Dailyhunt
VK Digital Exclusive: 'ರಾಧಾ ಕಲ್ಯಾಣ' ನಟಿ ಕೃತಿಕಾ ರವೀಂದ್ರ ಮದುವೆ ಹಾಗೂ ಆಧ್ಯಾತ್ಮಿಕ ಅನುಭವಗಳ ಕುರಿತ ಸಂದರ್ಶನ

VK Digital Exclusive: 'ರಾಧಾ ಕಲ್ಯಾಣ' ನಟಿ ಕೃತಿಕಾ ರವೀಂದ್ರ ಮದುವೆ ಹಾಗೂ ಆಧ್ಯಾತ್ಮಿಕ ಅನುಭವಗಳ ಕುರಿತ ಸಂದರ್ಶನ

Vijay Karnataka 2 weeks ago

ಸಾಕಷ್ಟು ಸಿನಿಮಾ, ಸೀರಿಯಲ್‌ಗಳಲ್ಲಿ ಅಭಿನಯಿಸಿರುವ ನಟಿ ಕೃತಿಕಾ ರವೀಂದ್ರ ಅವರು ಇತ್ತೀಚೆಗೆ 12 ಜ್ಯೋತಿರ್ಲಿಂಗಗಳ ದರ್ಶವನ್ನ ಒಂಟಿಯಾಗಿಯೇ ಪ್ರವಾಸ ಮಾಡಿ ದರ್ಶನ ಮಾಡಿದ್ದಾರೆ. ಆಧ್ಯಾತ್ಮಿಕ ಚಿಂತನೆ ಕುರಿತು ಅವರ ಅಭಿಪ್ರಾಯ ಏನು? ಮದುವೆ ಬಗ್ಗೆ ಏನು ಹೇಳಿದ್ರು?

ಆ ಮಾತುಕತೆಗೆ ಅಕ್ಷರ ರೂಪ ನೀಡಲಾಗಿದೆ ಓದಿ.

ಕೃತಿಕಾ ರವೀಂದ್ರ ಎಲ್ಲಿದ್ದಾರೆ?

ನಟಿ ಕೃತಿಕಾ: ಪ್ರತಿ ಪ್ರಾಜೆಕ್ಟ್‌ ನಂತರ ಬ್ರೇಕ್‌ ತಗೊಳ್ತೀನಿ. ನನ್ನ ಪ್ಯಾಟರ್ನ್‌ ಇರೋದೆ ಹಾಗೆ. ಸಾಮಾನ್ಯವಾಗಿ 2 ರಿಂದ 4 ವರ್ಷ ಗ್ಯಾಪ್‌ ತಗೊಂಡೆ ತಗೊಳ್ತೀನಿ. 'ಭೂಮಿಗೆ ಬಂದ ಭಗವಂತ' ನಂತರ ಯಾಕೆ ಬ್ರೇಕ್‌ ತಗೊಂಡೆ ಅಂದ್ರೆ ನನಗೆ ಪ್ರವಾಸ ಮಾಡಬೇಕಿತ್ತು. ಕಂಪ್ಲೀಟ್‌ ಬ್ರೇಕ್‌ನಲ್ಲಿ 12 ಜ್ಯೋತಿರ್ಲಿಂಗಗಳ ದರ್ಶನ ಮಾಡಿದೆ. 5 ಪಂಚಭೂತಲಿಂಗ ಮತ್ತು 7 ರಿಂದ 8 ಶಕ್ತಿಪೀಠ ದರ್ಶನ ಮಾಡಿದ್ದೀನಿ. ಪ್ರತಿ ತಿಂಗಳು ಪ್ರವಾಸ ಮಾಡ್ತೀನಿ.

ನೀವು ತುಂಬಾ ಸ್ಪಿರಿಚ್ಯೂಯಲ್ ಪರ್ಸನ್‌ ಅನ್ಸುತ್ತೆ?

ನಟಿ ಕೃತಿಕಾ: ಖಂಡಿತ ಹೌದು, ನಾನು ಏನು ಅಲ್ಲ ಅಂದ್ರು, ಸ್ಪಿರಿಚ್ಯೂಯಲ್ ಪರ್ಸನ್‌ ಅಂತೂ ಹೌದು.

ಜ್ಯೋತಿರ್ಲಿಂಗ ದರ್ಶನ ಯಾಕೆ?

ನಟಿ ಕೃತಿಕಾ: ನನಗೆ ಟ್ರಾವೆಲ್‌ ಬಗ್ಗೆ ಐಡಿಯಾ ಇರಲಿಲ್ಲ. ಅಂಡ್‌ ಐ ಅಮ್‌ ಅ ಸೋಲೋ ಟ್ರಾವೆಲರ್‌. ನಾನು ಎಲ್ಲಾ ಕಡೆ ಒಬ್ಬಳೆ ಹೋಗೋದು. 'ಭೂಮಿಗೆ ಬಂದ ಭಗವಂತ' ಮುಕ್ತಾಯವಾದ ಸಂದರ್ಭದಲ್ಲಿ ನನ್ನ ಓರ್ವ ಫ್ರೆಂಡ್‌ ಸಲಹೆ ನೀಡಿದ್ರು. ಈವಾಗ ಫ್ರೀ ಇರ್ತಿರ. ಯಾಕೆ ನೀವು ಟ್ರಾವೆಲ್‌ ಮಾಡಬಾರ್ದು ಅಂತ ಹೇಳಿದರು. ಮತ್ತೆ ಅವಳೇ ನನಗೆ ಸಜೆಸ್ಟ್ ಮಾಡಿದ್ದು, ಕಾಶಿ ಮತ್ತು ಅಯೋಧ್ಯೆಯಿಂದ ಶುರು ಮಾಡಿ ಅಂತ ಅಂದ್ರು. ಸೋ ಓಕೆ ಫೈನ್ ಟ್ರೈ ಮಾಡೋಣ ಅಂತ ಶುರು ಮಾಡಿದ್ದು, ಅದು ಹಾಗೆ ಕಂಟಿನ್ಯೂ ಆಗಿ ಒಂದೇ ವರ್ಷದಲ್ಲಿ 12 ಜ್ಯೋತಿರ್ಲಿಂಗ ದರ್ಶನ ಮಾಡಿದೆ.

ನಿಮ್ಮ ಅನುಭವ ಹೇಗಿತ್ತು?

ನಟಿ ಕೃತಿಕಾ: ಟೂ ದಿ ಕೋರ್ ಅದು. ಅದನ್ನ ಹೇಳೋಕೆ ಆಗಲ್ಲ. ಒಂದು ಗಾದೆ ಇದೆಯಲ್ಲ 'ದೇಶ ಸುತ್ತಿ ನೋಡು..ಕೋಶ ಓದಿ ನೋಡು' ಅಂತ ಹಾಗೆ, ಪ್ರಪಂಚದ ಮತ್ತೊಂದು ಮಜಿಲಿನ ಅನುಭವ ಅದು. ನಾವು ಇಷ್ಟೇ ಅಂತ ಅನ್ಕೊಂಡು ಬದುಕು ನಡೆಸುತ್ತಿರುತ್ತೇವೆ. ಆದರೆ ಇಷ್ಟು ಇದೆ ಅಂತ ತೋರಿಸಿದ ಟ್ರಾವೆಲ್ಲಿಂಗ್‌. ಆಧ್ಯಾತ್ಮಿಕತೆ ಅಂತ ಬಂದಾಗ ನಾನು ಶಿವ ಮತ್ತು ಶಕ್ತಿಗೆ ತುಂಬಾ ಕನೆಕ್ಟ್‌ ಆಗ್ತೀನಿ. ಅಮ್ಮನವರು, ಶಿವ ನನಗೆ ಮನಸ್ಸಿಗೆ ಹತ್ತಿರವಾದವರು. ಅಂಡ್‌ ಸೋಲೋ ಟ್ರಾವೆಲ್‌ ಮಾಡೋದ್ರಿಂದ ಯಾವುದೇ ರೀತಿ ರಿಸ್ಟಿಂಗ್‌ಷನ್‌ ಇರಲ್ಲ. ಫ್ರೀಡಂ ಇರುತ್ತೆ. ನನಗೆ ಎಲ್ಲಿಗೆ ಬೇಕೆ ಅಲ್ಲಿಗೆ ಹೋಗಬಹುದು. ತುಂಬಾ ಟ್ರೆಕ್ಕಿಂಗ್ ಕೂಡ ಮಾಡಿದ್ದೀನಿ. ಹೀಗಾಗಿ ನಾನು ಬ್ರೇಕ್‌ ತಗೋಳ್ತೀನಿ. ಯಾವುದಾದರು ಪ್ರಾಜೆಕ್ಟ್‌ಗೆ ಕಮೀಟ್‌ ಆಗಿ ನಾನು ಇದನ್ನೆಲ್ಲಾ ಮಾಡೋಕೆ ಆಗಲ್ಲ.

ಆಧ್ಯಾತ್ಮಿಕವಾಗಿ ನಿಮ್ಮ ಜೀವನದಲ್ಲಿ ಪವಾಡ ಆಗಿದ್ಯಾ?

ನಟಿ ಕೃತಿಕಾ: ಖಂಡಿತ ನನಗೆ ಆ ರೀತಿಯ ಅನುಭವಗಳು ಆಗ್ತಾನೆ ಇರ್ತಾವೆ. ಮನುಷ್ಯ ಅಂದ್ಮೇಲೆ ಏರಿಳಿತಗಳು ಇದ್ದೇ ಇರ್ತಾವೆ. ಲೋ ಅಂತ ಫೀಲ್‌ ಮಾಡೇ ಮಾಡಿರ್ತಿವಿ. ನಾನು ಡಲ್‌ ಆಗಿದ್ದಾಗ ಅವರು (ಶಿವ-ಶಕ್ತಿ) ನಾವಿದ್ದೇವೆ ಎಂದು ಅವರ ಪ್ರೆಸೆನ್ಸ್‌ನ ನನಗೆ ಫೀಲ್‌ ಮಾಡಸ್ತಿರ್ತಾರೆ. ನನಗೆ ಶಕ್ತಿ ತುಂಬಿದ್ದೇ ವನದುರ್ಗ ಅಮ್ಮನವರು. ನಾನು ವನದುರ್ಗ ಅಂತ ಒಂದು ದೇವಸ್ಥಾನಕ್ಕೆ ಹೋಗ್ತೀನಿ. ಕಳೆದ 13 ವರ್ಷಗಳಿಂದ ನಾನು ಪ್ರತಿ ತಿಂಗಳು ಆ ದೇವಸ್ಥಾನಕ್ಕೆ ಹೋಗುತ್ತಿದ್ದೇನೆ. ಅಲ್ಲಿಂದ ಇದೆಲ್ಲವೂ ಶುರುವಾಗಿದ್ದು, ಮತ್ತು ಅವರಿಂದನೇ ನಡಿಯುತ್ತಿರೋದು. ನಾನು ಆಧ್ಯಾತ್ಮಿಕವಾಗಿ ಕನೆಕ್ಟ್ ಆಗೋಕೆ ಅದೇ ಕಾರಣ. ನನ್ನ ಜೀವನದಲ್ಲಿ ಏನೇ ಮಿರಾಕಲ್ಸ್ ಆಗಿದ್ದರು, ಅವರಿಂದಾನೆ. ಆ ಅನುಭವ ನನಗಾಗಿದೆ.

ವನದುರ್ಗಮ್ಮ ಅಂದ್ರೆ ಗೌತಮಿ ಜಾದವ್‌ ಅವರು ಹೋಗ್ತಾರಲ್ಲ ಆ ದೇವಸ್ಥಾನವ?

ನಟಿ ಕೃತಿಕಾ: ಹೌದು, ಅದೇ ದೇವಸ್ಥಾನ. ಗೌತಮಿ ಅವರನ್ನ ಕರಕೊಂಡು ಹೋಗಿದ್ದೇ ನಾನು. ಗೌತಮಿ ಅವರು ಕೂಡ ತುಂಬಾ ಬಾರಿ ಅದನ್ನ ಮೆನ್ಶನ್‌ ಮಾಡಿದ್ದಾರೆ. ನಮಗೆ ಆಲ್‌ ಮೋಸ್ಟ್‌ ಲೈಫ್‌ ಕೊಟ್ಟಿದ್ದೇ ಆ ದೇವಸ್ಥಾನ.

ನಿಮಗೆ ಕುಟುಂಬದ ಸಪೋರ್ಟ್ ಹೇಗಿದೆ?

ನಟಿ ಕೃತಿಕಾ: ನನ್ನ ಕುಟುಂಬ ನನಗೆ ಶಕ್ತಿ. ನನ್ನ ತಾಯಿ ಇದ್ದಾರೆ. ನಮ್ಮ ತಂದೆ ಅವರು 16 ವರ್ಷಗಳ ಹಿಂದೆನೇ ನಮ್ಮನ್ನ ಅಗಲಿದರು. ಅಮ್ಮ ನನ್ನ ಬ್ಯಾಕ್‌ ಬೋನ್‌. ನಾನಿದ್ದೀನಿ, ನೀನು ಏನು ಮಾಡ್ತೀಯೋ ಮಾಡು ಅನ್ನೋ ಜೀವ ಅಮ್ಮ. ಅವರ ಹೆಸರು ಮೀನಾಕ್ಷಿ. ಸರಕಾರಿ ಶಾಲೆ ಟೀಚರ್‌ ಆಗಿದ್ದರು. ಈಗ ನಿವೃತ್ತಿ ಹೊಂದಿದ್ದಾರೆ.

ಮದುವೆ ಬಗ್ಗೆ ಪ್ಲ್ಯಾನ್‌?

ನಟಿ ಕೃತಿಕಾ: ಖಂಡಿತ ಇದೆ. ಅಮ್ಮ ನೋಡ್ತೀದ್ದಾರೆ. ಲವ್‌ ಮ್ಯಾರೇಜ್‌ ಅನ್ನೋದನ್ನ ನಾನು ನಂಬಲ್ಲ ಅಂತಲ್ಲ. ಬಟ್‌ ಯಾವುದು ಆಗುತ್ತೆ ಅದನ್ನ ನಾನು ಮನಸಾರೆ ಸ್ವೀಕರಿಸುತ್ತೇನೆ. ನನಗೆ ಇದೆ ಆಗಬೇಕು ಅಂತ ಏನು ಇಲ್ಲ. ನನ್ನ ಮೈಂಡ್‌ನಲ್ಲಿ ಅದು ಇಲ್ವೂ ಇಲ್ಲ ಬಿಡಿ. ಮ್ಯಾರೇಜ್‌ ಇಸ್‌ ಪಾರ್ಟ್‌ ಆಫ್‌ ಲೈಫ್‌, ನಾಟ್‌ ಅ ಲೈಫ್‌ ಅಂತ ನಾನು ಬಿಲೀವ್‌ ಮಾಡೋದು. ಇಟ್ಸ್‌ ಜಸ್ಟ್‌ ಅ ಪಾರ್ಟ್‌. ಇವತ್ತಲ್ಲ, ನಾಳೆ ಮದುವೆ ಆಗ್ತೀನಿ. ಒಳ್ಳೆ ಪಾರ್ಟನರ್‌ ಸಿಕ್ಕಿದ್ದರೆ ಖಂಡಿತ ಆಗ್ತೀನಿ.

ಸದ್ಯದ ಪ್ಲ್ಯಾನ್ಸ್‌?

ನಟಿ ಕೃತಿಕಾ: 'ರಾಜನಿವಾಸ' ಅಂತ ಸಿನಿಮಾದಲ್ಲಿ ಅಭಿನಯಿಸಿದ್ದೀನಿ. ರಿಲೀಸ್‌ಗೆ ರೆಡಿಯಿದೆ. ಥ್ರಿಲ್ಲರ್‌ ಸಿನಿಮಾ ಅದು. ನನ್ನದು ಪೊಲೀಸ್‌ ಪಾತ್ರ. ಮತ್ತು ಹೊಸ ಸೀರಿಯಲ್‌ ಬರ್ತಿದೆ. ಅದರ ಬಗ್ಗೆ ಮುಂದಿನ ದಿನಗಳಲ್ಲಿ ಅಪ್‌ಡೇಟ್‌ ನೀಡುತ್ತೇನೆ.

ಇದಿಷ್ಟು ನಟಿ ಕೃತಿಕಾ ರವೀಂದ್ರ ಅವರ ಜೊತೆಗಿನ ಮಾತುಕತೆ ಆಗಿತ್ತು.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka