ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ʻಟಾಕ್ಸಿಕ್ʼ ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಸಿನಿಪ್ರಿಯರು ಹಾಗೂ ಸ್ಯಾಂಡಲ್‌ವುಡ್‌ನ ಪ್ರಮುಖ ತಾರೆಯರು ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನ ಹಂಚಿಕೊಳ್ಳುತ್ತಿದ್ದಾರೆ. ರಿಷಬ್ ಶೆಟ್ಟಿ, ನಟಿ ರಕ್ಷಿತಾ ಪ್ರೇಮ್ ಹಾಗೂ ಗಾಯಕ ವಿಜಯ್ ಪ್ರಕಾಶ್ಅವರಂತಹ ಘಟಾನುಘಟಿಗಳು ಸಿನಿಮಾದ ವಿಶ್ಯುವಲ್ ಗ್ರ್ಯಾಂಡ್‌ನೆಸ್, ಮೇಕಿಂಗ್ ಶೈಲಿ ಹಾಗೂ ತಾಂತ್ರಿಕ ಶ್ರೀಮಂತಿಕೆಯನ್ನ ಶ್ಲಾಘಿಸಿದ್ದಾರೆ.
ಇದರ ಜೊತೆಗೆ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಟ್ವೀಟ್ ಹಂಚಿಕೊಳ್ಳುವ ಮೂಲಕ ಯಶ್ ಅವರ ಕಂಟೆಂಟ್ ಪ್ರಯೋಗಶೀಲತೆ ಮತ್ತು ಶ್ರಮವನ್ನ ಕೊಂಡಾಡಿ ತಮ್ಮ ಬೆಂಬಲ ಸೂಚಿಸಿದ್ದಾರೆ.
ಆದರೆ, ಈ ಎಲ್ಲಾ ಮೆಚ್ಚುಗೆಗಳ ನಡುವೆ ಇದೀಗ ಸುದೀಪ್ ಅವರ ಪುತ್ರಿ ಹಾಗೂ ಗಾಯಕಿ ಸಾನ್ವಿ ಸುದೀಪ್ ಅವರು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸಾನ್ವಿ ಸುದೀಪ್ ಅವರು ಯಶ್ ಅವರ ಆನ್‌ಸ್ಕ್ರೀನ್ ಪರ್ಫಾರ್ಮೆನ್ಸ್‌ಗೆ ಸಂಪೂರ್ಣವಾಗಿ ಫಿದಾ ಆಗಿದ್ದು, ಅವರನ್ನ ಹೈಲೈಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ವೈರಲ್ ಆಗುತ್ತಿವೆ.
ಸಾನ್ವಿ ಸುದೀಪ್ ಹೇಳಿದ್ದೇನು?
ಸಾನ್ವಿ ಸುದೀಪ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಯಶ್ ಅವರ ಅದ್ಭುತ ನಟನೆಯನ್ನ ಪದಗಳಲ್ಲಿ ವರ್ಣಿಸಿದ್ದಾರೆ. "Phenomenal doesn't even begin to describe what he did in toxic. He didn't just act, he infected every frame with magic. Performance that lingers long after the credits. He truly showed everyone what an incredible actor he is.. (ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಮಾಡಿದ ಸಾಧನೆಯನ್ನ ಅದ್ಬುತ ಎಂಬ ಒಂದೇ ಪದದಲ್ಲಿ ಬಣ್ಣಿಸಲು ಖಂಡಿತ ಸಾಧ್ಯವಿಲ್ಲ. ಅವರು ಕೇವಲ ಅಭಿನಯಿಸಿಲ್ಲ, ಬದಲಿಗೆ ಸಿನಿಮಾದ ಪ್ರತಿಯೊಂದು ಫ್ರೇಮ್‌ನಲ್ಲೂ ತಮ್ಮ ಮ್ಯಾಜಿಕ್ ಅನ್ನು ಪಸರಿಸಿದ್ದಾರೆ. ಸಿನಿಮಾ ಮುಗಿದು ಎಂಡ್ ಕ್ರೆಡಿಟ್ಸ್ ಓಡಿದ ಮೇಲೆಯೂ ಮನಸ್ಸಿನಲ್ಲಿ ಹಾಗೇ ಉಳಿದುಕೊಳ್ಳುವಂತಹ ಅಭಿನಯ ಅವರದ್ದು. ತಾನೊಬ್ಬ ಎಷ್ಟು ಶ್ರೇಷ್ಠ ಹಾಗೂ ಕೌಶಲಪೂರ್ಣ ನಟ ಎಂಬುದನ್ನ ಅವರು ನಿಜವಾಗಿಯೂ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ)" ಎಂದು ಸಾನ್ವಿ ಸುದೀಪ್ ಬರೆದುಕೊಂಡಿದ್ದಾರೆ.
