆಗಳು, ಮಕ್ಕಳ ಸಮಸ್ಯೆಗಳು ಮುಂತಾದ ವಿವಿಧ ರೀತಿಯ ಚಿಂತೆಗಳು ನಿಮ್ಮ ವೈಯಕ್ತಿಕ ಜೀವನದಲ್ಲಿ ಒತ್ತಡವನ್ನು ಹೆಚ್ಚಿಸುತ್ತವೆ. ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಜಾಗರೂಕರಾಗಿರಬೇಕು.
ಮೀನ ರಾಶಿ

ಮೀನ ರಾಶಿಯವರು ಆಗಸ್ಟ್ 2ರಿಂದ ಆಗಸ್ಟ್ 4ರವರೆಗೆ ಜಾಗರೂಕರಾಗಿರಬೇಕಾಗುತ್ತದೆ. ಈ ಸಮಯದಲ್ಲಿ ಮನೆಯಲ್ಲಿ ಗೊಂದಲಗಳು ಉಂಟಾಗಬಹುದು. ಇದು ನಿಮ್ಮ ಸಂತೋಷವನ್ನು ಕಡಿಮೆ ಮಾಡುವ ಸಮಯ. ಕುಟುಂಬದಲ್ಲಿನ ಸಮಸ್ಯೆಗಳು ನಿಮ್ಮನ್ನು ಅಸಮಾಧಾನಗೊಳಿಸಬಹುದು. ಕಚೇರಿಯಲ್ಲಿ ನಿಮ್ಮ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ನಿಮಗೆ ಬೆಂಬಲ ಸಿಗುವುದಿಲ್ಲ. ಇದು ನಿಮ್ಮನ್ನು ಅಸಮಾಧಾನಗೊಳಿಸುತ್ತದೆ. ನಿಮ್ಮ ಜೀವನದಲ್ಲಿ ಸಮಸ್ಯೆಗಳನ್ನು ಸೃಷ್ಟಿಯಾಗುವ ಕಾಲವಿದು. ಇನ್ನೂ ಉದ್ಯೋಗ ನಿರೀಕ್ಷೆಯಲ್ಲಿ ಇರುವವರಿಗೆ ಅನೇಕ ದೊಡ್ಡ ಅವಕಾಶಗಳು ತಪ್ಪಿ ಹೋಗಬಹುದು. ಆದ್ದರಿಂದ ನೀವು ಎಚ್ಚರಿಕೆಯಿಂದ ವರ್ತಿಸಬೇಕು. ಅನಗತ್ಯ ಖರ್ಚುಗಳಿಂದ ಉಂಟಾಗುವ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಅವಧಿಯಲ್ಲಿ ನೀವು ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ ಮತ್ತು ಲಾಭ ಕಡಿಮೆಯಾಗುತ್ತದೆ.
ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಆಗಸ್ಟ್ 2ರಿಂದ ಅನಿರೀಕ್ಷಿತ ಸವಾಲುಗಳು ಎದುರಾಗಬಹುದು. ಈ ಸಮಯದಲ್ಲಿ ನೀವು ಕೆಲಸದಲ್ಲಿ ವಿವಿಧ ಅಡೆತಡೆಗಳನ್ನು ಅನುಭವಿಸುತ್ತಾರೆ. ಶನಿ ಚಂದ್ರ ಸಂಯೋಗವು ಕುಟುಂಬದಲ್ಲಿ ಕೆಲವು ಭಿನ್ನಾಭಿಪ್ರಾಯಗಳನ್ನು ಉಂಟುಮಾಡಬಹುದು. ವಿದೇಶಿ ಸಂಬಂಧಿತ ಉದ್ಯೋಗಗಳು ಅಥವಾ ವ್ಯವಹಾರಗಳಲ್ಲಿ ಬಹಳ ಜಾಗರೂಕರಾಗಿರಿ. ಈ ಅವಧಿಯು ವಿದ್ಯಾರ್ಥಿಗಳಿಗೆ ಸ್ವಲ್ಪ ಕಷ್ಟಕರವಾಗಿರುತ್ತದೆ. ನಿಮ್ಮ ಅಧ್ಯಯನದ ಮೇಲೆ ಗಮನಹರಿಸಲು ಕಷ್ಟವಾಗಲಿದೆ. ವೃಶ್ಚಿಕ ರಾಶಿಯವರು ತಮ್ಮ ಪ್ರೇಮ ಜೀವನದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಬೇರೆ ಯಾವುದೇ ಸ್ಥಳಕ್ಕೆ ಪ್ರಯಾಣಿಸುವ ಮೊದಲು ಎಚ್ಚರಿಕೆಯಿಂದ ಯೋಚಿಸಬೇಕು. ನೀವು ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ತುಂಬಾ ಮುಖ್ಯ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಈ ಸಮಯದಲ್ಲಿ ಯಾರಿಗೂ ಸಾಲ ನೀಡದಿರುವುದು ಉತ್ತಮ.

