Dailyhunt Logo
  • Light mode
    Follow system
    Dark mode
    • Play Story
    • App Story
ವೃತ್ತಿ ಭವಿಷ್ಯ 6 ಆಗಸ್ಟ್ 2026: ಇಂದು ತುಲಾ ಕಟಕ ರಾಶಿಯವರಿಗೆ ರಾಯರಿಂದ ಸುವರ್ಣ ಕಾಲ- 12 ರಾಶಿಗಳಲ್ಲಿ ಯಾರಿಗೆ ಶುಭ..? ಯಾರಿಗೆ ಅಶುಭ..?

ವೃತ್ತಿ ಭವಿಷ್ಯ 6 ಆಗಸ್ಟ್ 2026: ಇಂದು ತುಲಾ ಕಟಕ ರಾಶಿಯವರಿಗೆ ರಾಯರಿಂದ ಸುವರ್ಣ ಕಾಲ- 12 ರಾಶಿಗಳಲ್ಲಿ ಯಾರಿಗೆ ಶುಭ..? ಯಾರಿಗೆ ಅಶುಭ..?

Vijay Karnataka 4 days ago

Career rashifal 6 august 2026: ಗುರುವಾರ ಆಗಸ್ಟ್ 6 ಗುರುರಾಯರ ಅನುಗ್ರಹ ಯಾವ ರಾಶಿಯವರ ಮೇಲೆ ಇರಲಿದೆ..? ಮೇಷದಿಂದ ಮೀನ ರಾಶಿಯವರೆಗೆ 12 ರಾಶಿಗಳ ಆರ್ಥಿಕ ಹಾಗೂ ಉದ್ಯೋಗ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಗುರುವಾರ ಆಗಸ್ಟ್ 6 ಗುರುರಾಯರಿಗೆ ಅರ್ಪಿತವಾದ ದಿನವಾಗಿದ್ದು ಜ್ಯೋತಿಷ್ಯದಲ್ಲೂ ವಿಶೇಷವಾಗಿದೆ.
ಈ ದಿನ ಕಟಕ ರಾಶಿಯಲ್ಲಿ ಬುಧ, ಸೂರ್ಯ ಹಾಗೂ ಗುರು ಮೂರು ಗ್ರಹಗಳು ಒಟ್ಟಿಗೆ ಸೇರಿ ಸಂಚಾರ ಮಾಡಲಿದೆ. ಇದು ಕೆಲ ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ತರಲಿದೆ. ಈ ಗ್ರಹಗಳ ಸಂಯೋಗ ವೃತ್ತಿ, ಆರ್ಥಿಕ ಸ್ಥಿತಿ, ವೈವಾಹಿಕ ಜೀವನದ ಮೇಲೆ ವಿಭಿನ್ನ ಪರಿಣಾಮ ಬೀರಲಿದೆ. ಹಾಗಾದರೆ ಯಾವ ಋಆಶಿಯವ ಮೇಲೆ ಗುರುರಾಯರ ಅನುಗ್ರಹ ಇರಲಿದೆ..? ಯಾವ ರಾಶಿಯವರಿಗೆ ಸವಾಲು ಸಂತೋಷವಿದೆ ಎಂದು ತಿಳಿಯೋಣ. ಮೇಷ ರಾಶಿ

ಮೇಷ ರಾಶಿಯವರಿಗೆ ಅನುಕೂಲಕರ ದಿನ. ಉದ್ಯೋಗದಲ್ಲಿ ಲಾಭ ನಿರೀಕ್ಷೆಯಂತೆ ಇರಲಿದೆ. ಹಣದ ವಿಷಯದಲ್ಲಿ ಯಾರಿಗೂ ಸಾಲವಾಗಿ ಹಣ ನೀಡದೇ ಇರುವುದು ತುಂಬಾ ಮುಖ್ಯ. ನೀವು ಕಠಿಣ ಪರಿಶ್ರಮದ ಫಲಿತಾಂಶವನ್ನು ಪಡೆಯುತ್ತೀರಿ. ಮಾತುಕತೆಗಳ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ತುಂಬಾ ಮುಖ್ಯ. ನಿರುದ್ಯೋಗಿಗಳಿಗೆ ಶ್ರಮದಿಂದ ಮಾತ್ರ ಬಯಸಿದ ಹುದ್ದೆ ಸಿಗುವುದು. ಆತುರದ ನಿರ್ಧಾರ ಬೇಡ.


ವೃಷಭ ರಾಶಿ

ವೃಷಭ ರಾಶಿಯರಿಗೆ ಆಗಸ್ಟ್ 6 ಗುರುರಾಯರ ಅನುಗ್ರ ಇರಲಿದೆ. ಈ ದಿನ ನೀವು ಮಾಡುವ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗುವುದು. ವ್ಯವಹಾರಕ್ಕೆ ಸಂಬಂಧಿಸಿದವರು ಯಾವುದೇ ಕಾನೂನುಬಾಹಿರ ಕೆಲಸವನ್ನು ಮಾಡದಂತೆ ಸೂಚಿಸಲಾಗಿದೆ. ಉದ್ಯೋಗದಲ್ಲಿ ಕೆಲವು ಏರಿಳಿತಗಳು ಉಂಟಾಗಬಹುದು. ಪರಸ್ಪರ ಸಹಕಾರ ಸಹಾಯ ಇರುವುದು ಒಳ್ಳೆಯದು. ನಿಮ್ಮ ಕಚೇರಿಯಲ್ಲಿ ನೀವು ಮಾಡುವ ಕಾರ್ಯಗಳು ಮೆಚ್ಚುಗೆ ಪಡೆಯುತ್ತವೆ.


ಮಿಥುನ ರಾಶಿ

ಗುರುವಾರ ಮಿಥುನ ರಾಶಿಯವರಿಗೆ ಗುರುರಾಯರ ಅನುಗ್ರಹ ಇರಲಿದೆ. ಈ ದಿನ ನೀವು ಮಾಡುವ ಕಾರ್ಯುಗಳಲ್ಲಿ ಅಪಾರ ಲಾಭವಿದೆ. ನಿಮ್ಮ ಪ್ರಸ್ತುತ ಕೆಲಸವನ್ನು ತೊರೆದ ನಂತರ ನೀವು ಬೇರೆ ಉದ್ಯೋಗವನ್ನು ಹುಡುಕುವುದು ಒಳಿತಲ್ಲ. ಕೆಲಸ ಕೈಯಲ್ಲಿ ಇರುವಾಗಲೇ ಬೇರೆ ಕೆಲವನ್ನು ಹುಡುಕುವುದು ಒಳ್ಳೆಯದು. ಹಳೆಯ ಸಂಪರ್ಕಗಳಿಂದಲೂ ನೀವು ಪ್ರಯೋಜನ ಪಡೆಯಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಐಷಾರಾಮಿ ಜೀವನ ನಿಮ್ಮದಾಗುವುದು. ಈ ದಿನ ಹೆಚ್ಚು ಹಣವನ್ನು ಖರ್ಚು ಮಾಡದಂತೆ ಸಲಹೆ ನೀಡಲಾಗುತ್ತದೆ.


ಕಟಕ ರಾಶಿ

ಕಟಕ ರಾಶಿಯವರ ಮೇಲೆ ಇಂದು ಸಾಕ್ಷಾತ್ ಗುರುರಾಯರ ಅನುಗ್ರಹ ಇರಲಿದೆ. ಇಂದು ನಿಮ್ಮ ಕೆಲಸದಲ್ಲಿ ಅನಿರೀಕ್ಷಿತ ಘಟನೆಗಳು ನಿಮ್ಮ ಕೀರ್ತಿ ಹಾಗೂ ಖ್ಯಾತಿಯನ್ನು ಹೆಚ್ಚಿಸಲಿವೆ. ನಿಮ್ಮೆಲ್ಲಾ ಕಾರ್ಯಗಳು ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಳ್ಳುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ. ದೀರ್ಘಕಾಲದ ಆಸೆಗಳು ಈಡೇರಬಹುದು. ಅಲ್ಲದೆ ಈ ರಾಶಿಯ ಶ್ರಮಿಕ ನಿರುದ್ಯೋಗಿಗಳಿಗೆ ಬಯಸಿದ ಹುದ್ದೆ ಸಿಗುವ ಸಾಧ್ಯತೆಗಳು ಹೆಚ್ಚು. ಅಲ್ಲದೆ ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.


ಸಿಂಹ ರಾಶಿ

ಆಗಸ್ಟ್ 6 ಸಿಂಹ ರಾಶಿಯವರ ಭಾಗ್ಯದ ಬಾಗಿಲು ತೆರೆಯುವ ದಿನ. ಗುರುವಾರ ಗುರುರಾಯರ ಅನುಗ್ರಹದಿಂದ ನೀವು ಮಾಡುವ ಕಾರ್ಯದಲ್ಲಿ ಲಾಭವಿದೆ. ಶ್ರಮಕ ಸಿಂಹ ರಾಶಿಯವರಿಗೆ ಅದೃಷ್ಟ ಲಕ್ಷ್ಮಿ ಒಲಿಯುವಳು. ಕಡಿಮೆ ಶ್ರಮದಿಂದ ದುಪ್ಪಟ್ಟು ಲಾಭವನ್ನು ನಿರೀಕ್ಷೆ ಮಾಡಬಹುದು. ಕಚೇರಿಯಲ್ಲಿ ನಿಮ್ಮ ಮೇಲಧಿಕಾರಿಗಳ ಮಾತುಗಳನ್ನು ನಿರ್ಲಕ್ಷಿಸುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ನೀವು ನಷ್ಟವನ್ನು ಅನುಭವಿಸುವಿರಿ.


ಕನ್ಯಾರಾಶಿ

ಕನ್ಯಾರಾಶಿಯವರಿಗೆ ಗುರುವಾರ ಸಕಾರಾತ್ಮಕ ಆಲೋಚನೆಗಳನ್ನು ಹೊಂದಿರುವ ಜನರೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ. ಯಾವಾಗಲೂ ದುಃಖಿತರಾಗಿರುವ ಜನರಿಂದ ದೂರವಿರಿ, ಇಲ್ಲದಿದ್ದರೆ ಅದು ನಿಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಣದ ವಿಷಯದಲ್ಲಿ ಆಗಸ್ಟ್ 6 ನಿಮಗೆ ಒಳ್ಳೆಯ ದಿನವಾಗಿರುತ್ತದೆ. ನೀವು ನಿಮ್ಮ ಆರ್ಥಿಕ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಂಡರೆ, ನೀವು ಶೀಘ್ರದಲ್ಲೇ ಆರ್ಥಿಕ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. ಕೆಲಸದಲ್ಲಿ ನಿಮಗೆ ಸರಾಸರಿ ದಿನ.


ತುಲಾ ರಾಶಿ

ತುಲಾ ರಾಶಿಯವರಿಗೆ ಆಗಸ್ಟ್ 6 ತುಂಬಾ ಅನುಕೂಲಕರ ದಿನ. ಕಚೇರಿಯಲ್ಲಿ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ನಿಮಗೆ ಅವಕಾಶ ಸಿಗುತ್ತದೆ. ನೀವು ಒಂದು ಪ್ರಮುಖ ಯೋಜನೆಯ ಭಾಗವಾಗಬಹುದು. ವ್ಯವಹಾರದಲ್ಲಿ ತೊಡಗಿರುವವರ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ದೊಡ್ಡ ಪ್ರಮಾಣದಲ್ಲಿ ಮಾತುಕತೆ ನಡೆಸಲು ನಿಮಗೆ ಅವಕಾಶ ಸಿಗುವುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಸೌಲಭ್ಯಗಳು ಹೆಚ್ಚಾಗುವ ಸಮಯ ಇದು.


ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ರಾಯರ ಅನುಗ್ರಹದಿಂದ ಯಾವುದೇ ಅಡೆತಡೆ ಇಲ್ಲದೆ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತವೆ. ನೀವು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ನಿಮ್ಮ ಕೆಲಸದ ಹೊರೆ ಭಾರವಾಗಿರುತ್ತದೆ. ಆದರೆ ನಿಮ್ಮ ಕಠಿಣ ಪರಿಶ್ರಮ ವ್ಯರ್ಥವಾಗುವುದಿಲ್ಲ. ನಿಮಗೆ ಶೀಘ್ರದಲ್ಲೇ ಬಡ್ತಿ ಸಿಗಬಹುದು. ವೃತ್ತಿ ವಿಸ್ತರಣಾ ಯೋಜನೆಗಳು ಪ್ರಗತಿಯನ್ನು ಕಾಣುತ್ತವೆ. ನೀವು ಒಂದು ಪ್ರಮುಖ ವ್ಯವಹಾರ ನಿರ್ಧಾರವನ್ನು ಸಹ ತೆಗೆದುಕೊಳ್ಳಬಹುದು. ನಿರುದ್ಯೋಗಿಗಳಿಗೆ ಶುಭ ಸುದ್ದಿಯೊಂದು ಈ ದಿನ ಕಾದಿದೆ.


ಧನು ರಾಶಿ

ಧನು ರಾಶಿಯವರಿಗೆ ರಾಯರ ಅನುಗ್ರಹದಿಂದ ಗುರುವಾರ ಉದ್ಯೋಗ ಸ್ಥಳದಲ್ಲಿ ಲಾಭವಿದೆ. ಹಿಂದೆ ಮಾಡಿದ ನಿಮ್ಮ ಕಠಿಣ ಪರಿಶ್ರಮದ ಫಲವನ್ನು ಪಡೆಯುವ ಬಲವಾದ ಅವಕಾಶವಿದೆ. ಯಾವುದೇ ಕೆಲಸ ಕೈಗೊಂಡರೂ ಅದರಲ್ಲಿ ಯಶಸ್ಸು ಖಚಿತ. ಈ ದಿನ ನಿಮ್ಮ ಸಂಗಾತಿಯೊಂದಿಗೆ ಪರಸ್ಪರ ಉತ್ತಮ ಸ್ಥಳಕ್ಕೆ ಹೋಗಬಹುದು. ಆರ್ಥಿಕ ಸ್ಥಿತಿಯಲ್ಲಿ ಕುಸಿತ ಉಂಟಾಗುವುದಿಲ್ಲ. ನೆಮ್ಮದಿಯ ಜೀವನವನ್ನು ನೀವು ನಡೆಸುವಿರಿ.


ಮಕರ ರಾಶಿ

ಮಕರ ರಾಶಿಯವರಿಗೆ ಗುರುರಾಯರ ಅನುಗ್ರಹದಿಂದ ಸಕಲ ಕಾರ್ಯಗಳು ಸಿದ್ದಿಯಾಗಲಿವೆ. ಇಂದು ನೀವು ನಿರೀಕ್ಷಿಸಿದಂತೆ ಫಲಿತಾಂಶಗಳನ್ನು ಪಡೆಯುತ್ತೀರಿ. ಆದರೂ ನಿಮ್ಮ ಮೇಲೆ ಹೆಚ್ಚಿನ ಕೆಲಸದ ಒತ್ತಡವನ್ನು ಹೇರುವುದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗುತ್ತದೆ. ಇಲ್ಲದಿದ್ದರೆ ಅದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಣದ ವಿಷಯದಲ್ಲಿ ದಿನವು ಉತ್ತಮವಾಗಿರುತ್ತದೆ. ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುತ್ತೀರಿ.


Dailyhunt
Disclaimer: This content has not been generated, created or edited by Dailyhunt. Publisher: Vijay Karnataka