Dailyhunt Logo
  • Light mode
    Follow system
    Dark mode
    • Play Story
    • App Story
VK Digital Exclusive: ತಂದೆ ಎನ್‌.ಎಸ್‌ ರಾವ್‌ ಮತ್ತು ಮಗಳು ಶ್ರಾವ್ಯ ರಾವ್‌ ಬಗ್ಗೆ ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಹೇಳಿದ್ದೇನು?

VK Digital Exclusive: ತಂದೆ ಎನ್‌.ಎಸ್‌ ರಾವ್‌ ಮತ್ತು ಮಗಳು ಶ್ರಾವ್ಯ ರಾವ್‌ ಬಗ್ಗೆ ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಹೇಳಿದ್ದೇನು?

Vijay Karnataka 4 months ago

ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಅವರು ಹಿರಿಯ ನಟ, ಹಾಸ್ಯ ಕಲಾವಿದ ಎನ್‌.ಎಸ್‌ ರಾವ್‌ ಅವರ ಜೇಷ್ಠ ಸುಪುತ್ರ. 'ಅಯ್ಯ', 'ಕಲಾಸಿಪಾಳ್ಯ', 'ಹುಚ್ಚ' ಸೇರಿದಂತೆ ಅನೇಕ ಕನ್ನಡ ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ.

* ನಿಮ್ಮ ತಂದೆ ಎನ್‌.ಎಸ್‌ ರಾವ್‌ ಅವರ ಬಗ್ಗೆ ಹೇಳೋದಾದ್ರೇ..

ಓಂ ಪ್ರಕಾಶ್ ರಾವ್: "ನಮ್ಮ ತಂದೆಯವರು ಒಳ್ಳೆ ಸಂಭಾಷಣೆ ಬರೆಯುವಂತ ವ್ಯಕ್ತಿ. ನಂತರ ನಟರಾದವರು. ಸ್ಟೇಜ್‌ನಲ್ಲಿ ಒಂದು ಒಳ್ಳೆ ಪ್ಲೇ ಮಾಡಿಸ್ತಾ ಇದ್ರು, ಎಲ್ಲರ ಕೈಯಲ್ಲೂ ಒಂದು ಒಳ್ಳೆ ನಾಟಕ ಬರೆದು, ಇದನ್ನ ಮಾಡಿ... ಸೋ, ಈ ತರ ಎಲ್ಲರ ಜೊತೆ, ಕಲಾವಿದರ ಜೊತೆ ಸೇರಿ ಆಕ್ಟ್ ಮಾಡುವಂತ ಮಹಾನ್ ವ್ಯಕ್ತಿ. ಕಾಮಿಡಿ ಅನ್ನೋದನ್ನ ತುಂಬಾ ಚೆನ್ನಾಗಿ ಅರಿತುಕೊಂಡು, ಸ್ಪಾಟ್ ಅಲ್ಲಿ ಕ್ರಿಯೇಟಿವಿಟಿ ಮಾಡುವಂತ ಶಕ್ತಿ ಇರುವಂತ ವ್ಯಕ್ತಿ. ಅವರು ಬರೆದ ಸಂಭಾಷಣೆಗಳಿಗೆ ತುಂಬಾ ಅವಾರ್ಡ್ಸ್ ಬಂದಿದೆ. ಅವರಿಂದ ನಾನು ಎಲ್ಲಾ ಕಲಿತಿದ್ದೀನಿ.

ಏನಾದ್ರೂ ಗುರುತಿಸಿಕೊಂಡಿದ್ದೀನಿ ಅಂತಂದ್ರೆ, ಅವರು ಹೇಳಿಕೊಟ್ಟಿದ್ದ ಕೆಲಸನೇ ನಾನು ಇವತ್ತು ಮಾಡ್ತಾ ಇರೋದು. ನಾನು ಇವತ್ತು ಅನ್ನ ಊಟ ಮಾಡ್ತಾ ಇರೋದು, ಜನಗಳ ಪ್ರೀತಿ ಸಂಪಾದನೆ ಮಾಡಿರೋದು, ನಾನು ಚಿತ್ರರಂಗದಲ್ಲಿ ಇದ್ದೀನಿ ಅಂತಂದ್ರೆ ಅವರ ಪ್ರೀತಿ, ಆಶೀರ್ವಾದ" ಎಂದು ತಂದೆ ಎನ್‌.ಎಸ್‌ ರಾವ್‌ ಅವರ ಚಿತ್ರರಂಗಕ್ಕೆ ನೀಡಿದ ಕೊಡುಗೆ ಬಗ್ಗೆ ನಿರ್ದೇಶಕ ಓಂ ಪ್ರಕಾಶ್ ರಾವ್ ಮಾಹಿತಿ ನೀಡಿದರು.

*ನಿಮ್ಮ ತಂದೆಯವರು ನಿಮಗೆ ಹೊಡೆದು, ಬೈದಿರುವ ಘಟನೆ ಏನಾದರೂ ಇದ್ಯಾ?

ಓಂ ಪ್ರಕಾಶ್ ರಾವ್: "ಅವರು ಮಕ್ಕಳಿಗೆ ಹೊಡಿತಾ ಇರಲಿಲ್ಲ. ನಾನು ಫೇಲ್ ಆಗಿದ್ದೆ, 6ನೇ ಕ್ಲಾಸ್ ಅಲ್ಲಿ. ಬಂದು ಒಬ್ಬರೇ ಕೂತ್ಕೊಂಡು ಯೋಚನೆ ಮಾಡಿದ್ರು. ನಮ್ಮ ಅಮ್ಮ ಹೇಳಿದ್ರು, ಈ ತರ 'ಪ್ರಕಾಶ್ 6ನೇ ಕ್ಲಾಸ್ ಅಲ್ಲಿ ಫೇಲ್ ಆಗಿದ್ದಾನೆ' ಅಂದ್ರು. ಕೂತ್ಕೊಂಡು ಹಂಗೆ ಯೋಚನೆ ಮಾಡ್ತಾ ಇದ್ರು. ಒಂದು ಗಂಟೆ ಆದ್ಮೇಲೆ ಹೇಳಿದ್ರು, 'ನಡಿ ನಿಮ್ಮ ಕ್ಲಾಸ್ ಮಾಸ್ಟರ್ ಯಾರು? ಅವರ ಮನೆಗೆ ಹೋಗೋಣ' ಅಂತ. 'ಯಾಕೆ?' ಅಂತಂದ್ರೆ, 'ಅವರು ಚೆನ್ನಾಗಿ ಹೇಳಿಕೊಟ್ಟಿದ್ದಿದ್ರೆ ನೀನು ಪಾಸ್ ಆಗ್ತಿದ್ದೆ. ಎಲ್ಲೋ ಅವರು ಹೇಳಿಕೊಟ್ಟಿರೋದ್ರಲ್ಲಿ ವೀಕ್ ಇದೆ. ಅದಕ್ಕೆ ನೀನು ಕಲಿತಿಲ್ಲ ಅಂದ್ರು. ನಾನು ನಂತರ, 'ಇಲ್ಲ ಇಲ್ಲ, ನಾನೇ ಸರಿಯಾಗಿ ಓದಿಲ್ಲ. ನನ್ನನ್ನ ಬೇಡ, ನಾನು ಕಲಿತು ಖಂಡಿತ ಪಾಸ್ ಆಗ್ತೀನಿ' ಅಂತ ಹೇಳ್ದೆ. ಸೋ, ಆ ರೀತಿ ಮಕ್ಕಳ ಮೇಲೆ ಅಪಾರವಾದ ಪ್ರೀತಿ ಇಟ್ಟಿದ್ದಂತ ವ್ಯಕ್ತಿ" ಎಂದು ತಂದೆ ಎನ್‌.ಎಸ್‌ ರಾವ್‌ ಅವರ ಬಗ್ಗೆ ನಿರ್ದೇಶಕ ಓಂ ಪ್ರಕಾಶ್ ರಾವ್ ಮಾಹಿತಿ ನೀಡಿದರು.

*ಮಗಳು ಶ್ರಾವ್ಯ ಅವರಿಗೆ ಸಕ್ಸಸ್ ಸಿಗ್ತಿಲ್ಲ. ಅದಕ್ಕೆ ನೀವೇನೂ ಪ್ರಯತ್ನ ಪಡ್ತಾ ಇಲ್ವಾ?

ಓಂ ಪ್ರಕಾಶ್ ರಾವ್: "ಮುಂದೆ ಅವರಿಗೊಂದು ಒಳ್ಳೆ ಪಾತ್ರ ಮಾಡಿಸ್ತೀನಿ. ಅವರಲ್ಲಿ ಒಳ್ಳೆ ಕಲಾವಿದೆ ಇದ್ದಾಳೆ. ನಾನು ಈಗಾಗಲೇ ಆ ಪ್ರಯತ್ನದಲ್ಲಿದ್ದೀನಿ. ಅವರ ಜೊತೆ ಕೆಲಸ ಖಂಡಿತ ನಾನು ಮಾಡೇ ಮಾಡ್ತೀನಿ. ನಾನು ತಯಾರಿ ಮಾಡುತ್ತಿದ್ದೀನಿ. ಅವರಿಗೆ ಒಂದು ಚಾನ್ಸ್ ಕೊಟ್ಟೇ ಕೊಡ್ತೀನಿ. ಅವರು ತುಂಬಾ ಒಳ್ಳೆ ಕಲಾವಿದೆ. ಅವರ ಜೊತೆ ಕೆಲಸ ಮಾಡೋದು ನಂಗೆ ತುಂಬಾ ಇಷ್ಟ. ಅವರಿಗೆ ಒಂದು ಸರ್‌ಪ್ರೈಸ್‌ ಕೊಟ್ಟೆ ಕೊಡ್ತೀನಿ" ಎಂದು ಮಗಳು ನಟಿ ಶ್ರಾವ್ಯ ರಾವ್‌ ಸಿನಿಮಾ ಕೇರಿಯರ್‌ ಬಗ್ಗೆ ಹೇಳಿದರು ನಿರ್ದೇಶಕ ಓಂ ಪ್ರಕಾಶ್ ರಾವ್.

*ಶ್ರಾವ್ಯಾ ರಾವ್‌(ಸಾತ್ವಿಕಾ ರಾವ್‌) ಅವರು ತುಂಬಾ ಬಾರಿ ಹೆಸರುಗಳನ್ನ ಚೇಂಜ್ ಮಾಡ್ಕೊಂಡಿದ್ದಾರೆ ಏಕೆ?

ಓಂ ಪ್ರಕಾಶ್ ರಾವ್: "ಹೆಸರು ಚೇಂಜ್‌ ಮಾಡಿಕೊಳ್ಳೋಕೆ ಅವರಿಗೆ ತುಂಬಾ ಆಸೆ ಅನ್ಸುತ್ತೆ. ಕೊನೆಯದಾಗಿ ಯಾವ ಹೆಸರು ಇಟ್ಕೋತಾರೋ ಆ ಹೆಸರಿಂದ ಕರೆಯುವುದು" ಎಂದರು ನಿರ್ದೇಶಕ ಓಂ ಪ್ರಕಾಶ್ ರಾವ್.

*ಮಗಳಿಗೆ ನೀವೇನು ಹೆಸರು ಇಟ್ಟಿದ್ರಿ?

ಓಂ ಪ್ರಕಾಶ್ ರಾವ್: "ಖುಷ್ಬೂ. ನನಗೆ ಮೊದಲನೇಯದಾಗಿ ಆ ಹೆಸರಿನ ಅಕ್ಷರ ಕೂಡಿಬಂತು ಅದಕ್ಕೆ ಆ ಹೆಸರು ಇಟ್ಟೆ" ಎಂದು ಮಗಳು ನಟಿ ಶ್ರಾವ್ಯಾ ರಾವ್‌(ಸಾತ್ವಿಕಾ ರಾವ್‌) ಹೆಸರಿನ ಗುಟ್ಟು ಬಿಚ್ಚಿಟ್ಟರು ನಿರ್ದೇಶಕ ಓಂ ಪ್ರಕಾಶ್ ರಾವ್.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka