Dailyhunt
ʻಯಾರ ದೃಷ್ಟಿ ಬಿತ್ತೋ ಏನೋ.. ಮದುವೆ ಡೇಟ್‌ ಮುಂದಕ್ಕೆ ಹೋಗಿದೆʼ: ಮನದ ಮಾತು ಹಂಚಿಕೊಂಡ ʻಅಮೃತಧಾರೆʼ ಜೋಡಿ

ʻಯಾರ ದೃಷ್ಟಿ ಬಿತ್ತೋ ಏನೋ.. ಮದುವೆ ಡೇಟ್‌ ಮುಂದಕ್ಕೆ ಹೋಗಿದೆʼ: ಮನದ ಮಾತು ಹಂಚಿಕೊಂಡ ʻಅಮೃತಧಾರೆʼ ಜೋಡಿ

Vijay Karnataka 2 weeks ago

ಜೀೀ ಕನ್ನಡʼ ವಾಹಿನಿಯ ʻಅಮೃತಧಾರೆʼ ಧಾರಾವಾಹಿಯಲ್ಲಿ ʻಜೆಡಿʼ ಮತ್ತು ʻಮಲ್ಲಿʼ ಪಾತ್ರಗಳ ಮೂಲಕ ಮನೆಮಾತಾದ ರಾಣವ್‌ ಗೌಡ ಮತ್ತು ರಾಧಾ ಭಗವತಿ ಇತ್ತೀಚೆಗೆ ಎಂಗೇಜ್‌ ಆಗಿದ್ದಾರೆ. ಈ ನಡುವೆ ರಾಧಾ ಭಗವತಿ ನಟಿಸಿರುವ ʻನಾನು ಕರುಣಾಕರʼ ಸಿನಿಮಾದ ಪ್ರೀಮಿಯರ್‌ ಶೋನಲ್ಲಿ ತಮ್ಮ ಮದುವೆ ಯಾವಾಗ ಅನ್ನೋದರ ಬಗ್ಗೆ ಈ ಜೋಡಿ ಮಾತನಾಡಿದ್ದಾರೆ.

ಏನಂದ್ರು? ನೀವೇ ನೋಡಿ..

ಮದುವೆ ಯಾವಾಗ?

"ದೃಷ್ಟಿ ಬಿತ್ತೋ ಏನೋ ಗೊತ್ತಿಲ್ಲ. ಮದುವೆ ದಿನಾಂಕ ಮುಂದಕ್ಕೆ ಹೋಗಿದೆ. ತುಂಬಾ ಅಲ್ಲ, ಸ್ವಲ್ಪ ಮುಂದೆ ಹೋಗಿದೆ" ಎಂದಿದ್ದಾರೆ ರಾಧಾ ಭಗವತಿ ಮತ್ತು ರಾಣವ್.

ಇನ್ನೂ ʻನಾನು ಕರುಣಾಕರʼ ಸಿನಿಮಾ ಬಗ್ಗೆ ಮಾತನಾಡಿದ ರಾಣವ್‌, "ತುಂಬಾ ಚೆನ್ನಾಗಿತ್ತು ಸಿನಿಮಾ. ನಾನು ಕರುಣಾಕರ ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ. ಮೂರು ಜನರ ನಡುವೆ ನಡೆಯುವ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡೋದು ತುಂಬಾ ಕಷ್ಟ. ಶುರುವಿನಿಂದ ಕೊನೆಯವರೆಗೂ ಒಂದು ಟಾಪಿಕ್‌ನ ನೀಟಾಗಿ ಇಟ್ಟುಕೊಂಡು, ಅದರಲ್ಲೂ ಎಮೋಷನ್ಸ್‌ ಜೊತೆಗೆ ಕಾಮಿಡಿಯನ್ನ ಕ್ಯಾರಿ ಮಾಡೋದು ಸ್ವಲ್ಪ ಕಷ್ಟ ಇದೆ. ಅದನ್ನ ಈ ತಂಡ ಅಚ್ಚುಕಟ್ಟಾಗಿ ಮಾಡಿದೆ. ನಾನು ರಾಧಾಳ ಬಿಗ್‌ ಫ್ಯಾನ್‌. ಎಂಥ ಒಂದು ಅದ್ಬುತವಾದ ನಟನೆ, ಅದು ಎಮೋಷನ್‌ ಆಗಿರ್ಲಿ, ಫನ್‌ ಆಗಿರ್ಲಿ ಅಥವಾ ಒಂದು ಸೀರಿಯಸ್‌ ಆಗಿರ್ಲಿ. ಎಲ್ಲವನ್ನೂ ರಾಧಾ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅವರು ಮುಂದೆ ಇದ್ದಾರೆ ಅಂತ ನಾನು ಈ ಮಾತನ್ನ ಹೇಳ್ತಿಲ್ಲ, ಸುಮಾರು ವರ್ಷಗಳಿಂದ, ಅವರು ನನಗೆ ಪರಿಚಯ ಆದಾಗಿನಿಂದಲೂ ಹೇಳ್ತಾ ಬಂದಿದ್ದೇನೆ. ಅವರು ವಂಡರ್‌ಫುಲ್‌ ಆಕ್ಟರ್.‌ ಸಿನಿಮಾ ತುಂಬಾ ಚೆನ್ನಾಗಿದೆ. ದಯವಿಟ್ಟು ಎಲ್ಲರೂ ಬಂದು ನೋಡಿ" ಎಂದಿದ್ದಾರೆ ರಾಣವ್.

"ಇವತ್ತು ರಾಧಾ ಸಿನಿಮಾ ನೋಡಿ ತುಂಬಾ ಖುಷಿಯಾಯ್ತು. ಅವರ ನಟಿಸಿರುವ ಸಿನಿಮಾವನ್ನ ಅವರ ಜೊತೆಯೇ ಕೂತು ನೋಡಿದ್ದು ಸಂತೋಷ. ನಾವು ಮಾಡಿರುವ ಸಿನಿಮಾವನ್ನ ನಮ್ಮ ಪಾರ್ಟ್‌ನರ್‌ ಬಂದು ಪಕ್ಕದಲ್ಲೇ ಕೂತುಕೊಂಡು ನೋಡೋದು ಅಂದರೆ ತುಂಬಾ ಖುಷಿ ಹೌದು" ಎಂದರು ರಾಣವ್.

ಇಬ್ಬರು ಒಟ್ಟಿಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಪ್ಲ್ಯಾನ್‌ ಇದೆಯಾ?

"ಖಂಡಿತ ಯೋಚನೆ ಇದೆ. ಇದರ ಬಗ್ಗೆ ನಾವಿಬ್ಬರೂ ಕೂಡ ಡಿಸ್ಕಸ್‌ ಮಾಡಿದ್ದೇವೆ. ನನಗೂ ಬರವಣಿಗೆ ಮತ್ತು ಡೈರೆಕ್ಷನ್‌ನಲ್ಲಿ ಇಂಟ್ರೆಸ್ಟ್‌ ಇರೋದ್ರಿಂದ ಸ್ವಂತ ಕಥೆಗಳಿವೆ. ಅಥವಾ ಯಾವುದಾದರೂ ಅವಕಾಶಗಳು ಬಂದರೆ, ನಾವು ಮಾಡ್ತೇವೆ" ಎಂದಿದ್ದಾರೆ ರಾಣವ್.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka